For Quick Alerts
ALLOW NOTIFICATIONS  
For Daily Alerts

ಮೂರೊತ್ತು ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವವರ ಕಣ್ಣುಗಳ ರಕ್ಷಣೆಗಾಗಿ ಈ ಸಲಹೆಗಳು

|

ಮನೆಯಲ್ಲಿರಲಿ, ಆಫೀಸಾಗಲಿ ಕಂಪ್ಯೂಟರ್ ಪರದೆಯನ್ನು ದೀರ್ಘಕಾಲ ನೋಡುವುದರಿಂದ ನಮ್ಮ ಕಣ್ಣುಗಳಿಗೆ ಎಷ್ಟು ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇನ್ನು ಕೊರೊನಾ ಕಾರಣದಿಂದ ಮನೆಯಿಂದ ಕೆಲಸ ಮಾಡಬೇಕಾದಾಗ ಅವಧಿಯೂ ಹೆಚ್ಚಾದದ್ದು ಇದೆ. ಇದರಿಂದ ಕಣ್ಣುಗಳು ಒಣ ಹಾಗೂ ಶುಷ್ಕವಾಗುವುದು. ನಾವು ನಮ್ಮ ಕಣ್ಣುಗಳನ್ನು ಉಜ್ಜುತ್ತಲೇ ಇರುತ್ತೇವೆ ಮತ್ತು ಅದು ನೋವಾಗಲು ಪ್ರಾರಂಭವಾಗುವುದು. ಆದ್ದರಿಂದ, ನಿಮ್ಮ ಶುಷ್ಕ ಮತ್ತು ತುರಿಕೆ ಕಣ್ಣುಗಳನ್ನು ನಿವಾರಿಸಲು ಕೆಲವು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.

ದೀರ್ಘಕಾಲ ಕಂಪ್ಯೂಟರ್ ನೋಡುವವರ ಕಣ್ಣಿನ ರಕ್ಷಣೆಗೆ ಮಾಡಬೇಕಾದ ಕೆಲವು ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ:

ಬಿಸಿ ಶಾಖ:

ಬಿಸಿ ಶಾಖ:

ಕಣ್ಣೀರು ಎಣ್ಣೆ, ಲೋಳೆ ಮತ್ತು ನೀರಿನ ಮಿಶ್ರಣವಾಗಿದ್ದು, ಅದು ಕಣ್ಣನ್ನು ನಯಗೊಳಿಸುತ್ತದೆ. ಆದರೆ ಊತ ಮತ್ತು ಚಪ್ಪಟೆಯಾದ ರೆಪ್ಪೆಗಳು ತೈಲ ತಯಾರಿಸುವ ಗ್ರಂಥಿಗಳನ್ನು ಮುಚ್ಚಿಹಾಕುತ್ತವೆ, ಇದರ ಪರಿಣಾಮವಾಗಿ, ನಿಮ್ಮ ಕಣ್ಣುಗಳು ಒಣಗಿ, ತುರಿಕೆ ಆಗುತ್ತವೆ. ಆದ್ದರಿಂದ, ಈ ಸಮಸ್ಯೆಯನ್ನು ಎದುರಿಸಲು, ಸ್ವಚ್ಛವಾದ ಬಟ್ಟೆಯನ್ನು ಬೆಚ್ಚಗಿನ ನೀರಿನಿಂದ ಒದ್ದೆ ಮಾಡಿ ಮತ್ತು ಅದನ್ನು 5 ನಿಮಿಷಗಳ ಕಾಲ ನಿಮ್ಮ ಕಣ್ಣಿನ ಮೇಲೆ ಇರಿಸಿ. ಮುಚ್ಚಿಹೋಗಿರುವ ಗ್ರಂಥಿಗಳು ತೈಲವನ್ನು ಸ್ರವಿಸಲು ಇದು ಸಹಾಯ ಮಾಡುತ್ತದೆ.

ಕಣ್ಣಿನ ರೆಪ್ಪೆಗಳನ್ನು ತೊಳೆಯಿರಿ:

ಕಣ್ಣಿನ ರೆಪ್ಪೆಗಳನ್ನು ತೊಳೆಯಿರಿ:

ಉಬ್ಬಿರುವ ರೆಪ್ಪೆಗಳು ಕಣ್ಣಿನ ತೈಲ ಗ್ರಂಥಿಗಳನ್ನು ಮುಚ್ಚಿಹಾಕುತ್ತವೆ ಎಂದು ಈಗಾಗಲೇ ಹೇಳಿದ್ದೇವೆ. ಆದ್ದರಿಂದ ಕಣ್ಣಿನ ರೆಪ್ಪೆಗಳನ್ನು ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಪ್ರತಿದಿನ ಸ್ವಚ್ಛಗೊಳಿಸುವುದು ಅವಶ್ಯಕ. ಆದ್ದರಿಂದ, ಸೌಮ್ಯ ಅಥವಾ ಮಗುವಿನ ಶಾಂಪೂ ಬಳಸಿ, ಕಣ್ಣನ್ನು ಮುಚ್ಚಿ, ರೆಪ್ಪೆಗಳ ಮೇಲೆ ಮಸಾಜ್ ಮಾಡಿ ಪ್ರದೇಶವನ್ನು ಸ್ವಚ್ಛಗೊಳಿಸಿ.

ಹೆಚ್ಚು ಮಿಟುಕಿಸಿ:

ಹೆಚ್ಚು ಮಿಟುಕಿಸಿ:

ಕಂಪ್ಯೂಟರ್ ಅನ್ನು ನಿರಂತರವಾಗಿ ನೋಡುವುದರಿಂದ ಮಿಟುಕಿಸುವ ಪ್ರಮಾಣವು ಕಡಿಮೆಯಾಗುತ್ತದೆ. ಅದರ ಅಂತಿಮ ಫಲವೇ ಕಣ್ಣು ಒಣಗುವುದು, ತುರಿಕೆ ಉಂಟಾಗುವುದು. ಆದ್ದರಿಂದ, ನಯಗೊಳಿಸುವಿಕೆಯನ್ನು ಹೆಚ್ಚಿಸಲು ಕಣ್ಣನ್ನು ಹೆಚ್ಚು ಮಿಟುಕಿಸಿ. ಅದಕ್ಕಾಗಿ ನೀವು 20/20 ನಿಯಮವನ್ನು ಅಭ್ಯಾಸ ಮಾಡಬಹುದು. ಪ್ರತಿ 20 ನಿಮಿಷಕ್ಕೆ 20 ಸೆಕೆಂಡುಗಳ ಕಾಲ ಕಣ್ಣು ಮುಚ್ಚಿ ಕುಳಿತುಕೊಳ್ಳಿ.

ಆಹಾರದಲ್ಲಿ ಎಣ್ಣೆಯುಕ್ತ ಮೀನು:

ಆಹಾರದಲ್ಲಿ ಎಣ್ಣೆಯುಕ್ತ ಮೀನು:

ಸಾಲ್ಮನ್, ಟ್ಯೂನ, ಸಾರ್ಡೀನ್, ಟ್ರೌಟ್, ಮ್ಯಾಕೆರೆಲ್, ಇತ್ಯಾದಿಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲವಿದೆ, ಇದು ತೈಲ ತಯಾರಿಸುವ ಗ್ರಂಥಿಗಳಿಗೆ ಹೆಚ್ಚು ತೈಲವನ್ನು ಸ್ರವಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಈ ಮೀನುಗಳನ್ನು ನಿಮ್ಮ ಆಹಾರದಲ್ಲಿ ಪ್ರತಿದಿನ ಸೇವಿಸಲು ಪ್ರಯತ್ನಿಸಿ.

ಸಾಕಷ್ಟು ನೀರು ಕುಡಿಯಿರಿ:

ಸಾಕಷ್ಟು ನೀರು ಕುಡಿಯಿರಿ:

ಯಾವಾಗಲೂ ಸಾಧ್ಯವಾದಷ್ಟು ನೀರು ಕುಡಿಯಿರಿ ಇದರಿಂದ ನಿಮ್ಮ ಕಣ್ಣು ಸೇರಿದಂತೆ ಇಡೀ ದೇಹ ಹೈಡ್ರೀಕರಿಸಿದಂತೆ ಇರುತ್ತದೆ. ಕಣ್ಣುಗಳು ನಯವಾಗಿರಲು ಮತ್ತು ತಾಜಾವಾಗಿರಲು ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಿರಿ.

English summary

Home Remedies for Dry and Itchy Eyes Caused by Excessive Exposure to Computer Screen in Kannada

Here we talking about Home remedies for dry and itchy eyes caused by excessive exposure to computer screen in kannada, read on
Story first published: Monday, July 12, 2021, 17:46 [IST]
X
Desktop Bottom Promotion