For Quick Alerts
ALLOW NOTIFICATIONS  
For Daily Alerts

ಪ್ರತಿ ಆಹಾರಕ್ಕೂ ಟೊಮ್ಯಾಟೊ ಬಳಸುವವರು ಒಮ್ಮೆ ಇತ್ತ ನೋಡಿ

|

ಪ್ರಾಚೀನ ಕಾಲದಿಂದ ಹಿಡಿದು, ಇಂದಿನವರೆಗೂ ಆಹಾರದ ರುಚಿಯನ್ನು ಹೆಚ್ಚಿಸುವಲ್ಲಿ ಜೊತೆಗೆ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಟೊಮೆಟೊ ಮಹತ್ತರ ವಹಿಸುತ್ತದೆ. ಟೊಮೆಟೊ ಇಲ್ಲದೆ ಭಾರತೀಯರ ಅಡಿಗೆ ಕಲ್ಪಿಸಿಕೊಳ್ಳಲಾಗುವುದಿಲ್ಲ. ಇಲ್ಲಿನ ಜನರು ಟೊಮೆಟೊವನ್ನು ತರಕಾರಿ-ಸಲಾಡ್‌ಗೆ ಮಾತ್ರವಲ್ಲದೆ ಅನೇಕ ರೋಗಗಳ ಚಿಕಿತ್ಸೆಗೂ ತಿನ್ನಲು ಇಷ್ಟಪಡುತ್ತಾರೆ.

ಅನೇಕ ಆರೋಗ್ಯ ಸಂಶೋಧನೆಗಳ ಪ್ರಕಾರ, ಟೊಮೆಟೊಗಳು ಕ್ಯಾನ್ಸರ್ ತಡೆಗಟ್ಟಲು, ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ದೃಷ್ಟಿ ಸುಧಾರಿಸಲು ಕೆಲಸ ಮಾಡುತ್ತದೆ. ಇದರ ಹೊರತಾಗಿಯೂ, ಟೊಮೆಟೊವನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಈ ಅಪಾಯಕಾರಿ ಪರಿಣಾಮಗಳನ್ನು ತೋರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಆ ಪರಿಣಾಮಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಅಸಿಡಿಟಿ:

ಅಸಿಡಿಟಿ:

ಟೊಮ್ಯಾಟೋಗಳು ಆಸಿಡಿಕ್ ಆಗಿವೆ. ಅವುಗಳನ್ನು ಅಧಿಕವಾಗಿ ಸೇವಿಸುವುದರಿಂದ ನಿಮಗೆ ಗ್ಯಾಸ್ಟ್ರಿಕ್ ಉಂಟಾಗುತ್ತದೆ. ನಿಮಗೆ ಜೀರ್ಣಕಾರಿ ಸಮಸ್ಯೆಗಳಿದ್ದರೆ ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ಇಲ್ಲವಾದಲ್ಲಿ ನಿಮ್ಮ ಸಮಸ್ಯೆ ಹೆಚ್ಚಾಗುವ ಸಂಭವವಿದೆ. ಅಸಿಡಿಟಿ ಬೇರೆ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ಅಲರ್ಜಿ:

ಅಲರ್ಜಿ:

ಅನೇಕ ಜನರು ಟೊಮೆಟೊಗೆ ಅಲರ್ಜಿಯನ್ನು ಹೊಂದಿರುತ್ತಾರೆ. ಅಂತಹ ಜನರು ಬಾಯಿ, ನಾಲಿಗೆ ಮತ್ತು ಮುಖದ ಊತವನ್ನು ಹೊಂದುತ್ತಾರೆ. ಜೊತೆಗೆ ಸೀನುವಿಕೆ ಮತ್ತು ಗಂಟಲಿನ ಸೋಂಕನ್ನು ಸಹ ಅನುಭವಿಸಬಹುದು. ಟೊಮೆಟೊಗೆ ಅಲರ್ಜಿ ಇರುವವರು ಇದನ್ನು ಸೇವಿಸುವುದನ್ನು ತಪ್ಪಿಸಬೇಕು. ಅಥವಾ ಆದಷ್ಟು ದೂರವಿರಬೇಕು.

ಕೀಲು ನೋವು:

ಕೀಲು ನೋವು:

ಟೊಮೆಟೊವನ್ನು ಅತಿಯಾಗಿ ಸೇವಿಸುವುದರಿಂದ ವ್ಯಕ್ತಿಯು ಕೀಲುಗಳಲ್ಲಿ ಊತ ಮತ್ತು ನೋವಿನ ಬಗ್ಗೆ ದೂರು ನೀಡಿರುವ ಅನೇಕ ಉದಾಹರಣೆಗಳಿವೆ. ಟೊಮೊಟೋ ಹುಳಿಯಾಗಿರುವುದರಿಂದ ಅತಿಯಾದ ಸೇವನೆಯು ಮೂಳೆಗಳನ್ನು ಸವೆಯುವಂತೆ ಮಾಡುತ್ತದೆ. ಇದರಿಂದ ಕೀಲು ನೋವುಗಳು ಉಂಟಾಗುತ್ತವೆ. ಆದ್ದರಿಮದ ಈಗಾಗಲೇ ಈ ಕೀಲು ನೋವಿನ ಸಮಸ್ಯೆ ಇರುವವರು ಟೋಮಾಟೋ ಯಿಂದ ದೂರವಿರುವುದು ಉತ್ತಮ.

ಮೂತ್ರಪಿಂಡದ ತೊಂದರೆಗಳು:

ಮೂತ್ರಪಿಂಡದ ತೊಂದರೆಗಳು:

ಯುಎಸ್ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯ ಪ್ರಕಾರ, ಈಗಾಗಲೇ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ಪೊಟ್ಯಾಸಿಯಮ್ ಸೇವನೆಯನ್ನು ಮಿತಿಗೊಳಿಸಬೇಕು. ಟೊಮೆಟೊದಲ್ಲಿ ಪೊಟ್ಯಾಸಿಯಮ್ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಇದಲ್ಲದೆ, ಟೊಮೆಟೊ ಸೇವಿಸಿದಾಗ, ಅದರ ಬೀಜಗಳು ಮೂತ್ರಪಿಂಡವನ್ನು ತಲುಪಿ ಕಲ್ಲುಗಳನ್ನು ರೂಪಿಸುತ್ತವೆ. ಆದ್ದರಿಂದ ಮೂತ್ರಪಿಂಡದ ಸಮಸ್ಯೆ ಇರುವವರು ಟೊಮೊಟೋ ಸೇವನೆ ಕಡಿಮೆ ಮಾಡಿ.

ದೇಹದ ವಾಸನೆ:

ದೇಹದ ವಾಸನೆ:

ಟೊಮೆಟೊದಲ್ಲಿ ಇರುವ ಟರ್ಪಿನ್ ಎಂಬ ಅಂಶವು ನಿಮ್ಮ ದೇಹದಲ್ಲಿ ವಾಸನೆಯನ್ನು ಉಂಟುಮಾಡುತ್ತದೆ . ಜೀರ್ಣಕ್ರಿಯೆಯ ಸಮಯದಲ್ಲಿ ಇದರ ವಿಘಟನೆಯು ದೇಹದ ಡಿಯೋಡರೆಂಟ್ ಅನ್ನು ಉತ್ಪಾದಿಸುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಸ್ವಲ್ಪ ಕಡಿಮೆ ಮಾಡಿ ಅಥವಾ ಪರ್ಯಾಯ ತರಕಾರಿ ಹಣ್ಣುಗಳನ್ನು ಬಳಸಿ.

English summary

Side Effects of Eating Too Much Tomatoes in Kannada

Here we told about Side Effects of Eating Too Much Tomatoes in Kannada, read on
X
Desktop Bottom Promotion