For Quick Alerts
ALLOW NOTIFICATIONS  
For Daily Alerts

ಮುಟ್ಟಿನ ದಿನಗಳನ್ನು ತಡವಾಗಿಸುವ ಮಾತ್ರೆಗಳು- ನೀವು ತಿಳಿಯಲೇಬೇಕಾದ ಸಂಗತಿಗಳು

|

ಮಾಸಿಕದಿನ ಹತ್ತಿರ ಬರುತ್ತಿವೆ ಹಾಗೂ ಪ್ರತಿಯೊಬ್ಬರೂ ತಮ್ಮ ರಜಾದಿನಗಳನ್ನು ಕಳೆಯಲು ತಮ್ಮದೇ ಆದ ಕಾರ್ಯಕ್ರಮಗಳನ್ನು ಹಮ್ಮಿಕೊಂಡೇ ಇದ್ದಾರೆ ಎಂದು ನಮಗೆ ಅರಿವಿದೆ. ಈ ದಿನಗಳಲ್ಲಿ ನೀವು ಯಾವ ದಿರಿಸುಗಳನ್ನು ಧರಿಸಿ ಇದುವರೆಗೆ ಭೇಟಿ ನೀಡದೇ ಇದ್ದ ಸ್ಥಳಗಳಿಗೆ ಹೋಗಲಿದ್ದೀರಿ ಹಾಗೂ ನಿಮಗೆ ಲಭಿಸಿದ ಈ ರಜಾದಿನಗಳ ಪರಿಪೂರ್ಣ ಪ್ರಯೋಜನವನ್ನು ಪಡೆಯಲಿದ್ದೀರಿ. ಆದರೆ, ಒಂದು ವೇಳೆ ಅನಿರೀಕ್ಷಿತವಾಗಿ ನಿಮ್ಮ ಮಾಸಿಕ ದಿನಗಳು ಆ ರಜಾದಿನದಂದೇ ಆಗಮಿಸಿಬಿಟ್ಟರೆ? ಈಗ ಹೊರಹೋಗಲಾಗದೇ ನಿಮ್ಮ ಜೊತೆಗೆ ಹೊರಡಲಿದ್ದ ಮನೆಯ ಸದಸ್ಯರ ಉತ್ಸಾಹಕ್ಕೂ ತಣ್ಣೀರೆರಚಿದಂತಾಗುತ್ತದೆಯಲ್ಲವೇ?

ಈ ಸಂದರ್ಭವನ್ನು ಪರಿಗಣಿಸಿಯೇ ಮಾಸಿಕ ದಿನಗಳನ್ನು ತಡವಾಗಿಸುವ ಮಾತ್ರೆಗಳನ್ನು (ಉದಾಹರಣೆಗೆ Primolut N)ಕಂಡುಹಿಡಿಯಲಾಗಿದ್ದು ಇವುಗಳನ್ನು ಸೇವಿಸುವ ಮೂಲಕ ಅಮೂಲ್ಯ ಸಮಯದ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಈ ಮಾತ್ರೆಗಳು ನಿಮ್ಮ ಮಾಸಿಕ ದಿನಗಳನ್ನು ಹೇಗೆ ಮುಂದೆ ಹಾಕುತ್ತವೆ? ನಿಮ್ಮ ದೇಹದಲ್ಲಿ ಏನಾಗುತ್ತಿದೆ? ಇವು ಗರ್ಭ ನಿರೋಧಕ ಗುಳಿಗೆಗಳಿಗಿಂತ ಹೇಗೆ ಭಿನ್ನವಾಗಿವೆ? ಈ ಪ್ರಶ್ನೆಗಳಿಗೆ ತಜ್ಞರು ನೀಡಿರುವ ಉತ್ತರವನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ

ಮಾಸಿಕ ದಿನಗಳನ್ನು ತಡವಾಗಿಸುವ ಮಾತ್ರೆ ಎಂದರೇನು? ಇವುಗಳ ಕಾರ್ಯನಿರ್ವಹಣೆ ಹೇಗೆ?

ಮಾಸಿಕ ದಿನಗಳನ್ನು ತಡವಾಗಿಸುವ ಮಾತ್ರೆ ಎಂದರೇನು? ಇವುಗಳ ಕಾರ್ಯನಿರ್ವಹಣೆ ಹೇಗೆ?

ಹೆಸರೇ ವಿವರಿಸುವಂತೆ ತಮ್ಮ ಮಾಸಿಕ ದಿನ ಎದುರಾಗುವ ಸಮಯದಲ್ಲಿ ರಜೆಯ ಪ್ರವಾಸ ಅಥವಾ ಬೇರಾವುದೋ ಪ್ರಮುಖ ಕಾರ್ಯವಿದ್ದು ಅದನ್ನು ತಪ್ಪಿಸಿಕೊಳ್ಳದಿರುವಂತೆ ಮಾಸಿಕ ದಿನವನ್ನು ಕೆಲವು ದಿನ ಮುಂದೂಡುವುದು ಇದರ ಮುಖ್ಯ ಉದ್ದೇಶವಾಗಿದೆ. ಸಾಮಾನ್ಯವಾಗಿ ಈ ಮಾತ್ರೆಗಳು ಮಾಸಿಕ ದಿನಗಳನ್ನು ಸುಮಾದು ಹದಿನೇಳು ದಿನ ಮುಂದೆ ಹಾಕುವಷ್ಟು ಸಮರ್ಥವಾಗಿವೆ. ಈ ಮಾತ್ರೆಗಳಲ್ಲಿ ಪ್ರಮುಖವಾಗಿ Norethisterone ಎಂಬ ರಾಸಾಯನಿಕವಿದೆ. ಇದು ವಾಸ್ತವವಾಗಿ ಕೃತಕವಾದ, ಮಹಿಳೆಯರಿಗೆ ಮೀಸಲಾದ ಲೈಂಗಿಕ ರಸದೂತವಾದ ಪ್ರೊಜೆಸ್ಟೆರಾನ್ ಗೆ ಸರಿಸಮನಾಗಿದೆ.

ಮಾಸಿಕ ದಿನಗಳನ್ನು ತಡವಾಗಿಸುವ ಮಾತ್ರೆ ಎಂದರೇನು?

ಮಾಸಿಕ ದಿನಗಳನ್ನು ತಡವಾಗಿಸುವ ಮಾತ್ರೆ ಎಂದರೇನು?

ಅಂಡನಾಳದಲ್ಲಿರುವ ಅಂಡಾಣು ತಿಂಗಳ ಅವಧಿಯಲ್ಲಿ ಫಲಿತಗೊಳ್ಳದೇ ಇದ್ದರೆ ದೇಹದಲ್ಲಿ ಪ್ರೊಜೆಸ್ಟರಾನ್ ರಸದೂತದ ಪ್ರಮಾಣ ತಗ್ಗುತ್ತದೆ. ಇದು ಅಂಡಾಣುವನ್ನು ವಿಸರ್ಜಿಸಿ ಹೊಸ ಅಂಡಾಣುವಿನ ಬಿಡುಗಡೆಯ ಸಂಕೇತವಾಗಿದ್ದು ಗರ್ಭಾಶಯದ ಒಳಪದರ ಮತ್ತು ಅಂಡಾಣುವನ್ನು ಸಡಿಲಿಸಿ ದೇಹದಿಂದ ಹೊರದೂಡಲು ಪ್ರಚೋದನೆ ನೀಡುತ್ತದೆ. ಇದೇ ಮಾಸಿಕ ಸ್ರಾವ. ಒಂದು ವೇಳೆ ತಿಂಗಳ ಅವಧಿ ಪೂರ್ಣಗೊಳ್ಳುವ ಮುನ್ನವೇ Norethisteroneಸೇವಿಸಿದರೆ ಇದು ಕೃತಕವಾಗಿ ಪ್ರೊಜೆಸ್ಟ್ರಾನ್ ರಸದೂತದ ಇರುವಿಕೆಯನ್ನು ಸಾದರಪಡಿಸಿ ಅಂಡಾಣು ಇನ್ನೂ ಕೊಂಚ ಕಾಯಬೇಕು ಎಂಬ ಸೂಚನೆ ನೀಡುತ್ತದೆ. ಪರಿಣಾಮವಾಗಿ ಮಾಸಿಕ ಸ್ರಾವವಾಗದೇ ಮುಂದಿನ ದಿನಗಳಿಗೆ ಅಂದರೆ ಈ ರಸದೂತದ ಪ್ರಮಾಣದ ಕನಿಷ್ಟ ಮಟ್ಟಕ್ಕಿಳಿಯುವವರೆಗೂ ಮುಂದೂಡಲ್ಪಡುತ್ತದೆ.

ಈ ಗುಳಿಗೆಗಳಿಗೂ ಗರ್ಭ ನಿರೋಧಕ ಗುಳಿಗೆಗಳಿಗೂ ಏನು ವ್ಯತ್ಯಾಸ?

ಈ ಗುಳಿಗೆಗಳಿಗೂ ಗರ್ಭ ನಿರೋಧಕ ಗುಳಿಗೆಗಳಿಗೂ ಏನು ವ್ಯತ್ಯಾಸ?

ತಡವಾಗಿಸುವ ಮಾತ್ರೆಗಳು ಮಾಸಿಕ ದಿನಗಳನ್ನು ಮುಂದೂಡುತ್ತವೆಯೇ ವಿನಃ ಅಂಡಾಣುವಿನ ಕ್ಷಮತೆಯನ್ನೇನೂ ಕುಂದಿಸುವುದಿಲ್ಲವಲ್ಲ? ಹಾಗಾಗಿ ಇವು ಗರ್ಭ ನಿಲ್ಲುವುದನ್ನೇನೂ ತಡೆಯುವುದಿಲ್ಲ. ಈ ಗುಳಿಗೆಗಳಿಂದ ಕೃತಕವಾಗಿ ಪ್ರೊಜೆಸ್ಟ್ರೆರಾನ್ ರಸದೂತದ ಮಟ್ಟ ಏರುತ್ತದೆ ಹಾಗೂ ಗರ್ಭಾಶಯದ ಒಳಪದರ ಮತ್ತು ಅಂಡಾಣುವನ್ನು ಸಡಿಲಿಸಿ ದೇಹದಿಂದ ವಿಸರ್ಜಿಸುವುದನ್ನು ತಡವಾಗಿಸುತ್ತದೆ. ಆದರೆ ಗರ್ಭ ನಿರೋಧಕ ಗುಳಿಗೆಗಳು ಬೇರೆಯೇ ರಸದೂತಗಳನ್ನು ಬಿಡುಗಡೆ ಮಾಡಿ ಅಂಡಾಣುವಿನೊಡನೆ ವೀರ್ಯಾಣುಗಳ ಮಿಲನವಾಗದಂತೆ ತಡೆಯುತ್ತದೆ. ಇವು ಗರ್ಭಾಶಯದ ಒಳಪದರವನ್ನು ಗಟ್ಟಿಯಾಗಿಸಿ ಫಲಿತಗೊಂಡ ಅಂಡಾಣು ಇಲ್ಲಿ ಆಶ್ರಯ ಪಡೆಯದಂತೆ ಮಾಡುತ್ತದೆ. ಹಾಗಾಗಿ ಇವೆರಡೂ ಗುಳಿಗೆಗಳ ಪರಿಣಾಮ ಸಂಪೂರ್ಣವಾಗಿ ಭಿನ್ನವಾಗಿದೆ. ಮಾಸಿಕ ದಿನಗಳನ್ನು ತಡವಾಗಿಸುವ ಗುಳಿಗೆಗಳು ಕೇವಲ ಅಂಡಾಣುವನ್ನು ವಿಸರ್ಜಿಸುವುದನ್ನು ತಡೆಯುತ್ತವೆಯೇ ವಿನಃ ಆಗಮಿಸುವ ವೀರ್ಯಾಣುವಿನೊಂದಿಗೆ ಮಿಲನಗೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ. ಇದರಿಂದ ತಡವಾದ ಮಾಸಿಕ ದಿನಗಳಲ್ಲಿಯೂ ಗರ್ಭಧಾರಣೆಯ ಸಾಧ್ಯತೆ ಇದೆ. ಗರ್ಭ ನಿರೋಧಕ ಗುಳಿಗೆಗಳಲ್ಲಿ ಮಾಸಿಕ ದಿನಗಳು ಎಂದಿನಂತೆಯೇ ನಡೆಯುತ್ತವೆ ಹಾಗೂ ಈ ಗುಳಿಗೆಗಳನ್ನು ಸೇವಿಸುತ್ತಿರುವ್ವ ಆವಧಿಯಲ್ಲಿ ಗರ್ಭಧಾರಣೆ ಸಾಧ್ಯವಾಗುವುದಿಲ್ಲ.

Most Read: ಅನಿಯಮಿತ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ?

ಮಾಸಿಕ ದಿನಗಳನ್ನು ತಡವಾಗಿಸುವ ಮಾತ್ರೆಗಳ ಸೇವನೆಯ ಅಡ್ಡ ಪರಿಣಾಮಗಳೇನು?

ಮಾಸಿಕ ದಿನಗಳನ್ನು ತಡವಾಗಿಸುವ ಮಾತ್ರೆಗಳ ಸೇವನೆಯ ಅಡ್ಡ ಪರಿಣಾಮಗಳೇನು?

ಒಂದು ವೇಳೆ ಅಲ್ಪ ದಿನಗಳಿಗಾಗಿ ಸೇವಿಸಿದರೆ ಇದರಿಂದ ಯಾವುದೇ ಅಡ್ಡ ಪರಿಣಾಮ ಕಾಣಬರುವುದಿಲ್ಲ. ಆದರೆ ಕೆಲವು ಮಹಿಳೆಯರಲ್ಲಿ ಚರ್ಮ ಕೆಂಪಗಾಗುವುದು, ತಲೆ ತಿರುಗುವಿಕೆ, ತಲೆನೋವು ಅಥವಾ ದೇಹದಲ್ಲಿ ನೀರು ತುಂಬಿಕೊಳ್ಳುವುದು ಮೊದಲಾದ ತೊಂದರೆಗಳು ಕಂಡುಬಂದಿವೆ. ಅಲ್ಲದೇ ಈ ದಿನಗಳನ್ನು ತಜ್ಞ ವೈದ್ಯರ ನಿರ್ದೇಶನದಲ್ಲಿ ಕೆಲವು ದಿನಗಳ ಮಟ್ಟಿಗೆ ಮಾತ್ರವೇ ಮುಂದುವರೆಸಿದರೆ ಇದು ಸುರಕ್ಷಿತವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ವೈದ್ಯರ ಅನುಮತಿ ಮತ್ತು ಸಲಹೆ ಪಡೆಯದೇ ಈ ಗುಳಿಗೆಗಳನ್ನು ತಾವಾಗಿಯೇ ಸೇವಿಸಬಾರದು. ಇದು ರಸದೂತಗಳ ಪ್ರಮಾಣವನ್ನೇ ಬದಲಿಸುವ ಕ್ಷಮತೆಯುಳ್ಳ ಔಷಧಿಯಾಗಿರುವ ಕಾರಣ ದೀರ್ಘಾವಧಿಯ ಸೇವನೆಯಿಂದ ದೇಹದಲ್ಲಿ ರಸದೂತಗಳ ಅಸಮತೋಲನ ಹಾಗೂ ಕಾಮಾಲೆ ರೋಗವನ್ನೂ ತಂದೊಡ್ಡಬಹುದು. ಅಲ್ಲದೇ ಈ ಅಗತ್ಯತೆ ಯಾವಾಗಲೋ ಒಮ್ಮೆ, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಎದುರಾದಾಗ ಪರಿಗಣಿಸಬಹುದಾದರೆ ಆರೋಗ್ಯಕರವೇ ಹೊರತು ಇದನ್ನು ಅಭ್ಯಾಸವಾಗಿಸಬಾರದು. ಒಂದು ವೇಳೆ ಇದನ್ನು ಸತತವಾಗಿ, ಪ್ರತಿತಿಂಗಳೂ ಅನುಸರಿಸುತ್ತಾ ಬಂದರೆ ಕ್ರಮೇಣ ನಿಮ್ಮ ನಿಜವಾದ ಮಾಸಿಕ ದಿನಗಳೇ ಏರುಪೇರಾಗಿ ಸರಿಪಡಿಸಲು ಸಾಧ್ಯವಾಗದಷ್ಟು ಕಷ್ಟವಾಗಬಹುದು ಹಾಗೂ ಅನಪೇಕ್ಷಿತವಾದ ಹಲವಾರು ಅಡ್ಡಪರಿಣಾಮಗಳೂ ಎದುರಾಗಬಹುದು.

ಈ ಮಾತ್ರೆಗಳ ಸೇವನೆ ನಿಂತ ತಕ್ಷಣವೇ ಮಾಸಿಕ ದಿನ ಬಂದೇ ಬಿಡುತ್ತದೆಯೇ?

ಈ ಮಾತ್ರೆಗಳ ಸೇವನೆ ನಿಂತ ತಕ್ಷಣವೇ ಮಾಸಿಕ ದಿನ ಬಂದೇ ಬಿಡುತ್ತದೆಯೇ?

ಸಾಮಾನ್ಯವಾಗಿ ಹೇಳಬೇಕೆಂದರೆ ಹೌದು. ಗುಳಿಗೆಗಳ ಸೇವನೆ ನಿಲ್ಲಿಸಿದ ಮೂರು ಅಥವಾ ನಾಲ್ಕು ದಿನಗಳ ಬಳಿಕ ಸಾಮಾನ್ಯವಾಗಿ ಸ್ರಾವ ಪ್ರಾರಂಭವಾಗುತ್ತದೆ. ಆದರೆ ಈ ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಬೇರೆಯಾಗಿರುತ್ತದೆ. ಏಕೆಂದರೆ ಈಗ ಕೃತಕ ರಸದೂತ ಇಲ್ಲದೇ ಇರುವ ಕಾರಣ ದೇಹ ಪೂರ್ವ ಸ್ಥಿತಿಗೆ ಬರಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ಗುಳಿಗೆ ಸೇವಿಸುವುದನ್ನು ನಿಲ್ಲಿಸಿದ ಒಂದು ವಾರದ ಬಳಿಕವೂ ಸ್ರಾವ ಕಾಣಿಸಿಕೊಳ್ಳದೇ ಇದ್ದರೆ, ನೀವು ಗರ್ಭವತಿಯಾಗಿದ್ದೀರೋ ಅಂಬ ಅನುಮಾನವನ್ನು ಪರಿಹರಿಸಿಕೊಳ್ಳಲು ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು.

Most Read: ಮುಟ್ಟಿನ ದಿನಗಳಲ್ಲಿ ಸೆಕ್ಸ್, ಅಪಾಯ ಮೈಮೇಲೆ ಎಳೆದುಕೊಂಡಂತೆ!!

ಈ ಮಾತ್ರೆಗಳನ್ನು ಯಾವಾಗ ಸೇವಿಸಲು ಪ್ರಾರಂಭಿಸಬೇಕು ಮತ್ತು ಹೇಗೆ?

ಈ ಮಾತ್ರೆಗಳನ್ನು ಯಾವಾಗ ಸೇವಿಸಲು ಪ್ರಾರಂಭಿಸಬೇಕು ಮತ್ತು ಹೇಗೆ?

ನಿಮ್ಮ ಮಾಸಿಕ ದಿನಗಳು ಹಿಂದಿನ ತಿಂಗಳುಗಳಲ್ಲಿ ಸಂಭವಿಸಿದ ವೇಳಾಪಟ್ಟಿಯ ಪ್ರಕಾರ ಇನ್ನೂ ಮೂರು ದಿನಗಳಲ್ಲಿ ಪ್ರಾರಂಭವಾಗಲಿದೆ ಎನ್ನುವ ದಿನದಲ್ಲಿ ಮೊದಲ ಮಾತ್ರೆ ಸೇವಿಸಬೇಕು. ಒಂದು ಹೊತ್ತಿಗೆ ಒಂದು ಮಾತ್ರೆಯ ಪ್ರಕಾರ ದಿನಕ್ಕೆ ಮೂರು ಮಾತ್ರೆಗಳನ್ನು ಸೇವಿಸಬೇಕು. ನಿತ್ಯವೂ ಇದೇ ಸಮಯಕ್ಕನುಗುಣವಾಗಿ ದಿನಕ್ಕೆ ಮೂರು ಮಾತ್ರೆಗಳನ್ನು ಸೇವಿಸುತ್ತಾ ಹೋಗಬೇಕು. (ನಿಮ್ಮ ದೇಹ ಮತ್ತು ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ ನಿಮ್ಮ ವೈದ್ಯರು ಈ ಪ್ರಮಾಣ ಮತ್ತು ಅವಧಿಯನ್ನು ಬದಲಿಸಲೂಬಹುದು). ಒಂದು ವೇಳೆ ಒಂದು ಹೊತ್ತು ಮಾತ್ರೆ ಸೇವಿಸುವುದನ್ನು ಮರೆತರೆ, ನೆನಪಾದ ತಕ್ಷಣವೇ ಸೇವಿಸಬೇಕು, ಆದರೆ ಒಂದು ವೇಳೆ ಮುಂದಿನ ಮಾತ್ರೆ ಸೇವಿಸುವ ಹೊತ್ತಿಗೆ ಕೊಂಚ ಮುನ್ನ ನೆನಪಾದರೆ ಆ ಮಾತ್ರೆಯನ್ನು ಸೇವಿಸದೇ ಈ ಹೊತ್ತಿನ ಮಾತ್ರೆಯನ್ನು ಮಾತ್ರವೇ ಸೇವಿಸಬೇಕು. ಎಂದಿಗೂ ಒಂದು ಸಮಯದಲ್ಲಿ ಎರಡು ಗುಳಿಗೆಗಳನ್ನು ಸೇವಿಸಬಾರದು.

English summary

Period Delaying Pills-things You Need to Know

Periods pills are useful for women who seek to delay their period, for reasons such as not wanting their period to come on important occasions, or during vacations. They are effective in delaying periods for up to 17 days. These pills contain Norethisterone, which is a man-made version of progesterone, a female sex hormone. Your body’s progesterone levels will drop if the ovum is not fertilised, and hence prep your body to discharge the ovum and uterine lining (which will lead to your period), so taking Norethisterone will prevent this from happening, as it keeps progesterone levels artificially high, hence delaying your period.
Story first published: Friday, January 4, 2019, 13:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more