For Quick Alerts
ALLOW NOTIFICATIONS  
For Daily Alerts

ಖರ್ಜೂರವನ್ನು ಹಾಲಿನೊಂದಿಗೆ ಸೇವಿಸಿದರೆ, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ

|

ನಮ್ಮ ದೇಹಕ್ಕೆ ಅತಿಹೆಚ್ಚಿನ ಪ್ರಯೋಜನ ನೀಡುವ ಕೆಲವು ಆಹಾರಗಳಲ್ಲಿ ಹಾಲು ಮತ್ತು ಖರ್ಜೂರ ಪ್ರಮುಖವಾಗಿವೆ. ಖರ್ಜೂರದಲ್ಲಿ ಹೆಚ್ಚಿನ ಶೇಖಡಾವಾರು ಪ್ರಮಾಣದ ಕಬ್ಬಿಣ ಇದೆ. ಹಾಲಿನಲ್ಲಿ ಬೇರೆಲ್ಲಾ ಪ್ರಮುಖ ಪೋಷಕಾಂಶಗಳಿದ್ದರೂ ಕಬ್ಬಿಣದ ಕೊರತೆ ಇರುವ ಕಾರಣ ಖರ್ಜೂರವನ್ನು ಮಿಶ್ರಣ ಮಾಡುವ ಮೂಲಕ ಪರಿಪೂರ್ಣ ಆಹಾರವಾಗಿಸಬಹುದು.

ಈ ಆಹಾರದ ಸೇವನೆಯಿಂದ ಹಲವಾರು ರೋಗಗಳ ವಿರುದ್ದ ರಕ್ಷಣೆ ದೊರಕುತ್ತದೆ ಹಾಗೂ ಹಲವು ವಿಧದ ಪೋಷಣೆಗಳನ್ನು ಒದಗಿಸುತ್ತದೆ. ಈ ಆಹಾರ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರು ಎಲ್ಲರೂ ಸೇವಿಸಬಹುದಾದ ಸುರಕ್ಷಿತವಾದ ಆಹಾರವಾಗಿದೆ.

ಖರ್ಜೂರಭರಿತ ಹಾಲಿನ ಸೇವನೆಯ ಪ್ರಯೋಜನಗಳು

ಖರ್ಜೂರಭರಿತ ಹಾಲಿನ ಸೇವನೆಯ ಪ್ರಯೋಜನಗಳು

ಒಂದು ಲೋಟ ಹಾಲಿಗೆ ಏಳು ಖರ್ಜೂರ ಬೆರೆಸಿ ಗೊಟಾಯಿಸಿದ ಹಾಲಿನ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:

ಖರ್ಜೂರದಲ್ಲಿ ಮೋನೋಕ್ಲೋನಾಲ್ ಎಂಬ ವಿಧದ ಸಕ್ಕರೆ ಇದೆ. ಈ ಸಕ್ಕರೆಗೆ ನಮ್ಮ ರಕ್ತದಲ್ಲಿ ಬೆರೆಯಲು ಜೀರ್ಣಗೊಳ್ಳುವ ಅಗತ್ಯವಿಲ್ಲದ ಕಾರಣ ಸೇವನೆಯ ತಕ್ಷಣವೇ ರಕ್ತಕ್ಕೆ ಲಭಿಸುತ್ತದೆ ಹಾಗೂ ಕ್ಷಿಪ್ರಕಾಲದಲ್ಲಿಯೇ ಮೆದುಳು ಮತ್ತು ದೇಹದ ವಿವಿಧ ಸ್ನಾಯುಗಳಿಗೆ ತಲುಪುತ್ತದೆ. ಅಲ್ಲದೇ ಖರ್ಜೂರದಲ್ಲಿರುವ ಪೆಕ್ಟಿನ್ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನೂ ತಗ್ಗಿಸುತ್ತದೆ.

ದೇಹದಲ್ಲಿ ಶಕ್ತಿ ಹೆಚ್ಚಿಸುತ್ತದೆ

ದೇಹದಲ್ಲಿ ಶಕ್ತಿ ಹೆಚ್ಚಿಸುತ್ತದೆ

ದೇಹದಲ್ಲಿ ಶಕ್ತಿ ಮತ್ತು ಇತರ ಚಟುವಟಿಕೆಗಳು ಹೆಚ್ಚುತ್ತವೆ. ಉದಾಹರಣೆಗೆ ರಕ್ತನಾಳಗಳು, ಯಕೃತ್, ನರವ್ಯವಸ್ಥೆ, ಕರುಳುಗಳು ಇತ್ಯಾದಿಗಳ ಕ್ಷಮತೆ ಹೆಚ್ಚುತ್ತದೆ. ಈ ಆಹಾರದಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಗಂಧಕ, ಪೊಟ್ಯಾಶಿಯಂ, ಸತು, ಮೆಗ್ನೀಶಿಯಂ, ವಿಟಮಿನ್ ಎ, ಡಿ, ಮತ್ತು ಸಿ ಇವೆ ಹಾಗೂ ಇವು ಆರೋಗ್ಯ ವೃದ್ದಿಸುವ ಜೊತೆಗೇ ದೇಹದಿಂದ ವಿಷಕಾರಿ ಅಂಶಗಳನ್ನು ನಿವಾರಿಸಲೂ ನೆರವಾಗುತ್ತವೆ.

 ಖರ್ಜೂರದ ಪ್ರಯೋಜನಗಳು

ಖರ್ಜೂರದ ಪ್ರಯೋಜನಗಳು

ಖರ್ಜೂರದಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದೆ ಹಾಗೂ ಈ ಮೂಲಕ ಕರುಳುಗಳಲ್ಲಿ ಜೀರ್ಣಗೊಂಡ ಆಹಾರ ಸುಲಭವಾಗಿ ಚಲಿಸಲು ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆ ಮತ್ತು ವಿಸರ್ಜನಾಕ್ರಿಯೆ ಸುಲಭವಾಗಿ ಜರುಗಲು ನೆರವಾಗುತ್ತದೆ.

ಮೂಳೆಗಳು ದೃಢಗೊಳ್ಳುತ್ತವೆ

ಮೂಳೆಗಳು ದೃಢಗೊಳ್ಳುತ್ತವೆ

ಈ ಆಹಾರದ ಸೇವನೆಯಿಂದ ಮೂಳೆಗಳು ದೃಢಗೊಳ್ಳುತ್ತವೆ, ಬಿರುಕುಬಿಡುವುದರಿಂದ ರಕ್ಷಣೆ ನೀಡುತ್ತವೆ ಹಾಗೂ ದೇಹದ ಜೀವಕೋಶಗಳ ಆರೋಗ್ಯಕರ ಬೆಳವಣಿಗೆಗೆ ನೆರವಾಗುತ್ತವೆ.

 ನೈಸರ್ಗಿಕ ಆಂಟಿ ಆಕ್ಸಿಡೆಂಟುಗಳಿವೆ

ನೈಸರ್ಗಿಕ ಆಂಟಿ ಆಕ್ಸಿಡೆಂಟುಗಳಿವೆ

ಖರ್ಜೂರ ಬೆರೆತ ಹಾಲಿನಲ್ಲಿ ನೈಸರ್ಗಿಕ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಅಧಿಕ ಪ್ರಮಾಣದ ಮೆಗ್ನೀಶಿಯಂ, ಗಂಧಕ ಹಾಗೂ ಕ್ಯಾಲ್ಸಿಯಂ ಇವೆ. ಇವು ದೇಹಕ್ಕೆ ಎದುರಾಗುವ ಹಲವಾರು ಬಗೆಯ ಕ್ಯಾನ್ಸರ್ ಗಳಿಂದ ರಕ್ಷಣೆ ಒದಗಿಸುತ್ತದೆ.

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಬಡಿಸುತ್ತದೆ ಹಾಗೂ ವಿಶೇಷವಾಗಿ ಯಕೃತ್ ಅನ್ನು ವಿಷಕಾರಿ ವಸ್ತುಗಳಿಂದ ರಕ್ಷಿಸುತ್ತದೆ.

ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ

ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ

ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ ಹಾಗೂ ನರವ್ಯವಸ್ಥೆಯ ತೊಂದರೆಗಳನ್ನು ನಿವಾರಿಸುತ್ತದೆ.

ಎದೆ ಹಾಲುಣಿಸುತ್ತಿರುವ ತಾಯಿಯಂದಿರಿಗೆ ಒಳ್ಳೆಯದು

ಎದೆ ಹಾಲುಣಿಸುತ್ತಿರುವ ತಾಯಿಯಂದಿರಿಗೆ ಒಳ್ಳೆಯದು

ಹಾಲೂಡಿಸುತ್ತಿರುವ ತಾಯಂದಿರಲ್ಲಿ ಹಾಲಿನ ಉತ್ಪಾದನೆ ಹೆಚ್ಚುತ್ತದೆ. ಖರ್ಜೂರದಲ್ಲಿರುವ ಥ್ರಿಯೋನೈನ್ ಮತ್ತು ಗ್ಲಿಸೆರಿನ್ ಈ ಕಾರ್ಯದಲ್ಲಿ ನೆರವಾಗುತ್ತವೆ.

ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ಒದಗಿಸುತ್ತವೆ

ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ಒದಗಿಸುತ್ತವೆ

ನರಗಳ ಒಳಭಾಗದಲ್ಲಿ ಜಿಡ್ಡು ಕಟ್ಟಿಕೊಳ್ಳುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತವೆ ಹಾಗೂ ಈ ಮೂಲಕ ಹಲವಾರು ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ಒದಗಿಸುತ್ತವೆ. ಖರ್ಜೂರದಲ್ಲಿರುವ ಹಲವಾರು ಪೋಷಕಾಂಶಗಳು ರಕ್ತದಲ್ಲಿನ ವಿವಿಧ ಕೊಲೆಸ್ಟ್ರಾಲ್ ಗಳನ್ನು ಹೆಚ್ಚಿಸುವ ಅಥವಾ ತಗ್ಗಿಸುವ ಗುಣ ಹೊಂದಿದ್ದು ಒಟ್ಟಾರೆ ಮಟ್ಟ ಸಮತೋಲನದಲ್ಲಿರಿಸಲು ನೆರವಾಗುತ್ತವೆ.

ಆಹಾರ ಸುಲಭವಾಗಿ ಜೀರ್ಣಗೊಳ್ಳಲು

ಆಹಾರ ಸುಲಭವಾಗಿ ಜೀರ್ಣಗೊಳ್ಳಲು

ಜೀರ್ಣಗೊಂಡ ಆಹಾರ ಸುಲಭವಾಗಿ ಕರುಳುಗಳ ಒಳಭಾಗದಲ್ಲಿ ಚಲಿಸಲು ಮತ್ತು ಅಗತ್ಯಕ್ಕೆ ತಕ್ಕಂತೆ ಕರುಳುಗಳು ಹಿಗ್ಗಲು ಖರ್ಜೂರ ನೆರವಾಗುವ ಕಾರಣ ಮಲಬದ್ದತೆ ನಿವಾರಿಸಲು ಇದೊಂದು ಅತ್ಯುತ್ತಮ ಆಹಾರವಾಗಿದೆ. ಅಲ್ಲದೆ ಇದರಿಂದ ಮಧುಮೇಹದ ಸಾಧ್ಯತೆ ಕಡಿಮೆಯಾಗುತ್ತದೆ

ಖರ್ಜೂರದ ಸಿಪ್ಪೆಗಳಲ್ಲಿರುವ ಪ್ರಯೋಜನಗಳು

ಖರ್ಜೂರದ ಸಿಪ್ಪೆಗಳಲ್ಲಿರುವ ಪ್ರಯೋಜನಗಳು

ಖರ್ಜೂರದ ಸಿಪ್ಪೆಗಳಲ್ಲಿ ಹಲವಾರು ವೈರಸ್ಸುಗಳು, ಬ್ಯಾಕ್ಟೀರಿಯಾ, ಕ್ಯಾನ್ಸರ್ ಹಾಗೂ ಶಿಲೀಂಧ್ರಗಳಿಗೆ ಪ್ರತಿರೋಧ ಒಡ್ಡುವ ಗುಣವಿದೆ. ಅಲ್ಲದೇ ಹಾಲಿನಲ್ಲಿರುವ ಪ್ರೋಟೀನುಗಳಿಗೆ ಸ್ನಾಯುಗಳನ್ನು ಬಲಪಡಿಸುವ ಗುಣವಿದೆ.

ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಹಾಲಿನಲ್ಲಿರುವ ವಿಟಮಿನ್ ಎ ಮತ್ತು ಬಿ ಕಣ್ಣಿನಲ್ಲಿರುವ ಆದ್ರತೆ ಅಥವಾ ಕಣ್ಣೀರಿನ ಪ್ರಮಾಣವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ ಹಾಗೂ ಈ ಮೂಲಕ ಕಣ್ಣುಗಳು ಒಣಗುವುದನ್ನು ತಪ್ಪಿಸಿ ಕಣ್ಣುಗಳ ಕಾಳಜಿಯನ್ನು ವಹಿಸುತ್ತವೆ. ಅಲ್ಲದೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಉರಿಯೂತವನ್ನು ತಗ್ಗಿಸಿ ಮನಸ್ಸಿನಲ್ಲಿ ನಿರಾಳತೆಯನ್ನುಂಟು ಮಾಡುತ್ತದೆ. ಇನ್ನು ಇದರಿಂದ ದೇಹಕ್ಕೆ ಅಗತ್ಯವಿರುವ ಎಲ್ಲಾ ಬಗೆಯ ಪೋಷಕಾಂಶಗಳನ್ನು ಒದಗಿಸಿ ಬೆಳವಣಿಗೆಯ ರಸದೂತಗಳನ್ನು ಪ್ರಚೋದಿಸುತ್ತದೆ. ಅಷ್ಟೇ ಅಲ್ಲದೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ಖರ್ಜೂರದಲ್ಲಿರುವ ಸಕ್ಕರೆಯ ಕಾರಣ ದೇಹ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ತನ್ಮೂಲಕ ಮೂಳೆ ಮತ್ತು ಹಲ್ಲುಗಳನ್ನು ಬಲಗೊಳಿಸುತ್ತದೆ. ವೃದ್ಧರಲ್ಲಿ ನರವ್ಯವಸ್ಥೆ ಹಾಗೂ ಶ್ರವಣ ಸಾಮರ್ಥ್ಯವನ್ನು ಉತ್ತಮಗೊಳಿಸುತ್ತದೆ.

ಖರ್ಜೂರ ಬೆರೆತ ಹಾಲಿನ ತಯಾರಿಕೆಯ ವಿಧಾನ

ಖರ್ಜೂರ ಬೆರೆತ ಹಾಲಿನ ತಯಾರಿಕೆಯ ವಿಧಾನ

ಸುಮಾರು ಏಳು ಮಧ್ಯಮ ಗಾತ್ರದ ಖರ್ಜೂರಗಳನ್ನು ಚೆನ್ನಾಗಿ ತೊಳೆದು ನೀರನ್ನು ನಿವಾರಿಸಿ. ಬಳಿಕ ಇವನ್ನು ತೆರೆದು ಬೀಜವನ್ನು ನಿವಾರಿಸಿ ಸಿಪ್ಪೆ ಸಹಿತ ತಿರುಳನ್ನು ಚಿಕ್ಕದಾಗಿ ತುಂಡರಿಸಿ. ಬಳಿಕ ಈ ತುಂಡುಗಳನ್ನು ಮಿಕ್ಸಿಯ ಜಾರ್ ನಲ್ಲಿ ಹಾಕಿ ಒಂದು ಲೋಟ ಹಾಲು ಸುರಿಯಿರಿ. ಈ ಹಾಲನ್ನು ಚೆನ್ನಾಗಿ ಗೊಟಾಯಿಸಿ ಮಿಶ್ರಣಮಾಡಿ. ಈ ಹಾಲನ್ನು ತಕ್ಷಣವೇ ಕುಡಿಯಿರಿ.

English summary

What are the benefits of dates with milk

Eating dates with milk is a healthy food that benefits the human body. The dates contain a high percentage of iron. Milk is free of this ingredient, so eating them together is a healthy nutritional supplement. They also protect people from many diseases. For children and the elderly, suitable for all ages.
X
Desktop Bottom Promotion