For Quick Alerts
ALLOW NOTIFICATIONS  
For Daily Alerts

ಪುರುಷರು ಎದುರಿಸುವ ಲೈಂಗಿಕ ರೋಗಗಳ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು

|

ನಿಮ್ಮ ಪತಿ, ಪ್ರಿಯತಮ ಅಥವಾ ನಿಮಗೆ ಆಪ್ತರಾಗಿರುವ ಯಾವುದಾದರೂ ಪುರುಷರಿಗೆ ಲೈಂಗಿಕ ತೊಂದರೆಯೂ ಇರಬಹುದು ಎಂದು ನೇವೆಂದೂ ಯೋಚಿಸಿರಲಿಕ್ಕಿಲ್ಲ. ಆದರೆ ಒಂದು ರಾಷ್ಟ್ರವ್ಯಾಪಿ ಸಮೀಕ್ಷೆಯಲ್ಲಿ ಕಂಡುಕೊಂಡಂತೆ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಅರವತ್ತಕ್ಕೂ ಕಡಿಮೆ ವಯಸ್ಸಿನ ಪುರುಷರಲ್ಲಿ ಪ್ರತಿ ಮೂರರಲ್ಲೊಬ್ಬರಿಗೆ ಲೈಂಗಿಕ ತೊಂದರೆ ಇದೆ.

Things You Need to Know About Mens Sexual Problems

ಈ ತೊಂದರೆಗಳಲ್ಲಿ ನಿಮಿರುತನ ಕಾಯ್ದುಕೊಳ್ಳುವುದು, ಕಡಿಮೆಯಾದ ಲೈಂಗಿಕ ಆಸಕ್ತಿ, ಶ್ರೀಘ್ರಸ್ಖಲನ ಹಾಗೂ ಕಾಮಪರಾಕಾಷ್ಠೆಯನ್ನು ತಲುಪಲು ಸಾಧ್ಯವಾಗದೇ ಇರುವುದು ಮೊದಲಾದವು ಸಾಮಾನ್ಯವಾಗಿ ಎದುರಾಗುತ್ತವೆ. ಒಂದು ವೇಳೆ ನಿಮ್ಮ ಆಪ್ತ ಪುರುಷರಲ್ಲಿ ಯಾವುದಾದರೊಂದು ಲೈಂಗಿಕ ತೊಂದರೆ ಎದುರಾದರೆ ನೀವು ಈ ಬಗ್ಗೆ ತಿಳಿದುಕೊಂಡಿರಬೇಕಾದ ವಿಷಯಗಳು ಇಲ್ಲಿವೆ:

ನಿಮಿರುತನ ದೌರ್ಬಲ್ಯ (Erectile dysfunction(ED)

ನಿಮಿರುತನ ದೌರ್ಬಲ್ಯ (Erectile dysfunction(ED)

ಈ ತೊಂದರೆಯ ಬಗ್ಗೆ ಸಾಮಾನ್ಯವಾಗಿ ಇರುವುದಕ್ಕಿಂತಲೂ ಹೆಚ್ಚೇ ಉತ್ಪ್ರೇಕ್ಷೆಯನ್ನು ಜಾಹೀರಾತುಗಳು ಪ್ರಕಟಿಸುವುದನ್ನು ಕಾಣಬಹುದು. ತೊಂಭತ್ತರ ದಶಕದ ಕೊನೆಯ ವರ್ಷಗಳಲ್ಲಿ ಪ್ರಸ್ತುತಪಡಿಸಿದ ನೀಲಿ ಗುಳಿಗೆಯೊಂದು ಈ ತೊಂದರೆಯನ್ನು ಇಲ್ಲವಾಗಿಸುವ ಬಗ್ಗೆ ಭಾರೀ ಪ್ರಚಾರ ಮತ್ತು ಅದ್ಭುತ ಮಾರಾಟವನ್ನೂ ಸಾಧಿಸಿತ್ತು. ನಿಮಿರು ದೌರ್ಬಲ್ಯ ಎಂದರೆ ಸರಳವಾಗಿ ಹೇಳಬೇಕೆಂದರೆ ಲೈಂಗಿಕ ಕ್ರಿಯೆಗೆ ಅಗತ್ಯವಿರುವಷ್ಟು ದೃಢತೆಯನ್ನು ಪುರುಷ ಜನನಾಂಗ ಪಡೆಯದೇ ಹೋಗುವುದು. ಒಂದು ಸಮೀಕ್ಷೆಯ ಪ್ರಕಾರ, ಐವತ್ತರಿಂದ ಐವತ್ತೊಂಭತ್ತರ ನಡುವಣ ವ್ಯಕ್ತಿಗಳು ಹದಿನೆಂಟು-ಇಪ್ಪತ್ತೊಂಭತ್ತರ ವಯಸ್ಸಿನ ಪುರುಷರಿಗಿಂತ ಹೆಚ್ಚು ಈ ತೊಂದರೆಯನ್ನು ಎದುರಿಸುತ್ತಾರೆ.

ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್

ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್

ಇಂದು ಈ ತೊಂದರೆಯ ನಿವಾರಣೆಗೆ ಇಂದು ಮೂರು ಸಮರ್ಥ ಔಷಧಿಗಳಿವೆ ಹಾಗೂ ಇವುಗಳ ಬಗ್ಗೆ ಭಾರೀ ಪ್ರಚಾರ ನೀಡಲಾಗುತ್ತಿದೆ. ಆದರೂ ಈ ತೊಂದರೆ ಇರುವ ಹೆಚ್ಚಿನ ಪುರುಷರು ಈ ತೊಂದರೆಯನ್ನು ನಿವಾರಿಸಲು ಯತ್ನಿಸಲು ಒಲವು ತೋರುತ್ತಿರದಿರುವುದು ವಾಸ್ತವವಾಗಿದೆ. ಈ ಬಗ್ಗೆ ಹಿಂಜರಿಕೆಯೇ ಇದಕ್ಕೆ ಕಾರಣ. ಈ ತೊಂದರೆಗೆ ಇತರ ಕಾರಣಗಳೂ ಇವೆ. ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಹಾಗೂ ಥೈರಾಯ್ಡ್ ಅಸಮತೋಲನ ಮೊದಲಾದವೂ ಈ ತೊಂದರೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಧೂಮಪಾನ, ವ್ಯಾಯಾಮದ ಕೊರತೆ ಹಾಗೂ ಕೆಲವು ಔಷಧಿಗಳ ಅಡ್ಡಪರಿಣಾಮಗಳೂ ಕಾರಣವಾಗಬಹುದು.

ಶೀಘ್ರಸ್ಖಲನ (Premature ejaculation)

ಶೀಘ್ರಸ್ಖಲನ (Premature ejaculation)

ನಿಮಿರು ದೌರ್ಬಲ್ಯ ತಡವಯಸ್ಸಿನ ಪುರುಷರಿಗೆ ಎದುರಾದರೆ ಈ ತೊಂದರೆ ಯಾವುದೇ ವಯಸ್ಸಿನ ಪುರುಷರನ್ನು ಕಾಡಬಹುದು. ಪ್ರತಿ ಐವರು ಪುರುಷರಲ್ಲಿ ಒಂದರಿಂದ ಮೂವರಿಗಾದರೂ ಈ ತೊಂದರೆ ಇದ್ದೇ ಇರುತ್ತದೆ. ಇದಕ್ಕೆ ಖಚಿತವಾದ ಯಾವುದೇ ಕಾರಣವನ್ನು ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಮಾತನಾಡದೇ ಇರುವುದೇ ಈ ತೊಂದರೆಯ ಇರುವಿಕೆಯನ್ನು ಖಚಿತಪಡಿಸಲಾಗದೇ ಇರುವುದು ಹಾಗೂ ಗುಣಪಡಿಸಲಾಗದೇ ಇರಲು ಪ್ರಮುಖ ಕಾರಣವಾಗಿದೆ.

Most Read: ಸೆಕ್ಸ್ ಬಳಿಕ, ಕೂಡಲೇ ಗರ್ಭಧಾರಣೆ ಆಗುವ ಲಕ್ಷಣ ಕಾಣಿಸುವುದೇ?

ಶೀಘ್ರಸ್ಖಲನ

ಶೀಘ್ರಸ್ಖಲನ

ತನಗೆ ಈ ತೊಂದರೆ ಇದೆ ಎಂದು ವೈದ್ಯರಲ್ಲಿ ಹೇಳಿಕೊಳ್ಳಲು ಇರುವ ಮುಜುಗರವೇ ಪ್ರಮುಖ ಅಡ್ಡಿಯಾಗಿದೆ. ಇವರಿಗೆ ಈ ತೊಂದರೆ ಔಷಧಿಗಳಿಂದ ನಿವಾರಣೆಯಾಗುವ ಬಗ್ಗೆ ಅನುಮಾನವಿರುತ್ತದೆ ಅಥವಾ ಲೈಂಗಿಕ ಕ್ರಿಯೆಗೆ ಔಷಧಿಗಳನ್ನು ಅವಲಂಬಿಸಬೇಕಾಬಹುದೆಂಬ ದುಗುಡವೂ ಇರುತ್ತದೆ. ಇಂದು ಈ ತೊಂದರೆಯ ನಿವಾರಣೆಗೆ FDA ಅಂಗೀಕರಿಸಿದ ಯಾವುದೇ ಔಷಧಿ ಲಭ್ಯವಿಲ್ಲ. ಆದ್ದರಿಂದ ಮುಜುಗರ ತ್ಯಜಿಸಿ ನಿಮ್ಮ ಆಪ್ತ ಪುರುಷರು ಲೈಂಗಿಕ ತಜ್ಞರಿಂದ ಸಲಹೆ ಪಡೆದಲ್ಲಿ ಮಾತ್ರವೇ ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದು.

ಲೈಂಗಿಕ ನಿರಾಸಕ್ತಿ (Lack of desire)

ಲೈಂಗಿಕ ನಿರಾಸಕ್ತಿ (Lack of desire)

ಸಾಮಾನ್ಯವಾಗಿ ಪುರುಷರ ವಯಸ್ಸು ಹೆಚ್ಚಿದಂತೆ ಲೈಂಗಿಕಾಸಕ್ತಿಯೂ ಕುಂದುತ್ತಾ ಹೋಗುವುದು ಸಾಮಾನ್ಯ. ಆದರೂ, ಸ್ವೀಡನ್ ನಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ ಐವತ್ತರಿಂದ ಎಂಭತ್ತರ ನಡುವಣ ವಯಸ್ಸಿನ ಪುರುಷರು ಲೈಂಗಿಕತೆಯನ್ನು ತಮ್ಮ ಜೀವನದ ಪ್ರಮುಖ ಭಾಗವನ್ನಾಗಿ ಪರಿಗಣಿಸುತ್ತಾರೆ ಎಂದು ತಿಳಿಸಿದೆ. ಹಾಗಾಗಿ, ಒಂದು ವೇಳೆ ನಿಮ್ಮ ಸಂಗಾತಿ ಲೈಂಗಿಕಾಸಕ್ತಿಯನ್ನು ಕಳೆದುಕೊಂಡಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ಪುರುಷರ ದೇಹದಲ್ಲಿ ಟೆಸ್ಟಾಸ್ಟೆರಾನ್ ರಸದೂತ ಕಡಿಮೆಯಾದರೆ ಲೈಂಗಿಕ ಸಾಮರ್ಥ್ಯದೊಂದಿಗೆ ಲೈಂಗಿಕಾಸಕ್ತಿಯೂ ಕಡಿಮೆಯಾಗುತ್ತದೆ. ಹಾಗಾಗಿ ಟೆಸ್ಟಸ್ಟೆರಾನ್ ರಸದೂತವನ್ನು ಹೆಚ್ಚುವರಿ ಔಷಧಿಯ ರೂಪದಲ್ಲಿ ನೀಡಿದರೆ ಈ ತೊಂದರೆ ನೀಗುತ್ತದೆ.

ಲೈಂಗಿಕ ನಿರಾಸಕ್ತಿ

ಲೈಂಗಿಕ ನಿರಾಸಕ್ತಿ

ಲೈಂಗಿಕ ನಿರಾಸಕ್ತಿಗೆ ಮಾನಸಿಕ ಕಾರಣಗಳೂ ಇರಬಹುದು. ಕೆಲವು ಔಷಧಿಗಳ ಅಡ್ಡಪರಿಣಾಮ, ಮಧುಮೇಹ, ಮೂತ್ರಪಿಂಡಗಳ ತೊಂದರೆ, ಖಿನ್ನತೆ, ಹೃದಯ ಸ್ತಂಭನ, ಪಾರ್ಕಿನ್ಸನ್ ಕಾಯಿಲೆ ಮೊದಲಾದವೂ ಕಾರಣವಿರಬಹುದು. ಈ ಬಗ್ಗೆ ನಿಮ್ಮ ಸಂಗಾತಿಯಲ್ಲಿ ತೆರೆದ ಮನಸ್ಸಿನಿಂದ ಮಾತನಾಡಿ ತಮ್ಮ ತೊಂದರೆಗಳನ್ನು ವೈದ್ಯರಲ್ಲಿ ಸ್ಪಷ್ಟವಾಗಿ ನಿವೇದಿಸಿಕೊಳ್ಳುವಂತೆ ಮಾಡಿ.

Most Read: ಇಂತಹ ಅಪಾಯಕಾರಿ ಸೆಕ್ಸ್ ಲಕ್ಷಣಗಳನ್ನು, ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ

ಆಪ್ತ ಸಲಹೆ ಪಡೆದುಕೊಳ್ಳಿ

ಆಪ್ತ ಸಲಹೆ ಪಡೆದುಕೊಳ್ಳಿ

ನಿಮ್ಮ ಸಂಗಾತಿಯ ಒಟ್ಟಾರೆ ಆರೋಗ್ಯ ಹಾಗೂ ಮಾನಸಿಕ ಆರೋಗ್ಯಗಳನ್ನು ತಪಾಸಣೆಗೊಳಪಡಿಸುವ ಜೊತೆಗೇ ನಿಮ್ಮಬ್ಬರೂ ಮನಃಶಾಸ್ತ್ರಜ್ಞರಲ್ಲಿ ಆಪ್ತ ಸಲಹೆ ಪಡೆಯುವುದೂ ಅಗತ್ಯ. ಮಹಿಳೆಯರಿಗಿಂತಲೂ ಪುರುಷರಿಗೆ ಲೈಂಗಿಕತೆ ಹೆಚ್ಚು ಅಗತ್ಯವಾಗಿದೆ ಎಂದು ಒಂದು ಸಂಶೋಧನೆ ತಿಳಿಸುತ್ತದೆ. ಅಲ್ಲದೇ ಲೈಂಗಿಕವಾಗಿ ತಮಗೇನು ಬೇಕು ಎಂಬುದನ್ನು ಪುರುಷರು ಸ್ಪಷ್ಟಮಾತುಗಳಲ್ಲಿ ವಿವರಿಸಲೂ ಅಸಮರ್ಥರಾಗುತ್ತಾರೆ. ಲೈಂಗಿಕ ಕ್ರಿಯೆಯಲ್ಲಿ ಸಮರ್ಥವಾಗಿ ಪಾಲ್ಗೊಳ್ಳಲು ಸಾಧ್ಯವಾಗದೇ ಹೋಗುವ ಕಾರಣವೇ ಇವರ ನಿರಾಸಕ್ತಿಗೆ ಕಾರಣವಾಗಿರಬಹುದು. ಹೀಗಿದ್ದರೆ ನೀವೇ ಈ ಕ್ರಿಯೆಗೆ ಪರ್ಯಾಯ ವಿಧಾನಗಳನ್ನು ಸಲಹೆ ಮಾಡುವ ಮೂಲಕ ಈ ತೊಂದರೆಯನ್ನು ನಿವಾರಿಸಲು ಸಾಧ್ಯವಾಗಬಹುದು.

ಸೂಕ್ತ ತಜ್ಞರ ಸಲಹೆ ಪಡೆಯಿರಿ

ಸೂಕ್ತ ತಜ್ಞರ ಸಲಹೆ ಪಡೆಯಿರಿ

ಯಾವುದಕ್ಕೂ ನಿಮ್ಮ ಸಂಗಾತಿಯ ತೊಂದರೆಯ ನಿಜವಾದ ಮೂಲ ಯಾವುದೆಂದು ಅರಿತುಕೊಳ್ಳಲು ಸೂಕ್ತ ತಜ್ಞರ ಬಳಿ ಸಾಗುವುದು ಅವಶ್ಯವಾಗಿದೆ. ನಿಮ್ಮ ಸಂಗಾತಿಯ ಆರೋಗ್ಯವನ್ನು ತಪಾಸಿಸಿದ ವೈದ್ಯರು ಈ ತೊಂದರೆಯನ್ನು ನಿವಾರಿಸಲು ಇನ್ನೂ ಉತ್ತಮವಾದ ಪರ್ಯಾಯ ವಿಧಾನ ನೀಡಬಹುದು ಹಾಗೂ ಇವುಗಳನ್ನು ಅನುಸರಿಸುವ ಮೂಲಕ ಲೈಂಗಿಕ ಆರೋಗ್ಯದ ಜೊತೆಗೇ ಒಟ್ಟಾರೆ ಆರೋಗ್ಯವೂ ಸುಧಾರಣೆಯಾಗಲು ಸಾಧ್ಯ.

English summary

You Need to Know About Men's Sexual Problems

You may not think about your boyfriend or husband having sexual problems, but a large national survey found that about one-third of men under the age of 60 in the United States have sexual problems. These include problems maintaining an erection, low sexual desire, inability to have an orgasm and premature ejaculation.
Story first published: Tuesday, January 8, 2019, 12:57 [IST]
X
Desktop Bottom Promotion