For Quick Alerts
ALLOW NOTIFICATIONS  
For Daily Alerts

ಹೈಡ್ರೋನೆಫ್ರೋಸಿಸ್‌(ಮೂತ್ರಪಿಂಡದ ಗಾತ್ರ ದೊಡ್ಡದಾಗುವುದು) ಲಕ್ಷಣಗಳೇನು?

|

ಹೈಡ್ರೋನೆಫ್ರೋಸಿಸ್ ಎನ್ನುವುದು ಮೂತ್ರಪಿಂಡದ ಗಾತ್ರ ದೊಡ್ಡದಾಗುವ ಸಮಸ್ಯೆಯಾಗಿದೆ. ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುವಲ್ಲಿ ಮೂತ್ರ ಪಿಂಡದ ಕಾರ್ಯ ಪ್ರಮುಖವಾದದ್ದು. ಮೂತ್ರ ಪಿಂಡಗಳಲ್ಲಿ ಒಂದರ ಗಾತ್ರ ದೊಡ್ಡದಾಗಿದ್ದರೆ ಯೂರಿಕ್‌ ಆಮ್ಲ ದೇಹದಲ್ಲಿ ಸಂಗ್ರಹವಶಗುತ್ತದೆ. ಇದರಿಂದ ಸಾವು ಕೂಡ ಸಂಭವಿಸಬಹುದು. ಆದ್ದರಿಂದ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು.

hydronephrosis causes, symtpoms, treatment

ಹೈಡ್ರೋನೆಫ್ರೋಸಿಸ್ ಸಮಸ್ಯೆ ನವಜಾತ ಶಿಶುಗಳಲ್ಲಿ ಕಂಡು ಬರುತ್ತದೆ. ಗರ್ಭಿಣಿಯರಲ್ಲೂ ಈ ಸಮಸ್ಯೆ ಕಂಡು ಬರುವುದು. ಮೂತ್ರ ಸೊಂಕು ಇರುವವರಲ್ಲಿ ಸಮಸ್ಯೆ ಕಂಡು ಬರಬಹುದು. ಮೂತ್ರಪಿಂಡದ ಗಾತ್ರ ಹೆಚ್ಚಾದಾಗ ಮೂತ್ರ ವಿಸರ್ಜನೆಗೆ ಅಡಚಣೆ ಉಂಟಾಗುವುದು. ಈ ರೀತಿಯ ಸಮಸ್ಯೆ 100ರಲ್ಲಿ 1 ಮಗುವಿನಲ್ಲಿ ಕಂಡು ಬರುತ್ತದೆ.

ಇಲ್ಲಿ ನಾವು ಹೈಡ್ರೋನೆಫ್ರೋಸಿಸ್ ಲಕ್ಷಣ ಹಾಗೂ ಚಿಕಿತ್ಸೆ ಏನು ಎಂಬುವುದು ನೋಡೋಣ ಬನ್ನಿ:

ಹೈಡ್ರೋನೆಫ್ರೋಸಿಸ್ ಲಕ್ಷಣಗಳು

ಹೈಡ್ರೋನೆಫ್ರೋಸಿಸ್ ಲಕ್ಷಣಗಳು

ಸಾಮಾನ್ಯವಾಗಿ ಮೂತ್ರ ವಿಸರ್ಜನೆಗೆ ಹೋಗುವಾಗ ಹೆಚ್ಚಿನ ಒತ್ತಡ ಹಾಕಬೇಕಾಗಿಲ್ಲ. ಆದರೆ ಮೂತ್ರಪಿಂಡದ ಗಾತ್ರ ದೊಡ್ಡದಾಗಿದ್ದರೆ ಮೂತ್ರ ಸರಾಗವಾಗಿ ಹೋಗುವುದಿಲ್ಲ, ಮೂತ್ರ ವಿಸರ್ಜನೆಯಾಗದಿದ್ದರೆ ಇದರಿಂದ ಕಿಡ್ನಿ ಆರೋಗ್ಯ ಹಾಳಾಗುವುದು. ಇದರ ಪ್ರಾರಂಭದ ಲಕ್ಷಣಗಳೆಂದರೆ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಅನಿಸುವುದು, ಆದರೆ ಮೂತ್ರ ವಿಸರ್ಜನೆಗೆ ಹೋದಾಗ ಮೂತ್ರ ಸರಾಗವಾಗಿ ಹೋಗುವುದಿಲ್ಲ. ಹೈಡ್ರೋನೆಫ್ರೋಸಿಸ್ ಸಮಸ್ಯೆ ಗಂಭಿರವಾದರೆ ಈ ಲಕ್ಷಣಗಳು ಕಂಡು ಬರುವುದು:

  • ಕಿಬ್ಬೊಟ್ಟೆಯಲ್ಲಿ ನೋವು
  • ವಾಂತಿ, ತಲೆಸುತ್ತು
  • ಮೂತ್ರ ಮಾಡುವಾಗ ನೋವಾಗುವುದು
  • ಮೂತ್ರ ಸಂಪೂರ್ಣ ವಿಸರ್ಜನೆಯಾಗದೇ ಇರುವುದು
  • ಜ್ವರ
  •  UTI ಲಕ್ಷಣಗಳು

    UTI ಲಕ್ಷಣಗಳು

    ಮೂತ್ರಪಿಂಡದ ಕಾರ್ಯಕ್ಕೆ ಅಡಚನೆ ಉಂಟಾದರೆ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ, ಆಗ ಮೂತ್ರ ಸೋಂಕು ( urinary tract infection) ಉಂಟಾಗುವುದು. UTI ಉಂಟಾದಾಗ ಈ ರೀತಿಯ ಲಕ್ಷಣಗಳು ಕಂಡು ಬರುವುದು

    • ಮೂತ್ರ ಸ್ವಲ್ಪ-ಸ್ವಲ್ಪ ಹೋಗುವುದು
    • ಮೂತ್ರ ವಿಸರ್ಜನೆ ಮಾಡುವಾಗ ನೋವುಂಟಾಗುವುದು
    • ಉರಿ
    • ಸೊಂಟ ನೋವು
    • ಮೂತ್ರಕೋಶದಲ್ಲಿ ನೋವು
    • ಚಳಿ-ಜ್ವರ
    • ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು ಒಳ್ಳೆಯದು.

      ಹೈಡ್ರೋನೆಫ್ರೋಸಿಸ್ ಸಮಸ್ಯೆಗೆ ಕಾರಣಗಳು

      ಹೈಡ್ರೋನೆಫ್ರೋಸಿಸ್ ಸಮಸ್ಯೆಗೆ ಕಾರಣಗಳು

      ಹೈಡ್ರೋನೆಫ್ರೋಸಿಸ್ ಎನ್ನುವುದು ಕಾಯಿಲೆಯಲ್ಲ ಇದು ದೇಹದ ಒಳಗಡೆ ಹಾಗೂ ಕೆಲವೊಂದು ಬಾಹ್ಯ ಕಾರಣಗಳಿಂದ ಮೂತ್ರಪಿಂಡದ ಮೇಲೆ ಉಂಟಾಗುವ ಸಮಸ್ಯೆಯಾಗಿದೆ. ಹೈಡ್ರೋನೆಫ್ರೋಸಿಸ್ ಸಮಸ್ಯೆಗೆ ಬಹುಮುಖ್ಯ ಕಾರಣವೆಂದರೆ acute unilateral obstructive uropathy ಅಂದರೆ ಮೂತ್ರ ಪಿಂಡಕ್ಕೆ ಸೇರಿಕೊಂಡಿರುವ ಮೂತ್ರ ನಾಳಗಳಲ್ಲಿ ಅಡಚಣೆ ಉಂಟಾಗಿ ಮೂತ್ರ ವಿಸರ್ಜನೆಗೆ ತೊಂದರೆ ಉಂಟಾಗುವುದು.

      ಈ ಅಡಚಣೆ ಉಂಟಾಗಲು ಪ್ರಮುಖ ಕಾರಣವೆಂದರೆ ಕಿಡ್ನಿ ಸ್ಟೋನ್, ಕೆಲವೊಮ್ಮೆ ರಕ್ತ ಹೆಪ್ಪುಗಟ್ಟುವುದರಿಂದಲೂ ಮೂತ್ರಪಿಂಡದಲ್ಲಿ ಮೂತ್ರ ಸಮಗ್ರಹವಾಗುವುದು. ಈ ರೀತಿ ಉಂಟಾದಾಗ ಮೂತ್ರ ಪಿಂಡದಲ್ಲಿ ಊತ ಉಂಟಾಗುತ್ತದೆ. ಮೂತ್ರ ಹಿಮ್ಮುಖವಾಗಿ ಚಲಿಸುವುದಕ್ಕೆ ವೈದ್ಯಕೀಯದಲ್ಲಿ vesicoureteral reflux ಎಮದು ಕರೆಯುತ್ತಾರೆ.

      ಇತರ ಕಾರಣಗಳು

      ಇತರ ಕಾರಣಗಳು

      • ಪುರುಷರಲ್ಲಿ ಪ್ರೊಸ್ಟೇಟ್‌ ಗ್ರಂಥಿ ದೊಡ್ಡದಾಗುವುದು
      • ಗರ್ಭಿಣಿಯರಲ್ಲಿ ಮೂತ್ರ ಪಿಂಡದ ಮೇಲೆ ಒತ್ತಡ ಬೀಳುವುದು
      • ಮೂತ್ರನಾಳದ ಪಕ್ಕದಲ್ಲಿ ಗಡ್ಡೆಗಳು
      • ಮೂತ್ರನಾಳಕ್ಕೆ ಪೆಟ್ಟಾಗಿದ್ದರೆ
      • ಪತ್ತೆ ಹೇಗೆ?

        ಪತ್ತೆ ಹೇಗೆ?

        ಹೈಡ್ರೋನೆಫ್ರೋಸಿಸ್ ಸಮಸ್ಯೆ ಉಂಟಾದಾಗ ಪ್ರಾರಂಭದ ಹಂತದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಬೇಗನೆ ಗುಣಮುಖರಾಗಬಹುದು. ಸರ್ಜರಿ ಮಾಡುವ ಮೂಲಕ ಮೂತ್ರ ಸರಾಗವಾಗಿ ಹೋಗುವಂತೆ ಮಾಡಬಹುದು. ಈ ವಿಧಾನದಲ್ಲಿ ಶೇ.95ರಷ್ಟು ರೋಗಿಗಳು ಬೇಗನೆ ಗುಣಮುಖರಾಗಬಹುದು.

        ಇದನ್ನು CT ಸ್ಕ್ಯಾನ್‌ ಹಾಗೂ ಅಲ್ಟ್ರಾಸೌಂಡ್ಸ್ ಮೂಲಕ ಈ ಸಮಸ್ಯೆ ಪತ್ತೆಹಚ್ಚಬಹುದು.

        ಚಿಕಿತ್ಸೆ

        ಚಿಕಿತ್ಸೆ

        ಕೆಲವೊಂದು ಲಕ್ಷಣಗಳಿಂದ ಸಮಸ್ಯೆ ಗಂಭಿರವಾಗಿದೆಯೇ ಇಲ್ಲಾ ಪ್ರಾರಂಭಿಕ ಹಂತದಲ್ಲಿ ಇದೆಯೇ ಎಂಬುವುದು ವೈದ್ಯರಿಗೆ ತಿಳಿಯುತ್ತದೆ. ಈ ಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡುತ್ತಾರೆ.

        • ಮೂತ್ರನಾಳದ ಸ್ಟೆಂಟ್ ಅಳವಡಿಸುವುದು, ನೆಫ್ರೊಸ್ಟೋಮಿ ಟ್ಯೂಬ್ ಅಳವಡಿಸುವುದು
        • ಮೂತ್ರ ಸೋಂಕು ನಿವಾರಣೆಗೆ ಔಷಧಿ ತೆಗೆದುಕೊಳ್ಳುವುದು
English summary

Hydronephrosis Causes, Symtpoms, Treatment

Hydronephrosis is a condition of the urinary tract where one or both kidneys swell. This happens because urine does not fully empty from the body.
X
Desktop Bottom Promotion