For Quick Alerts
ALLOW NOTIFICATIONS  
For Daily Alerts

ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ತೋಳು ನೋವು ಬರಲು ಕಾರಣವೇನು? ಆ ನೋವನ್ನು ಕಡಿಮೆ ಮಾಡುವುದು ಹೇಗೆ?

|

ಕೊರೊನಾ ವೈರಸ್ ನ ಎರಡನೇ ಅಲೆ ನಿಧಾನವಾಗಿ ತಗ್ಗುತ್ತಿದ್ದರೂ ಸಹ, ಮೂರನೇಯ ಅಲೆಯ ಕುರಿತು ಎಚ್ಚರಿಕೆ ವಹಿಸುವಂತೆ ತಜ್ಞರು ಎಚ್ಚರಿಕೆ ವಹಿಸುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಸದ್ಯ ಇರುವ ಏಕೈಕ ಮಾರ್ಗವೆಂದರೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವುದು. ಆದರೆ ಲಸಿಕೆ ಹಾಕಿಕೊಂಡ ಬಳಿಕ ಆಗುತ್ತಿರುವ ಅಡ್ಡ ಪರಿಣಾಮಗಳಿಂದ ಜನರು ಭಯಭೀತರಾಗಿ ಹಿಂದೇಟು ಹಾಕುತ್ತಿದ್ದಾರೆ.

ಇದರಿಂದ ಜ್ವರ, ಆಯಾಸ ಮತ್ತು ಮೈ-ಕೈ ನೋವುಗಳ ಹೊರತಾಗಿ, ಲಸಿಕೆ ನೀಡಿದ ಪರಿಣಾಮವಾಗಿ ನಿಮ್ಮ ತೋಳುಗಳು ಎರಡು-ಮೂರು ದಿನಗಳ ಕಾಲ ನೋವಿನಿಂದ ಕೂಡಿರುತ್ತವೆ. ಈ ನೋವಿಗೆ ಕಾರಣವೇನು? ಇದಕ್ಕೆ ಏನು ಮಾಡಬೇಕು? ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ವ್ಯಾಕ್ಸಿನೇಷನ್ ನಂತರ ನಿಮ್ಮ ತೋಳುಗಳಲ್ಲಿ ನೋವು ಏಕೆ ಕಂಡುಬರುವುದು?:

ವ್ಯಾಕ್ಸಿನೇಷನ್ ನಂತರ ನಿಮ್ಮ ತೋಳುಗಳಲ್ಲಿ ನೋವು ಏಕೆ ಕಂಡುಬರುವುದು?:

ತೋಳು ನೋವನ್ನು ಪಡೆಯುವುದು ಕೋವಿಡ್ ಲಸಿಕೆ ಪಡೆದ ಜನರು ಎದುರಿಸುವ ಸಾಮಾನ್ಯ ಅಡ್ಡಪರಿಣಾಮಗಳಲ್ಲಿ ಒಂದಾಗಿದೆ. ಲಸಿಕೆಯು ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪ್ರತಿಕ್ರಿಯೆ ನಡೆಸುತ್ತಿರುವ ಪರಿಣಾಮವೇ ತೋಳು ನೋವು ಎಂದು ತಜ್ಞರು ಹೇಳುತ್ತಾರೆ. ಲಸಿಕೆಯ ಈ ಅಡ್ಡಪರಿಣಾಮ ಅನುಭವಿಸುವುದರ ಅರ್ಥ, ಲಸಿಕೆ ಕಾರ್ಯರೂಪದಲ್ಲಿದೆ, ಅಂದುಕೊಂಡಂತೆ ಕಾರ್ಯನಿರ್ವಹಿಸುತ್ತಿದೆ ಎಂದು. ಲಸಿಕೆಯನ್ನು ದೇಹಕ್ಕೆ ಚುಚ್ಚಿದಾಗ, ಪ್ರತಿರಕ್ಷಣಾ ವ್ಯವಸ್ಥೆಯು ಅದಕ್ಕೆ ಸ್ಪಂದಿಸುತ್ತದೆ, ರೋಗಕಾರಕದಿಂದ ದೇಹವನ್ನು ರಕ್ಷಿಸಲು ಪ್ರಯತ್ನಿಸುತ್ತದೆ. ಇದು ವಿವಿಧ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತದೆ. ಅದರಲ್ಲಿ ಒಂದು ಈ ತೋಳು ನೋವು. ಜೊತೆಗೆ ಕೊರೊನಾ ಲಸಿಕೆಗಳನ್ನು ಇಂಟ್ರಾಮಸ್ಕುಲರ್ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ, ಅಂದರೆ ಸ್ನಾಯುಗಳಿಗೆ ನೇರವಾಗಿ ಚುಚ್ಚಲಾಗುತ್ತದೆ. ಇದು ಲಸಿಕೆ ಚುಚ್ಚಿದ ಸ್ಥಳದಲ್ಲಿ ಉರಿಯೂತವನ್ನು ಪ್ರಚೋದಿಸುತ್ತದೆ. ಜೊತೆಗೆ ಚುಚ್ಚುಮದ್ದಿನಿಂದ ಉಂಟಾಗುವ ಗಾಯ ನೋವಿನಿಂದ ಕೂಡಿರುವುದು. ಇದೇ ಕಾರಣಕ್ಕೆ ತೋಳು ನೋವು ಬರುವುದು.

ತೋಳು ನೋವನ್ನು ಹೇಗೆ ಕಡಿಮೆ ಮಾಡಬಹುದು?:

ತೋಳು ನೋವನ್ನು ಹೇಗೆ ಕಡಿಮೆ ಮಾಡಬಹುದು?:

ವ್ಯಾಕ್ಸಿನೇಷನ್ ನಂತರದ ತೋಳಿನ ನೋವು ಒಂದು ಅಥವಾ ಎರಡು ದಿನ ಉಳಿದಿದ್ದರೂ, ತಲೆ ಕೆಡಿಸಿಕೊಳ್ಳುವ ವಿಷಯವಲ್ಲ. ಆದರೆ ನೋವನ್ನು ಕಡಿಮೆಗೊಳಿಸುವ ಸಲುವಾಗಿ, ತೋಳಿನ ನಿರಂತರ ಮತ್ತು ಶಾಂತ ಚಲನೆಯನ್ನು ತಜ್ಞರು ಸಲಹೆ ಮಾಡುತ್ತಾರೆ. ಇದು ನೋವಿನ ತೀವ್ರತೆಯನ್ನು ಕಡಿಮೆ ಮಾಡಿ, ಆ ಪ್ರದೇಶಕ್ಕೆ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ನೋವನ್ನು ಕಡಿಮೆ ಮಾಡಲು ನೀವು ಕೋಲ್ಡ್ ಕಂಪ್ರೆಸ್ ಅನ್ನು ಸಹ ಮಾಡಬಹುದು. ಆದರೆ ನೋಯುತ್ತಿರುವುದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂಬುದರ ಸಂಕೇತ ಎಂಬುದನ್ನು ಮರೆಯಬೇಡಿ.

ಕೊರೊನಾ ವ್ಯಾಕ್ಸಿನೇಷನ್ ಗಳು ಬಹಳ ಮುಖ್ಯ:

ಕೊರೊನಾ ವ್ಯಾಕ್ಸಿನೇಷನ್ ಗಳು ಬಹಳ ಮುಖ್ಯ:

ಲಸಿಕೆಗಳು ವೈರಸ್‌ನಿಂದ ರಕ್ಷಿಸುವ ಏಕೈಕ ಸಾಧನವಾಗಿದೆ. ನೀವು ಚಿಕ್ಕವಯಸ್ಸಿನವರಾಗಲೀ, ಆರೋಗ್ಯವಂತರಾಗಿರಲೀ ಅಥವಾ ದುರ್ಬಲ ವರ್ಗಕ್ಕೆ ಸೇರಿದವರಾದರೂ ಕೊರೊನಾಕ್ಕೆ ಯಾವುದೇ ಬೇಧಭಾವವಿಲ್ಲ. ಎಲ್ಲ ವರ್ಗದವರ ಮೇಲೆ ಪರಿಣಾಮ ಬೀರುವ ಈ ಕೊರೊನಾ ವೈರಸ್ ನಿಂದ ರಕ್ಷಣೆ ಪಡೆದುಕೊಳ್ಳಲು ಲಸಿಕೆ ಪಡೆದುಕೊಳ್ಳುವ ಸ್ಲಾಟ್ ಅನ್ನು ಬುಕ್ ಮಾಡಿ, ಲಸಿಕೆ ಪಡೆದುಕೊಳ್ಳುವುದು ಉತ್ತಮ.

ಹೆಚ್ಚಿನವರು ಅಡ್ಡಪರಿಣಾಮಗಳನ್ನು ಅನುಭವಿಸಬಹುದು:

ಹೆಚ್ಚಿನವರು ಅಡ್ಡಪರಿಣಾಮಗಳನ್ನು ಅನುಭವಿಸಬಹುದು:

ವ್ಯಾಕ್ಸಿನೇಷನ್ ನಂತರದ ವಿಭಿನ್ನ ವ್ಯಕ್ತಿಗಳು ವಿಭಿನ್ನ ಅಡ್ಡಪರಿಣಾಮಗಳನ್ನು ಅನುಭವಿಸುತ್ತಾರೆ. ಜ್ವರ, ಆಯಾಸ, ವಾಕರಿಕೆ, ಮೈ-ಕೈ ನೋವು ಹೀಗೆ ವಿವಿಧ ಲಕ್ಷಣಗಳನ್ನು ಅನುಭವಿಸಿದ್ದಾರೆ. ಇದಲ್ಲದೆ, ಅನೇಕರು ವ್ಯಾಕ್ಸಿನೇಷನ್ಆದ ಸ್ಥಳದಲ್ಲಿ ತುರಿಕೆ, ಕೆಂಪು, ಊತವನ್ನು ಸಹ ಅನುಭವಿಸಿದ್ದಾರೆ.

English summary

Coronavirus Vaccination: Why do you Have Pain in Your Arms Post-Vaccination?

Here we talking about Coronavirus Vaccination: Why do you have pain in your arms post-vaccination?, read on
Story first published: Monday, June 21, 2021, 12:14 [IST]
X
Desktop Bottom Promotion