For Quick Alerts
ALLOW NOTIFICATIONS  
For Daily Alerts

ನಿಮ್ಮನ್ನು ಅಚ್ಚರಿಗೊಳಿಸುವ ಹೃದಯದ ಬಗ್ಗೆ ಇರುವ ಆಸಕ್ತಿಕರ ಸಂಗತಿಗಳು!

|

ದೇಹದಲ್ಲಿ ಹೃದಯವೆನ್ನುವುದು ಅತೀ ಪ್ರಾಮುಖ್ಯ ಅಂಗ. ಹೃದಯವು ಸರಿಯಾಗಿದ್ದರೆ ಆಗ ದೇಹದ ಇತರ ಎಲ್ಲಾ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಹೀಗಾಗಿ ಹೃದಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತೀ ಅಗತ್ಯವಾಗಿರುವುದು. ಹೃದಯದ ಆರೋಗ್ಯವು ಕೆಟ್ಟರೆ ಮತ್ತೆ ಅದನ್ನು ಮರಳಿ ಪಡೆಯುವುದು ತುಂಬಾ ಕಷ್ಟ. ಹೃದಯವು ಶಕ್ತಿಶಾಲಿ ಅಂಗ. ಹೃದಯವು ದಿನಕ್ಕೆ ಸುಮಾರು 1,00,000 ಸಲ ದೇಹದ ವಿವಿಧ ಅಂಗಗಳಿಗೆ ರಕ್ತ ಸರಬರಾಜು ಮಾಡುತ್ತದೆ. ಹೃದಯವು ಕೇವಲ ರಕ್ತ ಸರಬರಾಜು ಮಾಡುವಂತಹ ಕೆಲಸವನ್ನು ಮಾತ್ರ ಮಾಡುವುದಿಲ್ಲವೆಂದು ಹಾವರ್ಡ್ ಮೆಡಿಕಲ್ ಸ್ಕೂಲ್ ನ ಸಂಶೋಧನೆಯು ಹೇಳುತ್ತದೆ.

ಹೃದಯಕ್ಕೆ ಬಾಹ್ಯ ನರಗಳು ಮತ್ತು ಕೆಲವೊಂದು ಹಾರ್ಮೋನುಗಳ ಸಂಪರ್ಕವು ಇದೆ ಎಂದು ಈ ಸಂಶೋಧನೆಯು ಹೇಳಿದೆ. ಸಂಶೋಧನೆಯ ಪ್ರಕಾರ ಹೃದಯವು ಮೆದುಳನ್ನು ಹೆಚ್ಚು ನಿಯಂತ್ರಿಸುವುದು ಎಂದು ಸಂಶೋಧನೆಯು ಕಂಡುಕೊಂಡಿದೆ. ಮನುಷ್ಯನ ಹೃದಯದಲ್ಲಿ ಸುಮಾರು 40 ಸಾವಿರ ಸಂವೇದಾತ್ಮಕ ನ್ಯೂರಾನ್ ಗಳಿದ್ದು, ಈ ಕಾರಣದಿಂದಾಗಿ ಹೃದಯವನ್ನು ಒಂದು ಸಣ್ಣ ಮೆದುಳು ಎಂದು ಸಂಶೋಧನೆಗಳು ಹೇಳಿವೆ. ಹೃದಯವು ತುಂಬಾ ಸಂವೇದಾತ್ಮಕ ಅಂಗವೆಂದು ನ್ಯೂರೋ ಕಾರ್ಡಿಯಾಲಜಿ ತಿಳಿಸಿವೆ.

ಹೃದಯವು ಸಂವಹನ ನಡೆಸುವುದು

ಹೃದಯವು ಸಂವಹನ ನಡೆಸುವುದು

ಹೃದಯವು ಮೆದುಳು ಮತ್ತು ದೇಹದೊಂದಿಗೆ ನಾಲ್ಕು ವಿಧದಿಂದ ಸಂವಹನ ನಡೆಸುತ್ತದೆ. ಇದು ನರ ವ್ಯವಸ್ಥೆ ಸಂಪರ್ಕ, ಹಾರ್ಮೋನು ಬಿಡುಗಡೆ, ರಕ್ತದೊತ್ತಡ ಅಲೆಗಳು ಮತ್ತು ಇತರ ಶಕ್ತಿಶಾಲಿ ವಿದ್ಯುತ್ ಮತ್ತು ವಿದ್ಯುತ್ ಕಾಂತೀಯ ಕ್ಷೇತ್ರಗಳನ್ನು ಸಂವಹನ ನಡೆಸುವುದು.

ಕಲಿಯಲು ಮತ್ತು ನೆನಪಿಸಿಕೊಳ್ಳಲು ನೆರವಾಗುವುದು

ಕಲಿಯಲು ಮತ್ತು ನೆನಪಿಸಿಕೊಳ್ಳಲು ನೆರವಾಗುವುದು

ಹೃದಯದ ಒಳಗಿರುವಂತಹ ಕೆಲವೊಂದು ನರಗಳು ನಾವು ಯಾಕೆ ಕಲಿಯಬೇಕು ಮತ್ತು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುವುದಕ್ಕೆ ಒಂದು ಕಾರಣವಾಗಿದೆ. ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್ ಮೂಲಕ ಇದು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ನೆರವಾಗುವುದು.

ಪ್ರಬಲ ವಿದ್ಯುತ್ ಚಟುವಟಿಕೆ ಮತ್ತು ವಿದ್ಯುತ್ಕಾಂತೀಯ ಕ್ಷೇತ್ರ

ಪ್ರಬಲ ವಿದ್ಯುತ್ ಚಟುವಟಿಕೆ ಮತ್ತು ವಿದ್ಯುತ್ಕಾಂತೀಯ ಕ್ಷೇತ್ರ

ಮೆದುಳಿನಲ್ಲಿನ ಚಟುವಟಿಕೆಗಳಿಗೆ ಹೋಲಿಸಿದರೆ ಹೃದಯದಿಂದ 60 ಪಟ್ಟು ಹೆಚ್ಚು ವಿದ್ಯುತ್ ಕ್ಷೇತ್ರವನ್ನು ಹೊರಸೂಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತು ಆಗಿದೆ. ಹೃದಯದಲ್ಲಿನ ವಿದ್ಯುತ್ಕಾಂತೀಯ ಕ್ಷೇತ್ರವು ಮೆದುಳಿಗಿಂತ ಸುಮಾರು 5000 ಪಟ್ಟು ಬಲಿಷ್ಠವಾಗಿದೆ ಎಂದು ಸಂಶೋಧನೆಗಳು ಹೇಳಿವೆ.

ಬಲಿಷ್ಠ ವಿದ್ಯುತ್ಕಾಂತೀಯ ಕ್ಷೇತ್ರ

ಬಲಿಷ್ಠ ವಿದ್ಯುತ್ಕಾಂತೀಯ ಕ್ಷೇತ್ರ

ಹೃದಯದಲ್ಲಿ ಇರುವಂತಹ ವಿದ್ಯುತ್ಕಾಂತೀಯ ಕ್ಷೇತ್ರಗಳು ತುಂಬಾ ಬಲಿಷ್ಠ. ಇದನ್ನು ದೇಹದ ಯಾವುದೇ ಭಾಗದಲ್ಲಿ ಅಳೆಯಬಹುದು.(ಇಕೆಜಿ ವಿದ್ಯುತ್ಕಾಂತ ಬಳಸಿ ಮತ್ತು ದೇಹದ ಹೊರಭಾಗದಿಂದ ಕೂಡ ಅಳೆಯಬಹುದು.

ಹೃದಯದಲ್ಲಿನ ಚಟುವಟಿಕೆಯು ಇತರರ ಮೆದುಳಿನ ಮೂಲಕ ಅಳೆಯಬಹುದು

ಹೃದಯದಲ್ಲಿನ ಚಟುವಟಿಕೆಯು ಇತರರ ಮೆದುಳಿನ ಮೂಲಕ ಅಳೆಯಬಹುದು

ಒಬ್ಬ ವ್ಯಕ್ತಿಯ ಹೃಯದಲ್ಲಿನ ಚಟುವಟಿಕೆಯನ್ನು ಮತ್ತೊಬ್ಬ ವ್ಯಕ್ತಿಯ ಮೆದುಳಿನ ಅಲೆಗಳಿಂದ ಅಳೆಯಬಹುದಾಗಿದೆ. ಅವರು ಪರಸ್ಪರ ಸ್ಪರ್ಶಿಸಿದ್ದರೆ ಅಥವಾ ಕೆಲವೇ ಅಡಿ ಅಂತರದಲ್ಲಿ ಇದ್ದರೆ ಹೀಗೆ ಮಾಡಬಹುದು. ಕೆಲವೊಂದು ಚಿಕಿತ್ಸೆಗಳಲ್ಲಿ ಈ ಸಂವಹನ ಪದ್ಧತಿಯನ್ನು ಬಳಸಿಕೊಳ್ಳಲಾಗುತ್ತದೆ.

ಒಟ್ಟು ಸೇರಿಸಿದ ವಿದ್ಯುತ್ ಚಟುವಟಿಕೆ ಮತ್ತು ಆರೋಗ್ಯದೊಂದಿಗೆ ಅದರ ಸಂಬಂಧ

ಒಟ್ಟು ಸೇರಿಸಿದ ವಿದ್ಯುತ್ ಚಟುವಟಿಕೆ ಮತ್ತು ಆರೋಗ್ಯದೊಂದಿಗೆ ಅದರ ಸಂಬಂಧ

ಮಿದುಳು ಮತ್ತು ಹೃದಯದ ವಿದ್ಯುತ್ ಚಟುವಟಿಕೆಗಳು ಸಮಕಾಲಿಕವಾಗಿರಬಹುದು. ಇದು ಧನಾತ್ಮಕತೆ ಮೇಲೆ ದೃಷ್ಟಿ ಇಡುವುದು ಮತ್ತು ಪ್ರೀತಿಯ ಭಾವನೆಯು ಹೃದಯದಿಂದ ಬರುವುದು. ಲಯಬದ್ಧವಾದ ಚಟುವಟಿಕೆಯು ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುವುದು, ರಕ್ತದೊತ್ತಡ ಕಡಿಮೆಯಾಗುವುದು ಮತ್ತು ಕೊರ್ಟಿಸಾಲ್ ಮಟ್ಟ ಮತ್ತು ಪ್ರತಿರೋಧಕ ವ್ಯವಸ್ಥೆ ಮಟ್ಟವು ಸುಧಾರಣೆಯಾಗುವುದು.

English summary

Intersting facts about heart- which should surprise you!

Your heart is a powerhouse! Heart works to pump blood 100,000 times a day to all the organs of the body. Heart is not just an organ to supply blood throughout the body; a research at the Harvard Medical School suggests the heart’s connection to external nerves and hormones.
Story first published: Monday, February 25, 2019, 18:00 [IST]
X