For Quick Alerts
ALLOW NOTIFICATIONS  
For Daily Alerts

ಈ ಆಹಾರಗಳ ಸೇವನೆಗೂ ಮುನ್ನ ಇರಲಿ ಎಚ್ಚರ!

|

ಫುಡ್ ಪಾಯ್ಸನಿಂಗ್ ಸಮಸ್ಯೆ ಎನ್ನುವುದು ಅತ್ಯಂತ ಸಾಮಾನ್ಯ ಆರೋಗ್ಯ ಸಮಸ್ಯೆ. ನಾವು ಸೇವಿಸುವ ಆಹಾರಗಳು ಕೆಲವೊಮ್ಮೆ ನಮ್ಮ ಆರೋಗ್ಯಕ್ಕೆ ವಿರುದ್ಧ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತದೆ. ಫುಡ್ ಪಾಯಿಸೋನಿಂಗ್ ಹಲವಾರು ಕಾರಣಗಳಿಂದ ಉಂಟಾಗುತ್ತದೆ.

These Foods Can Cause Food Poisoning

ನಮಗೆ ಗೊತ್ತಿಲ್ಲದೆ ಆಹಾರ ಪದಾರ್ಥಗಳನ್ನು ಸರಿಯಾಗಿ ಮುಚ್ಚದೆ ತೆರೆದಿಟ್ಟರೆ ಮತ್ತು ಅಂತಹ ಆಹಾರದ ಮೇಲೆ ಜಿರಳೆ, ಪಲ್ಲಿ, ಇಲಿಗಳು ಇತ್ಯಾದಿ ಕ್ರಿಮಿ ಕೀಟಗಳು ಮಲ ಮೂತ್ರ ವಿಸರ್ಜನೆ ಮಾಡಿ ಅದು ನಮ್ಮ ಗಮನಕ್ಕೆ ಬಾರದೆ ಮತ್ತು ನಾವು ಅದೇ ಆಹಾರವನ್ನು ಸರಿಯಾಗಿ ತೊಳೆಯದೆ ಸೇವಿಸುವುದರಿಂದ ವಿಪರೀತವಾಗಿ ವಾಂತಿ, ಬೇಧಿ, ತಲೆ ಸುತ್ತು, ದೇಹದಲ್ಲಿ ನಿರ್ಜಲೀಕರಣ ಇತ್ಯಾದಿ ಸಮಸ್ಯೆಗಳು ಕಂಡು ಬರುತ್ತವೆ. ವೈದ್ಯರ ಭಾಷೆಯಲ್ಲಿ ಇದನ್ನು ಫುಡ್ ಪಾಯಿಸೋನಿಂಗ್ ಎಂದು ಕರೆಯುತ್ತಾರೆ.

ಮಾಂಸಾಹಾರದ ವಿಚಾರದಲ್ಲೂ ಶುದ್ಧತೆ ಬಹಳ ಮುಖ್ಯ. ಯಾವುದೇ ಮಾಂಸಾಹಾರವನ್ನು (ಮೊಟ್ಟೆಯ ಸಮೇತ) ಬೇಯಿಸದೆ ಹಸಿಯಾಗಿ ತಿನ್ನಲೇಬಾರದು. ಮಾಂಸಾಹಾರವೇ ಹಾಗೆ. ತಮ್ಮಲ್ಲಿ ಸಾಕಷ್ಟು ವೈರಾಣುಗಳು ಮತ್ತು ಸೂಕ್ಷ್ಮ ರೋಗಾಣುಗಳನ್ನು ಹೊಂದಿರುತ್ತವೆ. ಬೇಯಿಸದೆ ತಿನ್ನುವುದರಿಂದ ಅಥವಾ ಅರ್ಧಂಬರ್ಧ ಬೇಯಿಸಿ ತಿನ್ನುವುದರಿಂದ ಸೂಕ್ಶ್ಮಾಣುಗಳಿಗೆ ನಮ್ಮ ದೇಹದಲ್ಲಿ ಹೆಚ್ಚು ಸಂತತಿಯಾಗಲು ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ.

ಈ ಕೆಳಗಿನ ಕೆಲವೊಂದು ಆಹಾರಗಳು ಸರಿಯಾದ ಶುದ್ಧತೆ ಇಲ್ಲದಿದ್ದರೆ ಅಥವಾ ಕಡಿಮೆ ತಾಪಮಾನದಲ್ಲಿ ಬೆಂದು ತಯಾರಾದರೆ ಫುಡ್ ಪಾಯ್ಸನಿಂಗ್ ಗೆ ಕಾರಣವಾಗುತ್ತವೆ ಎಂದು ಆಹಾರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸಾಲ್ಮೋನೆಲ್ಲಾ ಸೋಂಕಿತ ಮೊಟ್ಟೆ

ಸಾಲ್ಮೋನೆಲ್ಲಾ ಸೋಂಕಿತ ಮೊಟ್ಟೆ

ಸಾಮಾನ್ಯವಾಗಿ ಮೊಟ್ಟೆ ಹಲವರ ಪ್ರಿಯವಾದ ಆಹಾರ. ಬೆಳಗಿನ ಉಪಹಾರಕ್ಕೆ ಒಂದೊಂದು ಮೊಟ್ಟೆ ಸೇವಿಸುವ ಅಭ್ಯಾಸ ಇಟ್ಟುಕೊಂಡಿರುವ ಮಂದಿ ಇದ್ದಾರೆ. ತಾವು ಬಳಸುವ ಹಲವಾರು ಅಡುಗೆ ಪದಾರ್ಥಗಳಲ್ಲಿ ಮೊಟ್ಟೆಗಳ ಬಳಕೆ ನಿರಂತವಾಗಿ ಮಾಡುತ್ತಾರೆ. ಆದರೆ ಅವರಿಗೆ ಇದೊಂದು ಶಾಕಿಂಗ್ ಸುದ್ದಿ ಎನಿಸಬಹುದು. ಕೆಲವೊಮ್ಮೆ ಮೊಟ್ಟೆಯನ್ನು ಸರಿಯಾಗಿ ಬೇಯಿಸದೇ ಇದ್ದರೆ ಮೊಟ್ಟೆಯಲ್ಲಿನ ಸೋಂಕು ಮನುಷ್ಯರಿಗೆ ಹಬ್ಬುವ ಸಾಧ್ಯತೆ ಇರುತ್ತದೆ. ಇದರಲ್ಲಿ ಸಾಧಾರಣವಾಗಿ ಸಾಲ್ಮೋನೆಲ್ಲಾ ಸೋಂಕು ಮೊಟ್ಟೆ ಪ್ರಿಯರಿಗೆ ಫುಡ್ ಪಾಯಿಸೋನಿಂಗ್ ಉಂಟು ಮಾಡುತ್ತದೆ ಎಂದು ಹೇಳುತ್ತಾರೆ.

 ರೊಟ್ಟಿಸ್ಸೆರಿ ಚಿಕನ್

ರೊಟ್ಟಿಸ್ಸೆರಿ ಚಿಕನ್

ನೀವು ಗ್ರೋಸರಿ ಸ್ಟೋರ್ ನಿಂದ ತಂದಂತಹ ರೊಟ್ಟಿಸ್ಸೆರಿ ಚಿಕನ್ ರುಚಿಕರವಾದ ಆಹಾರ ಎನಿಸುತ್ತದೆ. ಆದರೆ ನೀವು ಬಹಳ ಬೇಗನೆ ಅದು ಬಿಸಿ ಇರುವಾಗಲೇ ತಿಂದರೆ ಮಾತ್ರ. ಆದರೆ ಕೆಲವೊಂದು ಬಾರಿ ಒಂದೆರಡು ಗಂಟೆಗಳು ಬಿಟ್ಟು ತಿನ್ನಲು ಹೋದರೆ, ಅದರ ಮೇಲೆ ಬ್ಯಾಕ್ಟೀರಿಯಾಗಳು ಹೆಚ್ಚು ಅಭಿವೃದ್ಧಿ ಆಗುವ ಸಾಧ್ಯತೆ ಇರುತ್ತದೆ. ಕೇವಲ ಅಂಗಡಿಗಳಲ್ಲಿ ಮಾತ್ರವಲ್ಲ. ನಿಮ್ಮ ಮನೆಗಳಲ್ಲಿ ಸಹ ನೀವು ಚಿಕನ್ ರೋಸ್ಟ್ ಮಾಡಲು ಹೊರಟಾಗ ಇದೇ ಸಮಸ್ಯೆ ಆಗುತ್ತದೆ. ಆದ್ದರಿಂದ ಯಾವುದೇ ಮಾಂಸಾಹಾರವನ್ನು ಬೇಯಿಸದೆ ಅಥವಾ ಅರ್ಧಂಬರ್ಧ ಬೇಯಿಸಿ ತಿನ್ನಬಾರದು.

ಚಿಕನ್ ಲಿವರ್

ಚಿಕನ್ ಲಿವರ್

ಕೆಲವರಿಗಂತೂ ಚಿಕನ್ ಲಿವರ್ ಎಂದರೆ ಪಂಚ ಪ್ರಾಣ. ಆದರೆ ಒಂದು ವಿಚಾರವನ್ನು ಅವರು ನೆನಪಿಟ್ಟುಕೊಳ್ಳಲೇಬೇಕು. ಚಿಕನ್ ನ ಲಿವರ್ ಭಾಗದಲ್ಲಿ ಬಹಳಷ್ಟು ಬ್ಯಾಕ್ಟೀರಿಯಾಗಳು ಶೇಖರಣೆಗೊಂಡು ತಮ್ಮ ಸಂತತಿಯಲ್ಲಿ ಅಭಿವೃದ್ಧಿ ಆಗಿರುತ್ತವೆ. ಚಿಕನ್ ಪ್ರಿಯರು ಲಿವರ್ ಭಾಗವನ್ನು ಬಿಟ್ಟು ಉಳಿದ ಭಾಗವನ್ನು ಚೆನ್ನಾಗಿ ತೊಳೆದು ಬೇಯಿಸಿ ತಿನ್ನಬಹುದು. ಲಿವರ್ ಭಾಗದಲ್ಲಿನ ಬ್ಯಾಕ್ಟೀರಿಯಗಳು ಫುಡ್ ಪಾಯಿಸೋನಿಂಗ್ ಉಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಬರ್ಗರ್

ಬರ್ಗರ್

ಇತ್ತೀಚಿಗಂತೂ ಪಿಜ್ಜಾ ಬರ್ಗರ್ ಗಳ ಅಂಗಡಿಗಳು ಎಲ್ಲೆಂದರಲ್ಲಿ ತಲೆಯೆತ್ತುತ್ತಿವೆ. ಪಿಜ್ಜಾ ಬರ್ಗರ್ ತಿನ್ನುವವರು ಸಹ ಹೆಚ್ಚಾಗುತ್ತಿದ್ದಾರೆ. ಹಲವಾರು ಕಡೆ ವೆಜ್ ಮತ್ತು ನಾನ್ - ವೆಜ್ ಪಿಜ್ಜಾ ಬರ್ಗರ್ ತಯಾರು ಮಾಡುತ್ತಾರೆ. ಮಾಂಸ ಪ್ರಿಯರು ನಾನ್ - ವೆಜ್ ಬರ್ಗರ್ ಆಯ್ಕೆ ಮಾಡಿಕೊಳ್ಳುತ್ತಾರೆ. ಆಹಾರ ತಜ್ಞರು ಹೇಳುವ ಪ್ರಕಾರ ಕೆಲವೊಂದು ಬಾರಿ ನಾನ್ - ವೆಜ್ ಪಿಜ್ಜಾ ಬರ್ಗರ್ ಗಳು ಆರೋಗ್ಯಕ್ಕೆ ಸ್ವಲ್ಪ ಹಾನಿಕರ. ಕೆಲವೊಂದು ಬಾರಿ ಫುಡ್ ಪಾಯಿಸೋನಿಂಗ್ ಉಂಟು ಮಾಡುವುದರಲ್ಲಿ ಈ ರೀತಿಯ ಆಹಾರಗಳು ಸೇರಿರುತ್ತವೆ ಎಂದು ಹೇಳುತ್ತಾರೆ.

ಮೀನು

ಮೀನು

ಸಾಮಾನ್ಯವಾಗಿ ಮೀನುಗಳ ವಾಸನೆ ಇತರ ಮಾಂಸಹಾರಿಗಳಿಗೆ ಹೋಲಿಸಿದರೆ ದಟ್ಟವಾಗಿರುತ್ತದೆ. ಮೀನಿನ ಸೇವನೆಯನ್ನು ಹೆಚ್ಚು ಪ್ರೀತಿಸುವವರಿಗೆ ಮೀನು ಕೊಳೆತು ಹೋಗಿರುವ ಬಗ್ಗೆ ಕೇವಲ ವಾಸನೆಯಲ್ಲಿ ಗೊತ್ತಾಗುತ್ತದೆ.

ಕೆಲವೊಮ್ಮೆ ಬೇಯಿಸುವ ಮುಂಚೆ ಹಸಿ ಮೀನುಗಳನ್ನು ಸರಿಯಾದ ಪ್ರಕಾರದಲ್ಲಿ ಶೇಖರಣೆ ಮಾಡದೆ ಇದ್ದರೆ ವಿಷಕಾರಿ ಅಂಶವಾಗಿ ಬದಲಾಗುವ ಸಾಧ್ಯತೆ ಇರುತ್ತದೆ ಎಂದು ಹೇಳುತ್ತಾರೆ ಮತ್ತು ಈ ರೀತಿಯ ಮೀನುಗಳನ್ನು ಬೇಯಿಸಿ ತಿನ್ನುವುದರಿಂದ ಫುಡ್ ಪಾಯಿಸೋನಿಂಗ್ ಉಂಟಾಗುತ್ತದೆ. ಬೇಯಿಸಿದ ನಂತರವೂ ಮೀನಿನ ರುಚಿ ಸುಟ್ಟು ಕರಕಲಾಗಿರುವ ರೀತಿ ಅನುಭವವಾಗುತ್ತದೆ. ಇಂತಹ ಮೀನಿನ ಆಹಾರವನ್ನು ತಿನ್ನುವುದರಿಂದ ಮುಖದ ಮೇಲೆ ಅಲ್ಲಲ್ಲಿ ಕಲೆಗಳು ಕಂಡು ಬರುತ್ತವೆ. ಜೊತೆಗೆ ವಿಪರೀತ ಬೆವರು, ಹೆಚ್ಚು ಮೂತ್ರ ವಿಸರ್ಜನೆ ಸಮಸ್ಯೆ ಎದುರಾಗುತ್ತದೆ.

English summary

Foods Most Likely to Cause Food Poisoning

Here we are discussing about These Foods Can Cause Food Poisoning. You know that undercooking poultry or ground beef can raise your risk, but there are other foods that can expose you to the bacteria E. coli, listeria, and salmonella and more that can have you retching.Read more.
X
Desktop Bottom Promotion