For Quick Alerts
ALLOW NOTIFICATIONS  
For Daily Alerts

ಈ ಆಹಾರಕ್ರಮ ಅನುಸರಿಸಿ ನೋಡಿ, ಮೈ ತೂಕ ಚಿಂತೆಯೇ ಕಾಡಲ್ಲ

|

ನಮ್ಮಲ್ಲಿ ಬಹುತೇಕ ಜನರಿಗೆ ತೂಕ ಹೆಚ್ಚಾಗುತ್ತಿರುವುದೇ ಚಿಂತೆ. ಮನೆಯಲ್ಲಿಯೇ ನಿಯಮಿತವಾದ ವ್ಯಾಯಾಮ ಹಾಗೂ ಆಹಾರಕ್ರಮ ಅಂದರೆ ಡಯಟ್‌ ಪಾಲಿಸಿದರೆ ಮೈ ತೂಕ ಕಡಿಮೆ ಮಾಡಬಹುದು.

Must Know 8 Indian Diet Tips For Weight Loss | Boldsky Kannada
Must-Know Tips For An Indian Diet For Weight Loss

ಕೆಲವರು ಡಯಟ್‌ ಅಂದರೆ ಊಟ ಬಿಡುವುದು ಎಂದು ತಪ್ಪಾಗಿ ಗ್ರಹಿಸುತ್ತಾರೆ. ಆದರೆ ಅದಲ್ಲ, ಆರೋಗ್ಯಕರ ಆಹಾರ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದು. ಕೀಟೋ ಡಯಟ್, ಮೆಡಿಟೇರಿಯನ್ ಹೀಗೆ ತೂಕ ಇಳಿಕೆ ಹಲವಾರು ಡಯಟ್ ವಿಧಾನಗಳಿವೆ.

ಆದರೆ ತೂಕ ಇಳಿಕೆಗೆ ನಮ್ಮ ಭಾರತೀಯ ಆಹಾರಶಯಲಿಯೇ ಸಾಕು, ಇಲ್ಲಿ ನಾವು ಯಾವ ಬಗೆಯ ಆಹಾರಶೈಲಿ ರೂಪಿಸಿಕೊಂಡರೆ ತೂಕ ಇಳಿಕೆಗೆ ಸಹಕಾರಿ ಎಂಬುವುದನ್ನು ಹೇಳಿದ್ದೇವೆ ನೋಡಿ:

1. ಕಾರ್ಬೋಹೈಡ್ರೇಟ್‌ ತಿನ್ನಿ:

1. ಕಾರ್ಬೋಹೈಡ್ರೇಟ್‌ ತಿನ್ನಿ:

ಎಲ್ಲಾ ಡಯಟ್‌ನಲ್ಲಿ ಕಾರ್ಬೋಹೈಡ್ರೇಟ್‌ ತಿನ್ನಬೇಡಿ ದಪ್ಪಗಾಗಬೇಡಿ ಎಂದು ಹೇಳುತ್ತಾರೆ. ದಕ್ಷಿಣ ಭಾರತದವರಿಗೆ ಅನ್ನ ಅಂದರೆ ಪ್ರೀತಿ, ಅದನ್ನು ಬಿಡುವುದು ಅಷ್ಟು ಸುಲಭವಲ್ಲ. ನಾವು ಹೇಳುತ್ತಿರುವ ಇಂಡಿಯನ್ ಡಯಟ್‌ನಲ್ಲಿ ಅನ್ನ ಸವಿಯಬಹುದು. ಅನ್ನ,ಸಿರಿಧಾನ್ಯ ಇವುಗಳಲ್ಲಿ ಕಾರ್ಬೋಹೈಡ್ರೇಟ್ಸ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇನ್ನು ಸಿಹಿಗೆಣಸು, ಆಲೂಗಡ್ಡೆ ಇವುಗಳನ್ನು ಕೂಡ ತಿನ್ನಬಹುದು. ಅನ್ನ ಕೆಂಪಕ್ಕಿಯಿಂದ ಮಾಡಿ ತಿನ್ನಿ.

2. ಪ್ರೊಟೀನ್ ತಿನ್ನಿ

2. ಪ್ರೊಟೀನ್ ತಿನ್ನಿ

ಪ್ರೊಟೀನ್ ಸ್ನಾಯುಗಳು, ಕಾರ್ಟಿಲೆಜ್‌ ಬಲವಾಗಲು, ತ್ವಚೆಯ ಆರೋಗ್ಯಕ್ಕೆ ಅವಶ್ಯಕ. ಪ್ರೊಟೀನ್ ದೇಹದ ನರಗಳು ಹಾನಿಗೊಳಗಾಗದಂತೆ ರಕ್ಷಣೆ ಮಾಡಿ, ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ. ದೇಹದಲ್ಲಿ ಪ್ರೊಟೀನ್ ಕಡಿಮೆಯಾದರೆ ಸ್ನಾಯುಗಳು ಬಲಹೀನವಾಗುವುದು, ಇದರಿಂದ ತಲೆಸುತ್ತು ಉಂಟಾಗುವುದು. ದಿನದಲ್ಲಿ ನಾವು ತೆಗೆದುಕೊಳ್ಳುವ ಆಹಾರದಲ್ಲಿ ಶೇ. 30ರಷ್ಟು ಪ್ರೊಟೀನ್ ಇರಬೇಕು. ದಾನ್ಯಗಳು, ಟೋಫು, ಧಾನ್ಯಗಳು, ಹಾಲಿನ ಉತ್ಪನ್ನಗಳು, ನಟ್ಸ್, ಬೀಜಗಳಲ್ಲಿ ಪ್ರೊಟೀನ್ ಅಂಶವಿರುತ್ತದೆ.

3. ನಾರಿನಂಶ ಅಧಿಕವಿರಲಿ

3. ನಾರಿನಂಶ ಅಧಿಕವಿರಲಿ

ನಾರಿನಂಶ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಸಮತೂಕವನ್ನು ಹೊಂದಲು ಜೀರ್ಣಕ್ರಿಯೆ ಚೆನ್ನಾಗಿ ನಡೆಯಬೇಕು. ನಾರಿನಂಶದ ಆಹಾರಗಳನ್ನು ತಿಂದಾಗ ಬೇಗನೆ ಹೊಟ್ಟೆ ತುಂಬುತ್ತದೆ. ಇದರಿಂದ ಇತರ ಕ್ಯಾಲೋರಿ ಆಹಾರಗಳನ್ನು ತಿನ್ನುವುದು ಕಡಿಮೆಯಾಗುತ್ತದೆ.

4. ಆರೋಗ್ಯಕರ ಕೊಬ್ಬು ಸೇವಿಸಿ

4. ಆರೋಗ್ಯಕರ ಕೊಬ್ಬು ಸೇವಿಸಿ

ತೂಕದ ವಿಷಯಕ್ಕೆ ಬಂದಾಗ ಕೊಬ್ಬಿನಂಶವಿರುವ ಆಹಾರವನ್ನು ಶತ್ರುವಿನಂತೆಯೇ ನೋಡಲಾಗುತ್ತದೆ. ಆದರೆ ನಮ್ಮ ದೇಹಕ್ಕೆ ಆರೋಗ್ಯಕರ ಕೊಬ್ಬು ಅವಶ್ಯಕ, ಏಕೆಂದರೆ ಇದು ವಿಟಮಿನ್ಸ್ ಹೀರಿಕೊಳ್ಳುತ್ತದೆ ಹಾಗೂ ಹಾರ್ಮೋನ್‌ಗಳು ಸರಿಯಾದ ಪ್ರಮಾನದಲ್ಲಿ ಉತ್ಪತ್ತಿಗೆ ಸಹಕಾರಿ. ನಿಮ್ಮ ಆಹಾರದಲ್ಲಿ 5ನೇ ಒಂದು ಭಾಗದಷ್ಟು ಕೊಬ್ಬಿನಂಶವಿರುವ ಆಹಾರ ಸೇವಿಸಬೇಕು. ಸೋಯಾ ಬೀನ್ ಎಣ್ಣೆ,ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ, ಆಲೀವ್‌ ಎಣ್ಣೆ, ಸಾಸಿವೆ ಎಣ್ಣೆ, ಕಡಲೆ ಎಣ್ಣೆ ಇವುಗಳಲ್ಲಿ ಒಮೆಗಾ 3 ಕೊಬ್ಬಿನಂಶವಿದ್ದು ದೇಹದಲ್ಲಿ ಕ್ಯಾಲೋರಿ ಕರಗಿಸಲು ಸಹಕಾರಿ.

5. ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ತಿನ್ನಿ

5. ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ತಿನ್ನಿ

ಹಣ್ಣುಗಳನ್ನು ತುಂಬಾ ತಿನ್ನಿ ಇನ್ನು ನಿಮ್ಮ ಆಹಾರಕ್ರಮದಲ್ಲಿ ತರಕಾರಿ ಹೆಚ್ಚು ಸೇವಿಸಿ. ಬಾಳೆಹಣ್ಣು, ಕಲ್ಲಂಗಡಿ ಹಣ್ಣು, ಸೇಬು, ಸೀಬೆಕಾಯಿ, ಲಿಚಿ, ಬೆರ್ರಿ ಹೀಗೆ ಸೀಸನಲ್ ಫ್ರೂಟ್ಸ್ ಅಂದರೆ ಆಯಾ ಸಮಯದಲ್ಲಿ ಸಿಗುವ ಹಣ್ಣುಗಳನ್ನು, ತರಕಾರಿಗಳನ್ನು ಸೇವಿಸಿ. ಆಹಾರದಲ್ಲಿ ಫ್ರೂಟ್‌ ಸಲಾಡ್, ವೆಜ್ ಸಲಾಡ್‌ ಮಾಡಿ ಸೇವಿಸುವುದರಿಂದ ಇತರ ಆಹಾರಗಳನ್ನು ತೆಗೆದುಕೊಳ್ಳುವ ಪ್ರಮಾಣ ಕಡಿಮೆಯಾಗುವುದು.

6. ಮಸಾಲೆ ಪದಾರ್ಥಗಳನ್ನು ಬಳಸಿ

6. ಮಸಾಲೆ ಪದಾರ್ಥಗಳನ್ನು ಬಳಸಿ

ಸಂಬಾರ ಪದಾರ್ಥಗಳಾದ ಲವಂಗ, ಚಕ್ಕೆ, ನಕ್ಷತ್ರ ಮೊಗ್ಗು, ಕಾಳು ಮೆಣಸು, ಏಲಕ್ಕಿ , ಮಸಾಲೆ ಸಾಮಗ್ರಿಯಾದ ಶುಂಠಿ, ಬೆಳ್ಳುಳ್ಳಿ ಇವುಗಳೆಲ್ಲಾ ಬರೀ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ದೇಹದಲ್ಲಿ ಕ್ಯಾಲೋರಿ ಕರಗಿಸುವಲ್ಲಿ ಸಹಕಾರಿ.

7. ಸಾಕಷ್ಟು ನೀರು ಕುಡಿಯಿರಿ

7. ಸಾಕಷ್ಟು ನೀರು ಕುಡಿಯಿರಿ

ಇನ್ನು ತೂಕ ಕಡಿಮೆಯಾಗಲು ಸಾಕಷ್ಟು ನೀರು ಕುಡಿಯಬೇಕು. ಆಹಾರ ಸೇವನೆಯ ಅರ್ಧ ಗಂಟೆ ಮುನ್ನ ದೊಡ್ಡ ಲೋಟದಲ್ಲಿ ಒಂದು ಲೋಟ ನೀರು ಕುಡಿಯಿರಿ. ಆಹಾರ ಸೇವನೆಯ ಬಳಿಕ ಬಿಸಿ ನೀರು ಕುಡಿಯಿರಿ. ಹೀಗೆ ಮಾಡುವುದರಿಂದ ಆಹಾರ ತೆಗೆದುಕೊಳ್ಳುವ ಪ್ರಮಾಣ ಕಡಿಮೆಯಾಗುತ್ತದೆ, ತಿಂದ ಆಹಾರವೂ ಚೆನ್ನಾಗಿ ಜೀರ್ಣವಾಗುತ್ತದೆ. ದಿನದಲ್ಲಿ ದೊಡ್ಡ ಲೋಟದಲ್ಲಿ 8 ಲೋಟ ನೀರು ಸೇವಿಸಿ.

8. ಆಹಾರವನ್ನು ಪ್ಲ್ಯಾನ್ ಪ್ರಕಾರ ಸೇವಿಸಿ

8. ಆಹಾರವನ್ನು ಪ್ಲ್ಯಾನ್ ಪ್ರಕಾರ ಸೇವಿಸಿ

ಮಲಗಲು ಸ್ವಲ್ಪ ಮುಂಚೆ ಉಟ ಮಾಡುವುದು, ಬೆಳಗ್ಗೆ ಏನೂ ತಿನ್ನದೇ ಹೋಗುವುದು ಮುಂತಾದ ಅಭ್ಯಾಸ ಮೈ ತೂಕವನ್ನು ಹೆಚ್ಚು ಮಾಡುತ್ತದೆ. ಬೆಳಗ್ಗಿನ ಉಪಾಹಾರ ಚೆನ್ನಾಗಿ ಸೇವಿಸಿ, ನಂತರ ಮಧ್ಯಾಹ್ನ ಹಾಗೂ ರಾತ್ರಿ ಲಘ ಆಹಾರ ಸೇವಿಸಿ. ಇನ್ನು ಮೂರು ಹೊತ್ತು ಆಹಾರ ಸೇವಿಸುವ ಬದಲು ಸ್ವಲ್ಪ-ಸ್ವಲ್ಪ ಆಹಾರದಂತೆ 4-5 ಬಾರಿ ತೆಗೆದುಕೊಳ್ಳಿ. ಉದಾಹರಣೆಗೆ ನೀವು 3 ಚಪಾತಿ ತಿನ್ನುವುದಾದರೆ ಒಂದೂವರೆ ಚಪಾತಿ ತಿಂದು ನಂತರ ಎರಡು ಗಂಟೆ ಬಿಟ್ಟು ಉಳಿದ ಚಪಾತಿ ತಿನ್ನಿ. ಈ ರೀತಿಯ ಆಹಾರಕ್ರಮದಿಂದ ಸಮತೂಕದ ಮೈಕಟ್ಟು ನಿಮ್ಮದಾಗಿಸಿಕೊಳ್ಳಬಹುದು.

English summary

Must-Know Tips For An Indian Diet For Weight Loss

Here are some tips to help you follow an Indian diet for weight loss. Tips For Following An Indian Diet In order for you to achieve a healthy weight loss journey, you should consider the following:
X
Desktop Bottom Promotion