For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು, ಹೃದಯದ ಕಾಳಜಿಗೆ ಬೇಯಿಸಿದ ಕಡಲೆಕಾಯಿ ಆರೋಗ್ಯದ ಗಣಿಯಂತೆ

|

ಬಡವರ ಬಾದಾಮಿ ಎಂದೇ ಪ್ರಸಿದ್ಧವಾದ ಕಡಲೆಕಾಯಿ ಆರೋಗ್ಯದ ದೃಷ್ಟಿಯಿಂದ ನೋಡಿದರೆ ಖಂಡಿತವಾಗಿಯೂ ಬಡವರಿಗೆ ಮಾತ್ರವಲ್ಲ ಶ್ರೀಮಂತರೂ ಸೇವಿಸಲೇಬೇಕಾದ ಆರೋಗ್ಯದ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಆದರೂ, ಕಡಲೆಕಾಯಿಗೆ ಬಡವರ ಬಾದಾಮಿ ಎಂಬ ಹೆಸದಿದ್ದರೂ ಇದನ್ನು ಯಾವುದೇ ಅಂತಸ್ತಿನ ಬೇಧವಿಲ್ಲದೆ ಎಲ್ಲರೂ ಬಹಳ ಮೆಚ್ಚಿ ತಿನ್ನುವ ತಿಂಡಿಯಾಗಿದೆ.

Health Benefits of Eating Boiled Peanuts in Kannada

ಕಡಲೆಕಾಯಿಯನ್ನು ಹಲವಾರು ವಿಧಾನದಲ್ಲಿ ಅಂದರೆ, ಹುರಿದು, ಹಸಿ, ಬೇಯಿಸಿ, ಇದರಲ್ಲಿ ಥರಾವರಿ ತಿನಿಸುಗಳನ್ನು ತಯಾರಿಸಿ ಸೇವಿಸುತ್ತಾರೆ. ಆದರೆ ನಿಮಗೆ ಗೊತ್ತೆ ಈ ಎಲ್ಲಾ ವಿಧಾನಗಳಿಗಿಂತ ಕಡಲೆಕಾಯಿಯನ್ನು ಬೇಯಿಸಿ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆಯಂತೆ. ಹೌದು, ಹುರಿದ ಕಡಲೆ ಕಾಯಿಗಿಂತ ಬೇಯಿಸಿದ ಕಡಲೆಕಾಯಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೇಯಿಸಿದ ಕಡಲೆಕಾಯಿಯಿಂದ ದೇಹಕ್ಕೆ ಸಿಗುವ ಲಾಭಗಳೇನು ಹಾಗೂ ಬೇಯಿಸಿದ ಕಡಲೆ ಕಾಳು ತಿಂದ ನಂತರ ಏನು ಸೇವಿಸಲೇಬಾರದು ಎಂಬುದನ್ನು ಮುಂದೆ ವಿವರಿಸಿದ್ದೇವೆ....

1. ಕ್ಯಾಲರಿ ಎಷ್ಟಿದೆ?

1. ಕ್ಯಾಲರಿ ಎಷ್ಟಿದೆ?

ಬೇಯಿಸಿದ ಕಡಲೆಕಾಯಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಏಕೆ ಗೊತ್ತೆ, ಬೇಯಿಸಿದ ಶೇಂಗಾದಲ್ಲಿ ಶೇಕಡಾ 90 ರಿಂದ 100ರಷ್ಟು ಕ್ಯಾಲರಿ ಇದ್ದರೆ, ಹಸಿಯಾದ ಕಡಲೆ ಕಾಯಿಯಲ್ಲಿ 120ರಿಂದ 150ರಷ್ಟು ಕ್ಯಾಲರಿ ಇರುತ್ತದೆ, ಅದಕ್ಕೆ ಬೇಯಿಸಿದ ಕಡಲೆಕಾಯಿ ಒಳ್ಳೆಯದು.

2. ಹೃದಯದ ಆರೋಗ್ಯಕ್ಕೆ ಉತ್ತಮ

2. ಹೃದಯದ ಆರೋಗ್ಯಕ್ಕೆ ಉತ್ತಮ

ಬೇಯಿಸಿದ ಕಡಲೆ ಕಾಯಿಗಳಲ್ಲಿ ಫ್ಲೆಮಿನಾಯ್ಡ್ ಮತ್ತು ಫಾಲಿ ಫಿನಾಯ್ಲ್ಸ್ ಎನ್ನುವ ಅಂಶ ಹೆಚ್ಚಿನ ಮಟ್ಟದಲ್ಲಿದೆ. ಆದ ಕಾರಣ ಇದು ಹೃದಯದ ಆರೋಗ್ಯಕ್ಕೆ ಉತ್ತಮ.

ಜೀರ್ಣಕ್ರಿಯೆಗೆ ಉತ್ತಮ ಕಡಲೆ ಕಾಯಿಯಲ್ಲಿ ಫೈಬರ್ ಅಂಶ ಇದ್ದು, ಇದು ನಾವು ಸೇವಿಸಿದ ಆಹಾರವನ್ನು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ ಹಾಗೂ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ.

3. ಗರ್ಭಿಣಿ ಆಗ ಬಯಸುವವರು ಹಾಗೂ ಗರ್ಭಿಣಿಯರಿಗೆ

3. ಗರ್ಭಿಣಿ ಆಗ ಬಯಸುವವರು ಹಾಗೂ ಗರ್ಭಿಣಿಯರಿಗೆ

ಗರ್ಭಿಣಿ ಆಗಲು ಬಯಸುವವರು ಅಥವಾ ಗರ್ಭಿಣಿಯರಿಗೆ ಅಗತ್ಯವಾದ ಫೋಲಿಕ್‌ ಅಂಶವನ್ನು ಕಡಲೆಕಾಯಿ ಹೇರಳವಾಗಿ ಹೊಂದಿದೆ. ಗರ್ಭ ಧರಿಸುವ ಮುನ್ನ ಕಡಲೆಕಾಯಿಸೇವನೆಯಿಂದ ತಾಯಿಯ ದೇಹ ಇನ್ನಷ್ಟು ಆರೋಗ್ಯವಂತ ಗೊಳಿಸುವಲ್ಲಿ ಇದು ಪೂರಕವಾಗಿದೆ. ಈ ಮೂಲಕ ಹುಟ್ಟುವ ಮಗುವಿನಲ್ಲಿ ನರ ಸಂಬಂಧಿತ ದೋಷಗಳಿರುವ ಸಾಧ್ಯತೆಯನ್ನು ಶೇಕಡ 70ಕ್ಕೂ ಹೆಚ್ಚು ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.

4. ದಿಢೀರ್‌ ಶಕ್ತಿ ತುಂಬುತ್ತದೆ

4. ದಿಢೀರ್‌ ಶಕ್ತಿ ತುಂಬುತ್ತದೆ

ಅರ್ಧ ಕಪ್‌ ಕಡಲೆಕಾಯಿಯಲ್ಲಿ 286 ಕ್ಯಾಲೋರಿ, 12 ಗ್ರಾಂ ಪ್ರೋಟೀನ್‌, 2 ಗ್ರಾಂ ನೈಸರ್ಗಿಕ ಸಕ್ಕರೆ ಅಂಶ ಹಾಗೂ ಯಾವುದೇ ರೀತಿಯ ಕೊಬ್ಬಿನಾಂಶ ಇರುವುದಿಲ್ಲ. ಆದ್ದರಿಂದ ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ನಡುವೆ ಹಸಿವಾದರೆ ಅಥವಾ ಸಂಜೆಯ ಸ್ನಾಕ್ಸ್‌ಗೆ ಬೇಯಿಸಿದ ಕಡಲೆಕಾಯಿ ಅತ್ಯುತ್ತಮ ಆಹಾರವಾಗಿದೆ. ಇದು ಮೆದುಳು ಹಾಗೂ ಮೂಳೆಗಳಿಗೆ ಶಖ್ತಿ ತುಂಬುತ್ತದೆ ಹಾಗೂ ಹಸಿವನ್ನು ಮುಂದೂಡುತ್ತದೆ.

5. ನಿಶ್ಯಕ್ತಿ ಮತ್ತು ರಕ್ತಹೀನತೆಗೆ ಉತ್ತಮ

5. ನಿಶ್ಯಕ್ತಿ ಮತ್ತು ರಕ್ತಹೀನತೆಗೆ ಉತ್ತಮ

ಬೇಯಿಸಿದ ಕಡಲೆ ಕಾಯಿಯಲ್ಲಿ ಕಬ್ಬಿಣದ ಅಂಶ ಹೆಚ್ಚು ಇರುತ್ತದೆ. ಇದು ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ ನಿಶ್ಶಕ್ತಿಯನ್ನು ಸಹ ದೂರ ಮಾಡುತ್ತದೆ.

6. ಕೂದಲ ಬೆಳವಣಿಗೆಗೆ

6. ಕೂದಲ ಬೆಳವಣಿಗೆಗೆ

ಕಡಲೆಕಾಯಿಯಲ್ಲಿ ಅಮೀನೋ ಆಸಿಡ್‌ ಹಾಗೂ ಪ್ರೋಟೀನ್‌ ಅಂಶ ಹೇರಳವಾಗಿ ಇರುವುದದರಿಂದ ಇದು ಕೂದಲಿಗೆ ಅತ್ಯುತ್ತಮವಾದ ಪೋಷಕಾಂಶಗಳನ್ನು ಪೂರೈಸುತ್ತದೆ.

7. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ

7. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ

ಕಡಲೆಕಾಯಿಯಲ್ಲಿರುವ ಮ್ಯಾಂಗನೀಸ್ ನಾವು ಸೇವಿಸುವ ಆಹಾರದಲ್ಲಿ ಲಭ್ಯವಿರುವ ಕ್ಯಾಲ್ಷಿಯಂ ಅನ್ನು ಹೀರಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳಿಸಿ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿಡಲು ನೆರವಾಗುತ್ತದೆ.

8. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

8. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಕಡಲೆಕಾಯಿಯ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ಮೂಲಕ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಬೇಯಿಸಿದ ಕಡಲೆಕಾಯಿ ಸೇವನೆ ಪರಿಣಾಮಕಾರಿ.

9. ಪೈಲ್ಸ್ ಸಮಸ್ಯೆಗೆ ಪರಿಹಾರ

9. ಪೈಲ್ಸ್ ಸಮಸ್ಯೆಗೆ ಪರಿಹಾರ

ಬೇಯಿಸಿದ ಕಡಲೆ ಕಾಯಿಯಲ್ಲಿ ನಾರಿನಂಶ ಹೆಚ್ಚು ಇರುತ್ತದೆ ಹಾಗಾಗಿ ಇದನ್ನು ಸೇವಿಸುವುದರಿಂದ ಪೈಲ್ಸ್ ಸಮಸ್ಯೆ ಇಂದ ಪರಿಹಾರ ದೊರೆಯುತ್ತದೆ.

10. ಬೇಯಿಸಿದ ಕಡಲೆಕಾಯಿ ಸೇವಿಸಿದ ನಂತರ ಅಪ್ಪಿತಪ್ಪಿಯೂ ಇದನ್ನು ಸೇವಿಸಬೇಡಿ

10. ಬೇಯಿಸಿದ ಕಡಲೆಕಾಯಿ ಸೇವಿಸಿದ ನಂತರ ಅಪ್ಪಿತಪ್ಪಿಯೂ ಇದನ್ನು ಸೇವಿಸಬೇಡಿ

  • ಬೇಯಿಸಿದ ಕಡಲೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ನೀರು ಕುಡಿಯಬೇಡಿ.
  • ಬೇಯಿಸಿದ ಕಡಲೆ ಕಾಯಿಯಲ್ಲಿ ಹೆಚ್ಚಿನ ಕೊಬ್ಬಿನಾಂಶ ಇರುವುದರಿಂದ ಕಡಲೆಕಾಯಿ ತಿಂದ ನಂತರ ನೀರು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಒಂದೇ ಬಾರಿಗೆ ಕೊಬ್ಬಿನಾಂಶ ಇನ್ನೂ ಹೆಚ್ಚಾಗುತ್ತದೆ.

    11. ಕಡಲೆಕಾಯಿ ಉಷ್ಣಕಾರಕ

    11. ಕಡಲೆಕಾಯಿ ಉಷ್ಣಕಾರಕ

    ಕಡಲೆಕಾಯಿ ಮೂಲತಃ ಉಷ್ಣಕಾರಕವಾಗಿದ್ದು ಇದನ್ನು ತಿಂದ ಮೇಲೆ ನೀರು ಕುಡಿದರೆ ತಂಪಾಗುತ್ತದೆ. ಆದ್ದರಿಂದ ಕಡಲೆ ಹಾಗೂ ನೀರು ಎರಡೂ ವಿರುದ್ಧವಾದ ಗುಣಗಳನ್ನು ಹೊಂದಿರುವುದರಿಂದ ಅಡ್ಡ ಪರಿಣಾಮಗಳಾದ ಶೀತ ಮತ್ತು ಕೆಮ್ಮು ಉಂಟಾಗಬಹುದು.

    12. ಜೀರ್ಣಕ್ರಿಯೆ ಆಗುವುದಿಲ್ಲ

    12. ಜೀರ್ಣಕ್ರಿಯೆ ಆಗುವುದಿಲ್ಲ

    ಕಡಲೆಕಾಯಿ ತಿಂದ ನಂತರ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಆಗುವುದಿಲ್ಲ ಅಥವಾ ತಡವಾಗುತ್ತದೆ. ಏಕೆಂದರೆ ಕಡಲೆಕಾಯಿ ಜೀರ್ಣವಾಗಲು ಕನಿಷ್ಠ 15 ರಿಂದ 20 ನಿಮಿಷ ಬೇಕು, ಆದ್ದರಿಂದ ಕಡಲೆಕಾಯಿಯನ್ನು ತಿಂದು ನಂತರ 15 ರಿಂದ 20 ನಿಮಿಷ ಆದ ನಂತರ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು.

English summary

Health Benefits of Eating Boiled Peanuts in Kannada

Here we are discussing about Health Benefits of Eating Boiled Peanuts in Kannada. Boiled peanuts are popular in some places where peanuts are common. Fully mature peanuts do not make good quality boiled peanuts. Read more.
Story first published: Wednesday, September 16, 2020, 12:43 [IST]
X
Desktop Bottom Promotion