Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
ನಿಮಗೆ ಕೊರೊನಾ ಹೆಸರು ಕೇಳಿದ ತಕ್ಷಣ ಮೈನಡುಕ ಬರಬಹುದು. ಕಳೆದ ನಾಲ್ಕೈದು ವರ್ಷಗಳ ಹಿಂದೆ ಇಡೀ ಜಗತ್ತನ್ನು ಕಾಡಿದ ಭೀಕರ ಮಹಾಮಾರಿ ಅದು. ಇಡೀ ಜಗತ್ತು ನೋಡಿರದ ಸಾವು-ನೋವು ಜೊತೆಗೆ ಲಾಕ್‌ಡೌನ್‌ನಂತಹ ಅತ್ಯಂತ ಘೋರ ದಿನಗಳು ಕಣ್ಣೆದುರು ಬರುತ್ತದೆ.
ಕೊರೊನಾ ಕಾಲದಲ್ಲಿ ಅತ್ಯಂತ ವೇಗವಾಗಿ ಸೋಂಕು ಹರಡುತ್ತಿದ್ದ ಕಾಲವದು. ಕೆಲವರು ಈ ಸೋಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ ಮತ್ತೆ ಕೆಲವು ಹೋರಾಟ ಮಾಡಿ ಬದುಕುಳಿದು ಬಂದಿದ್ದಾರೆ. ಒಮ್ಮೆ ಕೊರೊನಾ ಸೋಂಕು ಬಂತೆಂದರೆ ಒಂದಿಷ್ಟು ದಿನ ಆಸ್ಪತ್ರೆಯಲ್ಲಿಯೇ ಮಲಗಬೇಕಿತ್ತು.

ಇಲ್ಲವೆ ಮನೆಯಲ್ಲಿ ಕ್ವಾರಂಟೈನ್ ಆಗುವ ಮೂಲಕ ಔಷಧಿ ಪಡೆದು ಗುಣಮುಖರಾಗಬೇಕಿತ್ತು. ಆದರೆ ಬಳಿಕ ಇದಕ್ಕೆ ಚುಚ್ಚು ಮದ್ದು ಕಂಡು ಕೊಂಡ ಮೇಲೆ ಸೋಂಕಿ ಪ್ರಮಾಣ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿತ್ತು. ಈ ಸೋಂಕು ಕಾಣಿಸಿಕೊಂಡರೆ ಬರೋಬ್ಬರಿ ತಿಂಗಳುಗಳ ಕಾಲ ಸೋಂಕಿನಿಂದ ಚೇತರಿಸಿಕೊಳ್ಳಲು ಆಸ್ಪತ್ರೆ ಪಾಲಾದವರು ಇದ್ದಾರೆ.
ಆದರೆ ಇಲ್ಲೊಬ್ಬನಿಗೆ ಬರೋಬ್ಬರಿ ವರ್ಷಗಳ ಕಾಲ ಕೋವಿಡ್ ಸೋಂಕು ಕಾಡಿತ್ತು. ಹೌದು ಆತನಿಗೆ ಸುಮಾರು 613 ದಿನಗಳ ಕಾಲ ಕೋವಿಡ್ ಸೋಂಕು ಕಾಡಿತ್ತು. ಅಲ್ಲದೆ ಈ ಕೊರೊನಾ ಆತನಲ್ಲಿ 50 ಬಾರಿ ರೂಪಾಂತರಗೊಂಡಿತ್ತು. ನಿಮಗೆ ಅಚ್ಚರಿಯಾಗಬಹುದು. ಆತನಿಗೆ ಕೋವಿಡ್ ಇಷ್ಟು ದಿನಗಳ ಕಾಲ ಆಸ್ಪತ್ರೆಯ ಬೆಡ್ ಮೇಲೆ ಮಲಗುವಂತೆ ಮಾಡಿತ್ತು.
ಆತನ ದೇಹದಲ್ಲಿ 50 ಬಾರಿ ರೂಪಾಂತರ ಹೊಂದಿತ್ತು ಕೊರೊನಾ
ನೆದರ್ಲ್ಯಾಂಡ್‌ನ 72 ವರ್ಷದ ವ್ಯಕ್ತಿಯೊಬ್ಬ ಬರೋಬ್ಬರಿ 613 ದಿನಗಳ ಕಾಲ ಕೋವಿಡ್ ವಿರುದ್ಧ ಹೋರಾಡಿ ಕೊನೆಗೂ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಇದು ಒಬ್ಬ ವ್ಯಕ್ತಿ ಕೋವಿಡ್ ಹೊಂದಿದ್ದ ಅತ್ಯಂತ ಸುದೀರ್ಘ ಕಾಲ ಎಂದು ತಿಳಿದುಬಂದಿದೆ. ಇಷ್ಟೆ ಅಲ್ಲ ಕೋವಿಡ್ ಆತನ ದೇಹದಲ್ಲಿಯೇ ಸುಮಾರು 50 ಬಾರಿ ರೂಪಾಂತರಗೊಂಡಿತ್ತು ಎಂದು ತಿಳಿದುಬಂದಿದೆ. ಮೊದಲು ಒಮಿಕ್ರಾನ್ BA.1.17 ನಿಂದ ಆರಂಭಗೊಂಡು ಸುಮಾರು 50 ರೂಪಾಂತರಕ್ಕೆ ಕಾರಣವಾಗಿತ್ತು.
ಆತನ ವಯಸ್ಸು ಹಾಗೂ ಆತ ನಿರಂತರವಾಗಿ ಕೋವಿಡ್ ಲಸಿಕೆ ಪಡೆದ ಮೇಲೆಯೂ ಆತನಿಂದ ಕೋವಿಡ್ ಸೋಂಕು ದೂರಾಗಿರಲಿಲ್ಲ. ಆತನಲ್ಲಿ ರೋಗ ನಿರೋಧಕ ಶಕ್ತಿ ಮರು ಉತ್ಪಾದನೆಯಾಗದ ಕಾರಣ ಕೋವಿಡ್ ಸೋಂಕು ಆತನಿಗೆ ಸುದೀರ್ಘವಾಗಿ ಕಾಡಿತ್ತು ಎಂದು ತಿಳಿದುಬಂದಿದೆ.
ಆತ ಹಿಂದೆ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಗೆ ಒಳಗಾಗಿದ್ದ ಮತ್ತು ನಂತರ ಲಿಂಫೋಮಾ ಕಾಯಿಲೆಗೂ ಆತ ತುತ್ತಾಗಿದ್ದ. ಹೀಗಾಗಿ ಆತನ ದೇಹವು ರೋಗ ನಿರೋಧಕ ಶಕ್ತಿ ಉತ್ಪಾದಿಸುವ ಶಕ್ತಿ ಕಳೆದುಕೊಂಡಿತ್ತು. ನಿರಂತರ ಚಿಕಿತ್ಸೆಯಲ್ಲಿ ಆತನ ದೇಹ ಕೋವಿಡ್ ವಿರುದ್ಧ ಹೋರಾಡುವಲ್ಲಿ ಸೋತಿತ್ತು. ಕೃತಕ ಆಮ್ಲಜನಕದ ಸಹಾಯದಿಂದ ಆತ ಇಷ್ಟು ದಿನ ಬದುಕುಳಿದಿದ್ದ. ಆದರೆ ಕೊನೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಆತನಿಗೆ ಫೆಬ್ರವರಿ 2022ರಲ್ಲಿ ಕೊರೊನಾದ ಬಲಶಾಲಿ ರೂಪಾಂತರವಾಗಿದ್ದ ಒಮಿಕ್ರಾನ್ BA.1.17 ವೈರಸ್ ತಗುಲಿತ್ತು. ಈ ವೈರಸ್ ತಗುಲಿ ಒಂದೇ ವಾರಕ್ಕೆ ಆತನ ದೇಹದಲ್ಲಿ ರೂಪಾಂತರ ಪ್ರಕ್ರಿಯೆ ಆರಂಭಗೊಂಡಿತ್ತು. ಫೆಬ್ರವರಿ 2022ರಿಂದ ಸೆಪ್ಟೆಂಬರ್ 2023ರ ನಡುವೆ ಆತನಿಂದ ಸಂಗ್ರಹಿಸಿದ್ದ ಗಂಟಲು ದ್ರವ ಹಾಗೂ ಮಾದರಿಯು 27 ಜಿನೋಮ್ ಅನುಕ್ರಮ ಆಗಿದ್ದವು.
ಆತನ ದೇಹದಲ್ಲಿ ಇಷ್ಟು ಸಮಯ ಕೋವಿಡ್ ಇರುವುದು ವೈದ್ಯರಿಗೂ ಅಚ್ಚರಿ ತರಿಸಿತ್ತು, ಅವರು ಒಂದು ರೂಪಾಂತರದ ಸೋಂಕಿಗೆ ಚಿಕಿತ್ಸೆ ಆರಂಭಿಸಿ ಅದರ ಮೇಲ್ವಿಚಾರಣೆಯಲ್ಲಿರುವಾಗಲೆ ಆ ಸೋಂಕಿನ ಹೊಸ ರೂಪಾಂತರ ಆತನಲ್ಲಿ ಕಂಡುಬರುತ್ತಿತ್ತು. ನಿರಂತರ ರೂಪಾಂತರದ ಕಾರಣದಿಂದಾಗಿ ಚಿಕಿತ್ಸೆಯೂ ಕ್ಲಿಷ್ಟವಾಗಿತ್ತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











