For Quick Alerts
ALLOW NOTIFICATIONS  
For Daily Alerts

ಆಲೂಗಡ್ಡೆ ಆರೋಗ್ಯಕರವೇ? ತಿಳಿಯಲೇಬೇಕಾದ ಅಂಶಗಳಿವು

|

ಆಲೂಗಡ್ಡೆ, ನಾವು ಪ್ರತಿ ದಿನ ಅಲ್ಲದಿದ್ದರೂ ಆಗಾಗ ನಾವು ತಯಾರು ಮಾಡುವ ಕೆಲವು ಅಡುಗೆ ಪದಾರ್ಥಗಳಲ್ಲಿ ಬಳಕೆ ಮಾಡುವ ತರಕಾರಿ. ಬೇರೆ ತರಕಾರಿಗಳಿಗೆ ಹೋಲಿಸಿದರೆ ಜನರು ಆಲೂಗಡ್ಡೆಯನ್ನು ಹೆಚ್ಚು ತಿನ್ನುವುದಿಲ್ಲ. ಕೆಲವರಿಗೆ ಆಲೂಗಡ್ಡೆ ತಿಂದರೆ ಕೈಕಾಲುಗಳು ಹಿಡಿದುಕೊಳ್ಳುತ್ತವೆ ಎಂಬ ಭಾವನೆ ಇದೆ.

ಆಲೂಗಡ್ಡೆಯ ಸೇವನೆಯಿಂದ ನಮ್ಮ ಹೃದಯದ ಆರೋಗ್ಯ ಹದಗೆಡುತ್ತದೆ ಎಂದು ತಿಳಿದುಕೊಂಡಿರುವವರೂ ಇದ್ದಾರೆ.ಹಾಗಾದರೆ ಜನರ ಮನಸ್ಸಿನಲ್ಲಿ ಇಷ್ಟೊಂದು ಗೊಂದಲಗಳನ್ನು ನಿರ್ಮಾಣ ಮಾಡುತ್ತಿರುವ ಆಲೂಗಡ್ಡೆ ತಿನ್ನಲು ನಿಜವಾಗಲೂ ಯೋಗ್ಯವೇ? ಮುಂದೆ ತಿಳಿದುಕೊಳ್ಳೋಣ ಬನ್ನಿ.

ಆಲೂಗಡ್ಡೆಯಲ್ಲಿ ನಮಗೆಲ್ಲ ತಿಳಿದಿರುವ ಹಾಗೆ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೆಟ್ ಅಂಶ ಮತ್ತು ಸ್ಟಾರ್ಚ್ ಅಂಶ ಇದೆ. ಈಗ ಸಾಧಾರಣವಾಗಿ ಬಹುತೇಕ ಜನರು ಡಯಟ್ ಪದ್ಧತಿ ಅನುಸರಿಸುತ್ತಿರುವುದರಿಂದ ಹೆಚ್ಚು ಕಾರ್ಬೋಹೈಡ್ರೇಟ್ ಅಂಶಗಳನ್ನು ಒಳಗೊಂಡ ಆಹಾರಗಳಿಂದ ದೂರ ಉಳಿಯಲು ಬಯಸುತ್ತಾರೆ.

ಆದರೆ ಸಂಶೋಧಕರು ತಮ್ಮ ಅಧ್ಯಯನಗಳಲ್ಲಿ ಹೇಳುವಂತೆ ಆಲೂಗಡ್ಡೆ ನಮ್ಮ ದೇಹಕ್ಕೆ ಒಂದು ಆರೋಗ್ಯಕರ ಆಹಾರ. ಆದರೆ ನಾವು ಅದನ್ನು ಹೇಗೆ ತಯಾರು ಮಾಡಿ ಹೇಗೆ ಬಳಸುತ್ತೇವೆ ಎಂಬುದರ ಮೇಲೆ ಅದರ ಆರೋಗ್ಯ ಪ್ರಭಾವಗಳು ನಿಂತಿರುತ್ತವೆ. ಆಲೂಗಡ್ಡೆಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಹಲವಾರು ಸತ್ವಗಳು ಸಿಗುತ್ತವೆ. ಇದರಲ್ಲಿ ವಿಶೇಷವಾಗಿ ವಿಟಮಿನ್ ' ಸಿ ', ನಾರಿನ ಅಂಶ, ಆಂಟಿ - ಆಕ್ಸಿಡೆಂಟ್ ಅಂಶ, ಪೊಟ್ಯಾಶಿಯಂ ಅಂಶ ಸೇರಿವೆ. ಇದರ ಜೊತೆಗೆ ಕಂಡು ಬರುವ ಸ್ಟಾರ್ಚ್ ರೂಪದ ಕಾರ್ಬೋಹೈಡ್ರೇಟ್ ಅಂಶಗಳು ಜನರ ತೂಕ ಹೆಚ್ಚು ಮಾಡಲು ಕಾರಣವಾಗುತ್ತವೆ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ.

ತಜ್ಞರು ಏನು ಹೇಳುತ್ತಾರೆ?

ತಜ್ಞರು ಏನು ಹೇಳುತ್ತಾರೆ?

ನ್ಯೂಯಾರ್ಕ್ ನ ಪ್ರಸಿದ್ಧ ದೈಹಿಕ ಸ್ವಾಸ್ಥ್ಯ ತಜ್ಞರೊಬ್ಬರು ಹೇಳುವ ಪ್ರಕಾರ ಆಲೂಗಡ್ಡೆ ಬಿಳಿ ಬಣ್ಣ ಹೊಂದಿರುವ ತರಕಾರಿ ಗುಂಪಿಗೆ ಸೇರಿದ ಒಂದು ಆಹಾರ ಪದಾರ್ಥ. ಬಹಳ ಜನರಿಗೆ ಬಿಳಿ ಬಣ್ಣದ ಬಗ್ಗೆ ಇಂದಿಗೂ ಗೊಂದಲವಿದೆ. ಜನರು ಬಿಳಿ ಬಣ್ಣ ಹೊಂದಿರುವ ಯಾವುದೇ ತರಕಾರಿ ನಮ್ಮ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದುಕೊಂಡಿದ್ದಾರೆ. ಹಾಗಾಗಿ ಆಲೂಗಡ್ಡೆಯಿಂದ ದೂರ ಉಳಿಯಲು ಇದು ಕೂಡ ಒಂದು ಕಾರಣ ಎಂದು ಹೇಳುತ್ತಾರೆ. ಭೂಮಿಯಿಂದ ಅತ್ಯಂತ ನೈಸರ್ಗಿಕವಾಗಿ ಸಿಗುವ ಆಲೂಗಡ್ಡೆ ತನ್ನಲ್ಲಿ ಯಾವುದೇ ಕೊಬ್ಬಿನ ಅಂಶಗಳನ್ನು ಒಳಗೊಂಡಿಲ್ಲ, ಜೊತೆಗೆ ಇದರಲ್ಲಿ ಸಕ್ಕರೆ ಪ್ರಮಾಣ ಕೂಡ ಕಡಿಮೆ ಇದೆ. ಅದೇ ರೀತಿ ಮನುಷ್ಯನ ರಕ್ತದ ಒತ್ತಡಕ್ಕೆ ಕಾರಣವಾಗುವ ಸೋಡಿಯಂ ಪ್ರಮಾಣ ಕೂಡ ಅತ್ಯಲ್ಪ ಪ್ರಮಾಣದಲ್ಲಿದೆ.

ಆಲೂಗಡ್ಡೆಯಲ್ಲಿ ಬೇರೆ ಬೇರೆ ಬಣ್ಣಗಳಿವೆ. ಅದರಲ್ಲಿ ಕೆಂಪು ಆಲೂಗಡ್ಡೆ ಮತ್ತು ನೇರಳೆ ಬಣ್ಣದ ಆಲೂಗಡ್ಡೆ ಹೆಚ್ಚು ಪ್ರಸಿದ್ಧಿ ಪಡೆದಿವೆ. ನಮಗೆ ಇದುವರೆಗೂ ಪರಿಚಿತವಾಗಿರುವುದು ಕೇವಲ ಬಿಳಿ ಬಣ್ಣದ ಆಲೂಗಡ್ಡೆ. ಆದರೆ ಕೆಂಪು ಅಥವಾ ನೇರಳೆ ಬಣ್ಣದ ಆಲೂಗಡ್ಡೆಯಲ್ಲಿ ಬಿಳಿ ಬಣ್ಣದ ಆಲೂಗಡ್ಡೆಗಳಿಗೆ ಹೋಲಿಸಿದರೆ ಆಂಟಿ - ಆಕ್ಸಿಡೆಂಟ್ ಅಂಶಗಳು ಸಾಕಷ್ಟು ಕಂಡು ಬರುತ್ತವೆ. ನಮ್ಮ ದೇಹದಲ್ಲಿ ಫ್ರೀ - ರಾಡಿಕಲ್ ಗಳ ಹಾವಳಿಯಿಂದ ಹಾನಿಯಾಗುವ ಹಲವಾರು ಒಳ್ಳೆಯ ಪ್ರಭಾವಗಳು ಆಂಟಿ - ಆಕ್ಸಿಡೆಂಟ್ ಅಂಶಗಳ ಆಂಟಿ - ಇನ್ಫಾಮೇಟರಿ ಗುಣ ಲಕ್ಷಣಗಳಿಂದ ಬಗೆಹರಿಯುತ್ತವೆ.

ನೇರಳೆ ಬಣ್ಣದ ಆಲೂಗಡ್ಡೆಯಲ್ಲಿ ಕಂಡು ಬರುವ ಆಂಟಿ - ಆಕ್ಸಿಡೆಂಟ್ ಅಂಶಗಳು ನಮ್ಮ ದೇಹದ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತವೆ ಎಂದು ಹೇಳುತ್ತಾರೆ. ' ಜರ್ನಲ್ ಅಫ್ ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮೆಸ್ಟ್ರಿ ' ಸಂಶೋಧನಾ ತಂಡವು ನಡೆಸಿದ ತಮ್ಮ ಅಧ್ಯಯನದಲ್ಲಿ ಅಧಿಕ ರಕ್ತದ ಒತ್ತಡ ಇರುವ ಹಲವಾರು ಜನರನ್ನು ಸಂಶೋಧನೆಗೆ ಬಳಸಿಕೊಂಡಿತು. ಕೆಲವು ದಿನಗಳ ಅಂತರ ನೀಡಿ ಸಂಶೋಧನೆಯಲ್ಲಿ ಪಾಲ್ಗೊಂಡ ಜನರಿಗೆ ನೇರಳೆ ಬಣ್ಣದ ಆಲೂಗಡ್ಡೆಗಳನ್ನು ಪ್ರತಿ ದಿನ ತಿನ್ನಲು ಹೇಳಿದರು. ತಮ್ಮ ಸಂಶೋಧನೆಯ ಫಲಿತಾಂಶ ಹೊರ ಬಂದ ಸಂದರ್ಭದಲ್ಲಿ ಇವರಲ್ಲಿ ದಿನೇ ದಿನೇ ರಕ್ತದ ಒತ್ತಡ ಕಡಿಮೆಯಾಗಿ ಸಹಜ ಸ್ಥಿತಿಗೆ ಮರಳಿದ ಉದಾಹರಣೆ ಲಭ್ಯವಾಯಿತು.

 ಆಲೂಗಡ್ಡೆಯಲ್ಲಿ ಕ್ಯಾರೊಟೆನಾಯಿಡ್ ಅಂಶ

ಆಲೂಗಡ್ಡೆಯಲ್ಲಿ ಕ್ಯಾರೊಟೆನಾಯಿಡ್ ಅಂಶ

ಆಲೂಗಡ್ಡೆಯಲ್ಲಿ ಅತ್ಯಂತ ಹೇರಳ ಪ್ರಮಾಣದ ಕ್ಯಾರೊಟೆನಾಯಿಡ್ ಅಂಶಗಳು ಸಿಗುತ್ತವೆ. ನಮ್ಮ ಕಣ್ಣುಗಳ ಆರೋಗ್ಯಕ್ಕೆ ಮತ್ತು ನಮ್ಮ ಹೃದಯದ ಆರೋಗ್ಯಕ್ಕೆ ಇವು ತುಂಬಾ ಸಹಕಾರಿ ಎಂದು ಈಗಾಗಲೇ ಪ್ರಚಲಿತಗೊಂಡಿವೆ. ಬಿಳಿ ಮತ್ತು ಹಳದಿ ಬಣ್ಣದ ಆಲೂಗಡ್ಡೆ ಗಳಲ್ಲಿ ಕ್ಯಾರೊಟೆನಾಯಿಡ್ ಅಂಶಗಳು ಸಿಗುತ್ತವೆ. ಆದರೆ ಹಳದಿ ಬಣ್ಣದ ಆಲೂಗಡ್ಡೆಯಲ್ಲಿ ಕ್ಯಾರೊಟೆನಾಯಿಡ್ ಅಂಶದ ಪ್ರಮಾಣ ಹೆಚ್ಚಿದೆ. ವೈದ್ಯಕೀಯ ಮೂಲಗಳ ಪ್ರಕಾರ ನಮ್ಮ ದೇಹದಲ್ಲಿ ಕ್ಯಾರೊಟೆನಾಯಿಡ್ ಅಂಶಗಳು ಬಹಳ ಬೇಗನೆ ಜೀರ್ಣವಾಗುತ್ತವೆ. ಹಾಗಾಗಿ ಇವುಗಳಿಂದ ನಮ್ಮ ದೇಹಕ್ಕೆ ಒಳ್ಳೆಯ ಕೊಬ್ಬಿನ ಅಂಶಗಳು ಸಿಗುತ್ತವೆ. ಇತರ ತರಕಾರಿಗಳ ಜೊತೆಗೆ ಅಥವಾ ಆಲಿವ್ ಆಯಿಲ್ ನಲ್ಲಿ ಹುರಿದು ಆಲೂಗಡ್ಡೆಯನ್ನು ಸೇವನೆ ಮಾಡಬಹುದು.

ಆಲೂಗಡ್ಡೆಗಳಲ್ಲಿ ರೆಸಿಸ್ಟೆಂಟ್ ಸ್ಟಾರ್ಚ್ ಅಂಶ ಕಂಡುಬರುತ್ತದೆ

ಆಲೂಗಡ್ಡೆಗಳಲ್ಲಿ ರೆಸಿಸ್ಟೆಂಟ್ ಸ್ಟಾರ್ಚ್ ಅಂಶ ಕಂಡುಬರುತ್ತದೆ

ರೆಸಿಸ್ಟೆಂಟ್ ಸ್ಟಾರ್ಚ್ ಬಗ್ಗೆ ತಿಳಿದುಕೊಳ್ಳುವ ಮುಂಚೆ ಆಲೂಗಡ್ಡೆ ಗಳಲ್ಲಿ ಕಾರ್ಬೋಹೈಡ್ರೇಟ್ ರೂಪದಲ್ಲಿ ಕಂಡು ಬರುವ ಸ್ಟಾರ್ಚ್ ಅಂಶದ ಬಗ್ಗೆ ತಿಳಿದುಕೊಳ್ಳಬೇಕು. ಸ್ಟಾರ್ಚ್ ಅಂಶ ನಾರಿನಂಶದ ಜಾತಿಗೆ ಸೇರಿದ ಒಂದು ಪೌಷ್ಟಿಕ ಸತ್ವ ಅಷ್ಟೇ. ನಾವು ಸೇವಿಸುವ ಅನ್ನದಲ್ಲಿ ಸಹ ಇದು ಕಂಡು ಬರುತ್ತದೆ. ನಮ್ಮ ಜೀರ್ಣ ಪ್ರಕ್ರಿಯೆಯಲ್ಲಿ ಇದು ನಾಳೆ ಬೇಗನೆ ಜೀರ್ಣವಾಗುತ್ತದೆ. ನಮ್ಮ ದೇಹಕ್ಕೆ ಶಕ್ತಿ ಮತ್ತು ಒಳ್ಳೆಯ ಬ್ಯಾಕ್ಟೀರಿಯಾಗಳು ಎಂದು ಕರೆಯಲ್ಪಡುವ ಪ್ರೀ ಬಯೋಟಿಕ್ ಬ್ಯಾಕ್ಟೀರಿಯಾಗಳು ನಮಗೆ ಸ್ಟಾರ್ಚ್ ಅಂಶದಿಂದ ಸಿಗುತ್ತವೆ.

ಆದರೆ ರೆಸಿಸ್ಟೆಂಟ್ ಸ್ಟಾರ್ಚ್ ವಿಚಾರ ಹಾಗಲ್ಲ. ನಾವು ಆಲೂಗಡ್ಡೆಯನ್ನು ಸೇವನೆ ಮಾಡಿದ ಬಳಿಕ ಅದರಲ್ಲಿರುವ ರೆಸಿಸ್ಟೆಂಟ್ ಸ್ಟಾರ್ಚ್ ಅಂಶ ನಮ್ಮ ಸಣ್ಣಕರುಳಿನಲ್ಲಿ ಹೀರಿಕೊಳ್ಳಲ್ಪಡದೆ ನೇರವಾಗಿ ದೊಡ್ಡ ಕರುಳಿಗೆ ಸಾಗುತ್ತದೆ. ಅಲ್ಲಿರುವ ಬ್ಯಾಕ್ಟೀರಿಯಗಳು ಇದನ್ನು ಫರ್ಮೆಂಟೇಶನ್ ಪ್ರಕ್ರಿಯೆಗೆ ಒಳಪಡಿಸುತ್ತವೆ. ಆಲೂಗಡ್ಡೆಯಲ್ಲಿ ಸ್ಟಾರ್ಚ್ ಅಂಶಕ್ಕಿಂತ ರೆಸಿಸ್ಟೆಂಟ್ ಸ್ಟಾರ್ಚ್ ಅಂಶ ಬೇಯಿಸಿ ಆರಿಸಿದ ಮೇಲೆ ಹೆಚ್ಚಾಗುತ್ತದೆ. ' ಜರ್ನಲ್ ಆಫ್ ಅಕಾಡೆಮಿ ಆಫ್ ನ್ಯೂಟ್ರಿಷನ್ ಅಂಡ್ ಡಯಟಿಕ್ಸ್ ' ತನ್ನ ಅಧ್ಯಯನದಲ್ಲಿ ಹೇಳಿದ ಹಾಗೆ ಆಲೂಗಡ್ಡೆಯಲ್ಲಿ ಕಂಡುಬರುವ ರೆಸಿಸ್ಟೆಂಟ್ ಸ್ಟಾರ್ಚ್ ಅಂಶ ಮಧುಮೇಹವನ್ನು ನಿಯಂತ್ರಣಕ್ಕೆ ತರುತ್ತದೆ. ಅಂದರೆ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಹಜ ಸ್ಥಿತಿಗೆ ಮರಳುತ್ತದೆ ಇದರ ಜೊತೆಗೆ ಕರುಳಿನ ಆರೋಗ್ಯ ಕೂಡ ಸುಧಾರಿಸುತ್ತದೆ.

ಆಲೂಗಡ್ಡೆ ಸೇವನೆಯಿಂದ ಹೊಟ್ಟೆ ಹಸಿವು ನಿವಾರಣೆಯಾಗುತ್ತದೆ

ಆಲೂಗಡ್ಡೆ ಸೇವನೆಯಿಂದ ಹೊಟ್ಟೆ ಹಸಿವು ನಿವಾರಣೆಯಾಗುತ್ತದೆ

ಆಲೂಗಡ್ಡೆಯಲ್ಲಿ ಸುಮಾರು 4 ಗ್ರಾಂ ಪ್ರೋಟೀನ್ ಅಂಶ ಮತ್ತು 4 ಗ್ರಾಂ ನಾರಿನ ಅಂಶ ಸಿಗುತ್ತದೆ. ಈ ಎರಡರ ಸಮ್ಮಿಶ್ರಣ ನಮಗೆ ಹೊಟ್ಟೆ ಹಸಿವನ್ನು ದೂರ ಮಾಡುತ್ತದೆ. ತುಂಬಾ ಹೆಚ್ಚು ಹೊತ್ತಿನವರೆಗೆ ನಮಗೆ ಹೊಟ್ಟೆ ಹಸಿವು ಆಗುವುದಿಲ್ಲ. ಇದರಿಂದ ಬೊಜ್ಜು ತುಂಬಿದ ದೇಹದವರಿಗೆ ಸಾಕಷ್ಟು ಅನುಕೂಲವಾಗಲಿದೆ. ದೇಹದಲ್ಲಿರುವ ಕೊಬ್ಬಿನ ಪ್ರಮಾಣ ಕರಗುವುದರಿಂದ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ. ಇಷ್ಟೇ ಅಲ್ಲದೆ ಆಲೂಗಡ್ಡೆಯಲ್ಲಿ ನಿಮ್ಮ ಚರ್ಮಕ್ಕೆ ಸಹಕಾರಿ ಎನಿಸಿರುವ ಅಂಶಗಳು ಸಿಗುತ್ತವೆ. ನಿಮ್ಮ ತ್ವಚೆಯ ಸೌಂದರ್ಯ ಉತ್ತಮಗೊಳ್ಳಲು ಇದು ಸಹಾಯಕ್ಕೆ ಬರುತ್ತದೆ.

ಆಲೂಗಡ್ಡೆಯಲ್ಲಿ ಗ್ಲುಟೆನ್ ಅಂಶ ಇಲ್ಲದೆ ಇರುವುದರಿಂದ ಗ್ಲುಟೆನ್ ಅಂಶಕ್ಕೆ ಅಲರ್ಜಿ ಎನ್ನುವವರು ಆಲೂಗಡ್ಡೆಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸುಲಭವಾಗಿ ಸೇರಿಸಿಕೊಂಡು ಸೇವನೆ ಮಾಡಬಹುದು.

ಸ್ಪೋರ್ಟ್ಸ್ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಸಾಕಷ್ಟು ಅನುಕೂಲಕರ

ಸ್ಪೋರ್ಟ್ಸ್ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಸಾಕಷ್ಟು ಅನುಕೂಲಕರ

' ಯುರೋಪಿಯನ್ ಜರ್ನಲ್ ಅಫ್ ಅಪ್ಲೈಡ್ ಫಿಸಿಯೋಲಾಜಿ ' ತನ್ನ ಈ ವರ್ಷದ ಮಧ್ಯ ಭಾಗದಲ್ಲಿ ನಡೆದ ಸಂಶೋಧನೆಯಲ್ಲಿ ತಯಾರಾದ ವರದಿಯಲ್ಲಿ ತಿಳಿಸಿರುವ ಹಾಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಮತ್ತು ಹೆಚ್ಚು ವ್ಯಾಯಾಮ ಮಾಡುವವರಿಗೆ ಆಲೂಗಡ್ಡೆಯನ್ನು ಮಿಶ್ರಣ ಮಾಡಿ ತಯಾರು ಮಾಡಿದ ಆಹಾರ ಪದಾರ್ಥಗಳು ದೇಹಕ್ಕೆ ಹೆಚ್ಚು ಶಕ್ತಿಯನ್ನು ಒದಗಿಸುತ್ತವೆ. ಆಲೂಗಡ್ಡೆಯನ್ನು ಇಂದಿಗೂ ಕೂಡ ಕ್ರೀಡಾಭ್ಯಾಸ ಮಾಡುವವರಿಗೆ ಪೂರಕ ಆಹಾರಗಳು ಎಂದು ಕರೆಯಲಾಗುತ್ತದೆ. ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ಆಂತರಿಕವಾಗಿ ದೇಹದಲ್ಲಿ ಗ್ಲೈಕೋಜನ್ ಅಂಶಗಳನ್ನು ಆಲುಗಡ್ಡೆ ಮರುಹೊಂದಿಸುತ್ತದೆ.

ಪೌಷ್ಟಿಕಾಂಶಗಳ ಮಹಾಪೂರವೇ ಅಡಗಿದೆ

ಪೌಷ್ಟಿಕಾಂಶಗಳ ಮಹಾಪೂರವೇ ಅಡಗಿದೆ

ಇತ್ತೀಚಿನ ಜನರ ಜೀವನ ಶೈಲಿಯ ರೂಪುರೇಷೆಗಳನ್ನು ಗಮನಿಸುತ್ತಾ ಹೋದರೆ ಕೇವಲ ರಸ್ತೆ ಬದಿಯ ಜಂಕ್ ಫುಡ್ ಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಮನೆಯಲ್ಲಿ ತರಕಾರಿಗಳನ್ನು ತಂದು ಬೇಯಿಸಿ ತಿನ್ನುವ ಅಭ್ಯಾಸ ಇರುವುದಿಲ್ಲ. ಪ್ರಮುಖವಾಗಿ ನಗರ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಇದರಿಂದ ಆರೋಗ್ಯಕ್ಕೆ ಅಪಾಯ ಹೆಚ್ಚು. ನಾವು ನಮ್ಮ ಆಹಾರ ಪದ್ಧತಿಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಕೈ ಬಿಡುವುದರಿಂದ ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳ ಕೊರತೆ ಉಂಟಾಗುವುದು ಮಾತ್ರವಲ್ಲದೆ ನಮ್ಮ ಮುಂದಿನ ಪೀಳಿಗೆಯವರಿಗೆ ಅಪೌಷ್ಟಿಕತೆಯ ತೊಂದರೆ ಎದುರಾಗುತ್ತದೆ. ನಮ್ಮ ದೇಹಕ್ಕೆ ಪ್ರತಿ ದಿನ ಅಗತ್ಯವಿರುವ ಪೊಟ್ಯಾಶಿಯಂ ಮತ್ತು ನಾರಿನ ಅಂಶವನ್ನು ನಾವು ಸೇವನೆ ಮಾಡಲೇಬೇಕು. ಆಲೂಗಡ್ಡೆ ಗಳಲ್ಲಿ ಈ ಎರಡು ಅಂಶಗಳು ಹೇರಳವಾದ ಪ್ರಮಾಣದಲ್ಲಿ ಕಂಡು ಬರುತ್ತವೆ. ಇದರ ಜೊತೆಗೆ ಆಲೂಗಡ್ಡೆಯಲ್ಲಿ ವಿಟಮಿನ್ ' ಬಿ6 ', ಫೋಲೇಟ್ ಮತ್ತು ಬೇರೆ ಬಗೆಯ ಪೌಷ್ಟಿಕ ಸತ್ವಗಳು ಸಿಗುತ್ತವೆ.

ಆಲೂಗಡ್ಡೆಯ ಸೇವನೆಯನ್ನು ನಾವು ಯಾವಾಗ ನಿಯಂತ್ರಣ ಮಾಡಿಕೊಳ್ಳಬೇಕು?

ಆಲೂಗಡ್ಡೆಯ ಸೇವನೆಯನ್ನು ನಾವು ಯಾವಾಗ ನಿಯಂತ್ರಣ ಮಾಡಿಕೊಳ್ಳಬೇಕು?

ಒಂದು ವೇಳೆ ನಿಮಗೆ ಹೆಚ್ಚು ಕುರುಕಲು ತಿಂಡಿ ತಿನ್ನುವ ಅಭ್ಯಾಸವಿದ್ದರೆ, ಅಂದರೆ ಉದಾಹರಣೆಗೆ ಚಿಲ್ಲಿ ಚೀಸ್ ಫ್ರೈ, ಫ್ರೆಂಚ್ ಫ್ರೈ, ಪೊಟಾಟೋ ಚಿಪ್ಸ್ ಇತ್ಯಾದಿಗಳನ್ನು ನೀವು ಆಗಾಗ ಸೇವನೆ ಮಾಡುತ್ತಿದ್ದರೆ, ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಆಲೂಗಡ್ಡೆಯನ್ನು ಕಡಿಮೆ ಬಳಕೆ ಮಾಡಿ.

ಏಕೆಂದರೆ ಆಲೂಗಡ್ಡೆಯಲ್ಲಿ ಮೊದಲೇ ಹೇಳಿದಂತೆ ಸ್ಯಾಚುರೇಟೆಡ್ ಕೊಬ್ಬಿನ ಅಂಶಗಳು ಮತ್ತು ಸೋಡಿಯಂ ಅಂಶ ಹೆಚ್ಚಾಗಿದೆ. ಹಾಗಾಗಿ ಪೌಷ್ಟಿಕಾಂಶಗಳಿಗೆ ಹೋಲಿಸಿಕೊಂಡರೆ ದಿನದಲ್ಲಿ ಹಲವು ಬಾರಿ ನಿಮಗೆ ಈ ಅಂಶಗಳು ನಿಮ್ಮ ದೇಹ ಹೆಚ್ಚು ಸೇರುತ್ತವೆ. ಇದರಿಂದ ನಿಮ್ಮ ದೇಹಕ್ಕೆ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ.

ನೀವು ಹೋಟೆಲ್ ಊಟವನ್ನು ಹೆಚ್ಚು ಅವಲಂಬಿಸಿದ್ದರೆ, ಅಧಿಕ ಕ್ಯಾಲೋರಿ ಅಂಶಗಳ ಕಡೆಗೆ ಹೆಚ್ಚು ನಿಯಂತ್ರಣ ಮಾಡಿ. ಇನ್ನು ನೀವು ಪೊಟಾಟೋ ಚಿಪ್ಸ್, ಫ್ರೆಂಚ್ ಫ್ರೈ ಈ ರೀತಿಯ ಆಹಾರಗಳನ್ನು ಹೆಚ್ಚು ಇಷ್ಟಪಡುತ್ತಿದ್ದರೆ, ನಿಮ್ಮ ಮನೆಯ ಆಹಾರಗಳಲ್ಲಿ ಆಲೂಗಡ್ಡೆಯನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಿ.

ಗ್ಲೈಕೋ ಆಲ್ಕಲಾಯ್ಡ್ ಅಂಶಗಳ ಪ್ರಭಾವ

ಗ್ಲೈಕೋ ಆಲ್ಕಲಾಯ್ಡ್ ಅಂಶಗಳ ಪ್ರಭಾವ

ಆಲೂಗಡ್ಡೆಯಲ್ಲಿ ದಿನ ಕಳೆದಂತೆ ಗ್ಲೈಕೋ ಆಲ್ಕಲಾಯ್ಡ್ ಅಂಶಗಳು ಹೆಚ್ಚಾಗುತ್ತವೆ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ನಾವು ಆಲೂಗಡ್ಡೆಯನ್ನು ಅಪ್ಪಿತಪ್ಪಿ ಬೆಳಕಿನ ವಾತಾವರಣದಲ್ಲಿ ಇಟ್ಟಿದ್ದರೆ ಆಲೂಗಡ್ಡೆ ಮೊಳಕೆ ಒಡೆಯಲು ಪ್ರಾರಂಭ ಮಾಡುತ್ತದೆ. ಈ ಸಂದರ್ಭದಲ್ಲಿ ಗ್ಲೈಕೋ ಆಲ್ಕಲಾಯ್ಡ್ ಅಂಶಗಳು ಆಲೂಗಡ್ಡೆಯಲ್ಲಿ ಹೆಚ್ಚು ಕಂಡು ಬರಲು ಶುರು ಮಾಡುತ್ತವೆ. ಅತಿಯಾದ ಗ್ಲೈಕೋ ಆಲ್ಕಲಾಯ್ಡ್ ಅಂಶ ನಮ್ಮ ದೇಹಕ್ಕೆ ವಿಷಕಾರಿ ಪ್ರಭಾವವನ್ನು ಉಂಟು ಮಾಡುತ್ತವೆ. ಆದ್ದರಿಂದ ಆಲೂಗಡ್ಡೆಯನ್ನು ಕತ್ತಲು ಇರುವ ಜಾಗದಲ್ಲಿ ಇಡುವ ಪ್ರಯತ್ನ ಮಾಡಿ. ಒಂದು ವೇಳೆ ಆಲೂಗಡ್ಡೆಯಲ್ಲಿ ಮೊಳಕೆ ಬರಲು ಪ್ರಾರಂಭ ಮಾಡಿದರೆ ತಕ್ಷಣವೇ ಅದನ್ನು ಬಳಸಿಕೊಳ್ಳಿ.

ಆಲೂಗಡ್ಡೆಯನ್ನು ಬಳಕೆ ಮಾಡುವ ಆರೋಗ್ಯಕರ ವಿಧಾನ

ಆಲೂಗಡ್ಡೆಯನ್ನು ಬಳಕೆ ಮಾಡುವ ಆರೋಗ್ಯಕರ ವಿಧಾನ

ನೀವು ಆಲೂಗಡ್ಡೆಯನ್ನು ಸೇವಿಸಲು ಹಲವಾರು ಮಾರ್ಗಗಳಿವೆ. ಆದರೆ ಯಾವ ವಿಧಾನದಲ್ಲಿ ಆಲೂಗಡ್ಡೆಯನ್ನು ಸೇವನೆ ಮಾಡಿದರೆ ನಿಮಗೆ ಆರೋಗ್ಯಕರವಾಗಿರುತ್ತದೆ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು. ಆಲೂಗಡ್ಡೆಯನ್ನು ಹುರಿದು ಅಥವಾ ಮೈಕ್ರೋವೇವ್ ಓವನ್ ಮೂಲಕ ಬೇಯಿಸಿ ತಿನ್ನಬಹುದು. ನಿಮಗೆ ಮಸಾಲೆಭರಿತ ಆಲುಗಡ್ಡೆ ಇಷ್ಟವಾದರೆ, ಆಲೂಗಡ್ಡೆಯನ್ನು ಆಲಿವ್ ಆಯಿಲ್ ನಲ್ಲಿ ಸ್ವಲ್ಪ ಫ್ರೈ ಮಾಡಿ ಅದಕ್ಕೆ ಸ್ವಲ್ಪ ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಮೈಕ್ರೋವೇವ್ ಓವನ್ನಲ್ಲಿ ಸುಮಾರು 40 ನಿಮಿಷಗಳ ಕಾಲ 425 ಡಿಗ್ರಿವರೆಗೆ ಬಿಸಿ ಮಾಡಿ ಆರೋಗ್ಯಕರವಾಗಿ ಸೇವನೆ ಮಾಡಬಹುದು.

ಇನ್ನು ನೀವು ಆಲೂಗಡ್ಡೆಯನ್ನು ಬೇಯಿಸಿ ತಿನ್ನುವಿರಿ ಎಂದಾದರೆ ನಿಮ್ಮ ಪ್ರತಿ ದಿನದ ಆಹಾರ ಪದ್ಧತಿಯಲ್ಲಿ ಬಳಕೆ ಮಾಡುವ ತರಕಾರಿಗಳ ಜೊತೆಗೆ ಆಲೂಗಡ್ಡೆಯನ್ನು ಸೇರಿಸಿ ಸೇವನೆ ಮಾಡಬಹುದು. ಇದರಿಂದ ಎಲ್ಲ ತರಕಾರಿಗಳಲ್ಲಿ ಸಿಗುವ ಪೌಷ್ಟಿಕ ಸತ್ವಗಳು ನಿಮಗೆ ಒಮ್ಮೆಲೆ ನಿಮ್ಮ ದೇಹಕ್ಕೆ ಸಿಗುತ್ತವೆ.

English summary

Are Potatoes Healthy, Here Are Things You Must Know

Are potatoes healthy, here are things you must know read on...
X
Desktop Bottom Promotion