For Quick Alerts
ALLOW NOTIFICATIONS  
For Daily Alerts

ದಿನಕ್ಕೊಂದು ಪೀಸ್ ಅನಾನಸ್ ತಿಂದ್ರೂ ಸಾಕು! ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು

|

ಜೀರ್ಣಕ್ರಿಯೆ ಸರಿಯಾಗಿ ಆಗದೇ ಇದ್ದಾಗ ತಳಮಳ ಉಂಟಾಗುವುದು ಸಹಜವಾಗಿದ್ದು ನಿಮ್ಮ ಇಡಿಯ ದಿನದ ಚಟುವಟಿಕೆಗಳನ್ನೇ ಏರುಪೇರಾಗಿಸಬಹುದು. ಅಲ್ಲದೇ ಇದರಿಂದ ಉಂಟಾಗುವ ಅಹಿತಕರ ಅನುಭವ ಮುಜುಗರವನ್ನೂ ಉಂಟುಮಾಡಬಹುದು. ಸಾಮಾನ್ಯವಾದ ಈ ತೊಂದರೆಗಳಿಗೆ ಸುಲಭ ಮನೆಮದ್ದುಗಳೇ ಸಾಕಾಗುತ್ತವೆ. ಆದರೆ ಈ ಸ್ಥಿತಿ ಬರದೇ ಇರುವಂತೆ ಮಾಡುವುದೇ ಜಾಣತನದ ಕ್ರಮವಾಗಿದ್ದು ನಿಮ್ಮ ಆಹಾರದಲ್ಲಿ ಕೊಂಚ ಅನಾನಾಸು ಇರುವಂತೆ ನೋಡಿಕೊಂಡರೆ ಸಾಕು.

ಅನಾನಸ್ ನ್ನು ಮೆಚ್ಚುವವರೆಲ್ಲರೂ ಇದರ ಹುಳಿಮಿಶ್ರಿತ ಸಿಹಿಗಾಗಿಯೇ ತಮ್ಮ ಆಯ್ಕೆಯ ಹಣ್ಣಿನ ರೂಪದಲ್ಲಿ ಸೇವಿಸುತ್ತಾರೆಯೇ ಹೊರತು ಇದರಿಂದ ಲಭಿಸುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಅಜ್ಞಾನಿಗಳೇ ಆಗಿದ್ದಾರೆ. ಅನಾನಾಸು ಹಲವಾರು ಪ್ರಮುಖ ಪೋಷಕಾಂಶಗಳನ್ನೊಳಗೊಂಡ ಆಹಾರವಾಗಿದ್ದು ಇದನ್ನು ತಾಜಾ ಹಣ್ಣಿನ ರೂಪದಲ್ಲಿಯೂ, ರಸ ಹಿಂಡಿ ಜ್ಯೂಸ್ ನಂತೆಯೂ ಸೇವಿಸುವ ಮೂಲಕ ಇವುಗಳ ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ, ಈ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ

ಜೀರ್ಣಕ್ರಿಯೆ ಉತ್ತಮಗೊಳಿಸುವ ಅನಾನಸ್

ಜೀರ್ಣಕ್ರಿಯೆ ಉತ್ತಮಗೊಳಿಸುವ ಅನಾನಸ್

ಅನಾನಸ್ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ಉರಿಯೂತವನ್ನು ತಗ್ಗಿಸುತ್ತದೆ. ಅಲ್ಲದೇ ಇದರ ರಸದಲ್ಲಿ ಬ್ರೋಮಿಲೈನ್ ಎಂಬ ಜೀರ್ಣಶಕ್ತಿಯುಳ್ಳ ಕಿಣ್ವವಿದೆ. ಈ ಕಿಣ್ವ ಪ್ರೋಟೀನುಗಳನ್ನು ಜೀರ್ಣಿಸಿಕೊಳ್ಳಲು ನೆರವಾಗುತ್ತದೆ. ಸಾಮಾನ್ಯವಾಗಿ ಪ್ರೋಟೀನುಗಳು ಕಷ್ಟದಲ್ಲಿ ಒಡೆಯುವ ಕಣಗಳಾಗಿದ್ದು ನಮ್ಮ ಜೀರ್ಣರಸಗಳಿಗೆ ಭಾರೀ ಸವಾಲೊಡ್ಡುತ್ತವೆ. ಅನಾನಸ್ ಈ ಕ್ರಿಯೆಯನ್ನು ಸುಲಭವಾಗಿಸುವ ಮೂಲಕ ಜೀರ್ಣಾಂಗಗಳ ಮೇಲಿನ ಹೊರೆ ತಗ್ಗಿಸಿ ಆರೋಗ್ಯಕರವಾಗಿರಿಸಲು ನೆರವಾಗುತ್ತದೆ. ಅಲ್ಲದೇ ಅನಾನಾಸು ಹೊಟ್ಟೆನೋವು, ಎದೆಯುರಿ, ಆಮಶಂಕೆ, ಹೊಟ್ಟೆಯುಬ್ಬರಿಕೆ, ವಾಕರಿಕೆ ಹಾಗೂ ಮಲಬದ್ದತೆ ಯಂತಹ ತೊಂದರೆಗಳನ್ನೂ ಇಲ್ಲವಾಗಿಸುತ್ತದೆ. ಈ ರಸದ ಪರಿಪೂರ್ಣ ಪ್ರಯೋಜನ ಪಡೆಯಲು ಊಟವಾದ ಬಳಿಕ ಕೊಂಚ ತಾಜಾ ಅನಾನಾಸು ಹಣ್ಣನ್ನು ತಿಂದರೆ ಸಾಕಾಗುತ್ತದೆ. ಅಲ್ಲದೇ ಅನಾನಾಸಿನ ತಿರುಳನ್ನು ಚಿಕ್ಕದಾಗಿ ತುಂಡರಿಸಿ ನಿಮ್ಮ ನೆಚ್ಚಿನ ಸಾಲಾಡ್ ಹಾಗೂ ಇತರ ತಿನಿಸುಗಳಲ್ಲಿ ಬೆರೆಸಿಯೂ ಸೇವಿಸ ಬಹುದು. ಅನಾನಾಸು ಬೆರೆಸಿದ ಕೇಸರಿಬಾತು ಇದುವರೆಗೂ ತಿನ್ನದೇ ಇದ್ದಲ್ಲಿ, ಒಮ್ಮೆ ಖಂಡಿತಾ ಪ್ರಯತ್ನಿಸಿ.

ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ

ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ

ಈ ರಸಕ್ಕೆ ಹುಳಿಮಿಶ್ರಿತ ಸಿಹಿ ರುಚಿ ಬರಲು ಪ್ರಮುಖ ಕಾರಣ ವಿಟಮಿನ್ ಸಿ. ನಮ್ಮ ದೇಹದ ಹಲವಾರು ಕಾರ್ಯಗಳಿಗೆ ಈ ವಿಟಮಿನ್ ಸಿ ಅಗತ್ಯವಾಗಿದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ವಿಟಮಿನ್ ಸಿ ಅತ್ಯಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಈ ಮೂಲಕ ಹಲವಾರು ಸೋಂಕು ಹಾಗೂ ರೋಗಗಳಿಂದ ದೇಹ ರಕ್ಷಣೆ ಪಡೆಯುತ್ತದೆ. ಅಲ್ಲದೇ ರಕ್ತನಾಳಗಳ ಮೇಲಿನ ಒತ್ತಡವನ್ನು ನಿವಾರಿಸಿ ಹೃದಯಸಂಬಂಧಿ ರೋಗಗಳು ಮತ್ತು ಕ್ಯಾನ್ಸರ್ ನ ಸಾಧ್ಯತೆಯನ್ನು ತಗ್ಗಿಸುತ್ತದೆ. ಹಾಗಾಗಿ, ಬೇರೆ ಹಣ್ಣುಗಳ ರಸವನ್ನು ಸೇವಿಸುವಾಗಲೂ ಕೊಂಚ ಅನಾನಾಸು ರಸವನ್ನು ಅಥವಾ ತಿರುಳನ್ನು ಬೆರೆಸಿ ಸೇವಿಸುವುದರಿಂದ, ವಿಶೇಷವಾಗಿ ಬೆಳಗ್ಗಿನ ಆಹಾರದ ಜೊತೆಯಲ್ಲಿ ಸೇವಿಸುವುದರಿಂದ ಅತಿ ಹೆಚ್ಚಿನ ಪ್ರಯೋಜನ ಪಡೆಯಬಹುದು.

Most Read: ದೇಹದಲ್ಲಿ ಕೊಬ್ಬು ಉಂಟು ಮಾಡದ ಟಾಪ್ 8 ಆಹಾರಗಳು

ತೂಕ ಇಳಿಕೆಗೆ ನೆರವಾಗುತ್ತದೆ

ತೂಕ ಇಳಿಕೆಗೆ ನೆರವಾಗುತ್ತದೆ

ಒಂದು ವೇಳೆ ನೀವು ತೂಕ ಇಳಿಕೆಯ ಪ್ರಯತ್ನದಲ್ಲಿದ್ದರೆ ಅನಾನಾಸು ನಿಮಗೆ ಹಲವು ರೀತಿಯಲ್ಲಿ ನೆರವು ನೀಡುತ್ತದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇದೆ ಹಾಗೂ ತಿರುಳಿನಲ್ಲಿ ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಅಲ್ಲದೇ ಕಡಿಮೆ ಕ್ಯಾಲೋರಿಗಳನ್ನು ದಹಿಸುವಂತೆ ಮಾಡಿ ಹೆಚ್ಚಿನ ಕ್ಯಾಲೋರಿಗಳ ಆಹಾರದ ಬಗ್ಗೆ ಮೋಹ ವುಂಟಾಗದಂತೆ ತಡೆಯುತ್ತದೆ. ಅಲ್ಲದೇ ರಕ್ತದಲ್ಲಿ ಸಕ್ಕರೆಯ ಮಟ್ಟ ಆರೋಗ್ಯದ ಮಿತಿಗಳಲ್ಲಿರಲೂ ನೆರವಾಗುತ್ತದೆ.

ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಣ್ಣಿನ ದೃಷ್ಟಿಗೆ ಅನಾನಾಸು ಉತ್ತಮವಾಗಿದೆ. ನಿಯಮಿತ ಸೇವನೆಯಿಂದ ಕಣ್ಣಿಗೆ ಸಂಬಂಧಿಸಿದ ತೊಂದರೆಗಳನ್ನು ತಗ್ಗಿಸುತ್ತದೆ. ಅಲ್ಲದೇ ನಿಯಮಿತವಾಗಿ ಅನಾನಸ್ ಸೇವಿಸುತ್ತಾ ಬಂದವರಲ್ಲಿ ಕಣ್ಣಿನಲ್ಲಿ ಹೂವು ಬರುವ (ಕ್ಯಾಟರಾಕ್ಟ್) ಕಾಯಿಲೆಯ ಸಂಭವ ಅತಿ ಕಡಿಮೆ ಇರುತ್ತದೆ. ಇದರಲ್ಲಿರುವ ಆಂಟಿ

ಆಕ್ಸಿಡೆಂಟುಗಳು ಕಣ್ಣುಗಳ ಸ್ನಾಯುಗಳು ತಮ್ಮ ಕ್ಷಮತೆಯನ್ನು ಕಳೆದುಕೊಳ್ಳುವುದರಿಂದ ರಕ್ಷಿಸುತ್ತವೆ.

Most Read: ಒಂದೇ ವಾರದಲ್ಲಿ ದಂತಕುಳಿ ಸಮಸ್ಯೆ ಕಡಿಮೆ ಮಾಡುವ ಪವರ್‌ಫುಲ್ ಮನೆಮದ್ದುಗಳು

ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಣ್ಣಿನ ದೃಷ್ಟಿಗೆ ಅನಾನಾಸು ಉತ್ತಮವಾಗಿದೆ. ನಿಯಮಿತ ಸೇವನೆಯಿಂದ ಕಣ್ಣಿಗೆ ಸಂಬಂಧಿಸಿದ ತೊಂದರೆಗಳನ್ನು ತಗ್ಗಿಸುತ್ತದೆ. ಅಲ್ಲದೇ ನಿಯಮಿತವಾಗಿ ಅನಾನಸ್ ಸೇವಿಸುತ್ತಾ ಬಂದವರಲ್ಲಿ ಕಣ್ಣಿನಲ್ಲಿ ಹೂವು ಬರುವ (ಕ್ಯಾಟರಾಕ್ಟ್) ಕಾಯಿಲೆಯ ಸಂಭವ ಅತಿ ಕಡಿಮೆ ಇರುತ್ತದೆ. ಇದರಲ್ಲಿರುವ ಆಂಟಿ

ಆಕ್ಸಿಡೆಂಟುಗಳು ಕಣ್ಣುಗಳ ಸ್ನಾಯುಗಳು ತಮ್ಮ ಕ್ಷಮತೆಯನ್ನು ಕಳೆದು ಕೊಳ್ಳುವುದರಿಂದ ರಕ್ಷಿಸುತ್ತವೆ.

ಮೂಳೆಗಳ ಆರೋಗ್ಯ ಹೆಚ್ಚಿಸುತ್ತವೆ

ಮೂಳೆಗಳ ಆರೋಗ್ಯ ಹೆಚ್ಚಿಸುತ್ತವೆ

ಅನಾನಾಸಿನಲ್ಲಿರುವ ಮ್ಯಾಂಗನೀಸ್ ಮೂಳೆಗಳ ಆರೋಗ್ಯ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಮೂಳೆ ಮತ್ತು ಸ್ನಾಯುಗಳನ್ನು ಬೆಸೆಯುವ ಅಂಗಾಂಶಗಳನ್ನೂ ಆರೋಗ್ಯಕರವಾಗಿರಿಸುತ್ತದೆ. ಅನಾನಾಸು ನಿಮ್ಮ ದೇಹದ ಎಲ್ಲಾ ಮೂಳೆಗಳು ದೃಢವಾಗಿರುವಂತೆ ನೆರವಾಗುವ ಮೂಲಕ ಮೂಳೆಗಳು ಟೊಳ್ಳಾಗುವ ಓಸ್ಟಿಯೋಪೋರೋಸಿಸ್ ಎಂಬ ಕಾಯಿಲೆಯ ಸಾಧ್ಯತೆಯಿಂದ ರಕ್ಷಿಸುತ್ತದೆ. ಜೀವಮಾನವಿಡೀ ಮೂಳೆಗಳು ಉತ್ತಮವಾಗಿರಲು ನಿಯಮಿತವಾಗಿ

ಅನಾನಾಸು ಸೇವಿಸುತ್ತಿರಬೇಕು.

ಅನಾನಾಸನ್ನು ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಿರಿ

ಅನಾನಾಸನ್ನು ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಿರಿ

ಒಂದು ವೇಳೆ ನಿಮ್ಮ ಆಹಾರದಲ್ಲಿ ಈಗಾಗಲೇ ಸಾಕಷ್ಟು ಕರಗದ ನಾರು ಇರದೇ ಇದ್ದಲ್ಲಿ ಅನಾನಾಸನ್ನು ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಿರಿ. ಏಕೆಂದರೆ ಅನಾನಾಸಿನ ಪೋಷಕಾಂಶಗಳು ಪೂರ್ಣವಾಗಿ ಹೀರಿಕೊಳ್ಳಲು ಸಾಕಷ್ಟು ನಾರು ಇರುವುದು ಅಗತ್ಯ. ಹಾಗಾಗಿ ಮೈದಾ ಆಧಾರಿತ ಆಹಾರ

ನಿಮ್ಮದಾಗಿದ್ದರೆ ನಿಧಾನವಾಗಿ ಈ ಉತ್ಪನ್ನಗಳ ಬದಲು ಗೋಧಿಹಿಟ್ಟಿನ ಆಹಾರವನ್ನು ಅಳವಡಿಸಿಕೊಂಡು ನಿಧಾನವಾಗಿ ಅನಾನಸ್ ನ ಪ್ರಮಾಣವನ್ನು ಹೆಚ್ಚಿಸಿ. ಒಂದು ವೇಳೆ ಜ್ಯೂಸ್ ಸೇವಿಸುವುದಾದರೆ ಇದಕ್ಕೆ ಸಕ್ಕರೆ ಬೆರೆಸಬೇಡಿ. ಜ್ಯೂಸ್ ಗಿಂತಲೂ ತಾಜಾ ಹಣ್ಣಿನ ತಿರುಳೇ ಅತ್ಯುತ್ತಮ. ಇದರ ಪೂರ್ಣ ಪ್ರಯೋಜನ ಪಡೆಯಲು ಸ್ಮೂಥಿ ತಯಾರಿಸಿಯೂ ಸವಿಯಬಹುದು. ಒಂದು ವೇಳೆ ನೀವು ಈಗಾಗಲೇ ಯಾವುದಾದರೂ ತೊಂದರೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದು ಔಷಧಿಗಳನ್ನು ಸೇವಿಸುತ್ತಿದ್ದರೆ ಅನಾನಾಸು ಅಥವಾ ಇನ್ನಾವುದೇ ಆಹಾರವನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

English summary

How to Improve Your Digestion with Pineapple

This amazing also offers many health benefits. Pineapple is rich in various nutrients.You can consume both fresh pineapple or fresh pineapple juice to avail its health benefits.
X
Desktop Bottom Promotion