For Quick Alerts
ALLOW NOTIFICATIONS  
For Daily Alerts

ಊಟ ಮಾಡಿದ ತಕ್ಷಣ ಟೀ ಕುಡಿಯುವ ಅಭ್ಯಾಸ ನಿಮಗಿದ್ದರೆ, ಇಂದೇ ಬಿಟ್ಟುಬಿಡಿ..

|

ದಿನವನ್ನು ಪ್ರಾರಂಭಿಸಲು ಅಥವಾ ಇಡೀ ದಿನದ ಆಯಾಸವನ್ನು ನಿವಾರಿಸಲು ಚಹಾದ ಮೊರೆ ಹೋಗುವವರು ಸಾಕಷ್ಟು ಜನ. ಆದರೆ ಊಟ ಮಾಡಿದ ತಕ್ಷಣ ಚಹಾ ಕುಡಿಯಲು ಇಷ್ಟಪಡುವ ಜನರಲ್ಲಿ ನೀವೂ ಇದ್ದರೆ, ಈ ಅಭ್ಯಾಸವನ್ನು ಇಂದಿನಿಂದಲೇ ಬದಲಾಯಿಸಿ. ಹೌದು, ಚಹಾದಲ್ಲಿರುವ ಕೆಫೀನ್ ದೇಹದಲ್ಲಿ ಕಾರ್ಟಿಸೋಲ್ ಅಥವಾ ಸ್ಟೀರಾಯ್ಡ್ ಹಾರ್ಮೋನ್ ಅನ್ನು ಹೆಚ್ಚಿಸುವ ಮೂಲಕ ಆರೋಗ್ಯಕ್ಕೆ ಅನೇಕ ಹಾನಿ ಉಂಟುಮಾಡುತ್ತದೆ.

ಊಟವಾದ ಬಳಿಕ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಏನಾಗುತ್ತದೆ ಎಂಬುದನ್ನು ಈ ಕೆಳಗೆ ವಿವರಿಸಿದ್ದೇವೆ, ನೋಡಿ:

ರಕ್ತದೊತ್ತಡ ಹೆಚ್ಚಾಗಬಹುದು:

ರಕ್ತದೊತ್ತಡ ಹೆಚ್ಚಾಗಬಹುದು:

ಊಟ ಮಾಡಿದ ನಂತರ ಚಹಾ ಕುಡಿಯುವ ಅಭ್ಯಾಸವು ನಿಮ್ಮನ್ನು ರಕ್ತದೊತ್ತಡ ರೋಗಿಯನ್ನಾಗಿ ಮಾಡುತ್ತದೆ. ವಾಸ್ತವವಾಗಿ, ಚಹಾದಲ್ಲಿ ಕೆಫೀನ್ ಇರುತ್ತದೆ. ಆದ್ದರಿಂದ ಊಟದ ನಂತರ ಚಹಾ ಸೇವಿಸುವುದರಿಂದ ರಕ್ತದೊತ್ತಡದ ತೊಂದರೆ ಉಂಟಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಊಟದ ನಂತರ ಚಹಾವನ್ನು ಸೇವಿಸಬಾರದು.

ಹೃದಯಕ್ಕೆ ಅಪಾಯ:

ಹೃದಯಕ್ಕೆ ಅಪಾಯ:

ಊಟವಾದ ತಕ್ಷಣ ಟೀ ಕುಡಿಯುವುದರಿಂದ ನಿಮಗೆ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ನಿಮ್ಮ ಈ ಅಭ್ಯಾಸವು ತ್ವರಿತ ಹೃದಯ ಬಡಿತಕ್ಕೂ ಕಾರಣವಾಗುತ್ತದೆ. ಆದ್ದರಿಂದ ಈಗಾಗಲೇ ಹೃದಯ ಸಮಸ್ಯೆ ಇರುವವರು ಈ ಅಭ್ಯಾಸವನ್ನು ಬಿಡಬೇಕು. ಅಷ್ಟು ಟೀ ಪ್ರಿಯರಾಗಿದ್ದರೆ, ಸ್ವಲ್ಪ ಸಮಯದ ಬಳಿಕ ಚಹಾ ಕುಡಿಯಬಹುದು, ಆದರೆ ತಕ್ಷಣ ಕುಡಿಯುವುದು ನಿಮ್ಮ ಹೃದಯಕ್ಕೆ ಹಾನಿ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆಗೆ ತೊಂದರೆಗಳು:

ಜೀರ್ಣಾಂಗ ವ್ಯವಸ್ಥೆಗೆ ತೊಂದರೆಗಳು:

ಊಟವಾದ ಕೂಡಲೇ ಚಹಾ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ದೇಹದಲ್ಲಿ ಆಮ್ಲ ಅಥವಾ ಆಸಿಡಿಕ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ವ್ಯಕ್ತಿಯು ಆಹಾರವನ್ನು ಜೀರ್ಣಿಸಿಕೊಳ್ಳಲು ತೊಂದರೆ ಅನುಭವಿಸುತ್ತಾನೆ. ಜೀರ್ಣ ಪ್ರಕ್ರಿಯೆ ವಿಳಂಬವಾಗಬಹುದು. ಅಜೀರ್ಣ ಸಮಸ್ಯೆ ಕಾಡಬಹುದು.

ಕಬ್ಬಿಣದ ಕೊರತೆ:

ಕಬ್ಬಿಣದ ಕೊರತೆ:

ಊಟ ಮಾಡಿದ ನಂತರ ಚಹಾ ಕುಡಿಯುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆಯೂ ಉಂಟಾಗುತ್ತದೆ. ಚಹಾದಲ್ಲಿ ಕಂಡುಬರುವ ಫೀನಾಲಿಕ್ ಸಂಯುಕ್ತವು ಆಹಾರದಲ್ಲಿನ ಕಬ್ಬಿಣದ ಅಂಶ ದೇಹ ಹೀರಿಕೊಳ್ಳುವುದನ್ನು ಅಡ್ಡಿಪಡಿಸುತ್ತದೆ. ಜೊತೆಗೆ ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ, ಇದು ರಕ್ತಹೀನತೆಯ ಸಮಸ್ಯೆಗೆ ಕಾರಣವಾಗಬಹುದು.

ತಲೆನೋವು ಸಮಸ್ಯೆ:

ತಲೆನೋವು ಸಮಸ್ಯೆ:

ಸಾಮಾನ್ಯವಾಗಿ ಜನರು ತಲೆನೋವು ಬಂದಾಗ ಚಹಾ ಸೇವಿಸುತ್ತಾರೆ. ತಲೆನೋವನ್ನು ಕಡಿಮೆಮಾಡಲು ಇದು ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ. ಆದರೆ ಊಟದ ನಂತರ ಚಹಾ ಸೇವಿಸಿದರೆ ದೇಹದಲ್ಲಿ ಗ್ಯಾಸ್ ಅಥವಾ ಅನಿಲ ಉತ್ಪತ್ತಿಯಾಗುವುದರಿಂದ ತಲೆನೋವಿನ ಸಮಸ್ಯೆ ಉದ್ಭವಿಸಬಹುದು.

ಈ ವಿಷಯಗಳನ್ನು ನೆನಪಿನಲ್ಲಿಡಿ:

ಈ ವಿಷಯಗಳನ್ನು ನೆನಪಿನಲ್ಲಿಡಿ:

ನಿಮಗೆ ಚಹಾ ಇಷ್ಟವಾಗಿದ್ದರೆ , ಊಟ ಮಾಡಿದ 1-2 ಗಂಟೆಗಳ ನಂತರ ಕುಡಿಯಬಹುದು. ಆಗ ಮೇಲಿನ ಸಮಸ್ಯೆಗಳು ಉದ್ಭವಿಸುವುದು ಕಡಿಮೆಯಾಗುವುದು. ಇದು ಊಟ ಮಾಡಿದ ತಕ್ಷಣ ಟೀ ಬೇಕು ಎನ್ನುವವರಿಗಾಗಿ ಕಿವಿ ಮಾತು.

English summary

Side Effects of Drinking Tea After Meal in kannada

Here we talking about Side Effects of Drinking Tea After Meal in kannada, read on
Story first published: Thursday, July 15, 2021, 10:47 [IST]
X
Desktop Bottom Promotion