For Quick Alerts
ALLOW NOTIFICATIONS  
For Daily Alerts

ಮಳೆ ಹಾಗೂ ಚಳಿಯಲ್ಲಿ ಕಾಡುವ ಅಲರ್ಜಿ ತಡೆಗಟ್ಟುವುದು ಹೇಗೆ?

|

ಅಲರ್ಜಿ ಎದುರಾಗಲು ಕೇವಲ ಬೇಸಿಗೆಯೇ ಆಗಬೇಕಿಲ್ಲ, ಮಳೆಗಾಲ, ಚಳಿಗಾಲದಲ್ಲಿಯೂ ಕೆಲವಾರು ಕಾರಣಗಳಿಂದ ಅಲರ್ಜಿ ಎದುರಾಗಬಹುದು. ಇದಕ್ಕೆ ಪ್ರಮುಖ ಕಾರಣ ಮಳೆಗಾಲ ಹಾಗೂ ಚಳಿಗಾಲದಲ್ಲಿ ಹೊರಗೆ ಹೋಗದೇ ಮನೆಯಲ್ಲಿಯೇ ಹೆಚ್ಚಿನ ಹೊತ್ತು ಇರುವುದು ಮತ್ತು ಮನೆಯ ಒಳಭಾಗದಲ್ಲಿರುವ ಪರದೆ, ನೆಲಹಾಸು, ಹಾಸಿಗೆ ಮೊದಲಾದ ಕಡೆ ಅಡಗಿ ಕುಳಿತಿದ್ದ ಧೂಳಿನ ಕ್ರಿಮಿಗಳು (dust mites), ಸಾಕುಪ್ರಾಣಿಗಳ ದೇಹದಿಂದ ಬಿಡಿಯಾಗಿರುವ ಕೂದಲು ಅಥವಾ ಪುಕ್ಕಗಳ ಸೂಕ್ಷ್ಮ ಎಳೆಗಳು, ಗಾಳಿಯಲ್ಲಿ ತೇಲುವ ಕ್ರಿಮಿಗಳಾದ molds ಮೊದಲಾದವು ಅಲರ್ಜಿಕಾರಕವಾಗಿವೆ.

Tips To Prevent Allergy During Rainy And Winter Season

ಮಳೆ ಸುರಿಯುತ್ತಿದ್ದರೂ ವಾತಾವರಣ ತಂಪಾಗಿ ಚಳಿ ಅನಿಸುವುದು, ಇನ್ನು ಚಳಿಗಾಲದಲ್ಲಿ ಚಳಿ ಇದ್ದೇ ಇರುತ್ತದೆ. ಚಳಿಯಿಂದ ತಪ್ಪಿಸಿಕೊಳ್ಳಲು ನಾವು ಮನೆಯೊಳಗೆ ಸಾಕಷ್ಟು ಬೆಚ್ಚಗಿರುವ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಹೀಟರ್, ಬಿಸಿಗಾಳಿ ಬೀಸುವ ವ್ಯವಸ್ಥೆ, ದಪ್ಪಗಿನ ಕಂಬಳಿ ಮೊದಲಾದವುಗಳಿಂದ ಅಲರ್ಜಿಕಾರಕ ಕಣಗಳಿಗೆ ಒಳ್ಳೆಯದೇ ಆಗುತ್ತದೆ. ಇವು ಇನ್ನಷ್ಟು ಸುಲಭವಾಗಿ ಗಾಳಿಯಲ್ಲಿ ಹಾರಾಡುತ್ತಾ ಇರುತ್ತವೆ.

ಬ್ಯಾಕ್ಟೀರಿಯಾ, ಆಹಾರ ಕಣಗಳು, ಜಿರಳೆಗಳ ಉಚ್ಛಿಷ್ಟಗಳು ಒಣಗಿದ ಬಳಿಕ ಗಾಳಿಗೆ ಸೇರಿಕೊಳ್ಳುವ ಕಣಗಳು, ಬಟ್ಟೆಗಳ ಸೂಕ್ಷ್ಮ ನೂಲುಗಳು, ಸಾಕುಪ್ರಾಣಿಗಳ ಕೂದಲು ಮೊದಲಾದವು ಗಾಳಿಯಲ್ಲಿ ತೇಲುತ್ತಿರುತ್ತವೆ. ಬೇಸಿಗೆಯಲ್ಲಿಯೂ ಇವು ಇರುವುದಿಲ್ಲವೆಂದಲ್ಲ, ಈ ಸಮಯದಲ್ಲಿ ನಾವು ಕಿಟಕಿ ತೆರೆದು ಗಾಳಿಯಾಡುವಂತೆ ಮಾಡುವ ಕಾರಣ ಇವು ಹೊರಹೋಗುತ್ತವೆ. ಆದರೆ ಚಳಿಗಾಲದಲ್ಲಿ ಕಿಟಕಿಗಳನ್ನು ಮುಚ್ಚಿರುವ ಕಾರಣ ಈ ಕಣಗಳಿರುವ ಗಾಳಿ ಒಳಗೇ ಸುತ್ತುತ್ತಾ ಇರುತ್ತದೆ.

ಈ ಕಣಗಳಲ್ಲಿ ಕೆಲವಾದರೂ ಅಲರ್ಜಿಕಾರಕವಾಗಿರುತ್ತವೆ. ಸಾಮಾನ್ಯವಾದ ಅಲರ್ಜಿಯ ಲಕ್ಷಣಗಳೆಂದರೆ ಸೀನುವಿಕೆ, ಕಟ್ಟಿಕೊಳ್ಳುವ ಮೂಗು, ಸತತ ಕೆಮ್ಮು, ಅನಿಯಂತ್ರಿತವಾಗಿ ಸೋರುವ ಮೂಗು, ಕಣ್ಣುಗಳಲ್ಲಿ ತುರಿಕೆ, ಮೂಗು ಗಂಟಲುಗಳಲ್ಲಿ ಕಿರಿಕಿರಿ ಮೊದಲಾದವುಗಳಾಗಿವೆ.

ಕೆಲವು ಸ್ಥಳಗಳಲ್ಲಿ ಗಾಳಿ ತೀರಾ ಒಣಗಿದ್ದು ಇದರಲ್ಲಿ ತೇವಾಂಶ ಅತಿ ಕಡಿಮೆ ಇರುವ ಕಾರಣ ಧೂಳಿನ ಕ್ರಿಮಿಗಳು ಇಲ್ಲಿ ಜೀವಂತವಿರುವುದಿಲ್ಲ. ಹಾಗಾಗಿ ಇಂತಹ ಪ್ರದೇಶಗಳಲ್ಲಿ ಇದು ಪ್ರಾಣಿಗಳ ಉಚ್ಛಿಷ್ಟ ಒಣಗಿದ ಬಳಿಕ ಗಾಳಿಗೆ ತೂರಿಕೊಳ್ಳುವ ಕಣಗಳು ಪ್ರಮುಖ ಅಲರ್ಜಿಕಾರಕವಾಗಿರುತ್ತವೆ. ಆದರೆ ಆರ್ದ್ರತೆ ಕಡಿಮೆ ಇದೆ ಎಂದು ಆರ್ದ್ರತೆ ನೀಡುವ ಉಪಕರಣ ಬಳಸಿದರೆ ಈ ಧೂಳಿನ ಕ್ರಿಮಿಗಳು ಮತ್ತೆ ಕಾಣಿಸಿಕೊಳ್ಳಬಹುದು.

ಮನೆಯೊಳಗೆ ಅಲರ್ಜಿಕಾರಕ ಕಣಗಳಿಂದ ರಕ್ಶಣೆ ಪಡೆಯಲು ಕೆಲವು ಸಲಹೆಗಳು:

ಮನೆಯಲ್ಲಿ ದೂಳು ಕೂರದಂತೆ ಎಚ್ಚರವಹಿಸಿ

ಮನೆಯಲ್ಲಿ ದೂಳು ಕೂರದಂತೆ ಎಚ್ಚರವಹಿಸಿ

ಮನೆಯ ಆರ್ದ್ರತೆಯ ಮಟ್ಟ ಐವತ್ತು ಶೇಖಡಾಕ್ಕಿಂತ ಕಡಿಮೆ ಇರಲಿ. ಇದರಿಂದ ಧೂಳಿನ ಕ್ರಿಮಿಗಳು ಉಂಟಾಗುವ ಸಂಭವವಿರುವುದಿಲ್ಲ.

ಮನೆಯಲ್ಲಿ ಗೋಡೆಯಿಂದ ಗೋಡೆಯವರೆಗೆ ಆವರಿಸುವ ರತ್ನಗಂಬಳಿ ಇದ್ದರೆ ಮಳೆಗಾಲದಿಂದ ಹಿಡಿದು ಚಳಿಗಾಲ ಮುಗಿಯುವವರೆಗೂ ಇದನ್ನು ಮಡಚಿಡಿ. ವಿಶೇಷವಾಗಿ ಕಾಂಕ್ರೀಟ್ ನೆಲದ ಮೇಲೆ ಇಲ್ಲದಿದ್ದರೆ ಒಳ್ಳೆಯದು. ಏಕೆಂದರೆ ಈ ಕಂಬಳಿನ ನೂಲುಗಳ ಒಳಗೆ ಸಾಕುಪ್ರಾಣಿಗಳ ಸೂಕ್ಷ್ಮ ಕೂದಲು, ಪ್ರಾಣಿಗಳ ಉಚ್ಛಿಷ್ಟ ಮೊದಲಾದವು ಸಿಲುಕಿಕೊಂಡು ಗಾಳಿಗೆ ಹರಡುತ್ತವೆ. ಅಲ್ಲದೇ ಕಾಂಕ್ರೀಟ್ ಮತ್ತು ಕಂಬಳಿಯ ನಡುವೆ ತೇವಾಂಶ ಉಳಿದು ಇದು ಬ್ಯಾಕ್ಟೀರಿಯಾಗಳಿಗೆ ಸೂಕ್ತ ಆಶ್ರಯದಾಣವಾಗಿದೆ.

ಸಾಕು ಪ್ರಾಣಿಯನ್ನು ಮಲಗುವ ಕೋಣೆಗೆ ತರಬೇಡಿ

ಸಾಕು ಪ್ರಾಣಿಯನ್ನು ಮಲಗುವ ಕೋಣೆಗೆ ತರಬೇಡಿ

ಅಲರ್ಜಿ ಸಮಸ್ಯೆ ಇರುವವರು ಈ ಸಮಯದಲ್ಲಿ ಸಾಕುಪ್ರಾಣಿಗಳನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಇವುಗಳು ನಿಮ್ಮ ಮಲಗುವ ಕೋಣೆಗೆ ಬರದಂತೆ ಕಡ್ಡಾಯವಾಗಿ ತಪ್ಪಿಸಿ. ಇದರಿಂದ ಕೋಣೆಯಲ್ಲಿ ಅಲರ್ಜಿಕಾರಕ ಕಣಗಳು ಇಲ್ಲವಾಗುವ ಸಂಭವ ಹೆಚ್ಚುತ್ತದೆ.

ನಿಮ್ಮ ಸಾಕುಪ್ರಾಣಿಗಳನ್ನು ವಾರಕ್ಕೊಮ್ಮೆ ಸ್ನಾನ ಮಾಡಿಸಿ.

ನಿಮ್ಮ ಸಾಕುಪ್ರಾಣಿಯೊಂದಿಗೆ ಸಮಯ ಕಳೆದ ಬಳಿಕ ನಿಮ್ಮ ಬಟ್ಟೆಗಳನ್ನು ಬದಲಿಸಿ, ಮಲಗುವ ಮುನ್ನ ತಲೆಸ್ನಾನ ಮಾಡಿಯೇ ಮಲಗಿ.

ಹಾಸಿಗೆ, ದಿಂಬು ಸ್ವಚ್ಛ ಮಾಡಿ

ಹಾಸಿಗೆ, ದಿಂಬು ಸ್ವಚ್ಛ ಮಾಡಿ

ವಾರಕ್ಕೊಮ್ಮೆ ಮನೆಯ ಎಲ್ಲಾ ಹೊದಿಕೆಗಳನ್ನು ಬಿಸಿನೀರಿನಲ್ಲಿ (ಕನಿಷ್ಟ 130° F) ಒಗೆಯಿರಿ. ಇದರಿಂದ ಇಲ್ಲಿ ಧೂಳಿನ ಕ್ರಿಮಿಗಳಿದ್ದರೆ ಸಾಯುತ್ತವೆ. ಹಾಸಿಗೆ, ದಿಂಬು ಮೊದಲಾದವುಗಳನ್ನು ಧೂಳು ಒಳಸೇರದಂತಹ ಪದರದಿಂದ ಆವರಿಸಿ. ಇದರಿಂದ ಕ್ರಿಮಿಗಳು ಒಳಬರುವುದನ್ನು ತಡೆಯಬಹುದು.

ಮರದ ವಸ್ತುಗಳನ್ನು ಕ್ರಿಮಿನಾಶಕ ದ್ರವ ಮತ್ತು ಬಿಸಿನೀರಿನಿಂದ ಒದ್ದೆಯಾಗಿಸಿದ ಬಟ್ಟೆಯಿಂದ ಒರೆಸಿ ಆಗಾಗ ಸ್ವಚ್ಛಗೊಳಿಸುತ್ತಿರಿ. ಮರದ ನೆಲವಿದ್ದರೆ ಇಲ್ಲಿಯೂ ಇದೇ ಕ್ರಮ ಅನುಸರಿಸಿ.

ನೀರು ಬೀಳುವ ಸ್ಥಳ ಸ್ವಚ್ಛವಾಗಿಡಿ

ನೀರು ಬೀಳುವ ಸ್ಥಳ ಸ್ವಚ್ಛವಾಗಿಡಿ

ನೀರು ಬೀಳುವ ಸ್ಥಳಗಳಾದ ಸ್ನಾನಗೃಹ, ಅಡುಗೆ ಕೋಣೆ ಮೊದಲಾದವುಗಳಲ್ಲಿ ಬಿದ್ದ ನೀರನ್ನು ಆದಷ್ಟೂ ಬೇಗನೇ ಒರೆಸಿ ಸ್ವಚ್ಛಗೊಳಿಸಿ. ಇದರಿಂದ ಇಲ್ಲಿ ಕ್ರಿಮಿಗಳು ಬೆಳೆಯುವುದನ್ನು ತಡೆಗಟ್ಟಬಹುದು. ತಣ್ಣಗಿರುವ ವಸ್ತುಗಳ ಮೇಲೆ ಸೂಕ್ತ ನಿರೋಧಕ ಪದರವನ್ನು ಆವರಿಸುವ ಮೂಲಕ ಇಲ್ಲಿ ಕ್ರಿಮಿಗಳ ಬೆಳವಣಿಗೆಯಾಗುವುದನ್ನು ತಡೆಯಬಹುದು.

ಅಲರ್ಜಿ ತರುವ ಕೆಲಸ ಮಾಡಲು ಹೋಗಬೇಡಿ

ಅಲರ್ಜಿ ತರುವ ಕೆಲಸ ಮಾಡಲು ಹೋಗಬೇಡಿ

ವಿಶೇಷವಾಗಿ ಧೂಳು ಹೊಡೆಯುವುದು ಮತ್ತು ವ್ಯಾಕ್ಯೂಮ್ ಮಾಡುವುದು ಮೊದಲಾದ ಕೆಲಸಗಳು. ಇವರು ಆ ಕೆಲಸಗಳನ್ನು ನಿರ್ವಹಿಸುತ್ತಿರುವಾಗ ನೀವು ಆ ಸ್ಥಳದಿಂದ ಹೊರಹೋಗುವುದೇ ಸುರಕ್ಷಿತವಾಗಿದೆ. ಸ್ವಚ್ಛತಾ ಕಾರ್ಯ ಮುಗಿದ ತಕ್ಷಣ ಒಳಬರದಿರಿ, ಕೆಲಸದಿಂದ ಗಾಳಿಗೆ ಹರಡಿದ್ದ ಧೂಳು ಕೊಂಚ ನೆಲಮಟ್ಟಕ್ಕಿಳಿಯುವವರೆಗೆ ಕಾದು ಬಳಿಕವೇ ಒಳಬರುವುದು ಉತ್ತಮ.

English summary

Tips To Prevent Allergies During Rainy And Winter Season

Some are face allergy problem during cold wether. Here are tips to prevent allergy during rainy and winter season, read on...
Story first published: Saturday, September 12, 2020, 15:49 [IST]
X
Desktop Bottom Promotion