For Quick Alerts
ALLOW NOTIFICATIONS  
For Daily Alerts

ಆಭರಣದಿಂದ ನಿಮಗೆ ಅಲರ್ಜಿ ಆಗುತ್ತಿದೆಯಾ?

|
Treat Jewellery Allergic Reaction
ಆಭರಣಗಳೆಂದರೆ ಮಹಿಳೆಯರಿಗೆ ಅಚ್ಚುಮೆಚ್ಚು. ಆದರೆ ಕೆಲ ಮಹಿಳೆಯರಿಗೆ ಆಭರಣಗಳೆಂದರೆ ಅಲರ್ಜಿ. ಅಂದರೆ ಕೆಲವು ಆಭರಣಗಳಲ್ಲಿನ ಮೆಟಲ್ ಅಂಶ ಚರ್ಮದೊಂದಿಗೆ ಬೆರೆತು ಅಲರ್ಜಿ ಉಂಟುಮಾಡುತ್ತದೆ. ಅದರಲ್ಲೂ ಸರ ತೊಡುವ ಕತ್ತಿನ ಭಾಗ ಕಪ್ಪಾಗಿ ಹೋದರೆ ಒಡವೆ ತೊಡಲೂ ಹಿಂಜರಿಕೆ. ಆದ್ದರಿಂದ ಆಭರಣದ ಅಲರ್ಜಿ ತಡೆಯುವುದು ಹೇಗೆ ಎಂದು ತಿಳಿದುಕೊಳ್ಳಿ.

ಆಭರಣದ ಅಲರ್ಜಿಯನ್ನು ದೂರಮಾಡುವುದು ಹೇಗೆ?

1. ನಿಕ್ಕಲ್ ಅಂಶ ಹೆಚ್ಚಿರುವ ಆಭರಣವನ್ನು ತೊಡದಿದ್ದರೆ ಒಳ್ಳೆಯದು. ( ನಿಕ್ಕಲ್ ಅಂಶ ಶೇಕಡಾ 10 ಕ್ಕಿಂತ ಹೆಚ್ಚಿದ್ದರೆ ಒಳ್ಳೆಯದಲ್ಲ). ಇದು ಚರ್ಮದ ತುರಿಕೆ ಮತ್ತು ಚರ್ಮದ ಮೇಲೆ ಕೆಂಪು ಗುಳ್ಳೆಗಳೇಳುವಂತೆ ಮಾಡುತ್ತದೆ.

2. ಮೆಟಲ್ ಆಭರಣಗಳನ್ನು ತೊಡುವ ಮುನ್ನ ಕುತ್ತಿಗೆಗೆ ಮಾಯಿಶ್ಚರೈಸರ್ ಅಥವಾ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಟಾಲ್ಕಂ ಪೌಡರ್ ಹಚ್ಚಿಕೊಳ್ಳಬಹುದು.

3. ಈಗಾಗಲೇ ಆಭರಣದಿಂದ ನಿಮಗೆ ಅಲರ್ಜಿ ಆಗಿದ್ದರೆ ಕ್ಯಾಲಮೈನ್ ಲೋಶನ್ ಅಥವಾ ಆಂಟಿಹಿಸ್ಟಮೈನ್ ಕ್ರೀಂ ಅಥವಾ ಹೈಡ್ರೋಕಾರ್ಟಿಸೋನ್ ಕ್ರೀಂ ಬಳಸಿದರೆ ಬೇಗನೆ ಪರಿಹಾರ ಕಂಡುಕೊಳ್ಳಬಹುದು.

4. ಆದರೆ ಆಭರಣದಿಂದ ಉಂಟಾದ ಚರ್ಮದ ಸೋಂಕು ಅತಿಯಾದಂತೆ ಕಂಡರೆ ತಕ್ಷಣವೇ ಚರ್ಮ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

English summary

Neck Jewellery Irritation | Treat Allergic Reaction | Dermatitis | ಆಭರಣಗಳಿಂದ ಕತ್ತಿನ ಅಲರ್ಜಿ | ಅಲರ್ಜಿಯಾದರೆ ಏನು ಮಾಡಬೇಕು | ಡರ್ಮಾಟಿಟಿಸ್

Does the neck look green or red even after you wash and apply a number of medicines? Well, the reason is that the metal in jewel is reacting with skin and may also harm body internally. Take a look to know how to prevent and treat neck from jewellery irritation.
Story first published: Tuesday, October 4, 2011, 16:12 [IST]
X
Desktop Bottom Promotion