For Quick Alerts
ALLOW NOTIFICATIONS  
For Daily Alerts

ಬಿಸಿ ಟೀ/ಕಾಫಿ ಕುಡಿದು ನಾಲಗೆ ಸುಟ್ಟಿಕೊಂಡ್ರಾ? ಇಲ್ಲಿದೆ ಸಿಂಪಲ್ ಮನೆಮದ್ದುಗಳು

|

ಕೆಲವೊಮ್ಮೆ ಬಿಸಿ ಆಹಾರವನ್ನು ಸೇವಿಸುವುದರಿಂದ ನಿಮ್ಮ ನಾಲಿಗೆ ಸುಡುತ್ತದೆ. ಬಿಸಿ ಕಾಫಿ ಅಥವಾ ಚಹಾ ಸೇವನೆಯಿಂದ ಇದು ಹೆಚ್ಚಾಗಿ ಸಂಭವಿಸುವುದುಂಟು. ಬಿಸಿಯಿರುವ ಬಗ್ಗೆ ಅರಿವಿರದೇ ಒಮ್ಮೆಲೆ ಬಾಯಿ ಕೊಟ್ಟು, ಬಾಯಿ, ನಾಲಗೆ ಸುಟ್ಟಿಕೊಂಡ ಅನುಭವ ಪ್ರತಿಯೊಬ್ಬರಿಗೂ ಆಗಿರಲೇಬೇಕು. ಹೀಗಾದಾಗ ಹಲವಾರು ದಿನಗಳವರೆಗೆ ನಾಲಗೆಗೆ ರುಚಿಯ ಅರಿವಾಗುವುದೇ ಇಲ್ಲ. ಜೊತೆಗೆ ಮರಗಟ್ಟುವಿಕೆಯ ಭಾವನೆ ಇರುತ್ತದೆ.

ನಾಲಿಗೆ ಸುಡುವುದು ಸಾಮಾನ್ಯ, ಅದಕ್ಕೆ ಚಿಕಿತ್ಸೆ ನೀಡಲು ವೈದ್ಯರ ಅಗತ್ಯವಿಲ್ಲ. ಆದರೆ ಕೆಲವು ಮನೆಮದ್ದುಗಳ ಮೂಲಕ ಸುಡುವ ಸಂವೇದನೆಯನ್ನು ಕಡಿಮೆ ಮಾಡಿ, ಸುಟ್ಟದ್ದರಿಂದ ಆದ ಗುಳ್ಳೆಗಳನ್ನು ಕ್ರಮೇಣ ಗುಣಪಡಿಸಬಹುದು. ಹಾಗಾದರೆ ಆ ಮನೆಮದ್ದುಗಳ ಬಗ್ಗೆ ತಿಳಿಯೋಣ ಬನ್ನಿ.

ಬಿಸಿಆಹಾರದಿಂದ ಸುಟ್ಟ ನಾಲಗೆಯನ್ನು ಸರಿಪಡಿಸುವ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

ತಣ್ಣೀರು:

ತಣ್ಣೀರು:

ಬಾಯಿ ಸುಟ್ಟ ತಕ್ಷಣ ಮೊದಲು ಮಾಡಬೇಕಾದ ಕೆಲಸವೆಂದರೆ ತಣ್ಣೀರಿನಿಂದ ಅಥವಾ ಕೋಲ್ಡ್‌ ವಾಟರ್‌ ಕುಡಿಯುವುದು. ಇದು ನಾಲಗೆಯನ್ನು ತಂಪುಮಾಡಿ, ಸುಟ್ಟು ಗುಳ್ಳೆಗಳಾಗುವುದನ್ನು ತಡೆಯುತ್ತದೆ. ಜೊತೆಗೆ ನಾಲಗೆ ಸುಟ್ಟ ಬಳಿಕ ನಾಲ್ಕೈದು-ಬಾರಿ ತಣ್ಣೀರಿನಿಂದ ಬಾಯಿ ಮುಕ್ಕಳಿಸಿ, ಯಾವುದೇ ಬಿಸಿ ಆಹಾರವನ್ನು ಸೇವಿಸಬೇಡಿ, ಹಾಲು, ಹಾಲಿನ ಉತ್ಪನ್ನಗಳನ್ನು ಸೇವಿಸಿ.

ಉಪ್ಪುನೀರು:

ಉಪ್ಪುನೀರು:

ಬಾಯಿ ತಣ್ಣಗಾದ ನಂತರ, ಬೆಚ್ಚಗಿನ ಉಪ್ಪುನೀರಿನ ಮಿಶ್ರಣದಿಂದ ಬಾಯಿಯನ್ನು ಮುಕ್ಕಳಿಸಿ. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ನಿಮ್ಮ ನಾಲಗೆ ಸುಟ್ಟ ಲಕ್ಷಣಗಳಾದ ಊತ ಮತ್ತು ನೋವು ಕಡಿಮೆಯಾಗುತ್ತದೆ. ಜೊತೆಗೆ ಇದು ನೈಸರ್ಗಿಕ ನಂಜುನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

ಅರಿಶಿನ:

ಅರಿಶಿನ:

ಅರಿಶಿನವಿಲ್ಲದೆ ನಮ್ಮ ಮನೆಗಳಲ್ಲಿ ಯಾವುದೇ ಆಹಾರವನ್ನು ತಯಾರಿಸುವುದಿಲ್ಲ. ಬಣ್ಣ, ರುಚಿ ಮತ್ತು ಪೌಷ್ಟಿಕಾಂಶದ ಅಂಶವನ್ನು ಹೆಚ್ಚಿಸಲು ಅರಿಶಿನ ನಮ್ಮ ಎಲ್ಲಾ ಆಹಾರಗಳಲ್ಲಿ ಇರಬೇಕು. ಈ ಸೂಪರ್‌ಫುಡ್‌ನಲ್ಲಿರುವ ಉರಿಯೂತ ನಿವಾರಕ ಗುಣಗಳು ಉರಿಯೂತವನ್ನು ಶಮನಗೊಳಿಸಲು ಬಹಳ ಪರಿಣಾಮಕಾರಿ. ಇದಕ್ಕಾಗಿ, ಒಂದು ಕಪ್ ಬಿಸಿ ಹಾಲನ್ನು ತೆಗೆದುಕೊಂಡು ಅದಕ್ಕೆ ಕೇವಲ 1 ಟೀಚಮಚ ಅರಿಶಿನವನ್ನು ಸೇರಿಸಿ ಕುಡಿಯಿರಿ ಅಥವಾ ಕೇವಲ ಒಂದು ಚಮಚ ಜೇನುತುಪ್ಪ, ಅರಿಶಿನ ಮತ್ತು 1-2 ಚಮಚ ಹಾಲನ್ನು ಮಿಶ್ರಣ ಮಾಡಿ. ತಯಾರಾದ ಮಿಶ್ರಣವನ್ನು ನಾಲಿಗೆಗೆ ಹಚ್ಚಿ ಮತ್ತು 10 ನಿಮಿಷಗಳ ಕಾಲ ಬಿಡಿ, ನಿಧಾನವಾಗಿ ತೊಳೆಯಿರಿ.

ತುಳಸಿ ಎಲೆಗಳು:

ತುಳಸಿ ಎಲೆಗಳು:

ಪ್ರತಿಯೊಬ್ಬರ ಮನೆಯಲ್ಲಿ ಸಾಮಾನ್ಯವಾಗಿ ತುಳಸಿ ಗಿಡವಿರುತ್ತದೆ. ಇದು ಕೇವಲ ಪವಿತ್ರ ಸಸ್ಯ ಮಾತ್ರವಲ್ಲ ಔಷಧೀಯ ಸಸ್ಯ ಕೂಡ, ಇದು ಇಡೀ ದೇಹಕ್ಕೆ ಮತ್ತು ನಿಮ್ಮ ಸುಟ್ಟ ನಾಲಿಗೆಗೆ ಪ್ರಯೋಜನಕಾರಿಯಾಗಿದೆ. ಹಸಿರು ಅಥವಾ ಕಪ್ಪು ತುಳಸಿ ಗಿಡದಿಂದ ಕೇವಲ 5-6 ತುಳಸಿ ಎಲೆಗಳನ್ನು ತೆಗೆದುಕೊಳ್ಳಿ. ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳನ್ನು ತೊಡೆದುಹಾಕಲು ಇದನ್ನು ಚೆನ್ನಾಗಿ ತೊಳೆಯಿರಿ. ವಾರಕ್ಕೆ ಎರಡು ಬಾರಿಯಾದರೂ ದಿನಕ್ಕೆ ಎರಡು ಬಾರಿಯಂತೆ ಅವುಗಳನ್ನು ಅಗಿಯಿರಿ, ಇದು ನಾಲಿಗೆಯಲ್ಲಿ ಬಿಸಿ ಆಹಾರದಿಂದ ಉಂಟಾದ ಹುಣ್ಣುಗಳನ್ನು ಗುಣಪಡಿಸುತ್ತದೆ.

ಐಸ್‌ಕ್ಯೂಬ್:

ಐಸ್‌ಕ್ಯೂಬ್:

ನಾಲಿಗೆಯ ಕಿರಿಕಿರಿಯನ್ನು ಕಡಿಮೆಮಾಡಲು ಐಸ್ ಸುಲಭವಾದ ಮತ್ತು ಅತ್ಯಂತ ಪರಿಣಾಮಕಾರಿ ವಿಷಯಗಳಲ್ಲಿ ಒಂದಾಗಿದೆ. ಇದು ಉರಿಯೂತವನ್ನು ನಿವಾರಿಸುತ್ತದೆ, ನಾಲಿಗೆಯ ಹುಣ್ಣುಗಳನ್ನು ಗುಣಪಡಿಸುತ್ತದೆ. ಫ್ರಿಜ್ ನಿಂದ ಸಣ್ಣ ಐಸ್ ಕ್ಯೂಬ್ ತೆಗೆದುಕೊಂಡು ನಿಮ್ಮ ನಾಲಿಗೆಯ ಮೇಲೆ ಇಡಿ. ಚಳಿಗಾಲದಲ್ಲಿ, ಐಸ್ ಅನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯಿರಿ. ಇದನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ಮಾಡುವುದರಿಂದ ಸುಟ್ಟ ಗುಳ್ಳೆಗಳಿಂದ ತಕ್ಷಣ ಪರಿಹಾರ ಸಿಗುತ್ತದೆ.

ಜೇನುತುಪ್ಪ:

ಜೇನುತುಪ್ಪ:

ಜೇನುತುಪ್ಪವು ಮತ್ತೊಂದು ಸುಡುವಿಕೆಗೆ ನೀಡುವ ಚಿಕಿತ್ಸೆಯಾಗಿದೆ. ಜೇನುತುಪ್ಪ ಅದರ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದಾಗಿ, ವೇಗವಾಗಿ ಗುಣಪಡಿಸುವಿಕೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ. ಜೇನುತುಪ್ಪವನ್ನು ಸಾವಿರಾರು ವರ್ಷಗಳಿಂದ ಸುಡುವ ಪರಿಹಾರವಾಗಿ ಪ್ರಪಂಚದಾದ್ಯಂತ ಬಳಸಲಾಗುತ್ತದೆ. ಜೇನುತುಪ್ಪವನ್ನ ಸುಟ್ಟ ನಾಲಗೆಗೆ ಹಚ್ಚಿ ಅಥವಾ ಸ್ವಲ್ಪ ಪ್ರಮಾಣದ ಜೇನುತುಪ್ಪ ಸೇವಿಸಿ. ಆದರೆ ಜೇನುತುಪ್ಪ ಸೇವಿಸುವ ಮೊದಲು, ಬ್ರಷ್ ಮಾಡಲು ಮರೆಯದಿರಿ.

English summary

Home Remedies to Soothe Burnt Tongue due to Hot Food in Kannada

Here we talking about Home Remedies to Soothe Burnt Tongue due to Hot Food in Kannada, read on
Story first published: Wednesday, September 22, 2021, 17:24 [IST]
X
Desktop Bottom Promotion