For Quick Alerts
ALLOW NOTIFICATIONS  
For Daily Alerts

ಕೋವಿಡ್ 19ನಿಂದ ಮಕ್ಕಳ ಸುರಕ್ಷತೆಗೆ ಆಯುಷ್ ಇಲಾಖೆಯ ಹೊಸ ಮಾರ್ಗಸೂಚಿ, ಪೋಷಕರು ತೆಗೆದುಕೊಳ್ಳಬೇಕಾದ ಕ್ರಮಗಳಿವು

|

ಕೊರೊನಾ ಎರಡನೇ ಅಲೆಯೆನೋ ನಿಯಂತ್ರಣಕ್ಕೆ ಬರುತ್ತಿದೆ, ಆದರೆ ಮೂರನೇ ಅಲೆ ಹಾಗೂ ಅದು ಮಕ್ಕಳಿಗೆ ಉಂಟು ಮಾಡಬಹುದಾದ ಅಪಾಯದ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಕೇಂದ್ರದ ಆಯುಷ್ ಸಚಿವಾಲಯ ಮಕ್ಕಳು ಮತ್ತು ಪೋಷಕರಿಗೆ ಮನೆಯಲ್ಲಿಯೇ ಪಾಲಿಸಬೇಕಾದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯಲ್ಲಿ ಏನೇನಿದೆ ಎಂಬುದನ್ನು ಈ ಕೆಳಗೆ ನೊಡೋಣ.

ಆಯುಷ್ ಇಲಾಖೆ ತಿಳಿಸಿದ ಮಕ್ಕಳ ಆರೋಗ್ಯಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು:

 Ayush Ministry Homecare Guidelines on How to Take Care of Children to Save Them From COVID-19 in Kannada

1. ಮಕ್ಕಳು ಆಗಾಗ್ಗೆ ಕೈ ತೊಳೆಯುವುದು ಹಾಗೂ ಮನೆಯ ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು. ಹೀಗೆ ಮಾಡುವುದನ್ನು ಪ್ರೋತ್ಸಾಹಿಸಲು ಅವರಿಗೆ ಬಹುಮಾನವನ್ನು ನೀಡಬಹುದು.

2. 5-18 ವರ್ಷ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಾಗಿದೆ ಆದರೆ 2-5 ವರ್ಷ ವಯಸ್ಸಿನ ಮಕ್ಕಳು ಪೋಷಕರ ಮೇಲ್ವಿಚಾರಣೆಯಲ್ಲಿ ಹಾಕಿಕೊಳ್ಳಬಹುದು.
3. ವೈದ್ಯಕೀಯೇತರ ಅಥವಾ ಬಟ್ಟೆಯ ಮೂರು-ಲೇಯರ್ ಇರುವ ಹತ್ತಿ ಮಾಸ್ಕ್ ಗಳು ಮಕ್ಕಳಿಗೆ ಯೋಗ್ಯ

4. ಮಕ್ಕಳು ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕು, ಪ್ರಯಾಣವನ್ನು ತಪ್ಪಿಸಬೇಕು.

5. ವೀಡಿಯೊ ಮತ್ತು ಫೋನ್ ಕರೆಗಳ ಮೂಲಕ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿರಲು ಅವರಿಗೆ ಸಹಾಯ ಮಾಡಿ.
6. ವಯಸ್ಸಾದವರು ಗಂಭೀರವಾದ ಕಾಯಿಲೆಯ ಅಪಾಯವನ್ನು ಹೊಂದಿರುವುದರಿಂದ ಕೋವಿಡ್ ಶಂಕಿತ ಮಕ್ಕಳು ತಮ್ಮ ಅಜ್ಜ-ಅಜ್ಜಿಯರೊಂದಿಗೆ ಸಂಪರ್ಕದಲ್ಲಿರಬಾರದು.

7. ಮಕ್ಕಳಲ್ಲಿ ಐದು ದಿನಗಳಿಗಿಂತ ಹೆಚ್ಚಿನ ಅವಧಿಯ ಜ್ವರ, ಊಟ ಸೇರದೇ ಇರುವುದು, ಆಲಸ್ಯವಾಗುವುದು, ಉಸಿರಾಟದ ಪ್ರಮಾಣ ಹೆಚ್ಚಾಗುವುದು ಮತ್ತು ಆಮ್ಲಜನಕ ಮಟ್ಟ 95% ಕ್ಕಿಂತ ಕಡಿಮೆಯಾಗುವುದನ್ನು ಪೋಷಕರು ಗಮನಿಸುತ್ತಿರಬೇಕು. ಇವುಗಳಲ್ಲಿ ಯಾವುದಾದರೂ ಒಂದು ಕಂಡುಬಂದರೂ ವೈದ್ಯರ ಬಳಿ ಕರೆದೊಯ್ಯಿರಿ.
8. ಮಕ್ಕಳಿಗೆ ಕುಡಿಯಲು ಕುದಿಸಿ, ಆರಿಸಿದ ನೀರು ನೀಡಬೇಕು.
9. ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಬೆಳಿಗ್ಗೆ ಮತ್ತು ರಾತ್ರಿ ಸರಿಯಾಗಿ ಹಲ್ಲುಜ್ಜುವ ಮೂಲಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು.

10. 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಎಣ್ಣೆ ಮತ್ತು ಬೆಚ್ಚಗಿನ ನೀರಿನಿಂದ ಬಾಯಿ ಆಗಾಗ ಮುಕ್ಕಳಿಸಬೇಕು.
11. 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತೈಲ ಮಸಾಜ್ಗಳು, ಯೋಗಾಭ್ಯಾಸಗಳಾದ ಪ್ರಾಣಾಯಾಮ ಮತ್ತು ಧ್ಯಾನ -ವ್ಯಾಯಾಮಗಳನ್ನು ಮಾಡಲು ಪ್ರೋತ್ಸಾಹಿಸಬೇಕು.
12. ಆಯುರ್ವೇದ ಅನುಸರಿಸುವ ಮಕ್ಕಳಿಗಾಗಿ ಆಯುರ್ವೇದ ರೋಗನಿರೋಧಕ ಕ್ರಮಗಳು, ಅರಿಶಿನ ಹಾಲು, ಚವಾನ್ ಪ್ರಶ್ ಮತ್ತು ಸಾಂಪ್ರದಾಯಿಕ ಗಿಡಮೂಲಿಕೆಗಳ ಕಷಾಯ ಮುಂತಾದ ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳಿ.

13. ಮಕ್ಕಳಿಗೆ ಸಾಕಷ್ಟು ನಿದ್ರೆ ಮತ್ತು ಸುಲಭವಾಗಿ ಜೀರ್ಣವಾಗುವ, ತಾಜಾ ಮತ್ತು ಬೆಚ್ಚಗಿನ ಆಹಾರವನ್ನು ನೀಡಬೇಕು.
14. ಮಕ್ಕಳ ಆಟದ ಜಾಗ, ಕೋಟ್, ಹಾಸಿಗೆಗಳು, ಬಟ್ಟೆಗಳು ಮತ್ತು ಆಟಿಕೆಗಳನ್ನು ಪ್ರತಿದಿನ ಸಂಜೆ ಸ್ಯಾನಿಟೈಜ್ ಮಾಡಬೇಕು.
15. ಮಕ್ಕಳಿಗೆ ಭಯ ಹುಟ್ಟಿಸಬೇಡಿ, ಬದಲಾಗಿ ಧೈರ್ಯ ತುಂಬಿ, ಈ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ಮನವರಿಕೆ ಮಾಡಿಸಿ.

English summary

Ayush Ministry Homecare Guidelines on How to Take Care of Children to Save Them From COVID-19 in Kannada

Ayush Ministry prepares homecare guidelines for children during the ongoing Covid pandemic. Here's all you need to know kannada
Story first published: Monday, June 14, 2021, 17:18 [IST]
X
Desktop Bottom Promotion