For Quick Alerts
ALLOW NOTIFICATIONS  
For Daily Alerts

ಪ್ರತಿದಿನವೂ ಚಿಕನ್ ತಿಂದರೆ ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ಇದಕ್ಕುತ್ತರ!

|

ಮಾಂಸಾಹಾರವನ್ನು ಪರಿಗಣಿಸಿದರೆ ವಿಶ್ವದಲ್ಲಿಯೇ ಅತ್ಯಂತ ಹೆಚ್ಚಾಗಿ ಸೇವಿಸಲ್ಪಡುವ ಆಹಾರವೆಂದರೆ ಕೋಳಿಮಾಂಸ. ಆದರೆ ಇದನ್ನು ನಿತ್ಯವೂ ತಿನ್ನುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯವನ್ನು ಬಹುತೇಕ ಎಲ್ಲರೂ ವ್ಯಕ್ತಪಡಿಸುತ್ತಾರೆ. ಆದರೆ ಈ ಅಭಿಪ್ರಾಯ ಪರಿಪೂರ್ಣವಾಗಿ ಸತ್ಯವಲ್ಲ! ಆರೋಗ್ಯ ತಜ್ಞರ ಪ್ರಕಾರ ನೀವು ಯಾವ ಬಗೆಯ ಮಾಂಸವನ್ನು ತಿನ್ನುತ್ತಿದ್ದೀರಿ ಹಾಗೂ ಅಡುಗೆಯ ಬಗೆಯನ್ನು ಅರಿತ ಬಳಿಕವೇ ಇದು ಎಷ್ಟು ಆರೋಗ್ಯಕರ ಎಂಬುದನ್ನು ಪರಿಗಣಿಸಬಹುದು.

chicken

ಒಂದು ವೇಳೆ ಕೋಳಿಮಾಂಸದ ಖಾದ್ಯವನ್ನು ಹೆಚ್ಚಿಸಲು ಬೆಣ್ಣೆ, ವಿವಿಧ ಮಸಾಲೆಗಳು, ಎಣ್ಣೆ ಮೊದಲಾದವುಗಳನ್ನು ಬಳಸಿದರೆ ಇದು ಖಚಿತವಾಗಿಯೂ ನಿತ್ಯದ ಸೇವನೆಗೆ ತಕ್ಕುದಲ್ಲ! ಕೋಳಿಮಾಂಸದ ಗರಿಷ್ಟ ಪ್ರಯೋಜನ ಪಡೆಯಬೇಕೆಂದರೆ ಇದನ್ನು ಗ್ರಿಲ್ ವಿಧಾನದಲ್ಲಿ ತಯಾರಿಸಬೇಕು ಅಥವಾ ಹುರಿಯಬೇಕು. ಪೋಷಕಾಂಶಗಳನ್ನು ಗರಿಷ್ಟ ಪ್ರಮಾಣದಲ್ಲಿ ಪಡೆಯಲು ಮೃದುಭಾಗದ ಮಾಂಸವೇ ಅತ್ಯುತ್ತಮ. ಬನ್ನಿ, ಈ ಸ್ವಾದಿಷ್ಟ ಆಹಾರವನ್ನು ನಿತ್ಯದ ಆಹಾರವನ್ನಾಗಿ ಪರಿಗಣಿಸಲು ಇದರಲ್ಲಿ ಏನಿದೆ ಎಂಬುದನ್ನು ನೋಡೋಣ:

ಪೌಷ್ಟಿಕಾಂಶಗಳ ವಿವರ

ಪೌಷ್ಟಿಕಾಂಶಗಳ ವಿವರ

ಆಹಾರತಜ್ಞರಾದ ಸಿದ್ದಾರ್ಥ ಮಾರ್ಯಾರವರ ಪ್ರಕಾರ ಸುಮಾರು ನೂರು ಗ್ರಾಂ ಕೋಳಿಯ ಎದೆಯ ಭಾಗದ ಮಾಂಸದಲ್ಲಿ ಒಟ್ಟು 124 ಕಿಲೋಕ್ಯಾಲೋರಿಗಳೂ, ಇಪ್ಪತ್ತು ಗ್ರಾಂ ಪ್ರೋಟೀನ್ ಹಾಗೂ ಮೂರು ಗ್ರಾಂ ಕೊಬ್ಬು ಇರುತ್ತದೆ.

ದಿನಕ್ಕೆಷ್ಟು ಸೇವನೆ ಒಳ್ಳೆಯದು

ದಿನಕ್ಕೆಷ್ಟು ಸೇವನೆ ಒಳ್ಳೆಯದು

ಸಿದ್ದಾರ್ಥರವರ ಪ್ರಕಾರ ಸಾಮಾನ್ಯ ಆರೋಗ್ಯವುಳ್ಳ 65-75 ಕೇಜಿ ತೂಕದ ಓರ್ವ ವ್ಯಕ್ತಿಗೆ ದಿನಕ್ಕೆ ಕನಿಷ್ಟ ಇನ್ನೂರು ಗ್ರಾಂ ಕೋಳಿಮಾಂಸದ ಅಗತ್ಯವಿದೆ.

ಪ್ರೋಟೀನ್ ನ ಮೂಲ

ಪ್ರೋಟೀನ್ ನ ಮೂಲ

ಒಂದು ವೇಳೆ ನಿಮಗೆ ಇದುವರೆಗೂ ಗೊತ್ತಿಲ್ಲದಿದ್ದರೆ, ನಮ್ಮ ದೇಹಕ್ಕೆ ಪ್ರೋಟೀನ್ ಒದಗಿಸುವ ಆಹಾರಗಳಲ್ಲಿ ಕೋಳಿಮಾಂಸ ಅತ್ಯುತ್ತಮ ಮೂಲವಾಗಿದೆ ಹಾಗೂ ಇದು ನಮ್ಮ ಸ್ನಾಯು, ಮೂಳೆಗಳ ಬೆಳವಣಿಗೆಗೆ ನೆರವಾಗುವ ಜೊತೆಗೇ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಒಡೆದು ಸುಲಭವಾಗಿ ನಿವಾರಿಸಲು ನೆರವಾಗುತ್ತದೆ.

Most Read: ಆಹಾ, ಚಿಕನ್ ಬಿರಿಯಾನಿ, ಬಾಯಲ್ಲಿ ನೀರೂರುತ್ತಿದೆ!

ಪರಿಣಾಮಕಾರಿ ಖಿನ್ನತಾ ನಿವಾರಕ

ಪರಿಣಾಮಕಾರಿ ಖಿನ್ನತಾ ನಿವಾರಕ

ಕೋಳಿಮಾಂಸ ಒಂದು ಮುದನೀಡುವ ಆಹಾರವಾಗಿದ್ದು ಇದರ ಸೇವನೆಯ ಬಳಿಕ ತೃಪ್ತಿ ದೊರಕುವುದು ಖಚಿತವಾಗಿದೆ. ಏಕೆಂದರೆ ಇದರಲ್ಲಿರುವ ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆಮ್ಲ ರಕ್ತದಲ್ಲಿ ಬೆರೆತ ಬಳಿಕ ಮೆದುಳಿನಲ್ಲಿರುವ ಸೆರೋಟೋನಿನ್ ಎಂಬ ರಸದೂತದ ಪ್ರಮಾಣ ಹೆಚ್ಚುತ್ತದೆ ಹಾಗೂ ಇದು ಮುದನೀಡುವ ರಸದೂತವಾಗಿರುವುದರಿಂದ ಮನಸ್ಸು ನಿರಾಳವಾಗಿ ಖಿನ್ನತೆ ದೂರಾಗುತ್ತದೆ.

ಕಾಯಿಲೆಗಳ ವಿರುದ್ಧ ಹೋರಾಡುವ ಸಂಯುಕ್ತಗಳು

ಕಾಯಿಲೆಗಳ ವಿರುದ್ಧ ಹೋರಾಡುವ ಸಂಯುಕ್ತಗಳು

ಕೋಳಿಮಾಂಸದಲ್ಲಿ ಉತ್ತಮ ಪ್ರಮಾಣದ ಸೆಲೆನಿಯಂ ಇದೆ. ಇದೊಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದ್ದು ಆರೋಗ್ಯವನ್ನು ಕುಂದಿಸುವ ಹಲವಾರು ಖಾಯಿಲೆಗಳ ವಿರುದ್ದ ಹೋರಾಡುತ್ತದೆ. ಇದರಲ್ಲಿ ಪ್ರಮುಖವಾಗಿ ಉರಿಯೂತದ ಪರಿಣಾಮದಿಂದ ಎದುರಾಗಿರುವ ಖಾಯಿಲೆಗಳು, ಹೃದಯ ಸಂಬಧಿ ತೊಂದರೆಗಳು ಹಾಗೂ ನರವ್ಯವಸ್ಥೆ ಸಂಬಂಧಿ ತೊಂದರೆಗಳು ಇಲ್ಲವಾಗುತ್ತವೆ. ಅಲ್ಲದೇ ಜೀವಕೋಶಗಳನ್ನೇ ಶಿಥಿಲಗೊಳಿಸುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದವೂ ಹೋರಾಡುತ್ತದೆ.

ಕೊಲೆಸ್ಟ್ರಾಲ್ ಮಟ್ಟಗಳನ್ನು ನಿಯಂತ್ರಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟಗಳನ್ನು ನಿಯಂತ್ರಿಸುತ್ತದೆ

ಕೋಳಿಮಾಂಸದಲ್ಲಿರುವ ಸಮೃದ್ದ ಪ್ರಮಾಣದ ವಿಟಮಿನ್ ಬಿ3 ಕಾರ್ಬೋಹೈಡ್ರೇಟುಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಅಗತ್ಯವಾಗ ಪೋಷಕಾಂಶವಾಗಿದೆ. ಈ ಮೂಲಕ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳನ್ನು ನಿಯಂತ್ರಣದಲ್ಲಿರಿಸಿ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯಿಂದ ರಕ್ಷಣೆ ಒದಗಿಸುತ್ತದೆ.

ಜೀವರಾಸಾಯನಿಕ ಚಟುವಟಿಕೆಯನ್ನು ಪ್ರಚೋದಿಸುತ್ತದೆ

ಜೀವರಾಸಾಯನಿಕ ಚಟುವಟಿಕೆಯನ್ನು ಪ್ರಚೋದಿಸುತ್ತದೆ

ಕೋಳಿಮಾಂಸದ ಮೃದುಭಾಗದಲ್ಲಿರುವ ಇನ್ನೊಂದು ಪೋಷಕಾಂಶವಾದ ವಿಟಮಿನ್ ಬಿ6, ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ತನ್ಮೂಲಕ ರೋಗ ನಿರೋಧಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ.

ತೀರ್ಮಾನ

ತೀರ್ಮಾನ

ಅತಿಯಾದರೆ ಅಮೃತವೂ ವಿಷ ಎಂಬ ಗಾದೆಮಾತು ಕೋಳಿಮಾಂಸಕ್ಕೂ ಅನ್ವಯಿಸುತ್ತದೆ. ನಿತ್ಯವೂ ಕೋಳಿಮಾಂಸವನ್ನು ಸೇವಿಸುವುದು ಕೆಟ್ಟದಲ್ಲ, ಆದರೆ ಸೇವನೆಯ ಮಾಂಸದ ಭಾಗ, ಪ್ರಮಾಣ ಮತ್ತು ಇದರ ಖಾದ್ಯ ತಯಾರಿಸಲು ಬಳಸಿದ ವಿಧಾನ ಹಾಗೂ ಇತರ ಸಾಮಾಗ್ರಿಗಳನ್ನು ಪರಿಗಣಿಸಬೇಕಾಗುತ್ತದೆ. ಅಲ್ಲದೇ ಸತತ ಸೇವನೆಯಿಂದ ಇದರಲ್ಲಿರುವ ಸಾಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾ ಹೊಟ್ಟೆಯಲ್ಲಿ ಕೆಲವಾರು ಬಗೆಯ ಕಾಯಿಲೆಗಳನ್ನುಂಟುಮಾಡಬಹುದು. ಹಾಗಾಗಿ ಈ ಮಾಂಸದ ಸೇವನೆಯ ಬಗ್ಗೆ ಎಚ್ಚರಿಕೆ ಅಗತ್ಯ.

English summary

Is it healthy to eat chicken daily? Here's the answer!

When it comes to non-vegetarian food, people often think that eating meat on a daily basis is not good. This belief is partially wrong. According to health experts, it is necessary to understand the mode of cooking the meat and the type of meat you are eating. If we talk about chicken, the variations loaded with spices, cream and butter are definitely not worth a daily diet. The ideal way to get the maximum benefits of chicken is to either grill it or roast it. Full of nutrients, the tender meat is also known as the powerhouse of energy. Let us know what makes it a perfect everyday food.
X
Desktop Bottom Promotion