For Quick Alerts
ALLOW NOTIFICATIONS  
For Daily Alerts

ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳಬೇಕೇ? ಲಿಂಬೆ ನೀರು-ಬೆಲ್ಲದ ಮಿಶ್ರಣ ಮಾಡಿ ಕುಡಿಯಿರಿ

|

ಕಟ್ಟುಮಸ್ತಾದ, ಫಿಟ್ ಆಗಿರುವಂತಹ ದೇಹ ಇರಬೇಕೆಂದು ಪ್ರತಿಯೊಬ್ಬರು ಬಯಸುವರು. ಅದರಲ್ಲೂ ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಫಿಟ್ ಆಗಿರುವ ದೇಹವು ತುಂಬಾ ಇಷ್ಟವಾಗಿರುವುದು. ಕೆಲವರು ಇದನ್ನು ಪಡೆಯಲು ತುಂಬಾ ಪರಿಶ್ರಮ ಪಡುವರು. ಫಿಟ್ ಆದ ದೇಹವು ಹಾಗೆ ಸುಮ್ಮನೆ ಬರುವುದಿಲ್ಲ. ಇದಕ್ಕಾಗಿ ನಿರಂತರ ಶ್ರಮ ಹಾಗೂ ಬದ್ಧತೆ ಬೇಕು. ಬೆವರಿಳಿಸುವಂತಹ ದೈಹಿಕ ವ್ಯಾಯಾಮ ಮತ್ತು ಶಿಸ್ತಿನ ಆಹಾರ ಕ್ರಮದಿಂದಾಗಿ ಫಿಟ್ ಇರಲು ಸಾಧ್ಯವಿದೆ.

ಫಿಟ್ ಆಗಿರಲು ಫೇವರಿಟ್ ಆಗಿರುವಂತಹ ಎಲ್ಲಾ ಆಹಾರವನ್ನು ತ್ಯಜಿಸಬೇಕು ಮತ್ತು ಆರೋಗ್ಯಕರವಾದ ಆಹಾರ ಸೇವನೆ ಮಾಡಬೇಕು. ಆದರೆ ಇಂದು ಪ್ರತಿಯೊಬ್ಬರ ಜೀವನದಲ್ಲಿ ಸಮಯದ ಕೊರತೆಯಿಂದಾಗಿ ಜೀವನಶೈಲಿಯನ್ನು ಪಾಲಿಸಿಕೊಂಡು ಹೋಗುವುದು ತುಂಬಾ ಕಠಿಣವಾಗಿದೆ. ಹಸಿವಾದ ಕೂಡಲೇ ಅವರು ಬರ್ಗರ್ ಅಥವಾ ಚಿಪ್ಸ್ ತಿನ್ನುವಂತಹ ಅಭ್ಯಾಸ ಬೆಳೆಸಿಕೊಂಡಿರುವರು.

ಇಂತಹ ಆಹಾರಗಳಲ್ಲಿ ಉನ್ನತ ಮಟ್ಟದ ಕ್ಯಾಲರಿ ಇದ್ದು, ದೇಹದಲ್ಲಿ ಹೋಗಿ ಅದು ಶೇಖರಣೆ ಆಗುವುದು. ಬೊಜ್ಜಿನ ಜತೆಗೆ ಹೃದಯದ ಕಾಯಿಲೆ, ಕೊಬ್ಬು ಶೇಖರಣೆ ಆಗುವ ಕಾರಣದಿಂದಾಗಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಬಹುದು ಮತ್ತು ಅಪಧಮನಿಗಳಿಗೆ ರಕ್ತ ಸಂಚಾರವನ್ನು ನಿಲ್ಲಿಸಿಬಿಡಬಹುದು. ಇದರಿಂದ ತುಂಬಾ ವಿಳಂಬವಾಗುವ ಮೊದಲು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಬೇಕು. ಇದರಲ್ಲಿ ಮುಖ್ಯವಾಗಿ ಲಿಂಬೆ ನೀರಿಗೆ ಬೆಲ್ಲ ಹಾಕಿಕೊಂಡು ಕುಡಿಯಬೇಕು. ಈ ಪಾನೀಯವು ಹೊಟ್ಟೆಯ ಕೊಬ್ಬು ಕಡಿಮೆ ಮಾಡುವುದು ಮತ್ತು ಚುರುಕಿನ ಜೀವನಶೈಲಿಗೆ ಕಾರಣವಾಗುವುದು.

lime water

ಲಿಂಬೆಯ ಲಾಭಗಳು

ಲಿಂಬೆಯಲ್ಲಿ ವಿಮಟಿನ್ ಗಳು ಸಮೃದ್ಧವಾಗಿದೆ ಮತ್ತು ಇದರಲ್ಲಿನ ಸಿಟ್ರಸ್ ಅಂಶವು ತೂಕ ಇಳಿಸಿಕೊಳ್ಳಲು ನೆರವಾಗುವುದು. ಇದನ್ನು ಬೆಳಗ್ಗೆ ಪ್ರತಿನಿತ್ಯ ಸೇವನೆ ಮಾಡಿದರೆ, ಆಗ ತೂಕ ಕಳೆದುಕೊಳ್ಳಲು ಇದು ಸಹಕಾರಿ ಆಗಲಿದೆ. ಲಿಂಬೆಯಲ್ಲಿ ಇರುವಂತಹ ಆಮ್ಲೀಯ ಗುಣವು ದೇಹದಲ್ಲಿನ ಕ್ಯಾಲರಿ ದಹಿಸುವುದು ಮತ್ತು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಹೆಚ್ಚಿಸುವುದು. ಬೆಳಗ್ಗೆ ಲಿಂಬೆ ನೀರು ಕುಡಿದರೆ ಅದರಿಂದ ಹಲವಾರು ಲಾಭಗಳು ಇವೆ. ಅದು ಈ ರೀತಿಯಾಗಿ ಇದೆ.

ನಿರ್ಜಲೀಕರಣ ತಪ್ಪಿಸುವುದು

ಲಿಂಬೆ ನೀರು ನಿರ್ಜಲೀಕರಣ ತಪ್ಪಿಸುವುದು ಎಂದು ಸಂಶೋಧನೆಗಳು ಕೂಡ ಕಂಡುಕೊಂಡಿವೆ. ದೇಹದಲ್ಲಿ ತೇವಾಂಶ ಕಾಪಾಡಿಕೊಳ್ಳಲು ಮತ್ತು ವಿಷಕಾರಿ ಅಂಶ ಹೊರಹಾಕಲು ಮುಖ್ಯವಾಗಿ ನೀರು ಬೇಕು. ಹೆಚ್ಚಿನವರಿಗೆ ಖಾಲಿ ನೀರು ಕುಡಿಯಲು ಇಷ್ಟವಾಗದು. ಇದಕ್ಕಾಗಿ ಸ್ವಲ್ಪ ಲಿಂಬೆ ರಸ ಹಾಕಿಕೊಂಡು ಕುಡಿಯಿರಿ

ಹೃದಯ ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ವಿಟಮಿನ್ ಸಿ ಅಧಿಕವಾಗಿರುವಂತಹ ಲಿಂಬೆ ಹಣ್ಣು ಹೃದಯದ ಕಾಯಿಲೆಗಳು ಬರದಂತೆ ತಡೆಯುವುದು, ಹೃದಯಾಘಾತ ಕಡಿಮೆ ಮಾಡುವುದು ಮತ್ತು ರಕ್ತದೊತ್ತಡವನ್ನು ಸಮತೋಲನದಲ್ಲಿಡುವುದು. ಶೀತ ಉಂಟು ಮಾಡುವ ವೈರಸ್ ನಿಂದ ಇದು ಕಾಪಾಡುವುದು.

ಚರ್ಮದ ಗುಣಮಟ್ಟ ಸುಧಾರಿಸುವುದು

ಲಿಂಬೆ ನೀರು ಚರ್ಮದಲ್ಲಿ ನೆರಿಗೆ ಮತ್ತು ಒಣ ಚರ್ಮದ ಸಮಸ್ಯೆ ನಿವಾರಣೆ ಮಾಡಿ ಚರ್ಮದ ಗುಣಮಟ್ಟವನ್ನು ಸುಧಾರಣೆ ಮಾಡುವುದು. ದೇಹವು ಹೆಚ್ಚು ತೇವಾಂಶದಿಂದ ಇದ್ದಷ್ಟು ನೆರಿಗೆ ಮತ್ತು ಒಣಚರ್ಮದ ಸಮಸ್ಯೆ ನಿವಾರಣೆ ಆಗುವುದು.

ಚಯಾಪಚಯ ಕ್ರಿಯೆ ಹೆಚ್ಚಿಸುವುದು

ಲಿಂಬೆಯು ತೂಕ ಇಳಿಕೆಗೆ ಸಹಕರಿಸುವುದು ಮತ್ತು ಚಯಾಪಚಯ ಕ್ರಿಯೆಗೆ ವೇಗ ನೀಡಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದು.

ಉಸಿರಿನ ದುರ್ವಾಸನೆ ನಿವಾರಣೆ

ಉಸಿರಿನ ದುರ್ವಾಸನೆಯಿಂದ ಬಳಲುತ್ತಿರುವವರು ಲಿಂಬೆ ನೀರು ಸೇವನೆ ಮಾಡಿದರೆ ದುರ್ವಾಸನೆ ನಿವಾರಣೆಯಾಗುವುದು. ಯಾಕೆಂದರೆ ಲಿಂಬೆಯು ಜೊಲ್ಲು ಸ್ರವಿಸುವಿಕೆ ಉತ್ತೇಜಿಸುವುದು ಮತ್ತು ಬಾಯಿ ಒಣಗುವುದನ್ನು ತಡೆಯುವುದು. ಬಾಯಿ ಒಣಗುವುದು ಬ್ಯಾಕ್ಟೀರಿಯಾ ನಿರ್ಮಾಣವಾಗಲು ಪ್ರಮುಖ ಕಾರಣವಾಗಿದೆ.

ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗದಂತೆ ತಡೆಯುವುದು

ಲಿಂಬೆಯ ಹಲವಾರು ಲಾಭಗಳೊಂದಿಗೆ ಲಿಂಬೆಯು ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗುವುದನ್ನು ತಡೆಯುವುದು. ಲಿಂಬೆಯಲ್ಲಿರುವಂತಹ ಸಿಟ್ರಿಕ್ ಆಮ್ಲವು ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗದಂತೆ ತಡೆಯುವುದು ಮತ್ತು ದೇಹದಲ್ಲಿರುವ ವಿಷಕಾರಿ ಅಂಶ ಹೊರಹಾಕುವುದು.

jaggery

ಬೆಲ್ಲದ ಲಾಭಗಳು

ಹೆಚ್ಚಿನವರು ನೇವಾಗಿ ಸಕ್ಕರೆ ಸೇವನೆಯನ್ನು ಕಡೆಗಣಿಸುತ್ತೇವೆ. ಯಾಕೆಂದರೆ ಇದರಿಂದ ನಮ್ಮ ದೇಹಕ್ಕೆ ಹಾನಿಯಾಗುವುದು ಎಂದು ನಾವು ನಂಬಿದ್ದೇವೆ. ಮಧುಮೇಹಿಗಳು ಹೆಚ್ಚಾಗಿ ಸಕ್ಕರೆ ಮತ್ತು ಸಕ್ಕರೆಯಿಂದ ಮಾಡಿದ ಆಹಾರ ತ್ಯಜಿಸುವರು. ಆದರೆ ಬೆಲ್ಲ ಸೇವನೆಯಿಂದ ಹಲವಾರು ಲಾಭಗಳು ಇವೆ. ಬೆಲ್ಲದಲ್ಲಿ ಯಾವುದೇ ಕೃತಕ ಸಿಹಿ ಇರುವುದಿಲ್ಲ ಮತ್ತು ಇದು ಸಕ್ಕರೆಗೆ ಪರ್ಯಾಯವಾಗಿ ಬಳಸಬಹುದು.

ಬೆಲ್ಲದಲ್ಲಿ ನೈಸರ್ಗಿಕ ಸುಕ್ರೋಸ್ ಅಂಶವಿದೆ ಮತ್ತು ಇದು ಸಿಹಿಯನ್ನು ನೀಡುವುದು. ಸಕ್ಕರೆಗೆ ಪರ್ಯಾಯವಾಗಿ ಇದನ್ನು ಬಳಕೆ ಮಾಡುವುದರ ಜತೆಗೆ ಬೆಲ್ಲದಲ್ಲಿ ಉನ್ನತ ಮಟ್ಟದ ನಾರಿನಾಂಶ, ಖನಿಜಾಂಶ ಮತ್ತು ಪ್ರೋಟೀನ್ ಇದೆ. ಬೆಲ್ಲವು ಹೆಚ್ಚುವರಿ ಕೊಬ್ಬನ್ನು ಕರಗಿಸುವುದು ಮತ್ತು ಚಯಾಪಚಯ ಕ್ರಿಯೆ ಹೆಚ್ಚು ಮಾಡಿ ತೂಕ ಇಳಿಸಲು ನೆರವಾಗುವುದು. ತೂಕ ಇಳಿಸಲು ಬಯಸುತ್ತಿರುವ ಜನರಿಗೆ ಇದು ತುಂಬಾ ಸಹಕಾರಿ ಆಗಿರಲಿದೆ.

lose weight

ತೂಕ ಕಳೆದುಕೊಳ್ಳುವ ಪಾನೀಯ ತಯಾರಿಸುವುದು ಹೇಗೆ?

ಲಿಂಬೆ ನೀರಿಗೆ ಬೆಲ್ಲ ಹಾಕಿಕೊಂಡು ಕುಡಿದರೆ ಅದರಿಂದ ತೂಕ ಇಳಿಸಿಕೊಳ್ಳಲು ತುಂಬಾ ನೆರವಾಗುವುದು. ಇದರ ತಯಾರಿಗೆ ಒಂದು ಲೋಟ ಬಿಸಿ ನಿರು ಮತ್ತು ಇದಕ್ಕೆ ಅರ್ಧ ಲಿಂಬೆ ರಸ ಹಾಕಿಕೊಳ್ಳಿ. ಇದಕ್ಕೆ ಒಂದು ಚಮಚ ಬೆಲ್ಲ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ನೀವು ಈ ಪಾನೀಯ ಸೇವನೆ ಮಾಡಿದರೆ ಅದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುವುದು ಮತ್ತು ದೇಹದ ತೂಕ ಇಳಿಸಿಕೊಳ್ಳಬಹುದು. ಈ ಪಾನೀಯವು ದೇಹಕ್ಕೆ ಹೆಚ್ಚಿನ ಶಕ್ತಿ ನೀಡುವುದು ಮತ್ತು ಇದರಿಂದ ನೀವು ತುಂಬಾ

English summary

Want to lose weight in 1 week? Use jaggery and lemon water

Having a perfect hour-glass figure is the dream of every individual. But it requires a lot of hard work and dedication to achieve it. Strenuous physical exercise and strict diet are to be followed for this. A person has to leave behind all the favourite fast food dishes and consume healthy and nutritious food. But it is seen that in the busy schedule of life, people often fail to maintain this lifestyle habit continuously. Whenever they are hungry, the best thing to munch down is usually a burger or chips.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X