For Quick Alerts
ALLOW NOTIFICATIONS  
For Daily Alerts

ಅಲರ್ಜಿ ಬಗ್ಗೆ ಈ ವಿಷಯಗಳು ನಿಮಗೆ ತಿಳಿದಿರಲಿ

|

ಅಲರ್ಜಿ ಎಂದರೇನು?

ಸುಲಭ ಪದಗಳಲ್ಲಿ ಹೇಳಬಹುದೆಂದರೆ ಅಲರ್ಜಿ ಅಂದರೆ 'ಮೈಗೆ ಒಗ್ಗದ' ಯಾವುದೇ ವಸ್ತು. ಅಂದರೆ ಓರ್ವ ವ್ಯಕ್ತಿಗೆ ಒಗ್ಗುವಂತಹ ಒಂದು ಕಣ ಇನ್ನೊಬ್ಬ ವ್ಯಕ್ತಿಗೆ ಒಗ್ಗದೇ ಇರಬಹುದು. ಅಂದರೆ ಯಾವುದು ಒಗ್ಗುವುದಿಲ್ಲವೋ ಅದೇ ಅಲರ್ಜಿ. ಸಾಮಾನ್ಯವಾಗಿ ಕೇಡು ನೀಡದಂತಹ ಯಾವುದೋ ಒಂದು ಕಣಕ್ಕೆ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ನೀಡುವ ಪ್ರತಿಕ್ರಿಯೆಯಾಗಿದೆ.

Allergy Basic Information You Kneed Know

ಯಾವ ಕಣ ಈ ಪ್ರತಿಕ್ರಿಯೆಗೆ ಪ್ರಚೋದನೆ ನೀಡುತ್ತದೆಯೋ ಅವನ್ನು ಅಲರ್ಜಿಕಾಕರ ("allergens") ಎಂದು ಕರೆಯುತ್ತಾರೆ. ಅತಿ ಸಾಮಾನ್ಯ ಅಲರ್ಜಿಕಾರಕಗಳೆಂದರೆ ಹೂವಿನ ಪರಾಗ, ಗಾಳಿಯಲ್ಲಿ ತೇಲುವ ಸೂಕ್ಷ್ಮ ಜೀವಿಗಳು, ಪ್ರಾಣಿಗಳಿಂದ ಉದುರುವ ಸೂಕ್ಷ್ಮ ಚರ್ಮದ ಪುಡಿ ಅಥವಾ ಕೂದಲು, ಕೆಲವು ಆಹಾರಗಳು ಅಥವಾ ಚರ್ಮಕ್ಕೆ ಸ್ಪರ್ಶವಾದ ಕೊಂಚ ಹೊತ್ತಿನಲ್ಲಿಯೇ ತುರಿಕೆ ತರಿಸುವಂತಹ ಯಾವುದೇ ವಸ್ತು.

ನಮ್ಮ ಸುತ್ತ ಮುತ್ತಲೂ ನಮಗೆ ಅಲರ್ಜಿಕಾರಕವಾಗಬಹುದಾದ ನೂರಾರು ಸಾಮಾಗ್ರಿಗಳಿವೆ. ಅಮೇರಿಕಾದ ಪ್ರತಿ ಹದಿನೈದು ಜನರಲ್ಲೊಬ್ಬರಿಗೆ ಅಲರ್ಜಿಯ ತೊಂದರೆ ಇರುತ್ತದೆ. ಇಲ್ಲಿ ನಾವು ಅಲರ್ಜಿ ಕುರಿತು ನೀವು ತಿಳಿಯಬೇಕಾದ ಕೆಲ ಅಂಶಗಳ ಬಗ್ಗೆ ಹೇಲಿದ್ದೇವೆ ನೋಡಿ.

ಅಲರ್ಜಿಯ ಪ್ರತಿಕ್ರಿಯೆಯ ಸಮಯದಲ್ಲಿ ಏನಾಗುತ್ತದೆ?

ಅಲರ್ಜಿಯ ಪ್ರತಿಕ್ರಿಯೆಯ ಸಮಯದಲ್ಲಿ ಏನಾಗುತ್ತದೆ?

ನೀವು ಉಸಿರಾಡುವ, ನುಂಗುವ ಅಥವಾ ನಿಮ್ಮ ಚರ್ಮದ ಸಂಪರ್ಕಕ್ಕೆ ಬರುವ ಯಾವುದೇ ಅಲರ್ಜಿಕಾರಕದ ಮೂಲಕ ಅಲರ್ಜಿ ಪ್ರಾರಂಭವಾಗುತ್ತದೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ನಿಮ್ಮ ದೇಹವು IgE (Immunoglobulin E (IgE)) ಎಂಬ ಪ್ರತಿಜೀವ (antibody) ಪ್ರೋಟೀನ್ ತಯಾರಿಸಲು ಪ್ರಾರಂಭಿಸುತ್ತದೆ, ಇವು ಅಲರ್ಜಿಕಾರಕ ಕಣಗಳ ಮೇಲೆ ಧಾಳಿ ಇಡುತ್ತವೆ. ನಂತರ ಹಿಸ್ಟಮೈನ್ (ಅಲರ್ಜಿಕಾರಕಗಳನ್ನು ಹೊಡೆದೋಡಿಸುವ ರಾಸಾಯನಿಕ) ಮತ್ತು ಇತರ ರಾಸಾಯನಿಕಗಳು ರಕ್ತಕ್ಕೆ ಬಿಡುಗಡೆಯಾಗುತ್ತವೆ. ತಕ್ಷಣ ಚರ್ಮದ ಮೇಲೆ ಅಲರ್ಜಿಯ ಲಕ್ಷಣಗಳು ಕಾಣತೊಡಗುತ್ತವೆ.

ಅಲರ್ಜಿಯ ಲಕ್ಷಣಗಳೇನು?

ಅಲರ್ಜಿಯ ಲಕ್ಷಣಗಳೇನು?

ಈ ಅಲರ್ಜಿಕಾರಕಗಳು ನಿಮ್ಮ ದೇಹದ ಮೇಲೆ ಹೇಗೆ ಆವರಿಸಿವೆ ಎಂಬ ಮಾಹಿತಿಯನ್ನು ಆಧರಿಸಿ ಲಕ್ಷಣಗಳೂ ಭಿನ್ನವಾಗಿರುತ್ತವೆ. ಗಾಳಿಯಲ್ಲಿ ತೇಲಿ ಬಂದ ಕಣಗಳ ಸ್ಪರ್ಶ, ಆಹಾರದ ಮೂಲಕ ದೇಹವನ್ನು ಪ್ರವೇಶಿಸಿದಾಗ ಅಥವಾ ಕೀಟಕಡಿತ ಅಥವಾ ಸಸ್ಯದ ಯಾವುದೋ ಮುಳ್ಳು ಚುಚ್ಚುವ ಮೂಲಕ ಚರ್ಮದ ಒಳಗೆ ಪ್ರವೇಶಿಸಿದ ಅಲರ್ಜಿಕಾರಕಗಳಿಂದ ಬೇರೆ ಬೇರೆ ತರಹದ ಅಲರ್ಜಿಗಳು ಎದುರಾಗುತ್ತವೆ.

ಉದಾಹರಣೆಗೆ ನಿಮಗೆ ಮೂಗಿನ ಅಲರ್ಜಿ ಇದ್ದರೆ (ಅಂದರೆ ಅಲರ್ಜಿ ಕಾರಕ ಕಣಗಳನ್ನು ನೀವು ಉಸಿರಾಟದ ಮೂಲಕ ಮೂಗಿನ ಒಳಗೆಳೆದುಕೊಂಡರೆ) ಎದುರಾಗುವ ಸಾಮಾನ್ಯ ಲಕ್ಷಣಗಳೆಂದರೆ:

ಮೂಗು ಕಟ್ಟುವುದು ಅಥವಾ ಸತತ ಸೋರುವುದು, ಸೈನಸ್ (ಕುಹರ) ಒತ್ತಡ, ಸೀನುವಿಕೆ, ಕಣ್ಣುಗಳ ತುರಿಕೆ, ಮೂಗಿನ ಹಿಂಭಾಗದಿಂದ ಸ್ನಿಗ್ಧ ಸಿಂಬಳ ಗಂಟಲಿಗೆ ಬರುವುದು.

ಚರ್ಮದ ಅಲರ್ಜಿಯಿಂದ ಕಾಣಬರುವ ಲಕ್ಷಣಗಳಲ್ಲಿ ಪ್ರಮುಖವಾಗಿ ಚರ್ಮ ಕೆಂಪಗಾಗುವುದು, ಮತ್ತು ಕೆಂಪಗಿನ ದದ್ದುಗಳೇಳುವುದು (ದದ್ದು ಎಂದರೆ ನೀರು ತುಂಬಿದ ಗುಳ್ಳೆಯಂತೆ ಏಳುವ ಚರ್ಮದ ವೃತ್ತಾಕಾರದ ಉಬ್ಬುಗಳು)

ಸಾಮಾನ್ಯ ಅಲರ್ಜಿಕಾರಕಗಳು:

ಸಾಮಾನ್ಯ ಅಲರ್ಜಿಕಾರಕಗಳು:

ಹೂವಿನ ಪರಾಗ, ಪ್ರಾಣಿಗಳ ಕೂದಲು, ಪ್ರಾಣಿಗಳ ಚರ್ಮದ ಉದುರಿದ ಪುಡಿ, ಕೆಲವು ಅಹಾರಗಳು, ಕೆಲವು ಕೀಟಗಳು, ಸೂಕ್ಷ್ಮ ಜೀವಿಗಳು ಮೊದಲಾದ ಹಲವಾರು ಅಲರ್ಜಿಕಾರಕಗಳಿವೆ. ಆದರೆ ಒಬ್ಬರಿಗೆ ಒಗ್ಗುವಂತಹದ್ದು ಇನ್ನೊಬ್ಬರಿಗೆ ಒಗ್ಗಲಾರದ ಕಾರಣ ಇವನ್ನು ಇಂತಿಷ್ಟೇ ಅಥವಾ ಇವೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಉದಾಹರಣೆಗೆ ಅನಾನಾಸು ಹಣ್ಣು ತಿಂದ ಒಬ್ಬರಿಗೆ ತಕ್ಷಣವೇ ಕುತ್ತಿಗೆ, ಕೈಗಳಲ್ಲಿ ತುರಿಕೆ ಪ್ರಾರಂಭವಾಗಬಹುದು, ಅದೇ ಹಣ್ಣಿನ ಇನ್ನೊಂದು ತುಂಡು ತಿಂದವರಿಗೆ ಏನೂ ಆಗುವುದಿಲ್ಲ. ಹಾಗಾಗಿ ಅನಾನಾಸು ಈ ವ್ಯಕ್ತಿಗೆ ಅಲರ್ಜಿಕಾರಕವಾಗಿದ್ದರೆ ಇನ್ನೊಬ್ಬ ವ್ಯಕ್ತಿಗೆ ಅಲ್ಲ.

ಸಾಮಾನ್ಯವಾಗಿ ಆಹಾರದ ಅಲರ್ಜಿಯ ಮೂಲಕ ಎದುರಾಗುವ ಲಕ್ಷಣಗಳೆಂದರೆ:

ಸಾಮಾನ್ಯವಾಗಿ ಆಹಾರದ ಅಲರ್ಜಿಯ ಮೂಲಕ ಎದುರಾಗುವ ಲಕ್ಷಣಗಳೆಂದರೆ:

ಹೊಟ್ಟೆಯ ಸೆಡೆತ, ವಾಂತಿ ಮತ್ತು ಅತಿಸಾರ.

ಕೀಟ ಕಡಿತದಿಂದ ಎದುರಾಗುವ ಅಲರ್ಜಿಯಿಂದ ಕೀಟ ಕಡಿದ ಭಾಗ ದೊಡ್ಡದಾಗಿ ಊದಿಕೊಂಡು ಕೆಂಪಗಾಗುವುದು ಮತ್ತು ಬೆಂಕಿ ಬಿದ್ದಂತೆ ಉರಿಯುವುದು. ಆದ್ದರಿಂದ ಕೀಟ ಕಡಿದಿರುವ (ವಿಶೇಷವಾಗಿ ಜೇನು) ಭಾಗದಲ್ಲಿ ಮುಳ್ಳೇನಾದರೂ ಚುಚ್ಚಿಕೊಂಡಿದ್ದರೆ ಆದಷ್ಟೂ ಬೇಗನೇ ಇದನ್ನು ಕಿತ್ತು ನಿವಾರಿಸಬೇಕು. ಹೆಚ್ಚು ಹೊತ್ತು ಇದ್ದಷ್ಟೂ ಊದಿಕೊಳ್ಳುವುದೂ ಹೆಚ್ಚುತ್ತದೆ.

ಅಲರ್ಜಿಕಾರಕಗಳು ಎಷ್ಟರ ಮಟ್ಟಿಗೆ ಅಲರ್ಜಿ ಉಂಟು ಮಾಡುತ್ತವೆ ಎಂಬುದನ್ನು ಆಧರಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಇದರ ಪ್ರಭಾವದಲ್ಲಿ ಹೆಚ್ಚು ಕಡಿಮೆಯಾಗಬಹುದು. ಸಾಮಾನ್ಯವಾಗಿ ಹೆಚ್ಚಿನವು ಅತಿ ಎನಿಸುವಷ್ಟು ಗಂಭೀರವಲ್ಲದ, ಕೊಂಚ ಹೊತ್ತಿನ ಬಳಿಕ ನಿಲ್ಲುವಂತಹದ್ದಾಗಿವೆ. ಅಲ್ಲದೇ ಅತಿ ಸೂಕ್ಷ್ಮ ಅಲರ್ಜಿಗಳು ನಮ್ಮ ಗಮನಕ್ಕೂ ಬಾರದೇ ಇರಬಹುದು. ಮಧ್ಯಮ ಪ್ರಮಾಣದ ಅಲರ್ಜಿ ಸ್ವಾಸ್ಥ್ಯದ ಮೇಲೆ ಪ್ರಭಾವ ಬೀರಬಹುದು, ಅಂದರೆ ಶೀತ ಜ್ವರ ಎದುರಾಗಬಹುದು. ಆದರೆ ಗಂಭೀರ ಮಟ್ಟದ ಅಲರ್ಜಿಗಳು ವೈದ್ಯಕೀಯ ನೆರವನ್ನು ಪಡೆಯಲೇಬೇಕಾದಷ್ಟು ಕ್ಲಿಷ್ಟವಾಗಬಹುದು.

ಅನಾಫೈಲಾಕ್ಸಿಸ್ ಎಂದರೇನು?

ಅನಾಫೈಲಾಕ್ಸಿಸ್ ಎಂದರೇನು?

anaphylaxis ಎಂದರೆ ಅತಿ ಗಂಭೀರ ರೂಪದ ಅಲರ್ಜಿ ಪ್ರತಿಕ್ರಿಯೆ. ಇದು ಇಡಿಯ ದೇಹವನ್ನೇ ಬಾಧಿಸಬಹುದು.

ರೋಗಲಕ್ಷಣಗಳಲ್ಲಿ ಈ ಕೆಳಗಿನವು ಒಳಗೊಂಡಿರಬಹುದು:

  • ದೇಹವಿಡೀ ದದ್ದುಗಳೇಳುವುದು ಮತ್ತು ಅಸಾಧ್ಯ ತುರಿಕೆ
  • ಉಬ್ಬಸ ಅಥವಾ ಉಸಿರಾಟದ ತೊಂದರೆ
  • ಗಂಟಲಿನಲ್ಲಿ ಗಟ್ಟಿತನ ಅಥವಾ ಬಿಗಿತ
  • ಕೈ, ಕಾಲು, ತುಟಿ ಅಥವಾ ನೆತ್ತಿಯಲ್ಲಿ ಸೂಜಿ ಚುಚ್ಚಿದಂತಹ ಅನುಭವ
  • ಅನಾಫೈಲಾಕ್ಸಿಸ್ ಮಾರಣಾಂತಿಕವಾಗಿದೆ, ಆದ್ದರಿಂದ ಇದು ಎದುರಾದ ತಕ್ಷಣವೇ ತುರ್ತು ಸೇವೆಗೆ ಕರೆ ಮಾಡಿ. ನಿಮ್ಮಲ್ಲಿ ಎಪಿನ್ಫ್ರಿನ್ ಆಟೋ-ಇಂಜೆಕ್ಟರ್ ಇದ್ದರೆ, ನಿಮ್ಮ ರೋಗಲಕ್ಷಣಗಳು ಸುಧಾರಿಸದಿದ್ದರೆ ಅದನ್ನು ಬಳಸಬೇಕು ಮತ್ತು 5 ರಿಂದ 15 ನಿಮಿಷಗಳ ನಂತರ ಪುನರಾವರ್ತಿಸಿ. ನಿಮ್ಮ ರೋಗಲಕ್ಷಣಗಳು ನಿಂತುಹೋದಂತೆ ತೋರುತ್ತಿದ್ದರೂ ಸಹ, ನೀವೇ ಸ್ವತಃ ಈ ಔಷಧಿಗಳನ್ನು ಪಡೆದ ಬಳಿಕವೂ ನಿಮಗೆ ಹೆಚ್ಚಿನ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ, ಏಕೆಂದರೆ ತಡವಾಗಿ ಸಂಭವಿಸುವ ಪ್ರತಿಕ್ರಿಯೆ ಕೊಂಚ ಹೊತ್ತಿನ ಬಳಿಕವೇ ಕಾಣಿಸಿಕೊಳ್ಳಬಹುದು.

English summary

Allergy Basic Information You Kneed Know

Most of the pepople suffer from allergy.If you know these information, better to understand allergy, read on.
X
Desktop Bottom Promotion