For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕಾಡುವ ಅಲರ್ಜಿ ಹೋಗಲಾಡಿಸುವುದು ಹೇಗೆ?

|

ಚಳಿಗಾಲ ಶುರುವಾಯಿತೆಂದರೆ ಸಾಕು ಕೆಲವರಿಗೆ ಶೀತ, ಕೆಮ್ಮು, ಆಗಾಗ ಸೀನು ಬರುವುದು ಈ ರೀತಿಯ ಸಮಸ್ಯೆಗಳು ಶುರುವಾಗುವುದು. ಈ ರೀತಿಯ ಅಲರ್ಜಿ ಸಮಸ್ಯೆ ಚಳಿಗಾಲ ಮುಗಿಯುವವರೆಗೆ ಇರುತ್ತದೆ. ಅಲರ್ಜಿ ಉಂಟಾದರೆ ಕೆಮ್ಮು, ಮೂಗು ಸೋರುವುದು, ಕಣ್ಣಿನಲ್ಲಿ ನೀರು ಬರುವುದು ಹೀಗೆ ನಾನಾ ಸಮಸ್ಯೆ ಕಂಡು ಬರುತ್ತದೆ.

Winter Allergy

ಅಲರ್ಜಿ ಉಂಟಾದರೆ ಅಲರ್ಜಿಗೆ ಔಷಧಿಗೆ ತೆಗೆಯುವ ಮುನ್ನ ಅಲರ್ಜಿ ಬರುವುದನ್ನು ಮೊದಲು ತಡೆಗಟ್ಟಬೇಕು, ಏಕೆಂದರೆ ಈ ಅಲರ್ಜಿ ಸಮಸ್ಯೆ ಹೊರಗಡೆಯಿಂದ ಬರುವುದಕ್ಕಿಂತ ಮನೆಯೊಳಗಡೆಯಿಂದಲೇ ಹೆಚ್ಚಾಗಿ ಉಂಟಾಗುವುದು.

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಲರ್ಜಿಗಳೆಂದರೆ

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಲರ್ಜಿಗಳೆಂದರೆ

*ದೂಳಿನ ಹುಳಗಳ ಮೂಲಕ ಹರಡುವ ಅಲರ್ಜಿ

ಈ ರೀತಿಯ ಅಲರ್ಜಿ ಮನೆಯ ಬೆಡ್‌, ಕುರ್ಚಿ, ಸೋಫಾ, ಕಾರ್ಪೆಟ್‌ಗಳ ಮೂಲಕ ಹರಡುತ್ತದೆ. ಈ ಹುಳಗಳು ಬೆಚ್ಚಗಿನ ಸ್ಥಳಗಳಾದ ಕಾರ್ಪೆಟ್, ಬೆಡ್, ಸೋಫಾಗಳ ಮೇಲೆ ಕೂತು ಅಲ್ಲೇ ಸತ್ತು ಹೋಗುತ್ತವೆ. ಇದು ಮನೆಯ ದೂಳಿನ ಜತೆ ಸೆರುತ್ತದೆ.

ಮನೆಯನ್ನು ಆಗಾಗ ಸ್ವಚ್ಛ ಮಾಡದೇ ಇದ್ದಾಗ, ಚಳಿಗೆ ಹೀಟರ್ ಬಳಸಿದಾಗ ಅಲರ್ಜಿ ಉಂಟಾಗುವುದು.

* ಬೆಕ್ಕು, ನಾಯಿಯ ರೋಮದಿಂದ ಅಲರ್ಜಿ ಸಮಸ್ಯೆ ಉಂಟಾಗುವುದು

ಮನೆಯಲ್ಲಿ ನಾಯಿ, ಬೆಕ್ಕು ಇದ್ದರೆ ಅದರ ರೋಮ ಬಿದ್ದಿರುತ್ತದೆ, ಮನೆಯ ದೂಳು ಚೆನ್ನಾಗಿ ತೆಗೆಯದಿದ್ದರೆ ಇದರಿಂದ ಅಲರ್ಜಿ ಉಂಟಾಗುವುದು. ಅಲರ್ಜಿ ಸಮಸ್ಯೆ ಇರುವವರು ಬೆಕ್ಕು, ನಾಯಿ ಜತೆ ಆಡದೆ ಅದರಿಂದ ಸ್ವಲ್ಪ ದೂರ ಇರುವುದು ಒಳ್ಳೆಯದು.

* ಮನೆಯಲ್ಲಿ ಶೀತ ಇರುವ ಸ್ಥಳ

ಮನೆಯ ನೆಲ್ಲಿಯಲ್ಲಿ ಸೋರಿಕೆಯಿದ್ದರೆ, ಸಿಂಕ್, ಬಾತ್‌ರೂಂ ಸರಿಯಾಗಿ ಸ್ವಚ್ಛ ಮಾಡದಿದ್ದರೆ ಆ ಜಾಗದಲ್ಲಿ ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗಿ ಇದರಿಂದ ಅಲರ್ಜಿ ಉಂಟಾಗುವುದು.

* ಮನೆಯಲ್ಲಿ ಕತ್ತಲಿರುವ ಹಾಗೂ ತೇವಾಂಶವಿರುವ ಸ್ಥಳದಿಂದ ಕೂಡ ಅಲರ್ಜಿ ಸಮಸ್ಯೆ ಉಂಟಾಗುವುದು.

ಜಿರಳೆ ಅಲರ್ಜಿ

ಮನೆಯ ಮೂಲೆಗಳಲ್ಲಿ ಹಾಗು ಕತ್ತಲೆ ಇರುವ ಜಾಗದಲ್ಲಿ ಜಿರಳೆಗಳು ಅವಿತು ಕುಳಿತುಕೊಂಡಿರುತ್ತದೆ. ಇದರಿಂದಾಗಿ ಅಲರ್ಜಿ ಸಮಸ್ಯೆ ಉಂಟಾಗುವುದು. ಮನೆಯಲ್ಲಿ ತಿಂದ ಆಹಾರವನ್ನು ಸ್ವಚ್ಛ ಮಾಡದೆ ಹಾಗೆ ಬಿಡುವುದು, ಮನೆ ಸ್ವಚ್ಛ ಮಾಡದೆ ಇರುವುದು ಇವುಗಳಿಂದ ಜಿರಳೆ ಸಮಸ್ಯೆ ಹೆಚ್ಚುವುದು.

ಅಲರ್ಜಿಯ ಲಕ್ಷಣಗಳು

ಅಲರ್ಜಿಯ ಲಕ್ಷಣಗಳು

* ಸೀನು

* ಮೂಗು ತುರಿಸುವುದು, ಶೀತ

* ಕಣ್ಣು ತುರಿಸುವುದು

* ಗಂಟಲು ಕೆರೆತ

* ಕಿವಿಯಲ್ಲಿ ತುರಿಕೆ

* ಕಟ್ಟಿದ ಮೂಗಿನಿಂದಾಗಿ ಉಸಿರಾಟಕ್ಕೆ ತೊಂದರೆ

* ಒಣ ಕೆಮ್ಮು

* ತ್ವಚೆಯಲ್ಲಿ ತುರಿಕೆ ಕಂಡು ಬರುವುದು

* ಮೈಯಲ್ಲಿ ಗುಳ್ಳೆಗಳು ಏಳುವುದು

* ಹುಷಾರು ತಪ್ಪುವುದು

* ಸಣ್ಣ ಮಟ್ಟಿನ ಜ್ವರ ಕಾಣಿಸುವುದು

ಅಲರ್ಜಿ ಹೆಚ್ಚಾದರೆ ಈ ಲಕ್ಷಣಗಳು ಕಂಡು ಬರುವುದು

ಅಲರ್ಜಿ ಹೆಚ್ಚಾದರೆ ಈ ಲಕ್ಷಣಗಳು ಕಂಡು ಬರುವುದು

* ಉಸಿರಾಟಕ್ಕೆ ತೊಂದರೆ

* ಅಸ್ತಮಾ

* ಸುಸ್ತು

* ವೇಗವಾಗಿ ಉಸಿರಾಡುವುದು

* ತುಂಬಾ ಸುಸ್ತು

ಅಲರ್ಜಿ VS ಶೀತ

ಅಲರ್ಜಿ VS ಶೀತ

ಅಲರ್ಜಿ ಹಾಗೂ ಶೀತದ ನಡುವೆ ತುಂಬಾ ವ್ಯತ್ಯಾಸವಿದೆ. ಶೀತ ವೈರಸ್‌ನಿಂದ ಹರಡುತ್ತದೆ. ಶೀತ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ನಮ್ಮ ದೇಹದ ಮುಗಿನಲ್ಲಿ ಹಿಸ್ಟಾಮೈನ್ ಎಂಬ ಸಾವಯವ ಸಾರಜನಕ ಸಂಯುಕ್ತ ಬಿಡುಗಡೆಯಾಗುತ್ತದೆ, ಇದು ರೋಗ ನಿರೋಧಕ ಸಾಂರ್ಥ್ಯವನ್ನು ಹೆಚ್ಚಿಸುತ್ತದೆ. ಅಲರ್ಜಿ ಉಂಟಾದಾಗ ಇದರ ಸಾಮರ್ಥ್ಯ ಕಡಿಮೆಯಾಗಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಶೀತದ ಲಕ್ಷಣಗಳು

* ತುಂಬಾ ದಿನದವರೆಗೆ ಇರುತ್ತದೆ

* ಶೀತ ಯಾವಾಗ ಬೇಕಾದರೂ ಬರಬಹುದು, ಅದರೆ ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

* ಸೋಂಕು ಆದ ಕೆಲವು ದಿನದ ಬಳಿಕ ಆರೋಗ್ಯ ಸಮಸ್ಯೆ ಕಾಡುವುದು

* ಮೈಕೈ ನೋವು, ಜ್ವರ ಬರುವುದು

* ಕೆಮ್ಮು, ಮೂಗು ಸೊರುವುದು, ಗಂಟಲು ಕೆರೆತ ಉಂಟಾಗುವುದು

* ಕಣ್ಣಿನಲ್ಲಿ ನೀರು ಬರುವುದು, ತುರಿಕೆ ಕಂಡು ಬರುವುದಿಲ್ಲ.

ಅಲರ್ಜಿಯ ಲಕ್ಷಣಗಳು

* ಅರೋಗ್ಯ ಸಮಸ್ಯೆ ತುಂಬಾ ದಿನ ಕಾಡುವುದು

* ಯಾವಾಗ ಬೇಕಾದರೂ ಅಲರ್ಜಿ ಸಮಸ್ಯೆ ಉಂಟಾಗುವುದು

* ಅಲರ್ಜಿ ವಸ್ತು ನಿಮ್ಮನ್ನು ಸೋಕಿದ ತಕ್ಷಣ ಸಮಸ್ಯೆ ಶುರುವಾಗುವುದು

* ಮೈಕೈ ನೋವು, ಜ್ವರ ಇರುವುದಿಲ್ಲ

* ಕೆಮ್ಮು, ಕಣ್ಣಿನಲ್ಲಿ ತುರಿಕೆ, ಮೂಗು ಸೋರುವುದು, ಗಂಟಲು ಕೆರೆತ ಉಂಟಾಗುವುದು.

* ಕಣ್ಣಿನಲ್ಲಿ ಕೂಡ ನೀರು ಬರುವುದು

ಚಿಕಿತ್ಸೆ

ಚಿಕಿತ್ಸೆ

* ವೈದ್ಯರ ಸಲಹೆ ಪಡೆದು ಮೂಗಿನ ಡ್ರಾಪ್ (Nasal Spray) ಬಳಸಬಹುದು.

*ಜಲನೇತಿ ಚಿಕಿತ್ಸೆ ಪಡೆಯಬಹುದು. ಈ ಚಿಕಿತ್ಸೆಯಲ್ಲಿ ಒಂದು ಮೂಗಿನ ಹೊಳ್ಳೆ ಮುಲಕ ಶುದ್ದ ನೀರನ್ನು ಹಾಕಿ ಮತ್ತೊಂದು ಮೂಗಿನ ಹೊಳ್ಳೆ ಮುಖಾಂತರ ಬಿಡುವುದು. ಈ ಚಿಕಿತ್ಸೆ ಮಾಡುವಾಗ ಪರಿಣಿತರ ಸಲಹೆ ಪಡೆದುಕೊಳ್ಳಿ.

* ಅಲರ್ಜಿ ಸಮಸ್ಯೆ ತುಂಬಾ ಸಮಯದಿಂದ ಕಾಡುತ್ತಿದ್ದರೆ ವೈದ್ಯರು ಬಳಿ ಚಿಕಿತ್ಸೆ ಪಡೆದು ಮಾತ್ರೆಗಳನ್ನು ತೆಗೆದುಕೊಳ್ಳಬಹುದು.

ಅಲರ್ಜಿ ತಡೆಗ್ಟಟುವುದು ಹೇಗೆ?

ಅಲರ್ಜಿ ತಡೆಗ್ಟಟುವುದು ಹೇಗೆ?

* ಬೆಡ್‌, ಹಾಸಿಗೆ, ದಿಂಬು ಇವುಗಳನ್ನು ಸ್ವಚ್ಛವಾಗಿಡಿ. ಇದರಿಂದ ದೂಳಿನ ಹುಳಗಳು ಬರದಂತೆ ತಡೆಗಟ್ಟಬಹುದು.

* ಆಗಾಗ ಬೆಡ್‌ ಶೀಟ್‌, ದಿಂಬು ಕವರ್‌ಗಳನ್ನು ಬಿಸಿ ನೀರಿನಲ್ಲಿ ತೊಳೆಯಿರಿ.

* ಶೀತಾಂಶ ಕಡಿಮೆ ಮಾಡಲು ಮನೆಯೊಳಗೆ ಹೀಟರ್ ಬಳಸಿ.

* ಮನೆಯನ್ನು ಗುಡಿಸಿ, ಒರೆಸಿ ಸ್ವಚ್ಛವಾಗಿಡಿ.

*ಕಾರ್ಪೆಟ್ ಬದಲಿಗೆ ಲಿನೋಲಿಮ್, ಟೈಲ್ ಬಳಸಿ.

* ಅಡುಗೆ ಮನೆ ಸ್ವಚ್ಛವಾಗಿಡಿ, ಇದರಿಂದ ಜಿರಳೆ ಬರದಂತೆ ತಡೆಗಟ್ಟಬಹುದು.

* ನೀರಿನ ನಲ್ಲಿ ಸೋರಿಕೆಯಿದ್ದರೆ ಸರಿಪಡಿಸಿ.

* ಬಾಗಿಲು, ಕಿಟಕಿ, ಗೋಡೆ ಇವುಗಳಲ್ಲಿ ಜಿರಳೆ ಕೂರದಂತೆ ಸ್ವಚ್ಛಗೊಳಿಸಿ.

* ನಾಯಿ, ಬೆಕ್ಕು ಸೋಪಾ, ಬೆಡ್‌ ಮೇಲೆ ಆಡದಂತೆ ಎಚ್ಚರವಹಿಸಿ. ಅವುಗಳಿಗೆ ಕೂರಲು, ಮಲಗಲು ಬೇರೆ ವ್ಯವಸ್ಥೆ ಮಾಡಿ.

English summary

Winter Allergy Causes Symptoms And Treatment

During Winter due to the colder and harsher weather typical you are more likely to spend more time indoors and increase your exposure to indoor allergens. Here we have explained reason for winter allergy and how to prevent it.
X
Desktop Bottom Promotion