For Quick Alerts
ALLOW NOTIFICATIONS  
For Daily Alerts

ನೀವು ಕೊರೋನಾದಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರೆ, ಮಾಡಿಸಲೇಬೇಕಾದ ಟೆಸ್ಟ್ ಹಾಗೂ ಸ್ಕ್ಯಾನ್ ಗಳ ಪಟ್ಟಿ ಇಲ್ಲಿದೆ

|

ದೇಶದಲ್ಲಿ ಪ್ರತಿದಿನ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಲ್ಲರ ನೆಮ್ಮದಿ ಕೆಡಿಸಿದೆ. ಇದರ ನಡುವೆ ಕೊರೋನಾದಿಂದ ಗುಣಮುಖ ಆಗುತ್ತಿರುವವರ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬರುತ್ತಿದ್ದು, ತುಸು ನಿರಾಳತೆಯನ್ನು ನೀಡಿದೆ. ಆದರೆ ಕೊರೋನಾ ಗುಣವಾದ ಮೇಲೆ ಎಲ್ಲವೂ ಸರಿಹೋಯಿತು ಎಂದರ್ಥವಲ್ಲ.

ಕೊರೋನಾದಿಂದ ಮುಕ್ತಿ ಪಡೆದಿದ್ದರೂ ಸಹ, ಅದು ನಿಮ್ಮ ದೇಹದ ಇತರ ಭಾಗದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಆದ್ದರಿಂದ ನೀವು ಒಮ್ಮೆ ದೇಹವನ್ನು ಎಲ್ಲಾ ರೀತಿಯಲ್ಲೂ ತಪಾಸಣೆಗೆ ಒಳಪಡಿಸುವುದು ಸೂಕ್ತ. ಇದರಿಂದ ನಿಮ್ಮ ಆರೋಗ್ಯ ಸ್ಥಿತಿ ಹೇಗಿದೆ ಎಬುದು ತಿಳಿಯುತ್ತೆ. ಹಾಗಾದರೆ ಕೊರೋನಾ ಚೇತರಿಕೆ ನಮತರ ನೀವು ಮಾಡಿಸಬೇಕಾದ ಆರೋಗ್ಯ ಪರೀಕ್ಷೆಗಳಾವುವು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ನೀವು ಇತ್ತೀಚೆಗೆ ಕೊರೋನಾ ವೈರಸ್ ನಿಂದ ಚೇತರಿಸಿಕೊಂಡಿದ್ದರೆ, ಮಾಡಿಸಿಕೊಳ್ಳಬೇಕಾದ ಪರೀಕ್ಷೆಗಳು ಮತ್ತು ಸ್ಕ್ಯಾನ್‌ಗಳನ್ನು ಈ ಕೆಳಗೆ ನೀಡಲಾಗಿದೆ:

igG ಆ್ಯಂಟಿಬಾಡಿ ಟೆಸ್ಟ್:

igG ಆ್ಯಂಟಿಬಾಡಿ ಟೆಸ್ಟ್:

ಸೋಂಕಿನ ವಿರುದ್ಧ ಹೋರಾಡಿದ ನಂತರ, ದೇಹವು ಭವಿಷ್ಯದ ಸೋಂಕುಗಳನ್ನು ತಡೆಯಲು ಸಹಾಯಕವಾಗುವ ಪ್ರತಿಕಾಯ ಅಥವಾ ಆ್ಯಂಟಿಬಾಡಿಗಳನ್ನು ಉತ್ಪಾದಿಸುತ್ತದೆ. ಈ ಪ್ರತಿಕಾಯಗಳ ಮಟ್ಟವನ್ನು ತಿಳಿದುಕೊಳ್ಳುವುದರಿಂದ, ನೀವು ಎಷ್ಟು ರೋಗನಿರೋಧಕ ಶಕ್ತಿ ಹೊಂದಿದ್ದೀರಿ ಎಂದು ಗೊತ್ತಾಗುವುದಲ್ಲದೇ, ಪ್ಲಾಸ್ಮಾ ನೀಡಲು ಅರ್ಹರಾಗಿದ್ದೀರೇ ಎಂಬುದನ್ನು ತಿಳಿಯಲು ಸಹಕಾರಿಯಾಗುತ್ತದೆ.

ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ದೇಹವು ಒಂದು ವಾರ ಅಥವಾ ಎರಡು ವಾರಗಳನ್ನು ತೆಗೆದುಕೊಳ್ಳುತ್ತದೆ ಆದ್ದರಿಂದ ನೀವು ವೈರಸ್‌ನಿಂದ ಚೇತರಿಸಿಕೊಳ್ಳುವವರೆಗೆ ಕಾಯಿರಿ. ಒಂದು ವೇಳೆ ನೀವು ಪ್ಲಾಸ್ಮಾವನ್ನು ದಾನ ಮಾಡುತ್ತಿದ್ದರೆ, ಚೇತರಿಸಿಕೊಂಡ ಒಂದು ತಿಂಗಳೊಳಗೆ ಪರೀಕ್ಷೆಯನ್ನು ಮಾಡಿ, ಇದು ಪ್ಲಾಸ್ಮಾ ನೀಡಲು ಸೂಕ್ತ ಸಮಯವೂ ಆಗಿದೆ.

ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ) ಟೆಸ್ಟ್:

ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ) ಟೆಸ್ಟ್:

ಸಿಬಿಸಿ ಪರೀಕ್ಷೆಗಳು ವಿವಿಧ ರೀತಿಯ ರಕ್ತ ಕಣಗಳನ್ನು (ಆರ್‌ಬಿಸಿಗಳು, ಡಬ್ಲ್ಯುಬಿಸಿಗಳು, ಪ್ಲೇಟ್‌ಲೆಟ್‌ಗಳು ಇತ್ಯಾದಿ) ಅಳೆಯುವ ಒಂದು ಮೂಲಭೂತ ಪರೀಕ್ಷೆಯಾಗಿದ್ದು, ನೀವು ಕೊರೋನಾ ಸೋಂಕಿಗೆ ಎಷ್ಟು ಚೆನ್ನಾಗಿ ಪ್ರತಿಕ್ರಿಯಿಸಿದ್ದೀರಿ ಎಂಬ ಕಲ್ಪನೆಯನ್ನು ನೀಡುತ್ತದೆ. ಇದು ಒಂದು ರೀತಿಯಲ್ಲಿ, ನೀವು ಚೇತರಿಕೆಯ ನಂತರ ತೆಗೆದುಕೊಳ್ಳಬೇಕಾದ ಹೆಚ್ಚುವರಿ ಕ್ರಮಗಳಿಗೆ ಮಾರ್ಗದರ್ಶನ ನೀಡಬಹುದು.

ಗ್ಲೂಕೋಸ್, ಕೊಲೆಸ್ಟ್ರಾಲ್ ಪರೀಕ್ಷೆಗಳು:

ಗ್ಲೂಕೋಸ್, ಕೊಲೆಸ್ಟ್ರಾಲ್ ಪರೀಕ್ಷೆಗಳು:

ಈ ವೈರಸ್ ಉರಿಯೂತ ಮತ್ತು ಹೆಪ್ಪುಗಟ್ಟುವಿಕೆಗೆ ಕಾರಣವಾಗುವುದರಿಂದ, ಕೆಲವು ಜನರು ರಕ್ತದಲ್ಲಿನ ಗ್ಲೂಕೋಸ್ ಮತ್ತು ರಕ್ತದೊತ್ತಡದ ಮಟ್ಟಗಳಲ್ಲಿ ಏರಿಳಿತಗಳನ್ನು ಕಂಡಿದ್ದಾರೆ. ಆದ್ದರಿಂದ ಈ ಪರೀಕ್ಷೆ ಅವರ ಗ್ಲುಕೋಸ್ ಹಾಗೂ ಬ್ಲಡ್ ಪ್ರೆಶರ್ ಯಾವ ಮಟ್ಟದಲ್ಲಿದೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ಇದರಿಂದ ನೀವು ಆರೋಗ್ಯವನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು.

ಇದರ ಜೊತೆಗೆ ಬಯೋಕೆಮಿಸ್ಟ್ರಿ, ಕ್ರಿಯೇಟಿನೈನ್, ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ಕಾರ್ಯ ಪರೀಕ್ಷೆಗಳನ್ನು ಸಹ ಮಾಡಬಹುದು.

ನರ-ಕಾರ್ಯ ಪರೀಕ್ಷೆಗಳು:

ನರ-ಕಾರ್ಯ ಪರೀಕ್ಷೆಗಳು:

ಅನೇಕ ರೋಗಿಗಳು ಚೇತರಿಸಿಕೊಂಡ ಕೆಲವು ವಾರಗಳು ಮತ್ತು ತಿಂಗಳುಗಳ ನಂತರ ನರಕ್ಕೆ ಸಂಬಂಧಿಸಿದ ಮತ್ತು ಮಾನಸಿಕ ವಿಚಾರಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ವರದಿ ಮಾಡುತ್ತಾರೆ, ಇದು ದೈನಂದಿನ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಚೇತರಿಕೆಯ ಕೆಲ ವಾರಗಳ ನಂತರ ಮೆದುಳಿನ ಮತ್ತು ನರವೈಜ್ಞಾನಿಕ ಕಾರ್ಯ ಪರೀಕ್ಷೆಗಳಿಗೆ ಮಹತ್ವ ನೀಡಬೇಕೆಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

ವಿಟಮಿನ್ ಡಿ ಪರೀಕ್ಷೆ:

ವಿಟಮಿನ್ ಡಿ ಪರೀಕ್ಷೆ:

ವಿಟಮಿನ್ ಡಿ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುವ ಪ್ರಮುಖ ಪೋಷಕಾಂಶವಾಗಿದೆ. ಚೇತರಿಕೆಯ ಸಮಯದಲ್ಲಿ ವಿಟಮಿನ್ ಡಿ ಪೂರೈಕೆಯು ಉತ್ತಮವಾಗಿದ್ದರೆ, ಇದು ಚೇತರಿಕೆ ವೇಗಗೊಳಿಸಲು ಸಹ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಆದ್ದರಿಂದ, ವಿಟಮಿನ್-ಡಿ ಪರೀಕ್ಷೆಯಂತಹ ಅಗತ್ಯ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಯಾವುದೇ ಕೊರತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಎದೆಯ ಸ್ಕ್ಯಾನ್:

ಎದೆಯ ಸ್ಕ್ಯಾನ್:

ರೋಗದ ತೀವ್ರತೆಯನ್ನು ಕಂಡುಹಿಡಿಯುವಲ್ಲಿ ಎಚ್‌ಆರ್‌ಸಿಟಿ ಸ್ಕ್ಯಾನ್‌ಗಳನ್ನು ಇದೀಗ ಹೆಚ್ಚು ಮಾಡಲಾಗುತ್ತಿದೆ. ಇದು ಕೊರೋನಾದಿಂದ ಉಂಟಾಗುವ ಶ್ವಾಸಕೋಶ ಸಮಸ್ಯೆಗಳನ್ನು ತೋರಿಸುತ್ತದೆ. ಆದ್ದರಿಂದ ಚೇತರಿಕೆ ಕಂಡ ಬಳಿಕ ಕೂಡ ಎದೆಯ ಸ್ಕ್ಯಾನ್ ಮಾಡಿಸಬೇಕು. ಇದರಿಂದ ನಿಮ್ಮ ಶ್ವಾಸಕೋಶದ ಆರೋಗ್ಯ ಹೇಗಿದೆ ಎಂಬುದನ್ನು ತಿಳಿಯಲು ಸಹಾಯವಾಗುತ್ತದೆ.

ಹಾರ್ಟ್ ಇಮೇಜಿಂಗ್ ಮತ್ತು ಕಾರ್ಡಿಯಾಕ್ ಸ್ಕ್ರೀನಿಂಗ್:

ಹಾರ್ಟ್ ಇಮೇಜಿಂಗ್ ಮತ್ತು ಕಾರ್ಡಿಯಾಕ್ ಸ್ಕ್ರೀನಿಂಗ್:

ಕೊರೋನಾ ಸೋಂಕು ದೇಹದಲ್ಲಿ ಹೆಚ್ಚಿನ ಉರಿಯೂತವನ್ನು ಪ್ರಚೋದಿಸುತ್ತದೆ, ಇದು ಹೃದಯದ ಪ್ರಮುಖ ಸ್ನಾಯುಗಳಿಗೆ ಹಾನಿಯನ್ನುಂಟುಮಾಡುತ್ತದೆ ಮತ್ತು ಮಯೋಕಾರ್ಡಿಟಿಸ್ನಂತಹ ತೊಂದರೆಗಳಿಗೆ ಕಾರಣವಾಗುತ್ತದೆ. ಇದು ಚೇತರಿಕೆ ನಂತರ ವರದಿಯಾದ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಹೀಗಾಗಿ, ಸರಿಯಾದ ಇಮೇಜಿಂಗ್ ಸ್ಕ್ಯಾನ್ ಮತ್ತು ಹೃದಯ ಕಾರ್ಯ ಪರೀಕ್ಷೆಗಳನ್ನು ಮಾಡಿಸುವುದು ತುಂಬಾ ಮುಖ್ಯ.

English summary

List of Tests You Must Take After Recovered from COVID-19

If you have recently recovered from coronavirus, here are the list of tests and scans might be worth taking. Take a look.
X