For Quick Alerts
ALLOW NOTIFICATIONS  
For Daily Alerts

ದೇಹದಲ್ಲಿ ಕ್ಯಾನ್ಸರ್ ಕೋಶ ಬೆಳವಣಿಗೆಗೆ ಕಾರಣವಾಗುತ್ತೆ ಈ ಆಹಾರಗಳು, ಸೇವಿಸುವಾಗ ಎಚ್ಚರವಿರಲಿ!

|

'ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಮಾತಿನಂತೆ ಯಾರಿಗೆ ಎಷ್ಟು, ಹೇಗೆ ತಿನ್ನಬೇಕು ಎಂದು ತಿಳಿದಿದೆಯೋ ಆತನಿಗೆ ಯಾವುದೇ ಕಾಯಿಲೆ, ರೋಗಗಳು ಬರಲಾರದು. ಆದರೆ, ನಮ್ಮ ಆಹಾರಪದ್ಧತಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಮಸ್ಯೆ ಕಟ್ಟಿಟ್ಟ ಬುತ್ತಿ.

ನೀವು ಆರೋಗ್ಯಕರವಾದ ಆಹಾರ ತಿನ್ನುತ್ತಿದ್ದರೆ, ಶಕ್ತಿಯುತ ಮತ್ತು ಫಿಟ್ ಆಗಿರುತ್ತೀರಿ. ಆದರೆ ಅನಾರೋಗ್ಯಕರ ಆಹಾರ ಪದ್ಧತಿಯು ಯಕೃತ್ತು, ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ರೋಗಗಳಿಗೆ ಕಾರಣವಾಗಬಹುದು. ಇನ್ನೂ ಕೆಲವರಿಗೆ ಕ್ಯಾನ್ಸರ್ ಕೋಶಗಳೂ ಬೆಳವಣಿಗೆಯಾಗುವುದು, ಆದ್ದರಿಂದ ಜಾಗರೂಕರಾಗಿರುವುದು ಮುಖ್ಯ.

ನೀವು ಸೇವಿಸುವ ಆಹಾರಗಳು ಕ್ಯಾನ್ಸರ್‌ಗೆ ಹೇಗೆ ಕಾರಣವಾಗುವುದು?

ನೀವು ಸೇವಿಸುವ ಆಹಾರಗಳು ಕ್ಯಾನ್ಸರ್‌ಗೆ ಹೇಗೆ ಕಾರಣವಾಗುವುದು?

ವಿಶ್ವದಾದ್ಯಂತ ಕ್ಯಾನ್ಸರ್‌ ನಿಂದ ಸಾಯುವವರ ಪ್ರಮಾಣ ಹೆಚ್ಚಾಗಿದೆ. ಆದರೆ ಜೀವನಶೈಲಿಯ ಬದಲಾವಣೆಗಳನ್ನು ಮಾಡುವುದರ ಮೂಲಕ ಇದನ್ನು ತಡೆಯಬಹುದು. ವಿವಿಧ ಕಾರಣಗಳಿಂದಾಗಿ ಕ್ಯಾನ್ಸರ್ ಕೋಶಗಳು ದೇಹದಲ್ಲಿ ಬೆಳೆಯುತ್ತವೆ, ಅವುಗಳಲ್ಲಿ ಅನಾರೋಗ್ಯಕರ ಆಹಾರವೂ ಒಂದು. ಇದರ ಜೊತೆಗೆ ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ, ಬೊಜ್ಜು, ಮದ್ಯ ಮತ್ತು ಯುವಿ ಕಿರಣಗಳಿಗೆ ತೆರೆದುಕೊಳ್ಳುವುದು ಸೇರಿದಂತೆ ಇತರ ಕೆಲವು ಅಂಶಗಳು ಪ್ರಭಾವ ಬೀರುತ್ತವೆ. ಆದರೆ ನಮ್ಮ ಆಹಾರ ಪದ್ಧತಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಎಂಬುದಕ್ಕೆ ಹೆಚ್ಚಿನ ಪುರಾವೆಗಳಿವೆ. ನಿಮ್ಮ ಆರೋಗ್ಯವನ್ನು ಉಳಿಸಿಕೊಳ್ಳಲು, ದೂರಮಾಡಬೇಕಾದ 5 ಆಹಾರಗಳ ಬಗ್ಗೆ ಇಲ್ಲಿ ನೋಡೋಣ.

ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುವ ಆಹಾರಗಳು:

ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುವ ಆಹಾರಗಳು:

ಸಂಸ್ಕರಿಸಿದ ಮಾಂಸ:

ಮಾಂಸ, ಕೋಳಿ, ಮೀನು ಮತ್ತು ಮೊಟ್ಟೆ ಎಲ್ಲವೂ ಆರೋಗ್ಯಕರವಾಗಿದ್ದು, ಅವುಗಳನ್ನು ಸರಿಯಾಗಿ ಬೇಯಿಸಿ ಮತ್ತು ಮಿತವಾಗಿ ಸೇವಿಸಿದರೆ ಮಾತ್ರ. ಹೊಗೆ ಮತ್ತು ಉಪ್ಪಿನಿಂದ ಸಂರಕ್ಷಿಸಲಾಗಿರುವ ಯಾವುದೇ ಪ್ರಾಣಿ ಆಧಾರಿತ ಉತ್ಪನ್ನಗಳನ್ನು ಸೇವಿಸುವುದು ಅನಾರೋಗ್ಯಕರವಾಗಿದೆ. ಇದು ತೂಕ ಹೆಚ್ಚಾಗುವುದರಿಂದ ಹಿಡಿದು ಕ್ಯಾನ್ಸರ್ ವರೆಗಿನ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಮಾಂಸದ ಸಂಸ್ಕರಣೆಯು ಕಾರ್ಸಿನೋಜೆನ್ ಎಂಬ ಸಂಯುಕ್ತವನ್ನು ಉತ್ಪಾದನೆಗೆ ಕಾರಣವಾಗಿ, ಇದು ವ್ಯಕ್ತಿಯನ್ನು ಕೊಲೊರೆಕ್ಟಲ್ ಮತ್ತು ಹೊಟ್ಟೆಯ ಕ್ಯಾನ್ಸರ್ ನ ಅಪಾಯಕ್ಕೆ ತಳ್ಳುತ್ತದೆ. ಹಾಟ್ ಡಾಗ್ಸ್, ಸಲಾಮಿ ಮತ್ತು ಸಾಸೇಜ್ ನಂತಹ ಸಂಸ್ಕರಿಸಿದ ಮಾಂಸದ ಬದಲಾಗಿ, ಮನೆಯಲ್ಲಿಯೇ ಫ್ರೆಶ್ ಆಗಿ ತಯಾರಿಸಿ.

ಹುರಿದ ಆಹಾರಗಳು:

ಹುರಿದ ಆಹಾರಗಳು:

ಕರಿದ ಆಹಾರಗಳ ಅತಿಯಾದ ಸೇವನೆಯು ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುವ ಇನ್ನೊಂದು ವಸ್ತುವಾಗಿದೆ. ಆಲೂಗಡ್ಡೆ ಅಥವಾ ಮಾಂಸದಂತಹ ಆಹಾರಗಳನ್ನು ಹೈ ಫ್ಲೇಮ್‌ನಲ್ಲಿ ಹುರಿದಾಗ, ಅಕ್ರಿಲಾಮೈಡ್ ಎಂಬ ಸಂಯುಕ್ತವು ರೂಪುಗೊಳ್ಳುತ್ತದೆ. ಅಧ್ಯಯನಗಳ ಪ್ರಕಾರ, ಈ ಸಂಯುಕ್ತವು ಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿದ್ದು, ನಮ್ಮ ಡಿಎನ್ಎಗೆ ಹಾನಿ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಹುರಿದ ಆಹಾರಗಳು ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸಬಹುದು. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಸಂಬಂಧಿಸಿರುವ ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಆದ್ದರಿಂದ ಆಹಾರವನ್ನು ಹುರಿಯುವ ಬದಲು, ಇತರ ಆರೋಗ್ಯಕರ ವಿಧಾನಗಳನ್ನು ಆರಿಸಿಕೊಳ್ಳಿ.

ಸಂಸ್ಕರಿಸಿದ ಉತ್ಪನ್ನಗಳು:

ಸಂಸ್ಕರಿಸಿದ ಉತ್ಪನ್ನಗಳು:

ಇದು ಸಂಸ್ಕರಿಸಿದ ಹಿಟ್ಟು, ಸಕ್ಕರೆ ಅಥವಾ ಎಣ್ಣೆಯಾಗಿರಲಿ, ಇವೆಲ್ಲವೂ ನಿಮ್ಮನ್ನು ಕ್ಯಾನ್ಸರ್ ಕೋಶಗಳ ಬೆಳವಣಿಗೆಯ ಅಪಾಯಕ್ಕೆ ತಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಹೆಚ್ಚು ಸಂಸ್ಕರಿಸಿದ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದ ಅಪಾಯವನ್ನು ಉಂಟುಮಾಡುತ್ತವೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದು ವಿವಿಧ ರೀತಿಯ ಕ್ಯಾನ್ಸರ್‌ಗಳಿಗೆ ದಾರಿ ಮಾಡಿಕೊಡುತ್ತದೆ. ಸಂಸ್ಕರಿಸಿದ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವವರು ಅಂಡಾಶಯ, ಸ್ತನ ಮತ್ತು ಎಂಡೊಮೆಟ್ರಿಯಲ್ (ಗರ್ಭಾಶಯದ) ಕ್ಯಾನ್ಸರ್‌ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಆದ್ದರಿಂದ ಇಂತಹ ಸಂಸ್ಕರಿಸಿದ ಉತ್ಪನ್ನಗಳ ಸೇವನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಸಕ್ಕರೆಗೆ ಬದಲಾಗಿ ಬೆಲ್ಲ ಅಥವಾ ಜೇನುತುಪ್ಪ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಸಂಪೂರ್ಣ ಧಾನ್ಯಕ್ಕೆ ಬದಲಾಯಿಸಿ ಮತ್ತು ಸಂಸ್ಕರಿಸಿದ ಎಣ್ಣೆಯಿಂದ ಸಾಸಿವೆ ಎಣ್ಣೆಯನ್ನು ಬೆಣ್ಣೆಗೆ ಬದಲಾಯಿಸಿ.

ಮದ್ಯ ಮತ್ತು ಕಾರ್ಬೊನೇಟೆಡ್ ಪಾನೀಯ:

ಮದ್ಯ ಮತ್ತು ಕಾರ್ಬೊನೇಟೆಡ್ ಪಾನೀಯ:

ಆಲ್ಕೋಹಾಲ್ ಮತ್ತು ಕಾರ್ಬೊನೇಟೆಡ್ ಪಾನೀಯಗಳಲ್ಲಿ ಸಂಸ್ಕರಿಸಿದ ಸಕ್ಕರೆ ಮತ್ತು ಕ್ಯಾಲೋರಿ ಅಂಶ ಅಧಿಕವಾಗಿದೆ. ಎರಡು ದ್ರವಗಳಲ್ಲಿ ಯಾವುದನ್ನಾದರೂ ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಫ್ರೀ ರಾಡಿಕಲ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ, ಇದು ಉರಿಯೂತವನ್ನು ಉಂಟುಮಾಡಬಹುದು. ಆಲ್ಕೊಹಾಲ್ ನಿಮ್ಮ ರೋಗನಿರೋಧಕ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಿ, ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ.

ರೆಡಿಮೇಡ್ ಮತ್ತು ಪ್ಯಾಕ್ ಮಾಡಿದ ಆಹಾರಗಳು:

ರೆಡಿಮೇಡ್ ಮತ್ತು ಪ್ಯಾಕ್ ಮಾಡಿದ ಆಹಾರಗಳು:

ಪೂರ್ವಸಿದ್ಧ ಮತ್ತು ಪ್ಯಾಕ್ ಮಾಡಿದ ಆಹಾರಗಳನ್ನು ಸೇವಿಸುವ ಪ್ರವೃತ್ತಿ ಭಾರತದಲ್ಲಿ ನಿಧಾನವಾಗಿ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ರೆಡಿ ಟು ಸರ್ವ್ ಫುಡ್ ಅಥವಾ ತಕ್ಷಣವೇ ಬೇಯಿಸಿ ತಿನ್ನುವಂತಹ ಆಹಾರವನ್ನು ನೋಡಿರಬಹುದು. ಇದು ನೂಡಲ್ಸ್, ಇಡ್ಲಿ, ಉಪ್ಮಾ, ಪಾಸ್ತಾಗಳಂತಹ ಆಹಾರಗಳನ್ನು ಒಳಗೊಂಡಿರುತ್ತವೆ. ಇದು ನಿಮಗೆ ಅಡುಗೆ ಮಾಡುವುದನ್ನು ತಪ್ಪಿಸಬಹುದು, ಆದರೆ, ಇದು ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ. ರೆಡಿ ಟು ಕುಕ್ ಆಹಾರ ಪ್ಯಾಕ್‌ಗಳಲ್ಲಿ ಬಿಸ್ಫೆನಾಲ್ ಎ (ಬಿಪಿಎ) ಎಂಬ ರಾಸಾಯನಿಕವಿದೆ. ಈ ಸಂಯುಕ್ತವು ಹಾರ್ಮೋನುಗಳ ಅಸಮತೋಲನ, ಡಿಎನ್‌ಎ ಬದಲಾವಣೆ ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದು.

FAQ's
  • ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಆಹಾರಗಳಾವುವು?

    ಬೆರಿಹಣ್ಣು ಮತ್ತು ಗೋಜಿ ಬೆರಿಹಣ್ಣುಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಎರಡು ಪ್ರಮುಖ ಆಹಾರಗಳಾಗಿವೆ ಏಕೆಂದರೆ ಅವುಗಳು ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಇತರ ವಿಟಮಿನ್ ಗಳನ್ನು ಹೊಂದಿರುತ್ತವೆ.ಇ ಇವುಗಳ ಜೊತೆಗೆ ಗ್ರೀನ್ ಟೀ, ಅರಿಶಿನ, ಶುಂಠಿ, ಹಸಿರು ಸೊಪ್ಪುಗಳು ಸಹ ನಿಮ್ಮ ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನ ತಡೆಯುತ್ತವೆ.

     

  • ಕ್ಯಾನ್ಸರ್‌ನ ಅಪಾಯಕಾರಿ ಅಂಶಗಳಾವುವು?:

    ಸಾಮಾನ್ಯವಾಗಿ ವಯಸ್ಸಾಗುವಿಕೆ, ತಂಬಾಕು ಸೇವನೆ, ಬಿಸಿಲಿನ ತಾಪ ಅಂದರೆ ಯುವಿ ಕಿರಣಗಳು, ಕೆಲವು ವೈರಸ್ಗಳು ಮತ್ತು ಬ್ಯಾಕ್ಟೀರಿಯಾ, ನಿರ್ದಿಷ್ಟ ಹಾರ್ಮೋನುಗಳು, ಕ್ಯಾನ್ಸರ್‌ನ ಕೌಟುಂಬಿಕ ಇತಿಹಾಸ, ಮಧ್ಯಪಾನ, ಕಳಪೆ ಆಹಾರ, ದೈಹಿಕ ವ್ಯಾಯಾಮದ ಕೊರತೆ ಹಾಗೂ ಅಧಿಕ ತೂಕ ಇರುವವರಿಗೆ ಕ್ಯಾನ್ಸರ್ ಅಪಾಯ ಹೆಚ್ಚು.

     

English summary

List of Foods that can Increase the Risk of Developing Cancer in Kannada

Here we talking about List of Foods that can increase the risk of developing cancer in Kannada, read on
Story first published: Tuesday, September 28, 2021, 17:51 [IST]
X
Desktop Bottom Promotion