For Quick Alerts
ALLOW NOTIFICATIONS  
For Daily Alerts

ನಕಲಿ ಕೊರೊನಾ ಲಸಿಕೆಯನ್ನು ಪತ್ತೆ ಮಾಡುವುದು ಹೇಗೆ? ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಮಾರ್ಗಸೂಚಿಗಳು ಹೀಗಿವೆ?

|

ಇತ್ತೀಚೆಗೆ ದಕ್ಷಿಣ ಏಷ್ಯಾ ಹಾಗೂ ಆಫ್ರಿಕಾದ ಕೆಲವು ರಾಷ್ಟ್ರಗಳಲ್ಲಿ ಕೋವಿಶೀಲ್ಡ್ ಲಸಿಕೆಯ ನಕಲಿ ಆವೃತ್ತಿಗಳ ಲಭ್ಯವಾಗುತ್ತಿದೆ ಎಂದು ವರದಿಗಳು ದಾಖಲಾಗಿದ್ದವು. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿರುವ ಬೆನ್ನಲ್ಲೇ, ಅಸಲಿ ಮತ್ತು ನಕಲಿ ಲಸಿಕೆಗಳ ನಡುವೆ ವ್ಯತ್ಯಾಸ ಪತ್ತೆ ಮಾಡಲು ಜನರಿಗೆ ಅನುಕೂಲವಾಗುವಂತಹ ಮಾರ್ಗಸೂಚಿಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಸದ್ಯ ದೇಶದಲ್ಲಿ ಜನರಿಗೆ ನೀಡುತ್ತಿರುವ ಕೋವಿಶೀಲ್ಡ್, ಕೊವ್ಯಾಕ್ಸಿನ್‌ ಮತ್ತು ಸ್ಪುಟ್ನಿಕ್‌-ವಿ ಲಸಿಕೆಗಳ ಅಸಲಿ ಮತ್ತು ನಕಲಿಯನ್ನು ಹೇಗೆ ಪತ್ತೆ ಮಾಡಬೇಕೆಂಬುದರ ಕುರಿತು ಕೇಂದ್ರ ಆರೋಗ್ಯ ಸಚಿವಾಲಯವು ಪ್ಯಾರಾಮೀಟರ್ ಗಳನ್ನು ನಿಗದಿಪಡಿಸಿದೆ.

ಲಸಿಕೆಗಳ ಅಸಲಿ-ನಕಲಿಯನ್ನು ಪತ್ತೆಮಾಡಲು ಕೇಂದ್ರಸರ್ಕಾರ ನಿಗದಿಪಡಿಸಿರುವ ಮಾನದಂಡಗಳು ಈ ಕೆಳಗಿವೆ. ಇವುಗಳನ್ನು ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಮತ್ತು ಸ್ಪುಟ್ನಿಕ್​ ವಿ ತಯಾರಕ ಕಂಪನಿಗಳಿಗೂ ರವಾನೆ ಮಾಡಿದೆ.

ಕೋವಿಶೀಲ್ಡ್ ಲಸಿಕೆ ಅಸಲಿಯೇ ಎಂಬುದನ್ನು ಗುರುತಿಸುವುದು ಹೇಗೆ?:

ಕೋವಿಶೀಲ್ಡ್ ಲಸಿಕೆ ಅಸಲಿಯೇ ಎಂಬುದನ್ನು ಗುರುತಿಸುವುದು ಹೇಗೆ?:

  • ಕೋವಿಶೀಲ್ಡ್ ನ ಲೇಬಲ್‌ ಕಡು ಹಸಿರು ಬಣ್ಣದಲ್ಲಿರುತ್ತದೆ. ಹಾಗೆಯೇ ಅಲ್ಯೂಮಿನಿಯಂ ಫ್ಲಿಪ್-ಆಫ್ ಸೀಲ್‌ನ ಬಣ್ಣ ಕಡು ಹಸಿರು ಆಗಿದೆ.
  • ಟ್ರೇಡ್​ ಮಾರ್ಕ್ ಹೊಂದಿರುವ ಬ್ರ್ಯಾಂಡ್​​ ಹೆಸರನ್ನು ಉಲ್ಲೇಖಿಸಲಾಗುತ್ತದೆ. ಉದಾಹರಣೆಗೆ COVISHIELD.
  • ಅಕ್ಷರಗಳನ್ನು ವಿಶೇಷವಾದ ಬಿಳಿ ಶಾಯಿಯಲ್ಲಿ ಮುದ್ರಿಸಲಾಗಿರುತ್ತದೆ, ಹೆಚ್ಚು ಸ್ಪಷ್ಟವಾಗಿರುತ್ತದೆ ಹಾಗೂ ಓದಲು ಸಾಧ್ಯವಾಗುತ್ತದೆ.
  • ಜನರಿಕ್​ ಹೆಸರು ಅನ್​ಬೋಲ್ಡ್​ ಆಗಿರುತ್ತದೆ.
  • Recombinant ಎಂಬುದು ಜನರಿಕ್ ಹೆಸರಿನ ಕೊನೆಯಲ್ಲಿ ಪ್ರಿಂಟ್​ ಆಗಿರುತ್ತದೆ.
  • ಎಸ್​ಐಐ (SII) ಲೋಗೋವನ್ನು ಒಂದು ನಿರ್ಧಿಷ್ಟ ಸ್ಥಾನದಲ್ಲಿ, ನಿರ್ಧಿಷ್ಟ ಭಂಗಿಯಲ್ಲಿ ಇಡಲಾಗಿದ್ದು ಅದನ್ನು ಬೇರೆಯವರು ಅನುಕರಿಸಲು ಸಾಧ್ಯವಿಲ್ಲ. ಲಸಿಕೆ ಬಗ್ಗೆ ಎಲ್ಲ ವಿವರ ಗೊತ್ತಿರುವ ಕೆಲವೇ ಕೆಲವು ಮಂದಿ ಮಾತ್ರ ಇದನ್ನು ಗುರುತಿಸಬಹುದಾಗಿದೆ.
  • ಸಿಜಿಎಸ್​ ನಾಟ್​ ಫಾರ್ ಸೇಲ್​ (CGS NOT FOR SALE) ಎಂದು ಬರೆಯಲಾಗಿದೆ. ಆದರೆ ಇದು ಅಕ್ಷರಗಳ ಕೆಳಗೆ ಪ್ರಿಂಟ್​ ಆಗಿದೆ (Over Print).
  • ಬಾಕ್ಸ್​ ಮೇಲಿನ ಸಂಪೂರ್ಣ ಲೇಬಲ್​ ಒಂದು ಜೇನುಗೂಡಿನ ಆಕೃತಿಯಲ್ಲಿದೆ. ಅದಕ್ಕೊಂದು ನಿರ್ದಿಷ್ಟ ಅಳತೆಯಿದೆ.
  • ಕೊವ್ಯಾಕ್ಸಿನ್​ ಲಸಿಕೆ ಅಸಲಿಯೇ ಎಂಬುದನ್ನು ಗುರುತಿಸುವುದು ಹೇಗೇ?

    ಕೊವ್ಯಾಕ್ಸಿನ್​ ಲಸಿಕೆ ಅಸಲಿಯೇ ಎಂಬುದನ್ನು ಗುರುತಿಸುವುದು ಹೇಗೇ?

    1. ಲೇಬಲ್​ ಮೇಲೆ, ಕಣ್ಣಿಗೆ ಕಾಣದ ಯುವಿ ಹೆಲಿಕ್ಸ್​ (ಡಿಎನ್​ಎ ಮಾದರಿ ರಚನೆ) ಇರುತ್ತದೆ. ಈ ರಚನೆ ಯುವಿ ಬೆಳಕಿನಲ್ಲಿ ಮಾತ್ರ ಕಾಣುತ್ತದೆ.

    2. ಲೇಬಲ್​ ಕ್ಲೇಮ್ಸ್​ನಲ್ಲಿರುವ ಡಾಟ್ಸ್​ಗಳಲ್ಲಿ, ಅತಿಸಣ್ಣ ಅಕ್ಷರದಲ್ಲಿ COVAXIN ಎಂದು ಬರೆಯಲಾಗಿದ್ದು, ಇದು ಮರೆಮಾಚಿದ ರೂಪದಲ್ಲಿದೆ.

    3. ಕೊವ್ಯಾಕ್ಸಿನ್​ (COVAXIN)ನಲ್ಲಿ ಎಕ್ಸ್​ ಪದದ ಒಂದು ಬದಿಗೆ ಹಸಿರು ಬಣ್ಣ ನೀಡಲಾಗಿದೆ.

    4. COVAXIN ಶಬ್ದಕ್ಕೆ ಹೊಲೊಗ್ರಾಫಿಕ್​ ಎಫೆಕ್ಟ್​ ನೀಡಲಾಗಿದೆ. ಇದರಿಂದ ಎದ್ದು ಕಾಣುತ್ತದೆ.

    ಸ್ಪುಟ್ನಿಕ್​ ವಿ ಲಸಿಕೆ ಅಸಲಿಯೇ ಎಂಬುದನ್ನು ಗುರುತಿಸುವುದು ಹೇಗೆ?:

    ಸ್ಪುಟ್ನಿಕ್​ ವಿ ಲಸಿಕೆ ಅಸಲಿಯೇ ಎಂಬುದನ್ನು ಗುರುತಿಸುವುದು ಹೇಗೆ?:

    1. ಸ್ಪುಟ್ನಿಕ್​ ವಿಯನ್ನು ರಷ್ಯಾದ ಎರಡು ವಿಭಿನ್ನ ಬೃಹತ್​ ಉತ್ಪಾದನಾ ಸೈಟ್​ಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಆದ್ದರಿಂದ ಎರಡೂ ತಾಣಗಳ ಲಸಿಕೆಗಳ ಮೇಲೆ ಆಯಾ ಸೈಟ್​ಗಳಿಗೆ ಸಂಬಂಧಪಟ್ಟ ಬೇರೆ ಬೇರೆ ವಿಧದ ಲೇಬಲ್​ಗಳಿವೆ. ಆದರೆ ತಯಾರಕರ ಹೆಸರು ಹೊರತು ಪಡಿಸಿ, ಉಳಿದೆಲ್ಲಾ ವಿನ್ಯಾಸ, ಮಾಹಿತಿಗಳು ಎರಡರ ಮೇಲೆಯೂ ಒಂದೇ ಥರ ಇರುವುದು.

    2. ಸ್ಪುಟ್ನಿಕ್​ ವಿ ಲಸಿಕೆಯ ಒಂದು ಬಾಕ್ಸ್​ನಲ್ಲಿ 5 ಅಂಪೌಲ್​​​​ಗಳಿರುತ್ತವೆ. ಈ ಬಾಕ್ಸ್​ನ ಹಿಂಭಾಗ ಮತ್ತು ಮುಂಭಾಗದಲ್ಲಿ ಇಂಗ್ಲಿಷ್​ ಅಕ್ಷರಗಳಿದ್ದು ಉಳಿದೆಲ್ಲ ಬದಿಯಲ್ಲೂ ರಷ್ಯನ್ ಭಾಷೆಯಿದೆ.

FAQ's
  • ಲಸಿಕೆಗಳು ಎರಡನೇ ಡೋಸನ್ನು ಎಷ್ಟು ದಿನಗಳ ನಂತರ ಪಡೆಯಬೇಕು?

    ಸದ್ಯ ಭಾರತದಲ್ಲಿ ಲಭ್ಯವಿರುವ ಮೂರು ಲಸಿಕೆಗಳಾದ ಕೋವಿಶೀಲ್ಡ್ ಲಸಿಕೆ ಮೊದಲ ಡೋಸ್ ಪಡೆದ 84ವಾರಗಳ ನಂತರ ಎರಡನೇ ಡೋಸ್, ಕೋವಾಕ್ಸಿನ್ 28ದಿನಗಳ ನಂತರ, ಸ್ಪುಟ್ನಿಕ್ ವಿ ಲಸಿಕೆ 21ದಿನಗಳ ನಂತರ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಳ್ಳಬೇಕು.

  • ಲಸಿಕೆಯ ಅಡ್ಡಪರಿಣಾಮಗಳು ಎಷ್ಟು ದಿನಗಳವರೆಗೆ ಇರಲಿದೆ?

    ಲಸಿಕೆ ಪಡೆದ ಎಲ್ಲರಿಗೂ ಅಡ್ಡಪರಿಣಾಮಗಳು ಉಂಟಾಗುತ್ತವೆ ಎಂದು ಹೇಳಲಾಗುವುದಿಲ್ಲ. ಜ್ವರ, ಕೈನೋವು ಮೊದಲಾದ ಸಣ್ಣ-ಪುಟ್ಟ ಅಡ್ಡಪರಿಣಾಮ ಸಾಮಾನ್ಯವಾಗಿ ಒಂದುವಾರಗಳ ಕಾಲ ಇರಲಿದೆ.

English summary

How to identify fake COVID-19 vaccines? Health ministry issues guidelines ; All you need to know in Kannada

Health Ministry Issues Guidelines To Identify Fake COVID-19 Vaccines, Here are the Parameters to check the authencity of Covid-19 vaccines. Read on.
X
Desktop Bottom Promotion