For Quick Alerts
ALLOW NOTIFICATIONS  
For Daily Alerts

ಬಿಪಿ, ಹೃದ್ರೋಗ ಸಮಸ್ಯೆಯಿರುವವರಿಗೆ ಮೂಲಂಗಿ ರಾಮಬಾಣ!

|

ಮೂಲಂಗಿ ಅಂದರೆ, ಮೂಗು ಮುರಿಯುವವರೇ ಹೆಚ್ಚು. ಅದರ ರುಚಿ ಹಾಗೂ ವಾನಸೆಯಿಂದ ಅತೀ ಕಡಿಮೆ ಜನರ ಫೇವರೆಟ್‌ ಆಗಿದೆ ಈ ಮೂಲಂಗಿ. ಆದರೆ, ಇದರಲ್ಲಿರುವ ಪೋಷಕಾಂಶಗಳು, ಅದು ದೇಹಕ್ಕೆ ನೀಡುವ ಪ್ರಯೋಜನಗಳ ಬಗ್ಗೆ ನೀವು ಕೇಳಿದರೆ, ಅಚ್ಚರಿ ಪಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ಹೌದು, ಬಾಯಿಗೆ ಯಾವುದು ರುಚಿಯಾಗಿರುವುದಿಲ್ಲವೋ, ಅದು ಎಂದಿಗೂ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಬಾಯಿಗೆ ರುಚಿ ಎನಿಸುವ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವೇ ಹೆಚ್ಚು. ಅದೇ ಸಾಲಿಗೆ ಸೇರುತ್ತೆ ಈ ಮೂಲಂಗಿ. ಪೋಷಕಾಂಶಗಳಿಂದ ಸಮೃದ್ಧವಾಗರುವ ಮೂಲಂಗಿಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅದರಲ್ಲೂ ಚಳಿಗಾಲದಲ್ಲಿ ಇದರ ಸೇವನೆ ದೇಹವನ್ನು ಬೆಚ್ಚಗಿಡುತ್ತದೆ. ಇದೇ ರೀತಿ ಚಳಿಗಾಲದಲ್ಲಿ ಮೂಲಂಗಿ ಯಾವ ರೋಗಗಳಿಗೆ ಚಿಕಿತ್ಸೆ ನೀಡುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ.

ಚಳಿಗಾಲದಲ್ಲಿ ಮೂಲಂಗಿ ಸೇವನೆಯಿಂದ ಸಿಗುವ ಪ್ರಯೋಜನಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೂಲಂಗಿಯಲ್ಲಿರುವ ಪೋಷಕಾಂಶಗಳು:

ಮೂಲಂಗಿಯಲ್ಲಿರುವ ಪೋಷಕಾಂಶಗಳು:

ಚಳಿಗಾಲದಲ್ಲಿ ಬಿಳಿ ಮೂಲಂಗಿ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತದೆ. ಮೂಲಂಗಿಯನ್ನು ಸಲಾಡ್‌ಗಳಲ್ಲಿ ಮತ್ತು ತರಕಾರಿಯಾಗಿ ಬಳಸಲಾಗುತ್ತದೆ. ಇದರಲ್ಲಿ ಪ್ರೋಟೀನ್, ವಿಟಮಿನ್-ಎ, ವಿಟಮಿನ್-ಬಿ, ಸಿ, ಕಬ್ಬಿಣ, ಅಯೋಡಿನ್, ಕ್ಯಾಲ್ಸಿಯಂ, ಸಲ್ಫರ್, ಸೋಡಿಯಂ, ಮೆಗ್ನೀಸಿಯಮ್, ರಂಜಕ ಮತ್ತು ಕ್ಲೋರಿನ್ ಸಮೃದ್ಧವಾಗಿದೆ. ಇವೆಲ್ಲವೂ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.

ಚಳಿಗಾಲದಲ್ಲಿ ಮೂಲಂಗಿ ಸೇವನೆಯಿಂದ ಸಿಗುವ ಪ್ರಯೋಜನಗಳು:

ಚಳಿಗಾಲದಲ್ಲಿ ಮೂಲಂಗಿ ಸೇವನೆಯಿಂದ ಸಿಗುವ ಪ್ರಯೋಜನಗಳು:

ರಕ್ತದೊತ್ತಡ ನಿಯಂತ್ರಣ:

ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಮೂಲಂಗಿ ತುಂಬಾ ಸಹಕಾರಿ ಎಂಬುದು ಹಲವು ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಮೂಲಂಗಿಯಲ್ಲಿ ಪ್ರಬಲ ಆಂಟಿಆಕ್ಸಿಡೆಂಟ್‌ಗಳು ಮತ್ತು ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳು ಸಮೃದ್ಧವಾಗಿವೆ. ಈ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಅಥವಾ ಕಡಿಮೆ ರಕ್ತದೊತ್ತಡವನ್ನು ಸರಿಪಡಿಸಲು ಸಹಾಯ ಮಾಡುತ್ತವೆ.

ಆರೋಗ್ಯಕಾರಿ ಹೃದಯ:

ಆರೋಗ್ಯಕಾರಿ ಹೃದಯ:

ಚಳಿಗಾಲದಲ್ಲಿ ಮೂಲಂಗಿಯನ್ನು ಸೇವಿಸುವುದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿರುವ ಮೂಲಂಗಿಯು ಹೃದಯವನ್ನು ಆರೋಗ್ಯವಾಗಿಡಲು ಜೊತೆಗೆ ಹೃದ್ರೋಗ ಎದುರಾಗುವ ಅಪಾಯದ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತನಾಳಗಳ ಬಲಪಡಿಸುವಿಕೆ:

ರಕ್ತನಾಳಗಳ ಬಲಪಡಿಸುವಿಕೆ:

ಮೂಲಂಗಿ ರಕ್ತ ಪರಿಚಲನೆಯನ್ನು ಉತ್ತಮಗೊಳಿಸಲು ನೆರವಾಗುವ ನೈಸರ್ಗಿಕ ನೈಟ್ರೇಟ್‌ಗಳ ಉತ್ತಮ ಮೂಲವಾಗಿದೆ. ಜೊತೆಗೆ ಮೂಲಂಗಿಯಲ್ಲಿ ಉತ್ತಮ ಪ್ರಮಾಣದ ಕೊಲ್ಯಾಜೆನ್ ಎಂಬ ಪೋಷಕಾಂಶವಿದೆ. ಇದು ರಕ್ತನಾಳಗಳನ್ನು ಬಲಪಡಿಸಲು ನೆರವಾಗುತ್ತದೆ. ಈ ಮೂಲಕ ಅಥೆರೋಸ್ಕ್ಲೆರೋಸಿಸ್ ಎಂಬ ಸ್ಥಿತಿ ಎದುರಾಗುವುದರಿಂದ ರಕ್ಷಿಸುತ್ತದೆ.

ಉತ್ತಮ ಜೀರ್ಣಕ್ರಿಯೆ:

ಉತ್ತಮ ಜೀರ್ಣಕ್ರಿಯೆ:

ಮೂಲಂಗಿಯನ್ನು ನಿತ್ಯದ ಆಹಾರದಲ್ಲಿ ಸಾಲಾಡ್ ರೂಪದಲ್ಲಿ ಸೇವಿಸುತ್ತಾ ಬನ್ನಿ. ಈ ಮೂಲಕ ಜೀರ್ಣಾಂಗಗಳು ಉತ್ತಮವಾದ ಆರೋಗ್ಯದಲ್ಲಿರುತ್ತವೆ. ಆಮ್ಲೀಯತೆ, ಸ್ಥೂಲಕಾಯ, ವಾಕರಿಕೆ ಮೊದಲಾದ ತೊಂದರೆಗಳು ಎದುರಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ರೋಗನಿರೋಧಕ ಶಕ್ತಿ ವೃದ್ಧಿ:

ರೋಗನಿರೋಧಕ ಶಕ್ತಿ ವೃದ್ಧಿ:

ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಚಳಿಗಾಲದಲ್ಲಿ ಮೂಲಂಗಿಯನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಮೂಲಂಗಿಯಲ್ಲಿ ವಿಟಮಿನ್ ಎ, ಸಿ, ಬಿ6, ಪೊಟ್ಯಾಸಿಯಮ್ ಮತ್ತು ಇತರ ಖನಿಜಗಳಿವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯವಾಗುವ ಅಂಶಗಳಾಗಿವೆ.

ಶೀತ ಮತ್ತು ಕೆಮ್ಮಿಗೆ ಚಿಕಿತ್ಸೆ :

ಶೀತ ಮತ್ತು ಕೆಮ್ಮಿಗೆ ಚಿಕಿತ್ಸೆ :

ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮಿನ ಸಮಸ್ಯೆಯನ್ನು ಹೋಗಲಾಡಿಸಲು ಮೂಲಂಗಿ ಅತ್ಯುತ್ತಮ ಔಷಧಿಯಾಗಿದೆ. ಮೂಲಂಗಿಯಲ್ಲಿ ಶೀತವನ್ನು ತಡೆಯುವ ಗುಣವಿದ್ದು, ಇದು ಕೆಮ್ಮಿನ ಸಮಸ್ಯೆಯನ್ನು ನಿವಾರಿಸುತ್ತದೆ.

ಅಸಿಡಿಟಿಗೆ ರಾಮಬಾಣ:

ಅಸಿಡಿಟಿಗೆ ರಾಮಬಾಣ:

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆ ಈ ಅಸಿಡಿಟಿ. ನೀವು ಅಸಿಡಿಟಿಯಿಂದ ತೊಂದರೆಗೊಳಗಾಗಿದ್ದರೆ, ಹಸಿ ಮೂಲಂಗಿಯನ್ನು ಸೇವಿಸಿ. ಹಸಿ ಮೂಲಂಗಿಯಲ್ಲಿ ನಾರಿನಂಶ ಹೆಚ್ಚಿದ್ದು, ಇದು ಅಸಿಡಿಟಿ ಹೋಗಲಾಡಿಸಲು ಸಹಕಾರಿ.

English summary

Health Benefits of Eating Radish in Winter in Kannada

Here we talking about Health Benefits of Eating Radish in Winter in Kannada, read on
Story first published: Friday, December 3, 2021, 13:46 [IST]
X
Desktop Bottom Promotion