For Quick Alerts
ALLOW NOTIFICATIONS  
For Daily Alerts

ಹೆಚ್ಚು ಕಾಲ ಫ್ರೆಶ್‌ ಆಗಿರುತ್ತೆ ಎಂದು ಈ ವಸ್ತುಗಳನ್ನು ಫ್ರಿಜ್‌ನಲ್ಲಿಟ್ಟರೆ, ಅಪಾಯ ಕಟ್ಟಿಟ್ಟ ಬುತ್ತಿ!

|

ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿದೆ. ಸಮಯಕ್ಕೆ ಸರಿಯಾಗಿ ತಿನ್ನದೇ, ಕುಡಿಯದೇ, ಸರಿಯಾಗಿ ನಿದ್ದೆ ಮಾಡದೇ ನಮ್ಮ ಆರೋಗ್ಯವನ್ನು ನಾವೇ ಕೆಡಿಸಿಕೊಳ್ಳುತ್ತಿದ್ದೇವೆ. ಆಹಾರದ ಹೆಸರಲ್ಲಿ ಒಂದು ವಾರ ಫ್ರಿಡ್ಜ್ ನಲ್ಲಿಟ್ಟ ತಂಗಳನ್ನೇ ಮತ್ತೆ ಬಿಸಿ ಮಾಡಿ, ಬಿಡುವಾದಾಗ ಸೇವಿಸುತ್ತೇವೆ. ಅದಕ್ಕೆ ಫ್ರಿಡ್ಜ್‌ಗೆ ತಂಗಳು ಪೆಟ್ಟಿಗೆ ಎಂದು ಹೆಸರಿರೋದು.

ಫ್ರಿಜ್ ಜೀವನದ ಪ್ರಮುಖ ಭಾಗವಾಗಿದ್ದು, ಆಹಾರವನ್ನು ಹಲವು ದಿನಗಳವರೆಗೆ ತಾಜಾವಾಗಿರಿಸುತ್ತದೆ. ನಾವು ಸಾಮಾನ್ಯವಾಗಿ ಒಂದು ವಾರಕ್ಕಾಗುವಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಒಟ್ಟಿಗೆ ಖರೀದಿಸಿ, ಫ್ರಿಡ್ಜ್‌ನಲ್ಲಿಡುತ್ತೇವೆ. ಆದರೆ ಆಹಾರವನ್ನು ತಾಜಾವಾಗಿಡುವ ಫ್ರಿಡ್ಜ್ ಎಲ್ಲವನ್ನೂ ಫ್ರೆಶ್‌ ಆಗಿ ಇಡಲಾರದು ಎಂಬುದು ನಿಮಗೆ ತಿಳಿದಿದೆಯೇ?

ಹೌದು, ಫ್ರಿಡ್ಜ್ ನಲ್ಲಿಟ್ಟರೆ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗುವಂತಹ ಕೆಲವು ಆಹಾರಗಳೂ ಇವೆ. ಹಾಗಾದರೆ, ಫ್ರಿಡ್ಜ್ ನಲ್ಲಿ ಇಡಬಾರದ ಆಹಾರಗಳಾವುವು? ಅದರಿಂದ ಏನಾಗುವುದು ಎಂಬುದನ್ನು ಇಲ್ಲಿ ನೋಡೋಣ.

ಯಾವ ವಸ್ತುಗಳನ್ನು ಫ್ರಿಜ್‌ನಲ್ಲಿ ಇಡಬಾರದು? ಅದರ ಅಡ್ಡಪರಿಣಾಮಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಫ್ರಿಡ್ಜ್ ನಲ್ಲಿಟ್ಟ ಆಲೂಗಡ್ಡೆ ಸಕ್ಕರೆಯನ್ನು ಹೆಚ್ಚಿಸಬಹುದು:

ಫ್ರಿಡ್ಜ್ ನಲ್ಲಿಟ್ಟ ಆಲೂಗಡ್ಡೆ ಸಕ್ಕರೆಯನ್ನು ಹೆಚ್ಚಿಸಬಹುದು:

ಕೆಲವರು ಮಾರುಕಟ್ಟೆಯಿಂದ ತಂದ ಹಣ್ಣು ತರಕಾರಿಗಳನ್ನೆಲ್ಲ ಫ್ರಿಡ್ಜ್ ನಲ್ಲಿ ಶೇಖರಿಸಿಡುತ್ತಾರೆ. ಅವುಗಳಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಕೂಡ ಸೇರಿರುತ್ತವೆ. ಆದರೆ ಆಲೂಗಡ್ಡೆಯನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದರಿಂದ ಆಲೂಗೆಡ್ಡೆ ಪಿಷ್ಟವು ಸಕ್ಕರೆಯಾಗಿ ಬದಲಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ. ಇದು ಮಧುಮೇಹಿಗಳಿಗೆ ಮಾರಕವಾಗಬಹುದು. ಆಲೂಗಡ್ಡೆಯನ್ನು ಫ್ರಿಜ್ ನಲ್ಲಿ ಇಡುವ ಬದಲು ಪೇಪರ್ ಬ್ಯಾಗ್ ನಲ್ಲಿ ಹಾಕಿ ತೆರೆದ ಜಾಗದಲ್ಲಿ ಇಡಿ.

ಈರುಳ್ಳಿ ವಾಸನೆ ಎಲ್ಲೆಡೆ ಹರಬಹುದು:

ಈರುಳ್ಳಿ ವಾಸನೆ ಎಲ್ಲೆಡೆ ಹರಬಹುದು:

ಇನ್ನೂ ಕೆಲವರು ಈರುಳ್ಳಿಯನ್ನೂ ಆಲೂಗಡ್ಡೆಯೊಂದಿಗೆ ಫ್ರಿಜ್‌ನಲ್ಲಿಡುವವರಿದ್ದಾರೆ. ಆದರೆ ಈರುಳ್ಳಿಯನ್ನು ಇತರ ತರಕಾರಿಯೊಂದಿಗೆ ಫ್ರಿಜ್‌ನಲ್ಲಿಟ್ಟರೆ, ಅದರ ವಾಸನೆಯು ನಿಮ್ಮ ಉಳಿದ ಹಣ್ಣುಗಳು ಮತ್ತು ತರಕಾರಿಗಳಿಗೆ ಹರಡುತ್ತದೆ. ಅದಕ್ಕಾಗಿಯೇ ಈರುಳ್ಳಿ ಇಡಲು ಬೇರೆಯೇ ಕಬೋರ್ಡ್‌ ಇತ್ತೀಚಿನ ಫ್ರಿಜ್‌ಗಳಲ್ಲಿ ನೀಡುತ್ತಿರುವುದು. ಅದರಲ್ಲಿ ಇಡಿ ಅಥವಾ ಹೊರಗೆ ತೆರೆದ ಜಾಗದಲ್ಲಿ ಇಡಿ. ಇದರಿಂದ ಹೆಚ್ಚು ದಿನ ಈರುಳ್ಳಿ ಫ್ರೆಶ್‌ ಆಗಿ ಉಳಿಯುವುದು.

ಫ್ರಿಜ್‌ನಲ್ಲಿ ಟೊಮೊಟೊ ಇಡುವವರು ಇತ್ತ ನೋಡಿ:

ಫ್ರಿಜ್‌ನಲ್ಲಿ ಟೊಮೊಟೊ ಇಡುವವರು ಇತ್ತ ನೋಡಿ:

ಹೆಚ್ಚಿನವರು ಮನೆಗಳಲ್ಲಿ ಹೆಚ್ಚು ಕಾಲ ಬಳಕೆಗೆ ಬರಲು ಟೊಮೆಟೊಗಳನ್ನು ಫ್ರಿಜ್ನಲ್ಲಿ ಇಡುತ್ತಾರೆ. ಆದರೆ, ಫ್ರಿಡ್ಜ್ ನ ತಣ್ಣನೆಯ ಗಾಳಿಯಿಂದ ಟೊಮೇಟೊ ಬೇಗನೆ ಕೊಳೆಯಲು ಪ್ರಾರಂಭವಾಗುತ್ತದೆ. ನೋಡಲು ತಾಜಾವಾಗಿ ಕಾಣುವ ಟೊಮೇಟೊ ಶೀತದಿಂದ ಹಾಳಾಗುತ್ತದೆ , ಅಡುಗೆ ತಯಾರಿಸುವಾಗ ಈ ಕೆಟ್ಟು ಹೋದ ಟೊಮೊಟೋಗಳನ್ನೇ ಬಳಸುತ್ತೀರಿ. ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.

ಫ್ರಿಡ್ಜ್ ನಲ್ಲಿ ಬಾಳೆಹಣ್ಣು ಇಡುತ್ತೀರಾ?:

ಫ್ರಿಡ್ಜ್ ನಲ್ಲಿ ಬಾಳೆಹಣ್ಣು ಇಡುತ್ತೀರಾ?:

ಕೆಲವರು ಫ್ರಿಡ್ಜ್‌ನಲ್ಲಿ ಇತರ ಹಣ್ಣುಗಳೊಂದಿಗೆ ಬಾಳೆಹಣ್ಣುಗಳನ್ನು ಸಂಗ್ರಹಿಸುತ್ತಾರೆ. ಆದರೆ, ಆಹಾರವನ್ನು ತಾಜಾವಾಗಿಡುವ ಫ್ರಿಡ್ಜ್ ಬಾಳೆಹಣ್ಣನ್ನು ಬೇಗನೆ ಕೆಡಿಸುತ್ತದೆ. ಬಾಳೆಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಅದು ಬೇಗನೆ ಬಾಡಿ, ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ಬಾಳೆಹಣ್ಣನ್ನು ಫ್ರಿಜ್‌ನಲ್ಲಿಡುವ ತಪ್ಪು ಕೆಲಸ ಮಾಡಬೇಡಿ.

ಜೇನು ತುಪ್ಪವನ್ನೂ ಫ್ರಿಡ್ಜ್‌ನಲ್ಲಿ ಇಡಬೇಡಿ:

ಜೇನು ತುಪ್ಪವನ್ನೂ ಫ್ರಿಡ್ಜ್‌ನಲ್ಲಿ ಇಡಬೇಡಿ:

ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಜೇನುತುಪ್ಪವು ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಪರಿಣಾಮಕಾರಿಯಾಗಿದೆ. ಕೆಲವರು ಜೇನುತುಪ್ಪ ಕೆಡುತ್ತದೆ ಎಂಬ ಭಯದಿಂದ ಫ್ರಿಡ್ಜ್ ಲ್ಲಿಡುತ್ತಾರೆ. ಜೇನುತುಪ್ಪ ಫ್ರಿಡ್ಜ್ ನಲ್ಲಿ ತಾಜಾ ಆಗಿ ಉಳಿಯುತ್ತದೆ ಎಂಬುದು ಅವರ ನಂಬಿಕೆ. ಆದರೆ ಇದನ್ನು ಮಾಡಬಾರದು ಏಕೆಂದರೆ ಫ್ರಿಜ್‌ನಲ್ಲಿ ಇಡುವುದರಿಂದ ಜೇನುತುಪ್ಪದಲ್ಲಿ ಗಂಟು ರೂಪುಗೊಳ್ಳಲು ಪ್ರಾರಂಭಿಸುತ್ತವೆ, ಅದು ಅದರ ರುಚಿಯನ್ನು ಹಾಳುಮಾಡುತ್ತದೆ, ಜೊತೆಗೆ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.

English summary

Fresh Foods Not to keep in Fridge; Know it's Harmful effects on Health in Kannada

Here we talking about Fresh Foods Not to keep in Fridge; Know it's Harmful effects on health in kannada, read on
Story first published: Saturday, December 4, 2021, 13:22 [IST]
X
Desktop Bottom Promotion