For Quick Alerts
ALLOW NOTIFICATIONS  
For Daily Alerts

ಫಿಟ್‌ನೆಸ್‌: ಅತ್ಯಧಿಕ ಪ್ರೋಟೀನ್‌ ಉಳ್ಳ ಈ 5 ಬೇಳೆಗಳಿಂದ ತೂಕ ಇಳಿಕೆ ಜತೆಗೆ, ಆರೋಗ್ಯಕರ ಸ್ನಾಯು ಪಡೆಯಬಹುದು

|

ಎಲ್ಲರಿಗೂ ಆರೋಗ್ಯಕರ ದೇಹ ಪಡೆಯುವ ಬಯಕೆ, ಆದರೆ ಇದಕ್ಕಾಗಿ ಬಾಯಿ ರುಚಿ ಕಟ್ಟಬೇಕಲ್ಲ ಎಂಬ ಚಿಂತೆ. ಅದರಲ್ಲೂ ಪುರುಷರು ತಮ್ಮ ದೈಹಿಕ ಫಿಟ್‌ನೆಸ್‌ಗಾಗಿ ಹಾಗೂ 6 ಪ್ಯಾಕ್‌ ದೇಹಕ್ಕಾಗಿ ಇನ್ನಿಲ್ಲದ ಶ್ರಮ ಹಾಗೂ ಆಹಾರ ಕ್ರಮವನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಆದರೆ ನೀವು ದೈಹಿಕ ಫಿಟ್‌ನೆಸ್‌ಗಾಗಿ ನಿಮ್ಮ ಆಹಾರ ಬಯಕೆಗಳನ್ನು ಬಿಡಬೇಕು ಎಂದಿಲ್ಲ ಎನ್ನುತ್ತಾರೆ ಫಿಟ್‌ನೆಸ್‌ ತಜ್ಞರು.

ನಮ್ಮ ನಿತ್ಯದ ಆಹಾರ ಪದ್ಧತಿಯಲ್ಲಿ ಅತಿ ಹೆಚ್ಚು ಬಳಸುವ ಬೇಳೆಗಳನ್ನು ಸೇವಿಸುವುದರಿಂದ ಫಿಟ್ನೆಸ್‌ ಹಾಳಾಗಬಹುದು ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಪೂರೈಸುವಲ್ಲಿ ಬೇಳೆಗಳು ಪ್ರಮುಖ ಪಾತ್ರ ವಹಿಸುತ್ತದೆ, ಅತ್ಯಂತ ಜನಪ್ರಿಯ ಪ್ರೋಟೀನ್ ಮೂಲಗಳಲ್ಲಿ ಒಂದಾಗಿದೆ ಎನ್ನಲಾಗುತ್ತದೆ. ತೆಳ್ಳಗಿನ ಸ್ನಾಯುಗಳನ್ನು ಪಡೆಯಲು ಮತ್ತು ಕೊಬ್ಬನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವ ಯಾರಿಗಾದರೂ ಕ್ಯಾಲೋರಿ ಕೊರತೆಯನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂದು ತಿಳಿದಿದೆ. ಬೆಳೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದರೂ, ಅವು ಇತರ ಕೆಲವು ಪ್ರಭೇದಗಳಂತೆ ಪ್ರೋಟೀನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದಿಲ್ಲ.

ಫಿಟ್‌ನೆಸ್‌ ಕಾಪಾಡಿಕೊಳ್ಳುವವರು ಯಾವ ರೀತಿಯ ದಾಲ್‌ಗಳನ್ನು ತೆಗೆದುಕೊಳ್ಳಬೇಕು?, ಹೆಚ್ಚಿನ ಪ್ರೊಟೀನ್ ಹೊಂದಿರುವ ಐದು ವಿಧದ ಬೇಳೆಗಳು ಇಲ್ಲಿವೆ, ಇವುಗಳಿಂದ ತಯಾರಿಸಿದ ಆಹಾರ ಖಾದ್ಯಗಳನ್ನು ಸೇವಿಸುವುದರಿಂದ ಫಿಟ್‌ನೆಸ್‌ ಹಾಳಾಗುವುದಿಲ್ಲ ಬದಲಿಗೆ, ತೆಳ್ಳಗಿನ ಸ್ನಾಯುಗಳನ್ನು ಪಡೆಯಲು ಪ್ರಯತ್ನಿಸುವವರಿಗೆ ಇದು ಉತ್ತಮ ಪ್ರೊಟೀನ್‌ ಉಳ್ಳ ಆಹಾರವಾಗಿದೆ:

1. ಉದ್ದಿನ ಬೇಳೆ

1. ಉದ್ದಿನ ಬೇಳೆ

ಉದ್ದಿನ ಬೇಳೆಯಲ್ಲಿ ಹೆಚ್ಚಿನ ಪ್ರೋಟೀನ್ ಇದ್ದು, ಇದು ಅತ್ಯುತ್ತಮವಾದ ಪೌಷ್ಟಿಕಕಾಂಶವುಳ್ಳ ಬೇಳೆಗಳಲ್ಲಿ ಒಂದಾಗಿದೆ. ಸುಮಾರು ಅರ್ಧ ಕಪ್ ಉದ್ದಿನ ಬೇಳೆಯು 12 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಫೋಲೇಟ್, ಸತು, ವಿಟಮಿನ್ ಎ, ಸಿ ಮತ್ತು ಕಬ್ಬಿಣದಿಂದಲೂ ಸಮೃದ್ಧವಾಗಿದೆ.

2. ತೊಗರಿ ಬೇಳೆ

2. ತೊಗರಿ ಬೇಳೆ

ಕಂದು ಮಸೂರ ಅಥವಾ ತೊಗರಿ ಬೇಳೆಯು ಪ್ರೋಟೀನ್‌ನ ಮತ್ತೊಂದು ಉತ್ತಮ ಮೂಲವಾಗಿದೆ. ಈ ಬೇಳೆಯ ಅರ್ಧ ಕಪ್ ನಿಮಗೆ ಸುಮಾರು 9 ಗ್ರಾಂ ಪ್ರೋಟೀನ್, 20 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 8 ಗ್ರಾಂ ಫೈಬರ್ ನೀಡುತ್ತದೆ. ಇದು ಫೋಲೇಟ್ ಮತ್ತು ಕಬ್ಬಿಣದ ಸಮೃದ್ಧ ಮೂಲವಾಗಿದೆ.

3. ಕೆಂಪು ಮಸೂರ

3. ಕೆಂಪು ಮಸೂರ

ಕೆಂಪು ಮಸೂರವು ಕಂದು ಮಸೂರಗಳಂತೆಯೇ ಇರುತ್ತದೆ, ಅವುಗಳ ಹೊರ ಸಿಪ್ಪೆ ಇರುವುದಿಲ್ಲವಾದ್ದರಿಂದ ಇದು ಫೈಬರ್ನಲ್ಲಿ ಸಮೃದ್ಧವಾಗಿದೆ. ಫೈಬರ್ ಅಂಶವನ್ನು ಹೊರತುಪಡಿಸಿ, ಉಳಿದಂತೆ ಬಹುಮಟ್ಟಿಗೆ ಇತರ ಬೇಳೆಗಳಂತೆ ಪ್ರೊಟೀನ್‌ ಅನ್ನು ಹೊಂದಿದೆ. ಅರ್ಧ ಕಪ್ ಕೆಂಪು ಮಸೂರ್ ದಾಲ್ 9 ಗ್ರಾಂ ಪ್ರೋಟೀನ್ ನೀಡುತ್ತದೆ.

4. ಹೆಸರು ಬೇಳೆ

4. ಹೆಸರು ಬೇಳೆ

ಹೆಸರು ಬೇಳೆಯು ಪ್ರೋಟೀನ್ ಮಾತ್ರವಲ್ಲದೆ ಫೈಬರ್‌ನ ಮತ್ತೊಂದು ಉತ್ತಮ ಮೂಲವಾಗಿದೆ. ಪ್ರೋಟೀನ್ ಮತ್ತು ನಾರಿನಂಶವು ನಿಮ್ಮನ್ನು ಹೆಚ್ಚು ಕಾಲ ಪೂರ್ಣವಾಗಿಡಲು, ಹಸಿವನ್ನು ಮುಂದೂಡಲು ಮುಖ್ಯ ಕಾರಣವಾಗಿದೆ. ಒಂದು ಕಪ್ ಹೆಸರು ಬೇಳೆ 14 ಗ್ರಾಂ ಪ್ರೋಟೀನ್ ಮತ್ತು 15 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ.

English summary

High-Protein Lentils That Are Best For Men Trying Lose Fat & Gain Lean Muscle in Kannada

Here we are discussing about High-Protein Lentils That Are Best For Men Trying Lose Fat & Gain Lean Muscle in Kannada. Read more.
Story first published: Friday, May 13, 2022, 12:31 [IST]
X
Desktop Bottom Promotion