For Quick Alerts
ALLOW NOTIFICATIONS  
For Daily Alerts

ಸಕ್ಕರೆ ಎನ್ನುವುದು ಮತ್ತೊಂದು ತಂಬಾಕೇ? ಆಹಾರ ಮತ್ತು ಪೋಷಕಾಂಶಗಳಲ್ಲಿ ಸಕ್ಕರೆಯ ಪಾತ್ರವೇನು?

|

ಸಾಮಾನ್ಯವಾಗಿ ಸಿಹಿ ಎಂದರೆ ಎಲ್ಲರಿಗೂ ಇಷ್ಟ. ಸಿಹಿತಿಂಡಿಗಳನ್ನು ನೋಡಿದಾಕ್ಷಣ ಬಾಯಲ್ಲಿ ನೀರೂರಿ ತಿನ್ನುವ ಅದಮ್ಯ ಬಯಕೆಯುಂಟಾಗುತ್ತದೆ. ಪರಿಣಾಮವಾಗಿ ಸಕ್ಕರೆಯ ಪ್ರಮಾಣ ಹೆಚ್ಚಿರುವ ಸಿಹಿತಿನಿಸಿನ ರುಚಿ ಸವಿಬೇಕೆಂಬ ಬಯಕೆ ಮನದಲ್ಲಿ ಮೂಡುವುದು ಸಹಜ. ಆದರೆ ನೀವು ಆ ಸಿಹಿಯನ್ನು ಸವಿದ ನಂತರ ನಿಮ್ಮ ಮುಖ ಸಹಜವಾಗಿರುವುದಿಲ್ಲ. ಅದರಲ್ಲಿ ಏನೋ ಕೊರತೆಯನ್ನು ನೀವು ಕಾಣುತ್ತೀರಿ. ಸಿಹಿ ಪದಾರ್ಥಗಳ ಜೀವಾಳವಾಗಿರುವ ಸಿಹಿಯೇ ಅಲ್ಲಿ ಮಾಯವಾಗಿರುತ್ತದೆ! ಯಾಕೆಂದರೆ ಇಲ್ಲಿ ಸಿಹಿ ಪದಾರ್ಥನಂತಿರುವ ಕೃತಕ ಸಹಿಯನ್ನು ಬೆರೆಸಿರುತ್ತಾರೆ, ಆ ಸಿಹಿತಿಂಡಿಗಳಿಗೆ ಸಕ್ಕರೆಯನ್ನು ಬೆರೆಸಿರುವುದೇ ಇಲ್ಲ...! ನಮಗೆಲ್ಲರಿಗೂ ಗೊತ್ತಿರುವ ಹಾಗೆ ಸಕ್ಕರೆ ನಮ್ಮ ಜೀವನದಲ್ಲಿ ಪ್ರಮುಖವಾಗಿದ್ದು ಕಾಫಿ ಟೀಯಿಂದ ಹಿಡಿದು ಪ್ರತಿಯೊಂದಕ್ಕೂ ಸಿಹಿ ರುಚಿಯನ್ನು ನೀಡಲು ಸಕ್ಕರೆ ಬೇಕೇ ಬೇಕು. ಆದರೆ ಹೆಚ್ಚು ಸಿಹಿಯಾಗಿರುವುದು ಹೆಚ್ಚು ಬಾಧಕ ಎಂಬಂತೆ ಸಕ್ಕರೆ ಕೂಡ ಕೆಲವೊಂದು ಅಪಾಯಕಾರಿ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ.

ಕೆಲವೊಂದು ವೈದ್ಯಕೀಯ ಮೂಲಗಳ ಪ್ರಕಾರ ಆಹಾರದಲ್ಲಿರುವ ಸಕ್ಕರೆಯ ಅಂಶವು ಕೊಬ್ಬು, ಮಧುಮೇಹ ಮತ್ತು ಇನ್ನಿತರ ದೈಹಿಕ ಕಾಯಿಲೆಗಳನ್ನು ತಂದೊಡ್ಡುವಲ್ಲಿ ಕಾರಣವಾಗಿದೆಯಂತೆ. ಹೆಚ್ಚು ಪ್ರಮಾಣದ ಸಕ್ಕರೆ ಇಲ್ಲವೇ ಈ ಅಂಶಗಳುಳ್ಳ ಆಹಾರಗಳನ್ನು ನೀವು ಸೇವಿಸುತ್ತಿದ್ದೀರಿ ಎಂದಾದಲ್ಲಿ ಮಧುಮೇಹದಂತಹ ಭೀಕರ ಸಮಸ್ಯೆ ನಿಮ್ಮನ್ನು ಎಡತಾಕುವುದು ಖಂಡಿತ. ಸಕ್ಕರೆಯನ್ನು ಪೂರ್ಣವಾಗಿ ತ್ಯಜಿಸಲು ಸಾಧ್ಯವಾಗದೇ ಇದ್ದರೂ ಇದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಕಂಡುಕೊಂಡು ಆದಷ್ಟು ದೇಹದಲ್ಲಿ ಅದು ಬೀರುವ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಆಹಾರ ಮತ್ತು ಪೋಷಕಾಂಶಗಳಲ್ಲಿ ಸಕ್ಕರೆಯ ಪಾತ್ರವೆಂದರೆ ಸಕ್ಕರೆ ಅನ್ನುವುದು ಒಂದು ಕಾರ್ಬೋಹೈಡ್ರೇಟ್ಸ್

ಆಹಾರ ಮತ್ತು ಪೋಷಕಾಂಶಗಳಲ್ಲಿ ಸಕ್ಕರೆಯ ಪಾತ್ರವೆಂದರೆ ಸಕ್ಕರೆ ಅನ್ನುವುದು ಒಂದು ಕಾರ್ಬೋಹೈಡ್ರೇಟ್ಸ್

ನಮ್ಮ ಆಹಾರದಲ್ಲಿನ ಶೇ. 50-60ರಷ್ಟು ಶಕ್ತಿಯು ಕಾರ್ಬೋಹೈಡ್ರೇಟ್ಸ್ ಆಗಿ ಪರಿವರ್ತನೆಗೊಳ್ಳುವುದು. ಇದು ತುಂಬಾ ಸರಳ ಹಾಗೂ ಸಂಕೀರ್ಣ ಕಾರ್ಬೋಹೈಡ್ರೇಟ್ಸ್ ಆಗಿದೆ. ಹಾಗಾದರೆ ಇದರ ನಡುವೆ ಇರುವಂತಹ ವ್ಯತ್ಯಾಸವೇನು? ಸರಳ ಕಾರ್ಬ್ರೋಹೈಡ್ರೇಟ್ಸ್ ನಲ್ಲಿ ಗ್ಲೋಕೋಸ್ ಸೇರಿದೆ(ಇದು ಹಣ್ಣುಗಳು ಮತ್ತು ತರಕಾರಿಗಳಲ್ಲಿರುವುದು), ಸುಕ್ರೋಸ್ (ಟೇಬಲ್ ನ ಸಕ್ಕರೆ), ಫ್ರುಕ್ಟೋಸ್(ಹಣ್ಣುಗಳು ಮತ್ತು ತರಕಾರಿಗಳಲ್ಲಿ ಇರುವುದು), ಲ್ಯಾಕ್ಟೋಸ್ (ಹಾಲಿನಲ್ಲಿ ಇರುವುದು). ಸಂಕೀರ್ಣ ಕಾರ್ಬ್ರೋಹೈಡ್ರೇಟ್ಸ್ ಗಳಲ್ಲಿ ಪಿಷ್ಠ, ಮಾರ್ಪಡಿಸಿರುವ ಪಿಷ್ಠ ಮತ್ತು ವಿವಿಧ ರೀತಿಯ ಆಹಾರದ ನಾರಿನಾಂಶವು ಲಭ್ಯವಿದೆ. ಕಾರ್ಬೋಹೈಡ್ರೇಟ್ಸ್ ಗಳಲ್ಲಿ ಇರುವಂತಹ ಸಿಹಿಯ ಮಟ್ಟದ ಬಗ್ಗೆ ಹೇಳುವುದಾದರೆ ಆಗ ಫುಕ್ಟೋಸ್ ಬೇರೆಲ್ಲಕ್ಕಿಂತಲೂ ತುಂಬಾ ಸಿಹಿಯಾಗಿ ಇರುವುದು. ಇದರ ಬಳಿಕ ಸುಕ್ರೋಸ್, ಗ್ಲೂಕೋಸ್ ಮತ್ತು ಲ್ಯಾಕ್ಟೋಸ್ ಇರುವುದು. ಸಂಕೀರ್ಣ ಕಾರ್ಬೋಹೈಡ್ರೇಟ್ಸ್ ನಲ್ಲಿ ಸಕ್ಕರೆ ಅಂಶವು ತುಂಬಾ ಕಡಿಮೆ ಇರುವುದು.

ಈ ಸಕ್ಕರೆಗಳು ನಮ್ಮ ದೇಹದಲ್ಲಿ ಹೇಗೆ ಕೆಲಸ ಮಾಡುವುದು?

ಈ ಸಕ್ಕರೆಗಳು ನಮ್ಮ ದೇಹದಲ್ಲಿ ಹೇಗೆ ಕೆಲಸ ಮಾಡುವುದು?

ಒಂದು ಗ್ರಾಂನಷ್ಟು ಕಾರ್ಬೋಹೈಡ್ರೇಟ್ಸ್ ಸುಮಾರು 4ಕೆಸಿಎಎಲ್ ನಷ್ಟು ಸಕ್ಕರೆ ಒದಗಿಸುವುದು. ಸರಳ ಸಕ್ಕರೆಯು ನೇರವಾಗಿ ದೇಹದಲ್ಲಿ ಹೀರಿಕೊಳ್ಳುವುದು ಮತ್ತು ಅದು ಶಕ್ತಿ ನೀಡುವುದು. ಸಂಕೀರ್ಣ ಕಾರ್ಬೋಹೈಡ್ರೇಟ್ಸ್ ಗಳು ವಿಘಟನೆಗೊಳ್ಳಲು ಕೆಲವೊಂದು ಪ್ರಮುಖ ಕಿಣ್ವಗಳು ಅಗತ್ಯವಾಗಿ ಬೇಕು ಮತ್ತು ಇದರ ಬಳಿಕ ಅದು ಹೀರಿಕೊಳ್ಳುವುದು. ಉದಾಹರಣೆಗೆ, ಮಾರ್ಪಾಡುಗೊಂಡಿರುವಂತಹ ಪಿಷ್ಠವು ಚಯಾಪಚಯಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು. ಇದರಿಂದ ದೇಹದಲ್ಲಿ ಶಕ್ತಿಯು ತುಂಬಾ ನಿಧಾನವಾಗಿ ಬಿಡುಗಡೆಯಾಗುವುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ಮಟ್ಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಸಕ್ಕರೆಯ ನಕಾರಾತ್ಮಕ ಪರಿಣಾಮಗಳ ಬಗ್ಗೆ ಹೇಳುವುದಾದರೆ ಆಗ ಸಂಸ್ಕರಿತ ಸಕ್ಕರೆ ಬಗ್ಗೆ ಮಾತನಾಡಬೇಕು. ಆಹಾರದಲ್ಲಿ ಸಕ್ಕರೆಯ ಪಾತ್ರವು ಸಿಹಿ ನೀಡುವುದು ಆಗಿದೆ. ಇದರ ಹೊರತಾಗಿ, ಸಕ್ಕರೆಯನ್ನು ಜಾಮ್, ಜೆಲ್ಲಿ ಮತ್ತು ಸಾಸ್ ಗಳಲ್ಲಿ ಸಂಸ್ಕರಣೆಗೆ ಬಳಸಲಾಗುತ್ತದೆ. ವಿವಿಧ ರೀತಿಯ ಬೇಕರಿ ಉತ್ಪನ್ನಗಳಿಗೆ ಇದನ್ನು ವಿನ್ಯಾಸಕ್ಕಾಗಿ ಬಳಸಲಾಗುತ್ತದೆ. ಸಕ್ಕರೆಯನ್ನು ಯಾವ ರೂಪದಲ್ಲಿ ನಾವು ಸೇವಿಸುತ್ತೇವೆ ಎನ್ನುವುದರ ಮೇಲೆ ಅದು ಅವಲಂಬನೆ ಮಾಡುವುದು.

ಸಕ್ಕರೆ ಬಗ್ಗೆ ಇರುವಂತಹ ದೊಡ್ಡ ಕೂಗು ಏನು?

ಸಕ್ಕರೆ ಬಗ್ಗೆ ಇರುವಂತಹ ದೊಡ್ಡ ಕೂಗು ಏನು?

ಹಲವಾರು ಮಂದಿ ತಜ್ಞರ ಪ್ರಕಾರ ಸಕ್ಕರೆಯು ಹಲವಾರು ರೀತಿಯ ಚಯಾಪಚಯ ಕ್ರಿಯೆಗಳಿಗೆ ದೊಡ್ಡ ಪರಿಣಾಮ ಬೀರುವುದು. ಇದರಿಂದಾಗಿ ಇನ್ಸುಲಿನ್ ಪ್ರತಿರೋಧಕ, ಬೊಜ್ಜು, ಚಯಾಪಚಯ ಸಮಸ್ಯೆ ಮತ್ತು ಮಧುಮೇಹ ಕಂಡುಬರುವುದು.

ಇದು ಎಷ್ಟರ ಮಟ್ಟಿಗೆ ನಿಜ?

ಇದು ಎಷ್ಟರ ಮಟ್ಟಿಗೆ ನಿಜ?

ನಮ್ಮ ಜಡ ಜೀವನಶೈಲಿಯಿಂದಾಗಿ ಕ್ಯಾಲರಿ ಸೇವನೆ ಪ್ರಮಾಣವು ಕೂಡ ಹೆಚ್ಚಾಗುತ್ತಿದೆ. ಇದು ಕೂಡ ದೊಡ್ಡ ಅಪರಾಧಿಯಾಗಿದೆ. ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡಿದರೆ ಅದರಿಂದ ಈ ಸಮಸ್ಯೆ ತಪ್ಪಿಸಬಹುದು.

ವ್ಯಾಯಾಮ ಮಾಡುತ್ತಲಿದ್ದರೆ ನಾವು ಸಕ್ಕರೆಯನ್ನು ಸೇವಿಸಿಕೊಂಡು ಇರಬಹುದೇ?

ವ್ಯಾಯಾಮ ಮಾಡುತ್ತಲಿದ್ದರೆ ನಾವು ಸಕ್ಕರೆಯನ್ನು ಸೇವಿಸಿಕೊಂಡು ಇರಬಹುದೇ?

ಇದು ತುಂಬಾ ಚರ್ಚಾಸ್ಪದ ವಿಚಾರವಾಗಿದೆ. ಯಾವುದೇ ಆಹಾರವಾದರೂ ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಅದರಿಂದ ಯಾವುದೇ ಹಾನಿಯಾಗದು. ಮಿತ ಎನ್ನುವುದು ವಿಭಿನ್ನಾರ್ಥವನ್ನು ನೀಡುವಂತಹ ಶಬ್ದವಾಗಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಇರುವುದು.

ಸಕ್ಕರೆ ಸೇವನೆಗೆ ಇರುವಂತಹ ನಿಯಮಗಳು ಯಾವುದು?

ಸಕ್ಕರೆ ಸೇವನೆಗೆ ಇರುವಂತಹ ನಿಯಮಗಳು ಯಾವುದು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಶೇ.5ರಷ್ಟು ಶಕ್ತಿಯು ನಮಗೆ ಕಾರ್ಬೋಹೈಡ್ರೇಟ್ಸ್ ನಿಂದ ಬರುವುದು. ದಿನಕ್ಕೆ ಆರು ಚಮಚ ಸಕ್ಕರೆ ಸೇವನೆ ಮಾಡಿದರೆ ನಮಗೆ 25 ಗ್ರಾಂ ಸಿಗುವುದು. ಅತಿಯಾಗಿ ಸಕ್ಕರೆ ಸೇವನೆ ಮಾಡಿದರೆ ಅದರಿಂದ ಹೈಪರ್ ಆ್ಯಕ್ಟಿವಿಟಿ, ಅತಿಯಾಗಿ ತಿನ್ನುವುದು, ಬಯಕೆ ಮತ್ತು ಮನಸ್ಥಿತಿ ಮೇಲೆ ಪರಿಣಾಮ ಬೀರಬಹುದು. ಸರಾಸರಿಯಾಗಿ ಒಬ್ಬ ವ್ಯಕ್ತಿಯು ಒಂದು ದಿನಕ್ಕೆ ಆರು ಚಮಚಕ್ಕಿಂತ ಕಡಿಮೆ ಸಕ್ಕರೆ ಸೇವನೆ ಮಾಡುತ್ತಾನೆ. 2-3 ಕಪ್ ಚಾ ಅಥವಾ ಕಾಫಿ ಸೇವನೆ ಮಾಡಿದರೆ ಅದಕ್ಕೆ ಎರಡು ಚಮಚ ಸಕ್ಕರೆ ಹಾಕಬಹುದು ಎಂದು ಪರಿಗಣಿಸಬೇಕು.

ಅಪಾಯ ಎಲ್ಲಿದೆ?

ಅಪಾಯ ಎಲ್ಲಿದೆ?

ನೀವು ಇದನ್ನು ನಂಬಬಹುದು ಅಥವಾ ನಂಬದೇ ಇರಬಹುದು. ಆದರೆ ನಾವು ಪ್ರತ್ಯಕ್ಷವಾಗಿ ಸೇವಿಸುವ ಸಕ್ಕರೆಗಿಂತಲೂ ಕೆಲವೊಂದು ಆಹಾರಗಳಲ್ಲಿ ಇರುವಂತಹ ಗುಪ್ತ ಸಕ್ಕರೆಯಂಶವನ್ನು ಸೇವನೆ ಮಾಡುತ್ತೇವೆ. ಗುಪ್ತ ಸಕ್ಕರೆ ಅಂಶವನ್ನು ಸುಕ್ರೋಸ್ ಎಂದು ಗುರುತಿಸಲಾಗಿದೆ. ಅಧಿಕ ಫ್ರುಕ್ಟೋಸ್ ಇರುವ ಸಿರಪ್, ಗ್ಲೂಕೋಸ್ ಸಿರಪ್, ಮಲ್ಟೊಸ್ ಮತ್ತು ಡೆಕ್ಸ್ ಟ್ರೋಸ್ ಇದರಲ್ಲಿ ಕೆಲವು. ಇವುಗಳು ನಾವು ಸೇವಿಸುವಂತಹ ವಿವಿಧ ರೀತಿಯ ಆಹಾರಗಳಲ್ಲಿ ಇರುವುದು. ಇದರಲ್ಲಿ ಮುಖ್ಯವಾಗಿ ನಾವು ಉಪಾಹಾರಕ್ಕೆ ಸೇವಿಸುವ ಸೀರಲ್, ಕ್ರೀಮ್ ಬಿಸ್ಕಟ್, ಕಾರ್ಬೋನೇಟೆಡ್ ಪಾನೀಯ, ಪಾಕ್ ಮಾಡಲ್ಪಟ್ಟಿರುವ ಹಣ್ಣುಗಳ ಜ್ಯೂಸ್, ಸಲಾಡ್ ನ ಅಲಂಕಾರ, ಚಾಕಲೇಟ್, ಹಣ್ಣುಗಳ ಮೊಸರು ಇತ್ಯಾದಿಗಳು. ಮುಂದಿನ ಸಲ ನೀವು ಆಹಾರದ ಪ್ಯಾಕ್ ನ ಲೇಬಲ್ ಗಮನಿಸುತ್ತಿದ್ದರೆ ಆಗ ನೀವು ಅದರಲ್ಲಿ ಇರುವಂತಹ ಗುಪ್ತ ಸಕ್ಕರೆ ಬಗ್ಗೆ ಗಮನಹರಿಸಿ. ಇದನ್ನು ನಿಮ್ಮ ದಿನನಿತ್ಯದ ಸಕ್ಕರೆ ಮಟ್ಟಕ್ಕೆ ಸೇರಿಸಿ. ಸಕ್ಕರೆ ಮುಕ್ತ ಆಹಾರವು ಅತಿಯಾಗಿ ಸಕ್ಕರೆ ಪ್ರಮಾಣ ಸೇವನೆ ಮಾಡುವುದನ್ನು ತಡೆಯುವುದು.

ಇದು ಒಳ್ಳೆಯ ಪರಿಹಾರವೇ?

ಇದು ಒಳ್ಳೆಯ ಪರಿಹಾರವೇ?

ಸಕ್ಕರೆ ಮುಕ್ತ ಆಹಾರಗಳಲ್ಲಿ ಅತಿಯಾದ ಕೊಬ್ಬು ಮತ್ತು ಕೃತಕ ಸಿಹಿಯನ್ನು ಬಳಸಿಕೊಳ್ಳಲಾಗುವುಉದ. ಇದು ಟೇಬಲ್ ಸಕ್ಕರೆಗಿಂತ ನೂರು ಪಟ್ಟು ಹೆಚ್ಚಿನ ಸಿಹಿ ನೀಡುವುದು. ಆದರೆ ಇದು ನಿಮಗೆ ಸಿಹಿ ನೀಡಿದರೂ ಅದು ಟೇಬಲ್ ಸಕ್ಕರೆಯಂತೆ ನಿಮಗೆ ಅಧಿಕ ಕ್ಯಾಲರಿ ನೀಡದು. ಆದರೆ ಸಕ್ಕರೆ ಮುಕ್ತ ಆಹಾರವನ್ನು ಅಧಿಕವಾಗಿ ಸೇವನೆ ಮಾಡಿದರೆ ಅದರಿಂದ ಹೊಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಆಗುವುದು ಎಂದು ಅಧ್ಯಯನಗಳು ಹೇಳಿವೆ.

ಇದಕ್ಕೆ ಅತ್ಯುತ್ತಮ ಪರಿಹಾರವೇನು?

ಇದಕ್ಕೆ ಅತ್ಯುತ್ತಮ ಪರಿಹಾರವೇನು?

ಸಿಹಿಯ ರುಚಿಯನ್ನು ನಾವು ಬೇರೆ ಯಾವುದಕ್ಕಾದರೂ ಬದಲಾಯಿಸಿಕೊಳ್ಳಬೇಕು. ನಾವು ಬಾಲ್ಯದಿಂದಲೇ ಸಿಹಿಗೆ ಹೆಚ್ಚು ಆದ್ಯತೆ ನೀಡುವ ಕಾರಣದಿಂದಾಗಿ ಇದು ನಮಗೆ ಒಂದು ರೀತಿಯಲ್ಲಿ ಅಭ್ಯಾಸವಾಗಿ ಹೋಗಿದೆ. ಸಾಂಪ್ರದಾಯಿಕವಾಗಿ ಮಕ್ಕಳಿಗೆ ಜೇನುತುಪ್ಪ ನೀಡಿದರೆ ಆಗ ಮಕ್ಕಳಿಗೆ ಸಿಹಿಯ ರುಚಿಯು ಸಿಗುವುದು. ಸಕ್ಕರೆ ಅಂಶವು ಕಡಿಮೆ ಇರುವಂತಹ ಆಹಾರ ಸೇವನೆ ಮಾಡಿದರೆ ಆಗ ಬಾಲ್ಯದಲ್ಲಿ ಅತಿಯಾಗಿ ಸಕ್ಕರೆ ಸೇವನೆ ಕಡಿಮೆ ಮಾಡಬಹುದು. ನಿಮ್ಮ ಆಹಾರ ಕ್ರಮದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಿಕೊಳ್ಳುವ ಕಾರಣದಿಂದಾಗಿ ಅದು ಹಲವಾರು ರೀತಿಯ ಕಾಯಿಲೆಗಳನ್ನು ದೂರವಿಡುವುದು. ಇದರಿಂದ ನೀವು ಇಂದೇ ಸಕ್ಕರೆ ಕಡಿಮೆ ಸೇವನೆ ಮಾಡಲು ಆರಂಭಿಸಿ.

English summary

Is Sugar the New Tobacco?-The Role of Sugar in Food and Nutrition

Sugar is a carbohydrate. 50-60% of the energy in our diet is contributed from carbohydrates. There are simple and complex carbohydrates. So what’s the difference between the two?Simple carbohydrates include glucose (present in fruits & vegetables), sucrose (table sugar), fructose (present in fruits& vegetables), lactose (present in milk). Complex carbohydrates include starch, modified starches and different forms of dietary fibre.
X
Desktop Bottom Promotion