For Quick Alerts
ALLOW NOTIFICATIONS  
For Daily Alerts

ಧೂಳಿನ ಅಲರ್ಜಿ ಲಕ್ಷಣಗಳು ಮತ್ತು ಚಿಕಿತ್ಸೆ

By Hemanth P
|

ಧೂಳಿನ ಅಲರ್ಜಿಗಿಂತ ಕಿರಿಕಿರಿ ಮತ್ತು ಯಾತನಾಮಯ ವಿಷಯ ಮತ್ತೊಂದು ಇರಲಿಕ್ಕಿಲ್ಲ. ಧೂಳಿನ ಅಲರ್ಜಿಯಿಂದಾಗಿ ಕೆಲವೊಮ್ಮೆ ಮೂಗು ಕಟ್ಟುವಿಕೆ, ಮಲಗಲು ತೊಂದರೆ ಮತ್ತು ಉಬ್ಬಸ, ಉಸಿರಾಟದ ತೊಂದರೆ ಯಾವಾಗಲೂ ಕಾಡಬಹುದು. ಇಂತಹ ಸಮಯದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವಂತೆ ಹೇಳಲಾಗುತ್ತದೆ. ಧೂಳಿನ ಅಲರ್ಜಿಯ ಪ್ರಮುಖ ಲಕ್ಷಣವೆಂದರೆ ಸಾಮಾನ್ಯ ಶೀತ, ಆದರೆ ಇದು ಧೂಳಿನ ಅಲರ್ಜಿಯಿಂದ ಬಂದಿರುತ್ತದೆ ಎಂದು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ.

ಧೂಳಿನ ಅಲರ್ಜಿಯ ಸಾಮಾನ್ಯ ಲಕ್ಷಣಗಳೆಂದರೆ ಸೀನುವಿಕೆ, ಸ್ರವಿಸುವ ಮೂಗು, ತುರಿಕೆ, ಕಣ್ಣು ಕೆಂಪಾಗುವುದು ಅಥವಾ ನೀರು ಬರುವುದು, ಮೂಗು ಕಟ್ಟುವಿಕೆ, ಮೂಗು ತುರಿಸುವುದು ಇತ್ಯಾದಿ.

ಧೂಳಿನ ಅಲರ್ಜಿಯಾಗುವವರು ಕೆಲವೊಂದು ಮನೆಮದ್ದು ಮತ್ತು ಸರಳ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು ತುಂಬಾ ಮುಖ್ಯ. ಇದು ತುಂಬಾ ತೀವ್ರವಾಗಿದ್ದರೆ ನೀವು ವೈದ್ಯರನ್ನು ಭೇಟಿ ಮಾಡಿ. ಸಾಮಾನ್ಯ ಲಕ್ಷಣಗಳಿಗೆ ವೈದ್ಯರನ್ನು ಭೇಟಿಯಾಗಬೇಕೆಂದಿಲ್ಲ. ಧೂಳಿನ ಅಲರ್ಜಿಯಿಂದ ಸಾಮಾನ್ಯ ಶೀತ, ಇದು ವಾರಕ್ಕಿಂತ ಹೆಚ್ಚಿನ ಸಮಯ ಇದ್ದರೆ ಆಗ ಅದು ಧೂಳಿನ ಅಲರ್ಜಿಯೆಂದು ಪರಗಣಿಸಬೇಕು. ಕೆಲವೊಮ್ಮೆ ಧೂಳಿನ ಅಲರ್ಜಿ ಅಸ್ತಮಾಗೆ ಕಾರಣವಾಗಬಹುದು ಮತ್ತು ಇದು ನಿಮಗೆ ಕಿರಿಕಿರಿ ಉಂಟು ಮಾಡಬಹುದು. ರೋಗನಿರೋಧಕ ವ್ಯವಸ್ಥೆ ಹೊರಗಿನ ಅಂಶಗಳಾದ ಪರಾಗ, ಸಾಕುಪ್ರಾಣಿಗಳೊಂದಿಗೆ ಅಡ್ಡಾಡುವುದು ಮತ್ತು ಧೂಳಿನ ಕ್ರಿಮಿಗಳಿಗೆ ಪ್ರತಿಕ್ರಿಯಿಸಿದಾಗ ಧೂಳಿನ ಅಲರ್ಜಿ ಉಂಟಾಗುತ್ತದೆ.

ಧೂಳಿನ ಅಲರ್ಜಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಧೂಳಿನಿಂದ ದೂರವಿರಿ. ಮ್ಯಾಟ್, ಹಾಸಿಗೆ ಮತ್ತು ಪೀಠೋಪಕರಣಗಳ ಮೇಲೆ ಧೂಳಿನ ಕ್ರಿಮಿಗಳು ಅಡಗಿರುತ್ತದೆ. ನಿಮ್ಮ ಮನೆ ಮತ್ತು ವಾಸದ ಕೋಣೆಗಳನ್ನು ಸ್ವಚ್ಛ ಮತ್ತು ಧೂಳಿನಿಂದ ಮುಕ್ತವಾಗಿಡಿ. ನೀವು ಕೆಲಸ ಮಾಡುವಂತಹ ಸ್ಥಳವು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆಯಾ ಮತ್ತು ಧೂಳಿನಿಂದ ಮುಕ್ತವಾಗಿದೆಯಾ ಎಂದು ಗಮನಿಸಿ. ನೀವು ಹೊರಗಡೆ ಹೋಗುವಾಗ ಮೂಗಿಗೆ ಮಾಸ್ಕ್ ಅಥವಾ ಮೂಗನ್ನು ಬಟ್ಟೆಯಿಂದ ಮುಚ್ಚುವುದರಿಂದ ಧೂಳಿನ ಅಲರ್ಜಿಯಿಂದ ನಿಮ್ಮನ್ನು ದೂರವಿಡಬಹುದು.

ಧೂಳಿನ ಅಲರ್ಜಿಯ ಕೆಲವೊಂದು ಲಕ್ಷಣಗಳು ಹೀಗಿವೆ

ಏರಿಳಿತದ ಜ್ವರ

ಏರಿಳಿತದ ಜ್ವರ

ಕಾರಣ ಮತ್ತು ಲಕ್ಷಣಗಳು:

ಧೂಳಿನ ಅಲರ್ಜಿಯಿಂದ ಉಂಟಾಗುವ ಅತ್ಯಂತ ಸಾಮಾನ್ಯ ಅಲರ್ಜಿ ರೋಗವೆಂದರೆ ಏರಿಳಿತದ ಜ್ವರ. ಇದು ತುರಿಕೆ, ಕಣ್ಣಿನಲ್ಲಿ ನೀರು, ಪದೇ ಪದೇ ಸೀನು, ಮೂಗು ಕಟ್ಟುವಿಕೆ, ಬಾಯಿಯ ಮೇಲ್ಭಾಗದಲ್ಲಿ ತುರಿಕೆ, ಕಫ, ಗಂಟಲಿನಲ್ಲಿ ಕೆರೆತ

ಏರಿಳಿತದ ಜ್ವರ

ಏರಿಳಿತದ ಜ್ವರ

ಚಿಕಿತ್ಸೆ:

ಮೆಡಿಕಲ್ ಶಾಪ್ ಗಳಲ್ಲಿ ಇಂದು ಇದಕ್ಕಾಗಿ ಹಲವಾರು ಔಷಧಿಗಳಿವೆ ಮತ್ತು ಮೆಡಿಕಲ್ ಶಾಪ್ ನವರು ನಿಮಗೆ ಯಾವುದು ಒಳ್ಳೆಯದು ಎಂದು ಸಲಹೆ ಮಾಡಬಹುದು. ಆಂಟಿಹಿಸ್ಟಾಮೈನ್ ಮಾತ್ರೆ ಅಥವಾ ಸಿರಫ್ ನಿಮ್ಮ ದೇಹದಲ್ಲಿ ಹಿಸ್ಟಮಿನ್ ಉತ್ಪತ್ತಿಯಾಗುವುದನ್ನು ತಡೆದು ಅಲರ್ಜಿಯಿಂದ ಉಂಟಾಗುವ ಅಲರ್ಜಿಯ ರೋಗ ತಡೆಯುತ್ತದೆ.

ಅಸ್ತಮಾ

ಅಸ್ತಮಾ

ಕಾರಣ ಮತ್ತು ಲಕ್ಷಣಗಳು

ಕೆಲವು ಸಲ ಧೂಳಿನ ಅಲರ್ಜಿಯು ಅಸ್ತಮಾಕ್ಕೆ ಕಾರಣವಾಗಬಹುದು. ಪರಾಗ, ಧೂಳು ಮತ್ತು ಧೂಳಿನ ಕ್ರಿಮಿಗಳಲ್ಲಿ ಇರುವ ಕೆಲವೊಂದು ಅಲರ್ಜಿಕಾರಕಗಳು ಅಸ್ತಾಮಾಕ್ಕೆ ಕಾರಣವಾಗಬಹುದು. ಅಸ್ತಮಾ ದೀರ್ಘಕಾಲದ ರೋಗವಾಗಿದ್ದು, ಇದರಿಂದ ಬಳಲುವ ರೋಗಿಗಳು ಉಸಿರಾಟದ ತೊಂದರೆ ಮತ್ತು ಕೆಮ್ಮುವಿಕೆ ಉಂಟಾಗುತ್ತದೆ. ಕೆಲವೊಮ್ಮೆ ಅಸ್ತಮಾದಿಂದ ಉಸಿರಾಟದ ತೊಂದರೆ, ಚರ್ಮದ ಬಣ್ಣ ನೀಲಿಯಾಗುವುದು, ಅರೆನಿದ್ರಾವಸ್ಥೆ ಇತ್ಯಾದಿ ಉಂಟಾಗಬಹುದು.

ಅಸ್ತಮಾ

ಅಸ್ತಮಾ

ಚಿಕಿತ್ಸೆ: ದೀರ್ಘಾವಧಿ ತನಕ ಧೂಳು ಮತ್ತು ಹೊಗೆ ಹತ್ತಿರ ಇರುವುದನ್ನು ಕಡೆಗಣಿಸಿ. ನಿಮ್ಮ ವಾಸಿಸುವ ಸ್ಥಳವು ಧೂಳಿನಿಂದ ಮುಕ್ತವಾಗಿರಲಿ ಮತ್ತು ನಿಯಮಿತವಾಗಿ ಸ್ವಚ್ಛಗೊಳಿಸುವ ಕಾರಣ ಧೂಳಿನ ಕ್ರಿಮಿಗಳು ಕಡಿಮೆಯಾಗುತ್ತದೆ. ಅಸ್ತಮಾವನ್ನು ಸಂಪೂರ್ಣವಾಗಿ ನಿವಾರಿಸುವುದು ಕಷ್ಟ. ಆದರೆ ಅದರ ಗುಣಲಕ್ಷಣಗಳನ್ನು ನೋಡಿಕೊಂಡು ಚಿಕಿತ್ಸೆ ಮಾಡಬಹುದು. ನೀವು ರಿಲೀವರ್ ಗಳನ್ನು ಬಳಸಬಹುದು. ಇದು ತಕ್ಷಣ ಪರಿಣಾಮ ಉಂಟುಮಾಡುವ ಔಷಧಿ. ವಾಯುಮಾರ್ಗದ ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ ಅಥವಾ ತಡೆಯುತ್ತದೆ. ಇದು ತುಂಬಾ ದೀರ್ಘಾವಧಿಗೆ ಕೆಲಸ ಮಾಡುತ್ತದೆ ಮತ್ತು ವಾಯುಮಾರ್ಗದಲ್ಲಿರುವ ಉರಿಯೂತ ತಗ್ಗಿಸುತ್ತದೆ.

ಇಸಬು

ಇಸಬು

ಕಾರಣ ಮತ್ತು ಲಕ್ಷಣಗಳು

ಇಸಬು ಚರ್ಮದ ನವೆ ಉರಿಯೂತ. ಚರ್ಮದ ಹಾನಿಗೊಳಗಾದ ಭಾಗವು ಕೆಂಪಾಗುವುದು ಇದರ ಒಂದು ಚಿಹ್ನೆ. ದಪ್ಪಗಾದ ಒಣಚರ್ಮದ ಪಟ್ಟಿ, ಉಂಡೆಗಳು ಮತ್ತು ಚರ್ಮದಲ್ಲಿ ಬೊಕ್ಕೆಗಳು ಏಳುವುದು, ಬಾಹ್ಯ ಸೋಂಕಿನ ಚಿಹ್ನೆಗಳು. ಇದು ಹೆಚ್ಚಾಗಿ ಮಕ್ಕಳನ್ನು ಭಾದಿಸುತ್ತದೆ ಮತ್ತು 40 ಮೀರಿದ ವಯಸ್ಕರನ್ನು ಇದು ಕಾಡುವುದಿಲ್ಲ. ಮನೆ ಹಾಗೂ ಇತರ ಕೆಲವು ಸ್ಥಳಗಳಲ್ಲಿ ಇರುವ ಧೂಳಿನ ಕ್ರಿಮಿಗಳು ಸತತವಾಗಿ ದೇಹದ ಮೇಲೆ ದಾಳಿ ಮಾಡುವುದರಿಂದ ಇಸಬು ಹೆಚ್ಚುತ್ತದೆ.

ಇಸಬು

ಇಸಬು

ಚಿಕಿತ್ಸೆ

ಹೆಚ್ಚಿನ ಜನರಿಗೆ ಇಸಬುಗೆ ಚಿಕಿತ್ಸೆ ಪರಿಣಾಮಕಾರಿಯಾಗುತ್ತದೆ. ಆದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ. ಚಿಕಿತ್ಸೆಯ ಮೂಲಭೂತ ಅಂಶಗಳನ್ನು ಅನುಸರಿಸಿಕೊಂಡು ಹೋದರೆ ಅದು ಸಾಮಾನ್ಯವಾಗಿ ಒಳ್ಳೆಯ ರೀತಿ ಕೆಲಸ ಮಾಡುತ್ತದೆ. ಇಸಬುನ್ನು ಸಂಪೂರ್ಣವಾಗಿ ನಿವಾರಣೆಯಾಗುವುದು ತುಂಬಾ ಅಪರೂಪ.

English summary

Symptoms and cure for dust allergy

There is nothing more agonising and irritating than going through dust allergy. The symptoms can sometime lead to severe nasal congestion, difficulty sleeping or wheezing, shortness of breath worsening rapidly.
Story first published: Saturday, December 14, 2013, 9:47 [IST]
X
Desktop Bottom Promotion