For Quick Alerts
ALLOW NOTIFICATIONS  
For Daily Alerts

ಯಾವತ್ತೂ ಒಳ ಚಡ್ಡಿಯನ್ನು ಪ್ರತ್ಯೇಕವಾಗಿ ಒಗೆಯಬೇಕಂತೆ! ಯಾಕೆ ಗೊತ್ತೇ?

|

ಬಟ್ಟೆ ಒಗೆಯುವ ವಿಷಯ ಬಂದಾಗ ನಾವೆಲ್ಲರೂ ಉಟ್ಟು ಕಳಚಿದ ಆಷ್ಟೂ ಬಟ್ಟೆಗಳನ್ನು ಒಟ್ಟಿಗೇ ಒಗೆಯುವ ಬಟ್ಟೆ ಹಾಕುವ ಬುಟ್ಟಿಗೆಸೆದುಬಿಡುತ್ತೇವೆ. ಇದರಲ್ಲಿ ಬಿಳಿಯ ಬಟ್ಟೆ ಇರಬಹುದು, ಅಜ್ಜಿಯ ಕಾಲಿನ ಕಾಲುಚೀಲ, ತೀರಾ ಹೊಸದಾಗಿ ಕೊಂಡಿದ್ದ ಫೊರೆವರ್ 21 ಜ್ಯಾಕೆಟ್ ಹಾಗೂ ಹೊಸ ಜಾಕಿ ಅಥವಾ BVD ಯಾವುದೇ ಇರಬಹುದು! ಬೇರೆ ಬೇರೆ ವಿಧದ ಬಟ್ಟೆಗಳನ್ನು ಬೇರೆಬೇರೆಯಾಗಿ ಒಗೆಯಬೇಕು ಎಂಬ ಪ್ರಜ್ಞೆಯೂ ಆ ಕ್ಷಣದಲ್ಲಿ ನಮಗೆ ಇರುವುದಿಲ್ಲ.

ಒಗೆಯುವ ಸಮಯ ಬಂದಾಗಲೂ ಅಷ್ಟೇ, ಸಾಮಾನ್ಯವಾಗಿ ನಾವು ಗರಿಷ್ಟ ಬಿಳಿ ಮತ್ತು ಬಣ್ಣದ ಬಟ್ಟೆಗಳು ಎಂದು ಎರಡು ಬಾರಿ ಒಗೆಯುತ್ತೇವೆಯೇ ವಿನಃ ಇತರ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆಯುವ ಗೋಜಿಗೆ ಹೋಗುವುದಿಲ್ಲ. ಆದರೆ, ನೀವು ನಂಬಲೇಬೇಕಾದ ವಿಷಯವೆಂದರೆ, ಈ ಅಭ್ಯಾಸದ ಮೂಲಕ ನೀವು ಕೈಯಾರೆ ಹಲವು ಸೋಂಕುಕಾರಕ ರೋಗಗಳನ್ನು ಹರಡುತ್ತಿದ್ದೀರಿ!

ನಿಮ್ಮ ಒಳ ಉಡುಪಿನಲ್ಲಿ ಕೊಂಚವಾದರೂ ಸರಿ, ಮಲದ ಅಂಶವಿದ್ದೇ ಇರುತ್ತದೆ

ನಿಮ್ಮ ಒಳ ಉಡುಪಿನಲ್ಲಿ ಕೊಂಚವಾದರೂ ಸರಿ, ಮಲದ ಅಂಶವಿದ್ದೇ ಇರುತ್ತದೆ

ನೂರಾರು ವ್ಯಕ್ತಿಗಳ ಒಳ ಉಡುಪುಗಳನ್ನು ಸೂಕ್ಷ್ಮ ಪರೀಕ್ಷೆಗೆ ಒಳಪಡಿಸಿದ ಸಂಶೋಧಕರಿಗೆ ಒಂದು ದಿನ ತೊಟ್ಟ ಒಳ ಉಡುಪಿನಲ್ಲಿ ಕನಿಷ್ಟ 0.1 ಗ್ರಾಂ ನಷ್ಟು ಮಲದ ಅಂಶವಿರುವುದು ಕಂಡುಬಂದಿದೆ. ಹಾಗಾಗಿ, ಒಳ ಉಡುಪುಗಳನ್ನು ಇತರ ಬಟ್ಟೆಗಳ ಜೊತೆಗೆ ಒಗೆಯಲು ಇರಿಸಿದರೆ ಏನಾಗುತ್ತದೆ ಗೊತ್ತೇ? ಈ 0.1 ಗ್ರಾಂ ಮಲದಲ್ಲಿದ್ದ ಸುಮಾರು ಒಂದು ಕೋಟಿಯಷ್ಟು ಇ-ಕೊಲೈ ಮತ್ತು ಸ್ಟಾಫಿಲೋಕಾಕ್ಕಸ್ ಆರಿಯಸ್ ಎಂಬ ಪ್ರಬಲ ರೋಗಕಾರಕ ಬ್ಯಾಕ್ಟೀರಿಯಾಗಳು ಒಗೆಯುವ ನೀರಿನಲ್ಲಿ ಬೆರೆತುಕೊಳ್ಳುತ್ತವೆ. ಈ ವಿಷಯದಲ್ಲಿ ಆಳವಾದ ಸಂಶೋಧನೆ ನಡೆಸಿದ ಅರಿಜೋಜಾ ವಿಶ್ವಿವಿದ್ಯಾಲಯದ ಮೈಕ್ರೋಬಯಾಲಜಿ ಪ್ರೊಫೆಸರ್ ಡಾ. ಚಾರ್ಲ್ಸ್ ಜೆರ್ಬಾರವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಈ ಬ್ಯಾಕ್ಟೀರಿಯಾಗಳು ಅಷ್ಟು ಸುಲಭವಾಗಿ ಕೊಲ್ಲಲ್ಪಡುವುದಿಲ್ಲ. (ಇದಕ್ಕೆ ಕುದಿನೀರೇ ಬೇಕು) ಹಾಗೂ ಈ ನೀರಿನ ಮೂಲಕ ಇವು ಬೇರೆಯ ಬಟ್ಟೆಗಳಿಗೂ ದಾಟಿಕೊಂಡು ಸುಲಭವಾಗಿ ಇತರ ವ್ಯಕ್ತಿಗಳ ದೇಹಕ್ಕೂ ಹರಡುತ್ತವೆ.

Most Read: ಎಚ್ಚರ! ಟೈಟಾದ ಒಳ ಚಡ್ಡಿ ಹಾಕಿದರೆ, ಇಂತಹ ಸಮಸ್ಯೆ ಕಾಡಬಹುದು!

ಒಗೆಯಲು ತಣ್ಣೀರು ಬಳಸುವುದು

ಒಗೆಯಲು ತಣ್ಣೀರು ಬಳಸುವುದು

ಇಂದು ಬಟ್ಟೆ ಒಗೆಯುವ ಕೆಲಸವನ್ನು ಸುಲಭಗೊಳಿಸಿರುವ ಸಂಪೂರ್ಣ ಸ್ವಯಂಚಾಲಿತ ಬಟ್ಟೆ ಒಗೆಯುವ ಯಂತ್ರಗಳು ನಮ್ಮ ಜೀವನವನ್ನು ಸುಲಭವಾಗಿಸಿವೆ. ನಮ್ಮ ನಿತ್ಯದ ಉಡುಪುಗಳನ್ನು ಒಗೆಯಲು ಈ ನೀರು ಸುಮಾರು ಹದಿನೈದು ಡಿಗ್ರಿ ಸೆಲ್ಸಿಯಸ್ ನಷ್ಟು ಬೆಚ್ಚಗಿದ್ದರೆ ಒಗೆಯಲು ಇದು ಸಾಕಾಗುತ್ತದೆ. ಆದರೆ ಬಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಈ ತಾಪಮಾನ ಸಾಕಾಗುವುದಿಲ್ಲ.

ಒಗೆಯಲು ತಣ್ಣೀರು ಬಳಸುವುದು

ಒಗೆಯಲು ತಣ್ಣೀರು ಬಳಸುವುದು

ವಿಶೇಷವಾಗಿ ನಮ್ಮ ಒಳ ಉಡುಪುಗಳು! ಒಳ ಉಡುಪುಗಳಿಗೆ ಕನಿಷ್ಟ ನಲವತ್ತು ಡಿಗ್ರಿ ಸೆಲ್ಸಿಯಸ್ ನಷ್ಟು ಬೆಚ್ಚಗಿರಲೇಬೇಕು! ಇದೇ ಕಾರಣಕ್ಕೆ ಒಳ ಉಡುಪುಗಳನ್ನು ಪ್ರತ್ಯೇಕವಾಗಿ, ಹಾಗೂ ಹೆಚ್ಚಿನ ತಾಪಮಾನದ ನೀರಿನಲ್ಲಿ ತೊಳೆಯುವುದು ಅಗತ್ಯವಾಗಿದೆ. ಅದರಲ್ಲೂ ಯಾವುದಾದರೊಂದು ಸೋಂಕಿಗೊಳಗಾಗಿರುವ ವ್ಯಕ್ತಿಯ ಒಳ ಉಡುಪುಗಳನ್ನು ಕುದಿನೀರಿನಲ್ಲಿಯೇ ಒಗೆಯುವುದು ಅನಿವಾರ್ಯ. ಹೀಗೆ ಮಾಡುವುದರಿಂದ ಇದರಲ್ಲಿನ ಎಲಾಸ್ಟಿಕ್ ಶೀಘ್ರವೇ ಶಿಥಿಲವಾಗುತ್ತದೆ ಹಾಗೂ ಬಾಳಿಕೆ ಕಡಿಮೆಯಾಗುತ್ತದೆ. ಆದರೂ ಸರಿ, ಆರೋಗ್ಯದ ದೃಷ್ಟಿಯಿಂದ ದುಬಾರಿಯಲ್ಲದ ಒಳ ಉಡುಪುಗಳನ್ನು ಕೊಂಡು ಕೆಲವು ಬಾರಿ ಬಳಸಿ ತ್ಯಜಿಸುವುದು ಆರೋಗ್ಯಕರ ಕ್ರಮವಾಗಿದೆ.

ಮಕ್ಕಳಿರುವ ಮನೆಯಲ್ಲಿ ಗೃಹಿಣಿ ಹೆಚ್ಚಿನ ಅಸ್ಥೆ ವಹಿಸಬೇಕಾಗುತ್ತದೆ

ಮಕ್ಕಳಿರುವ ಮನೆಯಲ್ಲಿ ಗೃಹಿಣಿ ಹೆಚ್ಚಿನ ಅಸ್ಥೆ ವಹಿಸಬೇಕಾಗುತ್ತದೆ

ಚಿಕ್ಕ ಮಕ್ಕಳು ಹಾಗೂ ವೃದ್ದರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಹಾಗೂ ಇದೇ ಕಾರಣಕ್ಕೆ ಇವರಿಗೆ ಶೀತ ಕೆಮ್ಮು ಸೋಂಕುಗಳು ಸುಲಭವಾಗಿ ಆವರಿಸಿಕೊಳ್ಳುತ್ತವೆ. ಹಾಗಾಗಿ ಒಳ ಉಡುಪುಗಳೊಂದಿಗೆ ಇವರ ಇತರ ಬಟ್ಟೆಗಳನ್ನು ಒಗೆದರೆ ಇವರಿಗೆ ಸೋಂಕು ಆವರಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಬಗ್ಗೆ ನಡೆಸಿದ ಸಂಶೋಧನೆಗಳಲ್ಲಿಯೂ ಸಂಶೋಧಕರು ಒಂದು ವೇಳೆ ಮನೆಯಲ್ಲಿ ಒಬ್ಬ ಸದಸ್ಯರಾದರೂ ಅಸ್ವಸ್ಥರಾಗಿದ್ದರೆ ಬಟ್ಟೆ ಒಗೆಯುವ ನೀರಿನ ತಾಪಮಾನವನ್ನು ಅರವತ್ತು ಡಿಗ್ರಿಗೆ ಏರಿಸುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಹೆಚ್ಚಿನ ಎಲ್ಲಾ ಬಗೆಯ ಬ್ಯಾಕ್ಟೀರಿಯಾಗಳನ್ನು ಕೊಂದು ಸೋಂಕು ಹರಡುವುದರಿಂದ ರಕ್ಷಿಸಬಹುದು.

Most Read: ಮುಟ್ಟಿನ ದಿನಗಳನ್ನು ತಡವಾಗಿಸುವ ಮಾತ್ರೆಗಳು- ನೀವು ತಿಳಿಯಲೇಬೇಕಾದ ಸಂಗತಿಗಳು

ಒಳ ಉಡುಪು ಮತ್ತು ಅಡುಗೆಮನೆ/ಶೌಚಾಲಯ ಸ್ವಚ್ಛಗೊಳಿಸುವ ಬಟ್ಟೆಗಳನ್ನು ಜೊತೆಯಾಗಿ ಒಗೆಯಬಾರದು

ಒಳ ಉಡುಪು ಮತ್ತು ಅಡುಗೆಮನೆ/ಶೌಚಾಲಯ ಸ್ವಚ್ಛಗೊಳಿಸುವ ಬಟ್ಟೆಗಳನ್ನು ಜೊತೆಯಾಗಿ ಒಗೆಯಬಾರದು

ಗೃಹಿಣಿಯರು ತಮ್ಮ ಅಡುಗೆ ಮನೆ ಮತ್ತು ಶೌಚಾಲಯ ಸ್ವಚ್ಛವಾಗಿರಬೇಕೆಂದು ಅತಿ ಹೆಚ್ಚಿನ ಅಸ್ಥೆ ವಹಿಸುತ್ತಾರೆ. ಆದರೆ ಕೆಲವೊಮ್ಮೆ, ಈ ಭಾಗಗಳನ್ನು ಸ್ವಚ್ಛಗೊಳಿಸಿದ ಬಟ್ಟೆಗಳನ್ನು ಒಳ ಉಡುಪುಗಳೊಂದಿಗೆ ಸ್ವಚ್ಛಗೊಳಿಸಲು ಬಟ್ಟೆ ಒಗೆಯುವ ಯಂತ್ರದಲ್ಲಿ ಹಾಕಬಹುದು! ಅರಿವಿಲ್ಲದೇ ನಡೆಸುವ ಈ ಮಿಶ್ರಣ ಆಕೆಯ ಆರೋಗ್ಯಕ್ಕೇ ಅತಿ ಹೆಚ್ಚು ಮಾರಕವಾಗಿದೆ. ಏಕೆಂದರೆ ಒಳ ಉಡುಪುಗಳಲ್ಲಿದ್ದ ಎ-ಕೊಲೈ ಬ್ಯಾಕ್ಟೀರಿಯಾ ಈಗ ಅಡುಗೆ ಮನೆ ಸ್ವಚ್ಛಗೊಳಿಸುವ ಬಟ್ಟೆಗೆ ದಾಟಿಕೊಂಡಿದೆ!

ಒಳ ಉಡುಪು ಮತ್ತು ಅಡುಗೆಮನೆ/ಶೌಚಾಲಯ ಸ್ವಚ್ಛಗೊಳಿಸುವ ಬಟ್ಟೆಗಳನ್ನು ಜೊತೆಯಾಗಿ ಒಗೆಯಬಾರದು

ಒಳ ಉಡುಪು ಮತ್ತು ಅಡುಗೆಮನೆ/ಶೌಚಾಲಯ ಸ್ವಚ್ಛಗೊಳಿಸುವ ಬಟ್ಟೆಗಳನ್ನು ಜೊತೆಯಾಗಿ ಒಗೆಯಬಾರದು

ಸಾಮಾನ್ಯವಾಗಿ ನಾವೇನೂ ಈ ಬಟ್ಟೆಯನ್ನು ಇಸ್ತ್ರಿ ಮಾಡದೇ ಇರುವ ಕಾರಣ ಈ ಬ್ಯಾಕ್ಟೀರಿಯಾ ಜೀವಂತವಾಗಿ ಉಳಿಯುವ ಸಾಧ್ಯತೆಯೇ ಹೆಚ್ಚು. ಈ ಬಟ್ಟೆಯಿಂದ ಒರೆಸುವ ಪಾತ್ರೆ, ತಟ್ಟೆ, ಲೋಟ, ಚಪಾತಿ ಲಟ್ಟಿಸುವ ಮಣೆ, ಲಟ್ಟಣಿಗೆ ಮೊದಲಾದವೆಲ್ಲವೂ ಈ ಬ್ಯಾಕ್ಟೀರಿಯಾದ ತಂಗುದಾಣವಾಗುತ್ತದೆ ಹಾಗೂ ಇವುಗಳ ಮೂಲಕ ತಯಾರಾದ ಆಹಾರ ಸೋಂಕು ಹರಡಲು ಸಾಧ್ಯವಾಗುತ್ತದೆ. ಆದ್ದರಿಂದ ಅಡುಗೆ ಮನೆಗೆ, ನೆಲ ಒರೆಸಲು, ಶೌಚಾಲಯ ಸ್ವಚ್ಛಗೊಳಿಸಲು ಪ್ರತ್ಯೇಕ ಬಟ್ಟೆಗಳನ್ನು ಬಳಸುವಂತೆ ಹಾಗೂ ಇವುಗಳನ್ನು ಒಮ್ಮೆ ಬಳಸಿ ತ್ಯಜಿಸುವುದೇ ಕ್ಷೇಮ. ಸಾಧ್ಯವಾಗದು ಎಂದಿದ್ದರೆ ಇವುಗಳನ್ನು ಪ್ರತ್ಯೇಕವಾಗಿ ಕುದಿನೀರಿನಲ್ಲಿ ತೊಳೆದ ಬಳಿಕವೇ ಮರು ಉಪಯೋಗಿಸಬೇಕು.

ಪ್ರಬಲ ಡಿಟರ್ಜೆಂಟ್ ನಿಂದ ಸ್ವಚ್ಛಗೊಳಿಸಿದರೂ ಕ್ರಿಮಿರಹಿತವಾಗಿಸಲು ಸಾಧ್ಯವಿಲ್ಲ

ಪ್ರಬಲ ಡಿಟರ್ಜೆಂಟ್ ನಿಂದ ಸ್ವಚ್ಛಗೊಳಿಸಿದರೂ ಕ್ರಿಮಿರಹಿತವಾಗಿಸಲು ಸಾಧ್ಯವಿಲ್ಲ

ಸಾಮಾನ್ಯವಾಗಿ ನಾವೆಲ್ಲಾ ಡಿಟರ್ಜೆಂಟ್ ಪ್ರಬಲವಾಗಿದ್ದರೆ ಇದು ಎಲ್ಲಾ ಕ್ರಿಮಿ ಬ್ಯಾಕ್ಟೀರಿಯಾಗಳನ್ನು ಕೊಂದು ಸ್ವಚ್ಛಗೊಳಿಸುತ್ತದೆ ಎಂಬ ಭಾವನೆ ಹೊಂದಿದ್ದೇವೆ. ಆದರೆ ಈ ಪುಡಿಗಳ ಗುಣಮಟ್ಟ ಮತ್ತು ನೀರಿನ ತಾಪಮಾನವನ್ನು ಅರಿಯದೇ ನಾವು ಬಟ್ಟೆಗಳನ್ನು ಒಗೆಯುವ ಮೂಲಕ ಕೆಲವು ಸೋಂಕುಗಳನ್ನು ಬಟ್ಟೆಗಳಿಗೆ ಆಮಂತ್ರಿಸಿಕೊಳ್ಳುತ್ತಿದ್ದೇವೆ.

ಪ್ರಬಲ ಡಿಟರ್ಜೆಂಟ್ ನಿಂದ ಸ್ವಚ್ಛಗೊಳಿಸಿದರೂ ಕ್ರಿಮಿರಹಿತವಾಗಿಸಲು ಸಾಧ್ಯವಿಲ್ಲ

ಪ್ರಬಲ ಡಿಟರ್ಜೆಂಟ್ ನಿಂದ ಸ್ವಚ್ಛಗೊಳಿಸಿದರೂ ಕ್ರಿಮಿರಹಿತವಾಗಿಸಲು ಸಾಧ್ಯವಿಲ್ಲ

ಒಂದು ವೇಳೆ ಒಳ ಉಡುಪುಗಳನ್ನು ಒಗೆಯಲು ಬಳಸುವ ನೀರು ಅತಿ ಹೆಚ್ಚು ಬಿಸಿ ಇಲ್ಲದೇ ಇದ್ದಲ್ಲಿ ಡಿಟರ್ಜೆಂಟ್ ಪುಡಿಯಲ್ಲಿ ಬಿಳಿಚುಕಾರಕ (bleach) ಇರುವುದನ್ನೇ ಬಳಸಬೇಕು. ಒಂದು ವೇಳೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದ್ದಲ್ಲಿ ಬಿಸಿನೀರು ಮತ್ತು ಬಿಳಿಚುಕಾರಕ ಎರಡೂ ಇರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಬಿಸಿನೀರಿನ ಸೌಲಭ್ಯವಿಲ್ಲದೇ ಇದ್ದರೆ ಬಟ್ಟೆಗಳನ್ನು ಸೋಂಕುರಹಿತವಾಗಿಸುವ ದ್ರವ (laundry disinfectant) ಗಳನ್ನು ಬಳಸುವುದೇ ಸೂಕ್ತ.

ನೀವು ಒಳ ಉಡುಪುಗಳನ್ನು ಒಗೆಯಲು ದ್ರವ ಡಿಟರ್ಜೆಂಟ್ ಬಳಸುತ್ತಿದ್ದಿರಬಹುದು

ನೀವು ಒಳ ಉಡುಪುಗಳನ್ನು ಒಗೆಯಲು ದ್ರವ ಡಿಟರ್ಜೆಂಟ್ ಬಳಸುತ್ತಿದ್ದಿರಬಹುದು

ಸಾಮಾನ್ಯವಾಗಿ ದ್ರವ ಡಿಟರ್ಜೆಂಟ್ ಗಳಲ್ಲಿ ಬಿಳಿಚುಕಾರಕ ಅಂಶವೇ ಇರುವುದಿಲ್ಲ! ಹಾಗಾಗಿ ಈ ದ್ರವ ಒಳ ಉಡುಪುಗಳನ್ನು ಪೂರ್ಣವಾಗಿ ಸ್ವಚ್ಛಗೊಳಿಸುವಷ್ಟು ಪ್ರಬಲವಲ್ಲ! ಅಷ್ಟೇ ಅಲ್ಲ, ಹೆಚ್ಚು ಕೊಳೆಯಾದ ಬಟ್ಟೆಗಳನ್ನೂ ಪೂರ್ಣವಾಗಿ ಸ್ವಚ್ಛಗೊಳಿಸಲಾರದು. ಸಾಮಾನ್ಯವಾಗಿ ಒಳ ಉಡುಪುಗಳ ಹೊಲಿಗೆಯ ಅಂಚುಗಳಲ್ಲಿ ಬ್ಯಾಕ್ಟೀರಿಯಾಗಳು ಕುಳಿತುಕೊಂಡಿರುತ್ತವೆ ಹಾಗೂ ಕೇವಲ ಬಿಳಿಚುಕಾರಕಕ್ಕೆ ಮಾತ್ರವೇ ಇವುಗಳಲ್ಲಿಂದ ಸಡಿಲಿಸಿ ನಿವಾರಿಸಲು ಸಾಧ್ಯ. ಹಾಗಾಗಿ ಒಳ ಉಡುಪುಗಳನ್ನು ಪ್ರತ್ಯೇಕವಾಗಿ ಒಗೆಯುವಾಗ ಬಿಳಿಚುಕಾರಕ ಅಂಶವಿರುವ ಡಿಟರ್ಜೆಂಟ್ ಪುಡಿಯನ್ನೇ ಬಳಸುವುದು ಒಳ್ಳೆಯದು.

English summary

Why you need to wash your underwear separately

We all are often too lazy to care for laundry etiquettes. We throw everything together in the laundry bag, from our white tees, our grandmother’s woollen socks, to our new Forever 21 jacket and even our latest jockeys or BVDs. While there are so many things to keep in mind for washing your clothes the right way, here we look into what happens when you wash your unders along with the other laundry.
Story first published: Saturday, January 5, 2019, 11:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more