For Quick Alerts
ALLOW NOTIFICATIONS  
For Daily Alerts

ನೀವು ನೆಮ್ಮದಿಯಾಗಿ ನಿದ್ರಿಸಲು ಮಲಗುವ ಕೋಣೆಯ ಬಣ್ಣ ಹೀಗಿರಲಿ

|

ಬಣ್ಣಗಳು ಅಂದ್ರೆ ಇಷ್ಟ ಪಡದೇ ಇರೋರೆ ಇಲ್ಲ. ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಪ್ರತಿಯೊಂದರಲ್ಲೂ ವಿವಿಧ ಬಣ್ಣವನ್ನು ಬಳಸುತ್ತೇವೆ, ಬಣ್ಣಗಳೊಂದಿಗೇ ಜೀವನ ಸಾಗಿಸುತ್ತೇವೆ.

These Colours Of Wall Will Help You Sleep Soon

ಬಣ್ಣಗಳು ಮತ್ತು ನಮ್ಮ ಭಾವನೆಗಳು ಪರಸ್ಪರ ಸಂಪರ್ಕ ಹೊಂದಿವೆ ಎಂದು ವಿಜ್ಞಾನ ಹೇಳುತ್ತದೆ. ನಾವು ಧರಿಸುವ ಬಟ್ಟೆಯ ವಿನ್ಯಾಸ ಅಥವಾ ನಮ್ಮ ನೆಚ್ಚಿನ ಬಣ್ಣದ ಆಯ್ಕೆ ನಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತವೆ. ಮಾನವ ನಡವಳಿಕೆ ಮೇಲೆ ಮಾತ್ರವಲ್ಲ, ನಾವು ಮಲಗುವ ಕೋಣೆಯ ಗೋಡೆಯ ಬಣ್ಣವೂ ನಮ್ಮ ನಿದ್ರೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಹಿತವಾದ ಬಣ್ಣಗಳು ಉತ್ತಮ ನಿದ್ರೆ ಪಡೆಯಲು ನಮಗೆ ಹೇಗೆ ಸಹಾಯ ಮಾಡುತ್ತವೆಯೋ ಹಾಗೆ, ಅಧಿಕ ಪ್ರಕಾಶಮಾನವಾದ ಮತ್ತು ಅತೀಯಾಗಿ ಹೊಳೆಯುವ ಬಣ್ಣಗಳು ನಮ್ಮ ನಿದ್ರೆಯನ್ನು ಉತ್ತೇಜಿಸುವ ಹಾರ್ಮೋನುಗಳಿಗೆ ಅಡ್ಡಿಪಡಿಸಬಹುದು. ವಿಶ್ರಾಂತಿ ನಿದ್ರೆ ಮತ್ತು ಸುಖಮಯ ಸಿದ್ದೆ ಪಡೆಯಲು ನಿಮಗೆ ಸಹಾಯ ಮಾಡುವ ಕೆಲವು ಬಣ್ಣಗಳ ಬಗ್ಗೆ ನಾವಿಲ್ಲಿ ಉಲ್ಲೇಖಿಸಿದ್ದೇವೆ.

ತಿಳಿ ನೀಲಿ

ತಿಳಿ ನೀಲಿ

ಈ ಬಣ್ಣವನ್ನು ಅತ್ಯಂತ ಶಾಂತವಾದ ಬಣ್ಣ ಎಂದು ಪರಿಗಣಿಸಲಾಗಿದೆ. ಇದು ಮಲಗುವ ಕೋಣೆಯಲ್ಲಿ ಶಾಂತಿಯನ್ನು ಸ್ಥಾಪಿಸಲು ಮತ್ತು ನೆಮ್ಮದಿಯಿಂದ ನಿದ್ದೆ ಮಾಡಲು ಸಹಾಯ ಮಾಡುತ್ತದೆ.

ಕಡು ಹಸಿರು

ಕಡು ಹಸಿರು

ನಿಮ್ಮ ಮಲಗುವ ಕೋಣೆಗೆ ಕಡು ಹಸಿರು ಬಣ್ಣವನ್ನು ಬಳಸಿ. ಒಂದು ಅಧ್ಯಯನದ ಪ್ರಕಾರ, ಕಡು ಹಸಿರು ಬಣ್ಣವನ್ನು ಹೊಂದಿರುವ ಕೋಣೆಯಲ್ಲಿ ಮಲಗಿರುವ ವ್ಯಕ್ತಿ, ಬೆಳಿಗ್ಗೆ ಏಳುವಾಗ ಸಕಾರಾತ್ಮಕ ಭಾವದಿಂದ ಮತ್ತು ಉತ್ತಮ ಭಾವನೆಯಿಂದ ಏಳುತ್ತಾರೆ ಎಂದು ಹೇಳಲಾಗುತ್ತದೆ. ಕಡು ಹಸಿರು ಬಣ್ಣವು ಶಾಂತ, ಸ್ವಾಭಾವಿಕ ಮತ್ತು ಸಕಾರಾತ್ಮಕ ಶಕ್ತಿ ಮತ್ತು ಹೊಸತನವನ್ನು ಒದಗಿಸುತ್ತದೆ.

ಕಿತ್ತಳೆ

ಕಿತ್ತಳೆ

ನಿಮ್ಮ ಮಲಗುವ ಕೋಣೆ ಬಣ್ಣದಲ್ಲಿ ಕಿತ್ತಳೆ ಬಣ್ಣದವನ್ನು ಸೇರಿಸಿ. ಇದು ಉಷ್ಣತೆಯನ್ನು ಸೂಚಿಸುತ್ತದೆ ಮತ್ತು ಹಿತವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ನಿಮ್ಮ ದೇಹದ ಸ್ನಾಯುಗಳನ್ನು ಬೆಚ್ಚಗಾಗಲು ಮತ್ತು ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ.

ತಿಳಿ ಕಂದು

ತಿಳಿ ಕಂದು

ತಿಳಿ ಕಂದು ಅಥವಾ ಕ್ಯಾರಮೆಲ್ ಬಣ್ಣದ ಛಾಯೆಯಿರುವ ಮಲಗುವ ಕೋಣೆಯಲ್ಲಿ ಮಲಗುವ ಜನರು ಉತ್ತಮವಾದ ನಿದ್ರೆಯನ್ನು ಪಡೆಯುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ, ಕಂದು ಛಾಯೆ ಮತ್ತು ಅದರಿಂದ ಅಲಂಕೃತವಾದ ಗೋಡೆಗಳನ್ನು ಹೊಂದಿರುವ ಕೋಣೆಯಲ್ಲಿ ದಂಪತಿಗಳು ಮಲಗಿದರೆ ಅವರಲ್ಲಿ ಬಲವಾದ ನಿಕಟ ಬಂಧವೂ ಬೆಳೆಯುತ್ತದೆ ಎಂದೂ ಅಧ್ಯಯನಗಳು ಹೇಳುತ್ತವೆ.

ನೀಲಿ

ನೀಲಿ

ಉತ್ತಮ ಮತ್ತು ವಿಶ್ರಾಂತಿ ಪಡೆಯಲು ನಿಮಗೆ ಸಹಾಯ ಮಾಡುವ ಮತ್ತೊಂದು ಬಣ್ಣವೆಂದರೆ ಅದು ನೀಲಿ ಬಣ್ಣ. ಸಮೀಕ್ಷೆಯೊಂದರ ಪ್ರಕಾರ, ನೀಲಿ ಬಣ್ಣ ಹೊಂದಿರುವ ಕೋಣೆಯಲ್ಲಿ ಮಲಗುವವರು ಗರಿಷ್ಠ ಗಂಟೆಗಳ ಕಾಲ ಮಲಗಬಲ್ಲರು, ಅಂದರೆ ಸರಾಸರಿ 7 ಗಂಟೆ 52 ನಿಮಿಷಗಳ ಕಾಲ ಸುಖವಾದ ನಿದ್ದೆ ಪಡೆಯಬಲ್ಲರು!.

ಹಳದಿ

ಹಳದಿ

ತಿಳಿ ಹಳದಿ ಬಣ್ಣವೂ ಕೂಡ ಅದ್ಭುತಗಳನ್ನು ಉಂಟು ಮಾಡಬಲ್ಲದು! ಬಿಸಿಲಿನ ನೆರಳು ಸ್ನಾಯು ಪ್ರಚೋದನೆಗೆ ಸಹಾಯ ಮಾಡುತ್ತದೆ, ಇದು ವಿಶ್ರಾಂತಿಗೆ ಉತ್ತೇಜನ ನೀಡುತ್ತದೆ.

English summary

These Colours Of Wall Will Help You Sleep Soon

Here we are discussing about these colours of wall will help you sleep soon. Here we have mentioned a few paint colours that will help you get a restful sleep. Read more.
X
Desktop Bottom Promotion