For Quick Alerts
ALLOW NOTIFICATIONS  
For Daily Alerts

ಈ ಬೀಜ, ಧಾನ್ಯಗಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸಿದರೆ, ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ

|

ಆರೋಗ್ಯದ ವಿಷಯಕ್ಕೆ ಬಂದಾಗ, ಫಿಟ್ ಆಗಿರಲು ನಾನಾ ಕಸರತ್ತುಗಳನ್ನು ಮಾಡುತ್ತೇವೆ. ಬೆಳಿಗ್ಗೆ ಎದ್ದು ಗಂಟೆಗಟ್ಟಲೇ ವ್ಯಾಯಾಮ ಮಾಡುವುದು, ಸಾಕಷ್ಟು ನೀರು ಕುಡಿಯುವುದು ಹೀಗೆ.. ಆದರೆ ಆರೋಗ್ಯಪೂರ್ಣವಾಗಿರಲು ನಾವು ಸರಿಯಾಗಿ ತಿನ್ನಬೇಕು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳುವುದು ಮುಖ್ಯ.

ಆದ್ದರಿಂದ, ನಿಮ್ಮ ದೈನಂದಿನ ಆಹಾರದಲ್ಲಿ ನೆನಸಿದ ಬೀಜಗಳ ಸೇವನೆಯನ್ನು ಸೇರಿಸಿಕೊಳ್ಳಬೇಕು. ಬೆಳಗ್ಗೆ ಎದ್ದು ಈ ನೆನೆಸಿದ ಬೀಜಗಳ ಸೇವನೆಯಿಂದ ಹೊಟ್ಟೆಯ ಸಮಸ್ಯೆಗಳು, ರೋಗನಿರೋಧಕ ಶಕ್ತಿ ವೃದ್ಧಿ, ತೂಕ ನಷ್ಟ ಮತ್ತು ಸಂಧಿವಾತ ಸೇರಿದಂತೆ ಐದು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತವೆ. ಹಾಗಾದರೆ ಯಾವ ಬೀಜಗಳನ್ನು ನೆನೆಸಿ ತಿನ್ನಬೇಕು ಎಂಬುದನ್ನು ಇಲ್ಲಿ ನೋಡೋಣ.

ಸಂಪೂರ್ಣ ಆರೋಗ್ಯಕ್ಕಾಗಿ ಪ್ರತಿನಿತ್ಯ ನೆನೆಸಿ ಸೇವಿಸಬೇಕಾದ ಬೀಜಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮೆಂತ್ಯೆ:

ಮೆಂತ್ಯೆ:

ಮೆಂತ್ಯೆಯನ್ನು ರಾತ್ರಿ ನೀರಿನಲ್ಲಿ ಹಾಕಿ, ಬೆಳಿಗ್ಗೆ ತಿನ್ನಿ ಜೊತೆಗೆ ಆ ನೀರನ್ನೂ ಕುಡಿಯಿರಿ. ಇದನ್ನು ಮಾಡುವುದರಿಂದ ಮಹಿಳೆಯರಲ್ಲಿ ಸಾಮಾನ್ಯ ಸಮಸ್ಯೆಯಾಗಿರುವ ಕೀಲು ನೋವಿನಿಂದ ಪರಿಹಾರ ಸಿಗುತ್ತದೆ. ಮೆಂತ್ಯೆ ಹೊಟ್ಟೆಗೆ ಪ್ರಯೋಜನಕಾರಿಯಾಗಿದ್ದು, ಮಲಬದ್ಧತೆಯಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಇದು ಕರುಳನ್ನು ಸ್ವಚ್ಛಗೊಳಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮೆಂತ್ಯವು ಮಧುಮೇಹಿಗಳಿಗೆ ಉತ್ತಮವಾಗಿದೆ ಜೊತೆಗೆ ಮುಟ್ಟಿನ ಹೊಟ್ಟೆ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 ಒಣದ್ರಾಕ್ಷಿ:

ಒಣದ್ರಾಕ್ಷಿ:

ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಒಣದ್ರಾಕ್ಷಿ ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ನೀವು ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಸೇವಿಸುವುದರಿಂದ ನಿಮ್ಮ ಚರ್ಮವು ಆರೋಗ್ಯಕರವಾಗಿ ಮತ್ತು ಹೊಳೆಯುತ್ತದೆ. ಬಹಳಷ್ಟು ಮಹಿಳೆಯರು ಕಬ್ಬಿಣದ ಕೊರತೆಯನ್ನು ಎದುರಿಸುತ್ತಿದ್ದು, ಒಣದ್ರಾಕ್ಷಿಯನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆ ಕಡಿಮೆಯಾಗುವುದು.

ಅಗಸೆಬೀಜಗಳು:

ಅಗಸೆಬೀಜಗಳು:

1 ಟೀಸ್ಪೂನ್ ಅಗಸೆಬೀಜಗಳು ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಯಲು ಹಾಕಿ, ಬೆಳಿಗ್ಗೆ ಅವುಗಳನ್ನು ಸೇವಿಸಿ. ಇವುಗಳಲ್ಲಿ ಫೈಬರ್, ಕಬ್ಬಿಣ ಮತ್ತು ಪ್ರೋಟೀನ್ ಸಮೃದ್ಧವಾಗಿದ್ದು ತೂಕ ಇಳಿಸಲು ಉತ್ತಮವಾಗಿದೆ. ಈ ಬೀಜಗಳನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುವುದಲ್ಲದೇ, ನಿಮ್ಮನ್ನು ಕ್ಯಾನ್ಸರ್ ಮತ್ತು ಮಧುಮೇಹದಿಂದಲೂ ರಕ್ಷಿಸುತ್ತವೆ.

ಬಾದಾಮಿ:

ಬಾದಾಮಿ:

ಎಲ್ಲರಿಗೂ ತಿಳಿದಿರುವ ಹಾಗೇ, ಪ್ರತಿದಿನ ಬೆಳಿಗ್ಗೆ ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ನಿಮ್ಮ ಮೆದುಳಿನ ಆರೋಗ್ಯವನ್ನು ಸುಧಾರನೆಯಾಗುವುದು. ಬಾದಾಮಿಯಲ್ಲಿ ಮೆಗ್ನೀಶಿಯಂ ಸಮೃದ್ಧವಾಗಿದ್ದು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿಗೆ ಉತ್ತಮವಾಗಿದೆ. ನೆನೆಸಿದ ಬಾದಾಮಿ ಕೂಡ ತೂಕ ನಷ್ಟಕ್ಕೆ ಉತ್ತಮವಾಗಿದೆ.

ಅಂಜೂರ:

ಅಂಜೂರ:

ಅಂಜೂರದಲ್ಲಿ ವಿಟಮಿನ್, ಮ್ಯಾಂಗನೀಸ್, ಪೊಟ್ಯಾಶಿಯಂ, ಫೈಬರ್ ಮತ್ತು ರಂಜಕ ಸಮೃದ್ದವಾಗಿದ್ದು, ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಹ ಇವೆ. ಇದರಲ್ಲಿರುವ ಫ್ಲೇವೊನೈಡ್‌ಗಳು ಮತ್ತು ಪಾಲಿಫಿನಾಲ್‌ಗಳು ಸ್ವತಂತ್ರ ರಾಡಿಕಲ್‌ಗಳಿಂದ ದೇಹಕ್ಕೆ ಹಾನಿಯಾಗುವುದನ್ನು ತಡೆಯುತ್ತದೆ. ರಾತ್ರಿ 1 ಅಂಜೂರವನ್ನು ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ತಿನ್ನುವುರಿಂದ ನಿಮ್ಮ ಯೌವ್ವನತೆ ಸದಾಕಾಲ ಉಳಿಯುತ್ತದೆ, ಜೊತೆಗೆ ವಯಸ್ಸಾಗುವಿಕೆಯ ಲಕ್ಷಣಗಳನ್ನು ನಿಧಾನಗೊಳಿಸಬಹುದು.

English summary

Soak These Food items Overnight And Eat In The Morning in Kannada

Here we talking about Soak These Food items Overnight And Eat In The Morning in Kannada, read on
Story first published: Thursday, September 30, 2021, 17:22 [IST]
X
Desktop Bottom Promotion