Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನಿಮಗೆ ಯಾವ ಆಹಾರದಿಂದ ಅಲರ್ಜಿಯಾಗುತ್ತಿರಬಹುದು?

ಆಹಾರ ಅಲರ್ಜಿಯಲ್ಲಿ ಅನೇಕ ತರಹವಿದೆ. ಆದರೆ ಯಾವ ಆಹಾರ ಅಲರ್ಜಿ ಪ್ರಚೋದಕವಾಗಬಹುದು ಎಂದು ತಿಳಿಯುವುದು ಒಮ್ಮೊಮ್ಮೆ ಕಷ್ಟ. ಆದ್ದರಿಂದ ಇಲ್ಲಿ ಅಲರ್ಜಿ ಉಂಟುಮಾಡುವ ಐದು ರೀತಿಯ ಆಹಾರವನ್ನು ನೀಡಲಾಗಿದೆ.
ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಐದು ಆಹಾರ ಅಲರ್ಜಿ:
* ಕಡಲೆಕಾಯಿ ಅಲರ್ಜಿ: ಸಣ್ಣಗಿರುವ ಕಡಲೆಕಾಯಿ ಹೇಗೆ ದೇಹಕ್ಕೆ ಅಷ್ಟು ತೊಂದರೆ ಕೊಡುತ್ತೆ ಎಂದು ಅಂದುಕೊಳ್ಳಬಹುದು, ಆದರೆ ಕೆಲವೊಬ್ಬರಿಗೆ ಕಡಲೆ ಕಾಯಿ ಅಲರ್ಜಿ ಆದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಎಲ್ಲಾ ತರಹದ ಅಲರ್ಜಿಗೆ ಹೋಲಿಸಿದರೆ ಕಡಲೆಕಾಯಿಯ ಅಲರ್ಜಿ ಹೆಚ್ಚು ಗಂಭೀರವಾಗಿದ್ದು, ಮಕ್ಕಳಲ್ಲಿ ಇದು ಜಾಸ್ತಿ ಕಾಣಿಸಿಕೊಳ್ಳುತ್ತದೆ.
* ಸಮುದ್ರಾಹಾರದ ಅಲರ್ಜಿ: ಕೆಲವು ಸಮುದ್ರ ಆಹಾರಗಳಾದ ಸೀಗಡಿ, ಚೇಳೇಡಿ, ಮೃದ್ವಂಗಿ ಮೀನು, ಕಪ್ಪೆ ಚಿಪ್ಪಿನ ಮೀನು ಅಥವಾ ಸಾದಾ ಮೀನೂ ಕೂಡ ಕೆಲವು ಬಾರಿ ಅಲರ್ಜಿ ಉಂಟು ಮಾಡುತ್ತದೆ. ಇದರಲ್ಲಿನ ಅಯೋಡಿನ್ ಅಂಶವೇ ಅಲರ್ಜಿಗೆ ಪ್ರಚೋದಕ. ಸುಮಾರು ಎಲ್ಲಾ ಸಮುದ್ರಾಹಾರದಲ್ಲೂ ಈ ಅಯೋಡಿನ್ ಅಂಶ ಇರುವುದರಿಂದ, ಈ ಆಹಾರ ದೇಹಕ್ಕೆ ಒಗ್ಗದವರು ಇದರಿಂದ ದೂರವಿದ್ದರೆ ಒಳಿತು.
* ಮೊಟ್ಟೆ ಅಲರ್ಜಿ: ತುಂಬಾ ಚಿಕ್ಕವರಿದ್ದಾಗ ಸಾಮಾನ್ಯವಾಗಿ ಮೊಟ್ಟೆ ಅಲರ್ಜಿ ಕಾಣಿಸಿಕೊಂಡು ಬೆಳವಣಿಗೆ ಹೊಂದುತ್ತಿದ್ದಂತೆ ಮಾಯವಾಗುತ್ತದೆ. ಮೊಟ್ಟೆ ಬಿಳಿಭಾಗವಾದ ಆಲ್ಬುಮಿನ್ ಅಲರ್ಜಿಗೆ ಕಾರಣ ಅಂಶ. ಮೊಟ್ಟೆ ಬಿಳಿ ಭಾಗವನ್ನು ತಿನ್ನದಿದ್ದರೆ ಈ ಅಲರ್ಜಿಯಿಂದ ಸುಲಭವಾಗಿ ಪಾರಾಗಬಹುದು.
* ಹಾಲಿನ ಅಲರ್ಜಿ: ಹಾಲಿನಲ್ಲಿರುವ ಲ್ಯಾಕ್ಟೋಸ್ ಕೆಲವೊಬ್ಬರಿಗೆ ಅಲರ್ಜಿ ನೀಡಬಹುದು.ನಿಮ್ಮ ದೇಹದಲ್ಲಿ ಅವಶ್ಯಕ ಎಂಜೈಮ್ ಇಲ್ಲದಿದ್ದರೆ ಅಥವಾ ಜೀರ್ಣಕ್ರಿಯೆ ಸರಿಯಿಲ್ಲದಿದ್ದ ಸಮಯದಲ್ಲಿ ಈ ಅಲರ್ಜಿ ಬೇಗನೆ ತಗುಲುತ್ತದೆ. ಚೀಸ್, ಬೆಣ್ಣೆ, ಮೊಸರು ಇಂತಹ ಪದಾರ್ಥಗಳನ್ನು ತಿನ್ನದಿದ್ದರೆ ಈ ಅಲರ್ಜಿಯಿಂದ ತಪ್ಪಿಸಿಕೊಳ್ಳಬಹುದು.
* ಸೋಯಾ ಅಲರ್ಜಿ: ಸೋಯಾ ಬೀನ್ ಅಂಶದಿಂದ ಉತ್ಪಾದಿಸಿದ ಸೋಯಾ ಹಾಲು, ಸೋಯಾ ಸಾಸ್ ಕೂಡ ಅಲರ್ಜಿಗೆ ಕಾರಣವಾಗುತ್ತದೆ. ಆದರೆ ಇದು ತುಂಬಾ ವಿರಳ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









