For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ, ಶರೀರದಲ್ಲಿ ಈ ಬದಲಾವಣೆಯಾದರೆ ಥೈರಾಯ್ಡ್‌ ಸಮಸ್ಯೆವಿರಬಹುದು

|

ಥೈರಾಯ್ಡ್ ಎಂಬ ಪುಟ್ಟ ಗ್ರಂಥಿ ನಮ್ಮ ದೇಹದಲ್ಲಿ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಅವಶ್ಯಕವಾಗಿದೆ. ಅದರಲ್ಲಿ ವ್ಯತ್ಯಾಸ ಉಂಟಾದರೆ ದೇಹದಲ್ಲಿ ಹಲವು ರೀತಿಯ ಬದಲಾವಣೆ ಉಂಟಾಗುವುದು.

ಆದರೆ ಕೆಲವರಿಗೆ ತುಂಬಾ ಸಮಯದವರೆಗೆ ನಮಗೆ ಥೈರಾಯ್ಡ್ ಸಮಸ್ಯೆಯಿದೆ ಎಂಬುವುದು ತಿಳಿದಿರುವುದೇ ಇಲ್ಲ. ಮೈ ತೂಕ ಇದ್ದಕ್ಕಿದ್ದಂತೆ ಹೆಚ್ಚಾದಾಗ ಊಟ ಕಡಿಮೆ ಮಾಡಿದರೆ ಮೈ ತೂಕ ಕಡಿಮೆಯಾಗುವುದು ಎಂದು ಭಾವಿಸಿ ಡಯಟ್‌ ಮಾಡುತ್ತಾರೆ, ಆದರೆ ಮೈ ತೂಕ ಹೆಚ್ಚಾಗುತ್ತಿರುತ್ತದೆ ಹೊರತು ಕಡಿಮೆಯಾಗುವುದಿಲ್ಲ.

thyroid symptoms in women

ವಿಪರೀತ ಕೂದಲು ಉದುರುವುದು, ಮಲಬದ್ಧತೆ ಹೀಗೆ ಅನೇಕ ಲಕ್ಷಣಗಳು ಕಂಡು ಬರುವುದು. ಹೈಪೋಥೈರಾಯ್ಡ್ ಇರುವವರಲ್ಲಿ ಮೈ ತೂಕ ಹೆಚ್ಚಾದರೆ, ಹೈಪರ್‌ಥೈರಾಯ್ಡ್ ಇರುವವರಲ್ಲಿ ಮೈ ತೂಕ ತುಂಬಾ ಕಡಿಮೆಯಾಗುವುದು. ಮುಟ್ಟಿನಲ್ಲಿ ವ್ಯತ್ಯಾಸ ಉಂಟಾಗುವುದು ಹೀಗೆ ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ಲಕ್ಷಣಗಳು ಕಂಡು ಬಂದಿರುತ್ತದೆ.

ಥೈರಾಯ್ಡ್ ಸಮಸ್ಯೆ ಬಂದಾಗ ಮಹಿಳೆಯರಲ್ಲಿ ಈ ಕೆಳಗಿನ ಲಕ್ಷಣಗಳು ಕಂಡು ಬರುವುದು:

 ತೂಕದಲ್ಲಿ ವ್ಯತ್ಯಾಸ

ತೂಕದಲ್ಲಿ ವ್ಯತ್ಯಾಸ

ಯಾವುದೇ ಕಾರಣವಿಲ್ಲದೆ ಮೈತೂಕ ತುಂಬಾ ಹೆಚ್ಚಾಗುತ್ತಿದ್ದರೆ ಅದು ಹೈಪೋಥೈರಾಯ್ಡ್ ಲಕ್ಷಣವಾಗಿರಬಹುದು. ತುಂಬಾ ತೆಳ್ಳಗಾಗುತ್ತಿದ್ದರೆ ಅದು ಹೈಪರ್‌ ಥೈರಾಯ್ಡ್ ಲಕ್ಷಣವಾಗಿರಬಹುದು. ಆದ್ದರಿಂದ ತೂಕದಲ್ಲಿ ತುಂಬಾ ವ್ಯತ್ಯಾಸ ಉಂಟಾಗಿದ್ದರೆ ಥೈರಾಯ್ಡ್ ಪರೀಕ್ಷೆ ಮಾಡಿಸಿ.

ಅಸ್ವಾಭಾವಿಕ ರಕ್ತದೊತ್ತಡ

ಅಸ್ವಾಭಾವಿಕ ರಕ್ತದೊತ್ತಡ

ಥೈರಾಯ್ಡ್ ಹಾರ್ಮೋನ್‌ ಹೃದಯ ಕಾರ್ಯಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ. ಥೈರಾಯ್ಡ್ ಸಮಸ್ಯೆ ಇರುವವರಲ್ಲಿ ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾಗುವುದು. ಸಾಮಾನ್ಯಗಿಂತ ತುಂಬಾ ವೇಗವಾಗಿ ಅಥವಾ ತುಂಬಾ ನಿಧಾನವಾಗಿ ಹೃದಯ ಬಡಿತವಿರುತ್ತದೆ. ಕೆಲವೊಮ್ಮೆ ಹೃದಯಬಡಿತ ತುಂಬಾ ಅಧಿಕವಾಗಿ ಹೃದಯಾಘಾತವಾಗುವ ಸಾಧ್ಯತೆ ಇದೆ.

 ಟಾಯ್ಲೆಟ್‌ನ ಅಭ್ಯಾಸದಲ್ಲಿ ವ್ಯತ್ಯಾಸ

ಟಾಯ್ಲೆಟ್‌ನ ಅಭ್ಯಾಸದಲ್ಲಿ ವ್ಯತ್ಯಾಸ

ಹೈಪೋಥೈರಾಯ್ಡ್ ಉಂಟಾದರೆ ಮಲಬದ್ಧತೆ ಸಮಸ್ಯೆ ಉಂಟಾಗುವುದು. ಅದೇ ಹೈಪರ್‌ಥೈರಾಯ್ಡ್ ಸಮಸ್ಯೆ ಉಂಟಾದಾಗ ತುಂಬಾ ಬಾರಿ ಟಾಯ್ಲೆಟ್‌ಗೆ ಹೋಗುತ್ತಾರೆ, ಅಲ್ಲದೆ ಮಲ ಗಟ್ಟಿಯಾಗಿರದೆ ಸ್ವಲ್ಪ ಸಡಿಲವಾಗಿರುತ್ತೆ.

ಸುಸ್ತು

ಸುಸ್ತು

ದೇಹದಲ್ಲಿ ಶಕ್ತಿ ಕಡಿಮೆಯಾಗುವುದು. ತುಂಬಾ ಸುಸ್ತು ಅನಿಸುವುದು. ನೀವು ಇಷ್ಟಪಟ್ಟು ಮಾಡುತ್ತಿದ್ದ ಕೆಲಸ ಈಗೀಗ ತುಂಬಾ ಕಷ್ಟ ಅನಿಸುವುದು. ಕೆಲಸದ ಕಡೆ ಸರಿಯಾಗಿ ಗಮನ ನೀಡಲು ಸಾಧ್ಯವಾಗುವುದಿಲ್ಲ. ತಲೆಸುತ್ತು ಬಂದಂತೆ ಅನಿಸುವುದು. ತೂಕ ಹೆಚ್ಚಾಗುವುದರ ಜೊತೆಗೆ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಅದು ಹೈಪೋಥೈರಾಯ್ಡ್ ಲಕ್ಷಣವಾಗಿದೆ. ತೂಕ ಕಡಿಮೆಯಾಗುತ್ತಿದ್ದು ಸುಸ್ತು ಕಂಡು ಬರುತ್ತಿದ್ದರೆ ಅದು ಹೈಪರ್‌ಥೈರಾಯ್ಡ್ ಲಕ್ಷಣವಾಗಿದೆ.

 ಮೂಡ್‌ಸ್ವಿಂಗ್‌

ಮೂಡ್‌ಸ್ವಿಂಗ್‌

ಕಾರಣವಿಲ್ಲದೆ ಬೇಸರ ಉಂಟಾಗುವುದು, ಕೋಪ ಬರುವುದು ಒಂದು ರೀತಿಯ ಖಿನ್ನತೆ ಇವೆಲ್ಲಾ ಥೈರಾಯ್ಡ್‌ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದಾಗ ಕಂಡು ಬರುವುದು. ಮಾನಸಿಕವಾಗಿ, ಭಾವನಾತ್ಮಕವಾಗಿ ತುಂಬಾ ಕಂಟ್ರೋಲ್‌ ತಪ್ಪುವುದು. ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುವುದು, ಒಂದು ರೀತಿ ಕಿರಿಕಿರಿ ಅನಿಸುವುದು ಈ ರೀತಿಯೆಲ್ಲಾ ಅಗುವುದು. ಈ ರೀತಿಯ ಸಮಸ್ಯೆ ಉಂಟಾದಾಗ ಥೈರಾಯ್ಡ್‌ಗೆ ಚಿಕಿತ್ಸೆ ಪಡೆಯುವುದರ ಜೊತೆಗೆ ಮಾನಸಿಕ ತಜ್ಞರನ್ನು ಕಂಡರೆ ಒಳ್ಳೆಯದು.

 ಋತುಚಕ್ರದಲ್ಲಿ ವ್ಯತ್ಯಾಸ

ಋತುಚಕ್ರದಲ್ಲಿ ವ್ಯತ್ಯಾಸ

ಅತ್ಯಧಿಕ ರಕ್ತಸ್ರಾವ ಅಥವಾ ಅನಿಯಮಿತ ಮುಟ್ಟು ಇವೆಲ್ಲಾ ಥೈರಾಯ್ಡ್‌ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದಾಗ ಕಂಡು ಬರುವುದು. ಕೆಲವೊಮ್ಮೆ ತುಂಬಾ ಕಡಿಮೆ ರಕ್ತಸ್ರಾವವಾಗುವುದು, ಕೆಲ ತಿಂಗಳು ಮುಟ್ಟು ಆಗದೇ ಇರುವುದು ಈ ರೀತಿಯ ಸಮಸ್ಯೆಗಳು ಕಂಡು ಬರುವುದು.

ತಲೆಕೂದಲು ಉದುರುವುದು

ತಲೆಕೂದಲು ಉದುರುವುದು

ಹೈಪೋಥೈರಾಯ್ಡ್ ಹಾಗೂ ಹೈಪರ್‌ಥೈರಾಯ್ಡ್ ಸಮಸ್ಯೆ ಉಂಟಾದಾಗ ಕೂದಲು ಉದುರುವುದು, ತ್ವಚೆ ಒಣಗುವುದು. ಕೂದಲು ಪ್ರತಿನಿತ್ಯ ತುಂಬಾ ಉದುರಿ ತುಂಬಾ ತೆಳ್ಳಗಾಗುವುದು.

ಸ್ನಾಯುಗಳಲ್ಲಿ ನೋವು, ದೇಹ ದುರ್ಬಲವಾಗುವುದು

ಸ್ನಾಯುಗಳಲ್ಲಿ ನೋವು, ದೇಹ ದುರ್ಬಲವಾಗುವುದು

ಮಂಡಿ, ಮೊಣಕೈಗಳಲ್ಲಿ ನೋವು ಕಂಡು ಬರುವುದು. ತುಂಬಾ ಸುಸ್ತು, ಮೈಕೈ ನೋವು ಈ ರೀತಿಯ ಲಕ್ಷಣಗಳು ಕಂಡು ಬರುವುದು.

ಶರೀರದಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬಂದರೆ T3, T4, TSH ಪರೀಕ್ಷೆ ಮಾಡಿಸಿ, ಥೈರಾಯ್ಡ್ ಇದ್ದರೆ ಚಿಕಿತ್ಸೆ ಪಡೆಯಿರಿ.

English summary

Signs and Symptoms of Thyroid in Women in Kannada

Thyroid signs and symptoms in women in Kannada, Read on....
X
Desktop Bottom Promotion