For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಕೈ-ಕಾಲಿನ ಬೆರಳುಗಳಲ್ಲಿ ಊತ: ಏನಿದು ಕೊರೊನಾದ ಹೊಸ ಪರಿಣಾಮ?

|

ಕೊರೊನಾದ ಲಕ್ಷಣಗಳು ದಿನಕ್ಕೊಂದು ಬದಲಾಗುತ್ತಲೇ ಇವೆ. ಉಸಿರಾಡದ ಮೇಲೆ ಪರಿಣಾಮ ಬೀರಿದ ನಂತರ ಇದೀಗ ವೈರಸ್ ಕಾಲ್ಬೆರಳುಗಳ ಮೇಲೂ ಪರಿಣಾಮ ಬೀರಿದೆ. ಇದು ತುಂಬಾ ಅಪಾಯಕಾರಿ ಅಲ್ಲದಿದ್ದರೂ, ಅಸ್ವಸ್ಥತೆ ಮತ್ತು ನೋವಿಗೆ ಕಾರಣವಾಗಬಹುದು. ಪ್ರಸ್ತುತ ಇದನ್ನು 'ಕೊರೊನಾ ಕಾಲ್ಬೆರಳುಗಳು' ಎಂದು ಕರೆಯಲಾಗುತ್ತಿದೆ.

ಕೇಳಲು ಆಶ್ಚರ್ಯವಾದರೂ, ಕಿರಿಯರಲ್ಲಿ ಈ ಸಮಸ್ಯೆ ಹೆಚ್ಚು ಕಾಣಸಿಗುತ್ತಿದೆ. 13 ವರ್ಷದ ಯುವತಿಯೊಬ್ಬಳು ಇದಕ್ಕೆ ತುತ್ತಾಗಿದ್ದು, ಇದರಿಂದ ಆಕೆ ನಡೆಯಲು ಹಾಗೂ ಶೂ ಧರಿಸಲು ಕಷ್ಟವಾಯಿತು ಎಂದು ವರದಿಯಾಗಿದೆ. ಈ ಕುರಿತು ನೀವು ತಿಳಿಯಬೇಕಾದ ವಿಚಾರಗಳು ಇಲ್ಲಿವೆ.

COVID ಕಾಲ್ಬೆರಳುಗಳು ಎಂದರೇನು?:

COVID ಕಾಲ್ಬೆರಳುಗಳು ಎಂದರೇನು?:

ಪೊಡಿಯಾಟ್ರಿ ಕಾಲೇಜಿನ ಪ್ರಕಾರ, ಕೋವಿಡ್ ಕಾಲ್ಬೆರಳುಗಳೆಂದರೆ, ಕೊರೊನಾ ತಗುಲಿದ ವ್ಯಕ್ತಿಗಳ ಕೈ ಕಾಲುಗಳಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಸಂಶೋಧನೆಯ ಪ್ರಕಾರ, ಇದು ಕೈ ಮತ್ತು ಕಾಲ್ಬೆರಳುಗಳ ಮೇಲೆ ಸಂಭವಿಸಬಹುದು. ಇದು ಸಾಮಾನ್ಯವಾಗಿದ್ದು, ಗಾಯ ಉಂಟುಮಾಡುವುದರ ಜೊತೆಗೆ, ಕೈ ಮತ್ತು ಕಾಲ್ಬೆರಳುಗಳು ಕೆಂಪು ಬಣ್ಣಕ್ಕೆ ತಿರುಗುವಂತೆ ಮಾಡುತ್ತವೆ, ಅಂತಿಮವಾಗಿ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಈ ಕಾಯಿಲೆಯ ಅತ್ಯಂತ ಅಪಾಯಕಾರಿ ಅಂಶವೆಂದರೆ ಅದು ಒಂದು ಕಾಲ್ಬೆರಲ್ಲಿ ಶುರುವಾಗಿ ಇತರ ಎಲ್ಲಾ ಕಾಲ್ಬೆರಳುಗಳಿಗೆ ಹರಡಬಹುದು.

ಇದಕ್ಕೆ ಕಾರಣವೇನು?:

ಇದಕ್ಕೆ ಕಾರಣವೇನು?:

ಇಲ್ಲಿಯವರೆಗೆ, ಕೋವಿಡ್ ಕಾಲ್ಬೆರಳುಗಳಿಗೆ ಯಾವುದೇ ನಿರ್ದಿಷ್ಟ ಕಾರಣಗಳು ದೊರಕಿಲ್ಲ, ಸಂಶೋಧನೆ ಇನ್ನೂ ನಡೆಯುತ್ತಿದೆ.

ಆದರೆ ತಜ್ಞರು ಇದು ಪ್ರತಿರಕ್ಷಣಾ ವ್ಯವಸ್ಥೆಯು ಕೊರೊನಾವೈರಸ್ ಸೋಂಕಿಗೆ ಪ್ರತಿಕ್ರಿಯಿಸುವ ಫಲಿತಾಂಶವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದು ಸಿದ್ಧಾಂತವು ಕೋವಿಡ್ ಕಾಲ್ಬೆರಳುಗಳು SARs-COV-2 ವೈರಸ್‌ನ ನೇರ ಫಲಿತಾಂಶವಾಗಿರಬಹುದು ಎಂದು ಸೂಚಿಸುತ್ತದೆ. ಮನೆಯಲ್ಲಿ ಬರಿಗಾಲಿನಲ್ಲಿ ನಡೆಯುವುದು, ದೈಹಿಕ ಚಲನೆಗಳ ಕೊರತೆ ಮತ್ತು ಜಡ ಜೀವನಶೈಲಿಯು ಕೆಲವು ಕಾರಣಗಳು ಎಂದು ಹೇಳಲಾಗುತ್ತದೆ.

ಇದರ ಗುಣಲಕ್ಷಣಗಳು:

ಇದರ ಗುಣಲಕ್ಷಣಗಳು:

ಅನೇಕ ಜನರಿಗೆ, ಇದು ಪಾದಗಳು ಅಥವಾ ಕೈ ಅಥವಾ ಕಾಲಿನ ಬೆರಳುಗಳ ಬಣ್ಣಬದಲಾವಣೆ ಮತ್ತು ಊತಕ್ಕೆ ಮಾತ್ರ ಕಾರಣವಾಗುತ್ತವೆ. ಇದು ನೋವುರಹಿತವಾಗಿರುತ್ತದೆ. ಇದರ ಜೊತೆಗೆ, ಗುಳ್ಳೆಗಳು, ತುರಿಕೆ, ಉಬ್ಬುಗಳು ಮತ್ತು ಒರಟು ಚರ್ಮವೂ ಕಂಡುಬರಬಹುದು. ಅಪರೂಪದ ತೀವ್ರ ಪ್ರಕರಣಗಳಲ್ಲಿ, ಸಣ್ಣ ಪ್ರಮಾಣದ ಕೀವು ಸಹ ಬೆಳೆಯಬಹುದು.

ಚಿಕಿತ್ಸೆ ಏನು?:

ಚಿಕಿತ್ಸೆ ಏನು?:

ಹೆಚ್ಚಿನ ಸಂದರ್ಭಗಳಲ್ಲಿ, ಕೋವಿಡ್ ಕಾಲ್ಬೆರಳುಗಳು ತಾನಾಗಿಯೇ ಗುಣವಾಗುತ್ತವೆ. ಆದರೆ, ಕಾಯಿಲೆಯು ದೀರ್ಘಕಾಲದವರೆಗೆ ಮುಂದುವರಿದರೆ, ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ, ಅವರು ಆ ಪ್ರದೇಶದ ಮೇಲೆ ಹಚ್ಚಲು ಸರಿಯಾದ ಔಷಧಿಗಳನ್ನು ಅಥವಾ ಮುಲಾಮುಗಳನ್ನು ನಿಮಗೆ ಸೂಚಿಸಬಹುದು.

English summary

What Is COVID Toes? Causes, Symptoms, Treatment and Prevention in Kannada

Here we talking about What Is COVID Toes? Causes, Symptoms, Treatment and Prevention in Kannada, read on
X
Desktop Bottom Promotion