For Quick Alerts
ALLOW NOTIFICATIONS  
For Daily Alerts

ಬೆಳ್ಳುಳ್ಳಿಯಿಂದ ಒಳಿತು ಎಷ್ಟಿದೆಯೋ, ಕೆಡುಕೂ ಸಹ ಅಷ್ಟೇ ಇವೆ!

|

ಬೆಳ್ಳುಳ್ಳಿಯು ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಈ ಕಾರಣದಿಂದಾಗಿ ಇದನ್ನು ಬಹುತೇಕ ಎಲ್ಲಾ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ಏಕೆಂದರೆ ಅದರ ರುಚಿ ತುಂಬಾ ಪ್ರಬಲವಾಗಿದ್ದು, ಭಕ್ಷ್ಯಕ್ಕೆ ವಿಶೇಷ ರುಚಿ ಹಾಗೂ ಘಮ ನೀಡುತ್ತದೆ. ಅನೇಕ ರೋಗಗಳ ಚಿಕಿತ್ಸೆಗಾಗಿ ಆಯುರ್ವೇದದಲ್ಲಿ ಸಹ ಬಳಸಲಾಗುತ್ತದೆ.

ಆದರೆ ಅನುಕೂಲಗಳನ್ನು ಹೊಂದಿರುವ ಕೆಲವು ವಸ್ತುಗಳು ಅನಾನುಕೂಲಗಳನ್ನು ಹೊಂದಿರುತ್ತವೆ ಎಂಬುದನ್ನು ಮರೆಯಬಾರದು. ಅಂತೆಯೇ, ಬೆಳ್ಳುಳ್ಳಿ ಕೂಡ ಕೆಲವು ಅನಾನುಕೂಲಗಳನ್ನು ಹೊಂದಿದೆ. ಆದ್ದರಿಂದ ಯಾರು ಬೆಳ್ಳುಳ್ಳಿ ಸೇವನೆಯನ್ನು ತಪ್ಪಿಸಬೇಕು ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ.

ಬೆಳ್ಳುಳ್ಳಿ ಸೇವನೆಯಿಂದ ಉಂಟಾಗುವ ಅಡ್ಡಪರಿಣಾಮಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ:

ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ:

ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ಬೆಳ್ಳುಳ್ಳಿ ಹೆಚ್ಚುಯುತ್ಹ ಸೇವಿಸಬಾರದು. ಗರ್ಭಿಣಿಯರಿಗೆ ಅಕಾಲಿಕ ಅಥವಾ ಅವಧಿಪೂರ್ವ ಹೆರಿಗೆಗೆ ಕಾರಣವಾಗಬಹುದು. ಅದೇ ರೀತಿ, ಹಾಲುಣಿಸುವ ಮಹಿಳೆಯರು ಹೆಚ್ಚು ಬೆಳ್ಳುಳ್ಳಿಯನ್ನು ಸೇವಿಸಿದರೆ, ಅದು ಹಾಲಿನ ರುಚಿಯನ್ನು ಬದಲಾಯಿಸಬಹುದು. ಈ ಮೂಲಕ ಮಗುವಿಗೂ ಹಾನಿಯಾಗಬಹುದು.

ವಾಕರಿಕೆ, ವಾಂತಿ ಮತ್ತು ಎದೆಯುರಿ:

ವಾಕರಿಕೆ, ವಾಂತಿ ಮತ್ತು ಎದೆಯುರಿ:

ಆರೋಗ್ಯ ವರದಿಯ ಪ್ರಕಾರ, ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅನೇಕರಲ್ಲಿ ಎದೆಯುರಿ, ವಾಕರಿಕೆ ಅಥವಾ ವಾಂತಿಗೆ ಕಾರಣವಾಗಬಹುದು. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಪ್ರಕಟಿಸಿದ ವರದಿಯಲ್ಲಿ ಬೆಳ್ಳುಳ್ಳಿ ಆಮ್ಲೀಯತೆಯನ್ನು ಉಂಟುಮಾಡುವ ಸಂಯುಕ್ತಗಳನ್ನು ಹೊಂದಿದೆ ಎಂದು ಹೇಳಿದೆ. ಅದ್ದರಿಂದ ಅಸಿಡಿಟಿ ಸಮಸ್ಯೆ ಇರುವವರು ಅತಿಯಾಗಿ ಸೇವಿಸುವ ಮುನ್ನ ಎಚ್ಚರವಿರಲಿ.

ಸಣ್ಣ ಮಕ್ಕಳಿಗೆ:

ಸಣ್ಣ ಮಕ್ಕಳಿಗೆ:

ಪ್ರತಿದಿನ 300 ಮಿಗ್ರಾಂ ಬೆಳ್ಳುಳ್ಳಿಯ ಸೇವನೆಯು ಚಿಕ್ಕ ಮಕ್ಕಳಿಗೆ ಉತ್ತಮವೆಂದು ಪರಿಗಣಿಸಲಾಗಿದೆ. ಆದರೆ, ಇದನ್ನು ಮಕ್ಕಳ ಚರ್ಮದ ಮೇಲೆ ಹಚ್ಚಬೇಡಿ, ಅದು ಅವರ ಸೂಕ್ಷ್ಮ ಚರ್ಮವನ್ನು ಸುಡಬಹುದು.

ಅತಿಸಾರ:

ಅತಿಸಾರ:

ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅತಿಸಾರ ಅಥವಾ ಭೇದಿ ಉಂಟಾಗಬಹುದು. ಇದರಲ್ಲಿರುವ ಸಲ್ಫರ್ ಅಂಶವು ಭೇದಿಯನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಹೆಚ್ಚು ರಕ್ತಸ್ರಾವವಾಗಬಹುದು:

ಹೆಚ್ಚು ರಕ್ತಸ್ರಾವವಾಗಬಹುದು:

ಬೆಳ್ಳುಳ್ಳಿ ನೈಸರ್ಗಿಕವಾಗಿ ರಕ್ತ ತೆಳುವ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಹೆಚ್ಚು ತಿನ್ನಬೇಡಿ. ವಾರ್ಫರಿನ್, ಆಸ್ಪಿರಿನ್ ಇತ್ಯಾದಿಗಳಂತಹ ರಕ್ತ ತೆಳುವಾಗಿಸುವಿಕೆಯ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಬೆಳ್ಳುಳ್ಳಿಯ ಅತಿಯಾದ ಸೇವನೆ ಬೇಡ. ಈ ಕಾರಣದಿಂದಾಗಿ, ಆರೋಗ್ಯಕ್ಕೆ ಅಪಾಯ ಹೆಚ್ಚಾಗಬಹುದು.

ಯಕೃತ್ತಿಗೆ ಒಳ್ಳೆಯದಲ್ಲ:

ಯಕೃತ್ತಿಗೆ ಒಳ್ಳೆಯದಲ್ಲ:

ಯಕೃತ್ತು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಈ ಸಮಸ್ಯೆಯಿಂದಾಗಿ, ಇತರ ಅಂಗಗಳು ಸಹ ಪರಿಣಾಮ ಬೀರಲು ಪ್ರಾರಂಭಿಸುತ್ತವೆ. ರಕ್ತವನ್ನು ಶುಚಿಗೊಳಿಸುವುದರೊಂದಿಗೆ, ಯಕೃತ್ತು ಕೊಬ್ಬಿನ ಚಯಾಪಚಯ, ಪ್ರೋಟೀನ್ ಚಯಾಪಚಯ ಮತ್ತು ನಮ್ಮ ದೇಹದಿಂದ ಅಮೋನಿಯಾವನ್ನು ತೆಗೆಯುವಂತಹ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಬೆಳ್ಳುಳ್ಳಿಯಲ್ಲಿ ಕಂಡುಬರುವ ಅಲ್ಲಿಸಿನ್ ಎಂಬ ಸಂಯುಕ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಲಿವರ್ ಸೋಂಕಿಗೆ ಕಾರಣವಾಗಬಹುದು ಎಂದು ಅನೇಕ ಸಂಶೋಧನೆಗಳು ಕಂಡುಕೊಂಡಿವೆ.

ಯೋನಿ ಸೋಂಕಿನಲ್ಲಿ:

ಯೋನಿ ಸೋಂಕಿನಲ್ಲಿ:

ಮಹಿಳೆಗೆ ಈಗಾಗಲೇ ಯೋನಿ ಸೋಂಕು ಇದ್ದರೆ, ಬೆಳ್ಳುಳ್ಳಿಯನ್ನು ತಪ್ಪಿಸಬೇಕು, ಏಕೆಂದರೆ ಇದು ಸೋಂಕನ್ನು ಉಲ್ಬಣಗೊಳಿಸುತ್ತದೆ.

ಬೆವರು ಹೆಚ್ಚಾಗುವುದು:

ಬೆವರು ಹೆಚ್ಚಾಗುವುದು:

ಬೆಳ್ಳುಳ್ಳಿಯನ್ನು ಹೆಚ್ಚು ಸೇವಿಸಿದರೆ ಬೆವರು ಹೆಚ್ಚಾಗಬಹುದೆಂದು ಹಲವು ವೈದ್ಯಕೀಯ ಅಧ್ಯಯನಗಳಲ್ಲಿ ಬಹಿರಂಗಗೊಂಡಿವೆ. ಜೊತೆಗೆ ದೇಹದಿಂದ ಕೆಟ್ಟ ಬೆವರಿನ ವಾಸನೆಯೂ ಹೆಚ್ಚಾಗುವುದು.

ಎಷ್ಟು ಬೆಳ್ಳುಳ್ಳಿ ಸುರಕ್ಷಿತ?:

ಎಷ್ಟು ಬೆಳ್ಳುಳ್ಳಿ ಸುರಕ್ಷಿತ?:

ನೀವು ಪ್ರತಿದಿನ 2 ರಿಂದ 3 ಬೆಳ್ಳುಳ್ಳಿ ಎಸಳನ್ನು ತಿನ್ನಬಹುದು, ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ.

English summary

Know Garlic Side Effects Before Eating in Kannada

Here we talking about Know Garlic Side Effects Before Eating in Kannada, read on
Story first published: Saturday, October 23, 2021, 17:05 [IST]
X
Desktop Bottom Promotion