For Quick Alerts
ALLOW NOTIFICATIONS  
For Daily Alerts

ಮಾರಣಾಂತಿಕ ಕಾಯಿಲೆಗಳಿಗೆ ಮನೆಮದ್ದು ಈ ಕಾಡು ಸೇವಂತಿಗೆ

|

ನಿಮ್ಮ ಜಾಗದಲ್ಲಿ ಕಾಡು ಸೇವಂತಿಗೆ ಗಿಡಗಳಿದ್ದಲ್ಲಿ ನೀವೆ ಅದೃಷ್ಟವಂತರು ಎಂದು ಭಾವಿಸಬಹುದು. ಹಳದಿ ಬಣ್ಣದ ಹೂವುಗಳನ್ನು ಬಿಡುವ ಮತ್ತು ಉದ್ದನೆಯ ಅಗಲವಾದ ಎಲೆಗಳನ್ನು ಹೊಂದಿರುವ ಈ ಗಿಡ ಹಾಗೂ ಇದರ ಬೇರು ನಿಮ್ಮ ದೇಹಕ್ಕೆ ಬಹಳ ಒಳ್ಳೆಯದು.

How Dandelion Root Is Good For Your Health

ಕಿಡ್ನಿ, ಲಿವರ್ ಸಮಸ್ಯೆ, ಹೊಟ್ಟೆಯ ಸಮಸ್ಯೆ ಮತ್ತು ಶುಗರ್ ಸಮಸ್ಯೆಗಳಿಗೆ ಹಲವು ಶತಮಾನಗಳಿಂದ ಈ ಕಾಡು ಸೇವಂತಿಗ ಮತ್ತು ಇದರ ಬೇರನ್ನು ಬಳಸಲಾಗುತ್ತದೆ. ಪ್ರತಿದಿನದ ಡಯಟ್ ನಲ್ಲಿ ಬಳಕೆ ಮಾಡಬಹುದಾದ ಅತ್ಯುತ್ತಮ ಗಿಡಮೂಲಿಕೆ ಇದಾಗಿದೆ. ಸ್ವಲ್ಪ ಕಹಿ ಅಂಶವಿರುವ ಈ ಕಾಡು ಸೇವಂತಿಗೆ ಎಲೆಗಳನ್ನು ಸಲಾಡ್, ಸೂಪ್ ಮತ್ತು ಫ್ರೈ ಮಾಡುವ ಕೆಲವು ಅಡುಗೆಗಳಲ್ಲಿ ಬಳಸಲಾಗುತ್ತದೆ. ಟೀ ಮತ್ತು ಕಾಫಿ ಬದಲಿ ರೂಪದಲ್ಲಿ ಈ ಕಾಡು ಸೇವಂತಿಗೆ ಬೇರುಗಳನ್ನು ನೀರಿನಲ್ಲಿ ಕುದಿಸಿ ಕುಡಿಯಬಹುದು.

ತೂಕ ಕಡಿಮೆ ಮಾಡಲು ಸಹಕಾರಿ

ತೂಕ ಕಡಿಮೆ ಮಾಡಲು ಸಹಕಾರಿ

ಕೆಲವು ಕೆಜಿ ತೂಕವನ್ನು ಕಳೆದುಕೊಳ್ಳಬೇಕು ಎಂದು ಬಯಸುವವರಿಗೆ ಇದು ಬಹಳ ಪ್ರಯೋಜನಕಾರಿ. ಇದರಲ್ಲಿ ಇರುವ ಫೈಟೋಕೆಮಿಕಲ್ ಗಳು ಮೂತ್ರವರ್ಧಕದ ಪ್ರಮಾಣ ಮತ್ತು ಆವರ್ತನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮೂತ್ರದ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಹಾಗಾಗಿ ದೇಹದಲ್ಲಿರುವ ಹೆಚ್ಚುವರಿ ನೀರಿನ ತೂಕವನ್ನು ಕಡಿಮೆ ಮಾಡುತ್ತದೆ.

- ದಿನಕ್ಕೆ ಎರಡರಿಂದ ಮೂರು ಬಾರಿ ಕಾಡು ಸೇವಂತಿಗೆ ಬೇರಿನ ಟೀ ಕುಡಿಯಿರಿ. ಇದರ ತಾಜಾ ಹಸಿರು ಎಲೆಗಳ‌ನ್ನು ಸಲಾಡ್ ಮತ್ತು ಸೂಪ್ ತಯಾರಿಸುವಲ್ಲಿ ಬಳಸಿ.

ಲಿವರ್ ಆರೋಗ್ಯವನ್ನು ಹೆಚ್ಚಿಸುತ್ತದೆ

ಲಿವರ್ ಆರೋಗ್ಯವನ್ನು ಹೆಚ್ಚಿಸುತ್ತದೆ

ಬಹಳ ಶಕ್ತಿಶಾಲಿಯಾಗಿರುವ ಲಿವರ್ ಟಾನಿಕ್ ಆಗಿ ಈ ಕಾಡು ಸೇವಂತಿಗೆ ಬೇರುಗಳು ಕೆಲಸ ಮಾಡುತ್ತದೆ. ಹಾಗಾಗಿ ಇದು ಲಿವರ್ ಆರೋಗ್ಯಕ್ಕೆ ಬಹಳ ಪರಿಣಾಮಕಾರಿ. ಲಿವರ್ ನಲ್ಲಿ ಸೇರಿಕೊಂಡಿರುವ ಕೊಬ್ಬಿನಾಂಶವನ್ನು ಕರಗಿಸುವುದಕ್ಕೆ ನೆರವು ನೀಡಿ ಲಿವರ್ ಸರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಲಿವರ್ ನ್ನು ಸ್ವಚ್ವಗೊಳಿಸುವುದಕ್ಕೆ ಇದು ಸಹಾಯ ಮಾಡುತ್ತದೆ.

ಕ್ಯಾನ್ಸರ್ ಬರದಂತೆ ತಡೆಯುವ ಗುಣಗಳಿವೆ

ಕ್ಯಾನ್ಸರ್ ಬರದಂತೆ ತಡೆಯುವ ಗುಣಗಳಿವೆ

ಇತ್ತೀಚಿನ ದಿನಗಳಲ್ಲಿ ಕಾಡುಸೇವಂತಿಗೆ ಬೇರುಗಳಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವಿದೆ ಎಂಬುದು ಸಾಬೀತಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ದೇಹದ ಜೀವಕೋಶಗಳಿಗೆ ಹಾನಿ ಮಾಡುವ ಫ್ರಿ ರ್ಯಾಡಿಕಲ್ಸ್ ಗಳಿಂದ ರಕ್ಷಣೆ ನೀಡುತ್ತದೆ. ಫ್ರೀ ರ್ಯಾಡಿಕಲ್ ಗಳ ವಿರುದ್ಧ ಹೋರಾಡುವ ಸಾಮರ್ಥ್ಯದಿಂದಾಗಿ ಹಲವು ರೀತಿಯ ಕ್ಯಾನ್ಸರ್ ಕಾರಕ ಜೀವಕೋಶಗಳು ಕೊಲ್ಲಲ್ಪಡುತ್ತದೆ.

2008 ರಲ್ಲಿ ಪ್ರಕಟಗೊಂಡಿರುವ ಇಂಟರ್ನ್ಯಾಷನಲ್ ಜರ್ನಲ್ ಆಫ್ ಆನ್ಕಾಲಜಿ ವರದಿಯ ಅನ್ವಯ ಕಾಡು ಸೇವಂತಿಗೆ ಬೇರುಗಳ ಸಾರವು ಮತ್ತು ಸಾರಗಳಲ್ಲಿರುವ ಪ್ರತ್ಯೇಕ ಘಟಕಗಳು ಆಂಟಿ ಕ್ಯಾನ್ಸರ್ ಏಜೆಂಟ್ ಗಳ ಮೌಲ್ಯದ್ದು ಎಂದು ವರದಿ ಮಾಡಿದೆ.

ಅಧಿಕ ರಕ್ತದೊತ್ತಡ ವನ್ನು ತಡೆಯುತ್ತದೆ

ಅಧಿಕ ರಕ್ತದೊತ್ತಡ ವನ್ನು ತಡೆಯುತ್ತದೆ

ಮೂತ್ರದ ಪ್ರಮಾಣ ಮತ್ತು ಸಾಂದ್ರತೆಯನ್ನು ಹೆಚ್ಚಿಸುವುದಕ್ಕೆ ನೈಸರ್ಗಿಕ ವಾಗಿರುವ ಗಿಡಮೂಲಿಕರ ಇದಾಗಿದೆ. ಪೊಟಾಷಿಯಂ ಕಡಿಮೆಯಾಗದಂತೆ ಅಧಿಕ ಸೋಡಿಯಂ ಅಂಶವನ್ನು ಮೂತ್ರದ ಮೂಲಕ ಹೊರಹಾಕುವ ಪ್ರಕ್ರಿಯೆ ಇದರಿಂದಾಗಿ ನಡೆಯುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಈ ಗಿಡಮೂಲಿಕೆಯಲ್ಲಿ ಫೈಬರ್ ಮತ್ತು ಪೊಟಾಷಿಯಂ ಅಧಿಕವಾಗಿದೆ. ಇದು ರಕ್ತದೊತ್ತಡದ ನಿಯಂತ್ರಣಕ್ಕೆ ಸಹಕಾರಿ. ಕಾಡು ಸೇವಂತಿಗೆಯಲ್ಲಿರುವ ಫೈಬರ್ ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೆರವು ನೀಡುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ದೇಹದ ರಕ್ತದೊತ್ತಡವನ್ನು ಹೆಚ್ಚಿಸುವುದಕ್ಕೆ ಕೊಲೆಸ್ಟ್ರಾಲ್ ಬಹಳ ಮುಖ್ಯವಾದ ಅಂಶವಾಗಿರುತ್ತದೆ.

ಮೂತ್ರಕೋಶದ ಸಮಸ್ಯೆಗಳನ್ನು ತಡೆಯುತ್ತದೆ

ಮೂತ್ರಕೋಶದ ಸಮಸ್ಯೆಗಳನ್ನು ತಡೆಯುತ್ತದೆ

ಮೂತ್ರಕೋಶ ಮತ್ತು ಕಿಡ್ನಿಗಳಲ್ಲಿ ಶೇಖರವಾಗುವ ಟಾಕ್ಸಿಕ್ ಅಂಶಗಳನ್ನು ದೇಹದಿಂದ ಹೊರ ಹಾಕುವುದಕ್ಕೆ ಈ ಕಾಡು ಸೇವಂತಿಗೆ ಗಿಡದ ಬೇರು ಸಹಾಯ ಮಾಡುತ್ತದೆ. 2009 ರಲ್ಲಿ ಪ್ರಕಟವಾದ ಜರ್ನಲ್ ಆಫ್ ಆಲ್ಟರ್ ನೇಟಿವ್ ಮತ್ತು ಕಾಂಪ್ಲಿಮೆಂಟರಿ ಮೆಡಿಸಿನ್ ನಲ್ಲಿ ಹೇಳಲಾಗಿರುವ ಪ್ರಕಾರ ಈ ಕಾಡು ಸೇವಂತಿಗೆ ಮೂತ್ರದ ಪ್ರಮಾಣವನ್ನು ಅಧಿಕವಾಗಿಸಿ ಹೊರಹಾಕುತ್ತದೆ. ಸರಿಯಾದ ಮೂತ್ರದ ಹೊರಹಾಕುವಿಕೆಯು ಕಿಡ್ನಿಯ ಸ್ವಚ್ಛತೆಗೆ ಕಾರಣ.

English summary

How Dandelion Root Is Good For Your Health

Here we are discussing about How Dandelion Root Is Good For Your Health. dandelions have been used for centuries as an herbal treatment for many ailments, including kidney and liver problems. Read more.
X
Desktop Bottom Promotion