For Quick Alerts
ALLOW NOTIFICATIONS  
For Daily Alerts

ಕೋವಿಡ್ ಲಸಿಕೆ ಪಡೆದ ಮೇಲೆ ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ವಸ್ತುಗಳಿವು

|

ಕೊರೋನಾ ವೈರಸ್ ಲಸಿಕೆ ಬಗ್ಗೆ ಜನರಿಗೆ ಅನೇಕ ಪ್ರಶ್ನೆಗಳಿವೆ. ಲಸಿಕೆ ಹಾಕಿದ ನಂತರ ವ್ಯಕ್ತಿಯು ಅನುಭವಿಸುವ ಅಡ್ಡಪರಿಣಾಮಗಳು ಯಾವುವು ಎಂಬುದು ಈ ಪ್ರಶ್ನೆಗಳಲ್ಲಿ ಮೊದಲಿಗೆ ಬರುತ್ತದೆ. ಕೆಲವು ತಜ್ಞರ ಪ್ರಕಾರ, ಲಸಿಕೆ ಹಾಕಿದ ನಂತರ ಕೆಲವು ಜನರಿಗೆ ಜ್ವರ ಅಥವಾ ಮೈ-ಕೈ ನೋವು ಕಾಣಿಸಿಕೊಳ್ಳುತ್ತವೆ.

ಆದರೆ ಯಾವುದೇ ಅಡ್ಡಪರಿಣಾಮಗಳನ್ನು ಎದುರಿಸಿದಾಗ ನೀವು ನಿಮ್ಮ ಆಹಾರಕ್ರಮವನ್ನು ಗಮನದಲ್ಲಿರಿಸಿಕೊಳ್ಳುವುದು ತುಂಬಾ ಮುಖ್ಯ. ಹಾಗಾದರೆ ಲಸಿಕೆ ಪಡೆದ ಮೇಲೆ ಉಂಟಾಗುವ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುವ ಆಹಾರಗಳಾವುವು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಅದನ್ನು ಈ ಲೇಖನದಲ್ಲಿ ನೀಡಿದ್ದೇವೆ.

ಕೋವಿಡ್ ಲಸಿಕೆ ಪಡೆದ ಮೇಲೆ ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ವಸ್ತುಗಳಾವುವು ಎಂಬುದನ್ನು ಈ ಕೆಳಗೆ ನೀಡಿದ್ದೇವೆ:

ಹಸಿರು ತರಕಾರಿಗಳು:

ಹಸಿರು ತರಕಾರಿಗಳು:

ಆಹಾರದಲ್ಲಿ ಹಸಿರು ತರಕಾರಿಗಳು ಇರುವುದು ಅವಶ್ಯಕವಾಗಿದೆ. ಇದರಲ್ಲಿ ಪಾಲಕ್, ಕೋಸುಗಡ್ಡೆ ಮುಂತಾದ ತರಕಾರಿಗಳು ಸೇರಿಕೊಂಡಿವೆ. ಈ ಎಲ್ಲಾ ತರಕಾರಿಗಳು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇವುಗಳನ್ನು ನಿಮ್ಮ ಆಹಾರದಲ್ಲಿ ಹೆಚ್ಚೆಚ್ಚು ಸೇರಿಸುವುದು ಉತ್ತಮ.

ಈರುಳ್ಳಿ:

ಈರುಳ್ಳಿ:

ಈರುಳ್ಳಿ ನಿಮ್ಮನ್ನು ಶಾಖದ ಹೊಡೆತದಿಂದ ರಕ್ಷಿಸುತ್ತದೆ. ಜೊತೆಗೆ ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈರುಳ್ಳಿಯಲ್ಲಿ ಪ್ರೋಬಯಾಟಿಕ್ ಸಮೃದ್ಧವಾಗಿದ್ದು, ನಿಮ್ಮನ್ನು ಅಡ್ಡಪರಿಣಾಮಗಳಿಗೆ ತುತ್ತಾಗುವುದನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿ:

ಬೆಳ್ಳುಳ್ಳಿ:

ಬೆಳ್ಳುಳ್ಳಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ಪೊಟ್ಯಾಸಿಯಮ್ ಮತ್ತು ರಂಜಕಗಳಿವೆ. ಇದರ ಗುಣಗಳು ಇದನ್ನು ಉತ್ತಮ ಔಷಧಿಯನ್ನಾಗಿ ಮಾಡುತ್ತವೆ ಏಕೆಂದರೆ ನಿಮ್ಮ ದೇಹವನ್ನು ಒಳಗಿನಿಂದ ಪೋಷಿಸಲು ಈ ಎಲ್ಲಾ ಪೋಷಕಾಂಶಗಳು ಅವಶ್ಯಕ. ಆದ್ದರಿಂದ ಬೆಳ್ಳುಳ್ಳಿಯನ್ನು ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರಿಸುವುದು ಒಳ್ಳೆಯದು.

ಅರಿಶಿನ:

ಅರಿಶಿನ:

ಅರಿಶಿನವು ಉರಿಯೂತದ ವಿರುದ್ಧದ ಪ್ರಬಲ ಆಯುಧವಾಗಿದೆ. ನಿಮ್ಮ ಮೆದುಳನ್ನು ಒತ್ತಡದಿಂದ ರಕ್ಷಿಸುತ್ತದೆ, ಆದ್ದರಿಂದ ಅರಿಶಿನವನ್ನು ಸೇವಿಸಬೇಕು. ಇದು ನಿಮ್ಮನ್ನ ಎಲ್ಲಾ ರೀತಿಯ ಒತ್ತಡದಿಂದ ತಡೆಯುತ್ತದೆ.

ಕಪ್ಪು ದ್ರಾಕ್ಷಿ:

ಕಪ್ಪು ದ್ರಾಕ್ಷಿ:

ನಿಮಗೆಲ್ಲರಿಗೂ ತಿಳಿದಿರುವ ಕಪ್ಪು ದ್ರಾಕ್ಷಿಯಲ್ಲಿ ಆ್ಯಂಟಿಆಕ್ಸಿಡೆಂಟ್ಗಳ ಮೂಲವಾಗಿದೆ. ಅವು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತವೆ. ಮೊಸರಿನೊಂದಿಗೆ ಕಪ್ಪುದ್ರಾಕ್ಷಿಗಳನ್ನು ಸೇವಿಸಲು ಸೂಚಿಸಲಾಗಿದೆ.

English summary

Healthy Foods to Eat After Getting the Covid-19 Vaccine

Here we talking about Healthy Foods to Eat After Getting the Covid-19 Vaccine, read on
X
Desktop Bottom Promotion