For Quick Alerts
ALLOW NOTIFICATIONS  
For Daily Alerts

ಒಂದೇ ವಾರದಲ್ಲಿ ದಂತಕುಳಿ ಸಮಸ್ಯೆ ಕಡಿಮೆ ಮಾಡುವ ಪವರ್‌ಫುಲ್ ಮನೆಮದ್ದುಗಳು

|

ಮುಖದ ಮೇಲೆ ನಗು ಬಂದರೆ ಆಗ ನಮಗೆ ಕಾಣಿಸುವುದು ಮುತ್ತಿನಂತೆ ಜೋಡಿಸಿಟ್ಟಿರುವಂತಹ ಹಲ್ಲುಗಳು. ಮುಖಕ್ಕೆ ಸೌಂದರ್ಯ ನೀಡುವುದು ಮಾತ್ರವಲ್ಲದೆ, ಇದು ಆಹಾರ ಸರಿಯಾಗಿ ಜಗಿಯಲು ನೆರವಾಗುವುದು. ಆದರೆ ವಯಸ್ಸಾಗುತ್ತಾ ಹೋದಂತೆ ದಂತಗಳು ಹಲವಾರು ಸಮಸ್ಯೆಗಳನ್ನು ಉಂಟು ಮಾಡಿ ಕೊನೆಗೆ ಉದುರಲು ಆರಂಭವಾಗುವುದು. ಇಂದಿನ ದಿನಗಳಲ್ಲಿ ದಂತ ಸಮಸ್ಯೆಗಳು ಬರಲು ವಯಸ್ಸಾಗಬೇಕು ಎಂದಿಲ್ಲ. ಸಣ್ಣ ವಯಸ್ಸಿನಲ್ಲಿಯೇ ದಂತ ಸಮಸ್ಯೆಗಳು ಕಾಡಲು ಆರಂಭವಾಗುವುದು. ದಂತ ಕುಳಿ, ವಸಡಿನ ನೋವು ಇತ್ಯಾದಿಗಳು ಕಾಡುವಂತಹ ಗಂಭೀರ ಸಮಸ್ಯೆಗಳು. ವಿಶ್ವದಲ್ಲಿ ಅತೀ ಹೆಚ್ಚಿನ ಜನರು ಎದುರಿಸುತ್ತಿರುವಂತಹ ಬಾಯಿಯ ಸಮಸ್ಯೆಯೆಂದರೆ ಅದು ದಂತಕುಳಿ ಮತ್ತು ವಸಡಿನ ಸಮಸ್ಯೆ. ಮಕ್ಕಳು, ಹದಿಹರೆಯದವರು ಮತ್ತು ವಯಸ್ಸಾದವರಲ್ಲಿ ಇಂತಹ ಸಮಸ್ಯೆಗಳು ಕಂಡುಬರುವುದು.

ದಂತಕುಳಿ ಎಂದರೇನು?

ದಂತಕುಳಿ ಎಂದರೇನು?

ದಂತಕುಳಿ ಎಂದರೆ ಹಲ್ಲಿನಲ್ಲಿ ಬ್ಯಾಕ್ಟೀರಿಯಾ ಸ್ಟ್ರೆಪ್ಟೋಕೊಕಸ್ ಮ್ಯೂಟನ್ಸ್ ನಿಂದ ಹಾನಿಗೀಡಾಗಿರುವಂತಹ ಭಾಗವಾಗಿದ್ದು, ಇದು ಬಳಿಕ ಕುಳಿಯಾಗುವುದು. ಈ ಬ್ಯಾಕ್ಟೀರಿಯಾವು ನಾವು ಸೇವಿಸಿದಂತಹ ಆಹಾರದಲ್ಲಿರುವ ಸಕ್ಕರೆಯಂಶದಿಂದ ಆಮ್ಲವನ್ನು ತಯಾರಿಸಿಕೊಂಡು ಹಲ್ಲಿನ ಮೇಲ್ಪದರದ ಮೇಲೆ ನೆಲೆನಿಲ್ಲುವುದು. ಆಹಾರ ಮತ್ತು ಹಲ್ಲಿನ ಪದರದಲ್ಲಿ ಬ್ಯಾಕ್ಟೀರಿಯಾವು ನೆಲೆನಿಲ್ಲುವ ಕಾರಣಿದಂದಾಗಿ ದಂತಕವಚಕ್ಕೆ ಹಾನಿಯಾಗುವುದು ಮತ್ತು ಹಲ್ಲಿನ ಸವೆತ ಉಂಟಾಗುವುದು. ಈ ಸವೆತದಿಂದಾಗಿ ಹಲ್ಲಿನ ಮಧ್ಯೆ ಕುಳಿ ನಿರ್ಮಾಣವಾಗುವುದು. ಬಾಯಿಯ ಸರಿಯಾದ ಸ್ವಚ್ಛತೆ ಇಲ್ಲದಿದ್ದರೂ ದಂತಕುಳಿ ಕಾಣಿಸಿಕೊಳ್ಳುವುದು. ಹಲ್ಲಿಗೆ ಆಹಾರವು ಅಂಟಿಕೊಳ್ಳುವುದು, ಪದೇ ಪದೇ ತಿಂಡಿ ಸೇವನೆ, ಒಣ ಬಾಯಿ ಇತ್ಯಾದಿಗಳು.

ದಂತಕುಳಿಯ ಲಕ್ಷಣಗಳು

ದಂತಕುಳಿಯ ಲಕ್ಷಣಗಳು

ದಂತಕುಳಿಯ ಪ್ರಮುಖ ಲಕ್ಷಣಗಳಲ್ಲಿ ಒಂದೆಂದರೆ ಅದು ಹಲ್ಲು ನೋವು ಕಾಣಿಸಿಕೊಳ್ಳುವುದು, ಹಲ್ಲಿನ ಸೂಕ್ಷ್ಮತೆ, ಏನಾದರೂ ತಿನ್ನುವಾಗ ಅಥವಾ ಕುಡಿಯುವಾಗ ಮಧ್ಯಮದಿಂದ ತೀವ್ರ ನೋವು ಕಾಣಿಸಿಕೊಳ್ಳುವುದು.

Most Read: 'ಹಿಡನ್ ಕ್ಯಾಮೆರಾ' ಪತ್ತೆ ಹಚ್ಚುವ ರಹಸ್ಯ, ತಪ್ಪದೇ ಓದಿ

ದಂತಕುಳಿಯ ಸಮಸ್ಯೆಗಳು

ದಂತಕುಳಿಯ ಸಮಸ್ಯೆಗಳು

*ಹಲ್ಲಿನ ಹುಣ್ಣು

*ನಿರಂತರ ಹಲ್ಲು ನೋವು

*ಘನ ಆಹಾರ ಜಗಿಯಲು ಕಷ್ಟವಾಗುವುದು

*ಹಲ್ಲು ತುಂಡಾಗುವುದು ಅಥವಾ ಪದರ ಕಿತ್ತು ಬರುವುದು.

*ಸೋಂಕಿತ ಹಲ್ಲಿನ ಜಾಗದಲ್ಲಿ ಕೀವು ತುಂಬಿ ಕೊಳ್ಳುವುದು. ದಂತಕುಳಿಯಿಂದ ಪಾರಾಗಲು ನೀವು ಮನೆಯಲ್ಲಿ ಪ್ರಯೋಗಿಸಬಹುದಾದ ಕೆಲವು ಮನೆಮದ್ದುಗಳು

ಲವಂಗ

ಲವಂಗ

ಲವಂಗವನ್ನು ದಂತಕುಳಿ ಸಹಿತ ಯಾವುದೇ ರೀತಿಯ ಹಲ್ಲಿನ ಸಮಸ್ಯೆಯಿದ್ದರೂ ಅದನ್ನು ನಿವಾರಣೆ ಮಾಡಲು ಬಳಸಲಾಗುತ್ತದೆ. ಇದರಲ್ಲಿ ಇರುವಂತಹ ಯುಜೆನಾಲ್ ಎನ್ನುವಂತಹ ರಾಸಾಯನಿಕವು ಉರಿಯೂತ ಶಮನಕಾರಿ, ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ನೋವನ್ನು ನಿವಾರಣೆ ಮಾಡುವುದು ಮತ್ತು ದಂತಕುಳಿಯು ಹಬ್ಬದಂತೆ ತಡೆಯುವುದು. ಲವಂಗವನ್ನು ಜಗಿಯಿರಿ ಮತ್ತು ಅದರ ರಸವು ಹೊರಗೆ ಬರಲಿ. ನಿಮ್ಮ ನಾಲಗೆಯ ಕೆಳಭಾಗದಲ್ಲಿ ಲವಂಗವನ್ನು ಸ್ವಲ್ಪ ಹೊತ್ತು ಹಾಗೆ ಇಟ್ಟುಬಿಡಿ.

ಉಪ್ಪು

ಉಪ್ಪು

ಉಪ್ಪಿನಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣವಿರುವ ಕಾರಣದಿಂದಾಗಿ ಅದು ದಂತಕುಳಿ ಚಿಕಿತ್ಸೆಗೆ ತುಂಬಾ ಪರಿಣಾಮಕಾರಿಯಾಗಿ ಇರುವುದು. ಇದು ಉರಿಯೂತ ಕಡಿಮೆ ಮಾಡುವುದು, ನೋವು ನಿವಾರಿಸುವುದು ಮತ್ತು ಬಾಯಿಯಲ್ಲಿ ಬ್ಯಾಕ್ಟೀರಿಯಾವು ಬೆಳೆಯದಂತೆ ತಡೆಯುವುದು.

*ಒಂದು ಚಮಚಮ ಉಪ್ಪನ್ನು ಬಿಸಿ ನೀರಿಗೆ ಹಾಕಿಕೊಳ್ಳಿ.

*ಒಂದು ನಿಮಿಷ ಕಾಲ ಈ ನೀರನ್ನು ಬಾಯಿಯಲ್ಲಿ ಹಾಕಿ ಸ್ವಚ್ಛ ಮಾಡಿ.

*ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವ ತನಕ ದಿನದಲ್ಲಿ ಮೂರು ಸಲ ಹೀಗೆ ಮಾಡಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಇರುವಂತಹ ಅಲಿಸಿನ್ ಎನ್ನುವಂತಹ ಅಂಶವು ಬ್ಯಾಕ್ಟೀರಿಯಾ ವಿರೋಧಿ, ಸುಕ್ಷ್ಮಾಣು ಜೀವಿ ವಿರೋಧಿ ಮತ್ತು ಆ್ಯಂಟಿಬಯೋಟಿಕ್ ಗುಣವನ್ನು ಹೊಂದಿದೆ. ಈ ಎಲ್ಲಾ ಅಂಶಗಳು ದಂತಕುಳಿಗೆ ಪರಿಹಾರ ನೀಡುವುದು. ಇದು ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸೂಕ್ಷ್ಮಾಣುಗಳನ್ನು ದೂರ ಮಾಡಿ, ನೋವು ನಿವಾರಿಸುವುದು.

•3 ರಿಂದ 4 ಬೆಳ್ಳುಳ್ಳಿ ಎಸಲುಗಳನ್ನು ಜಜ್ಜಿಕೊಳ್ಳಿ ಮತ್ತು ¼ ಚಮಚ ಕಲ್ಲುಪ್ಪು ಹಾಕಿ.

•ಬಾಧಿತ ಹಲ್ಲಿನ ಜಾಗಕ್ಕೆ ಇದನ್ನು ಇಟ್ಟುಬಿಡಿ.

•ಹತ್ತು ನಿಮಿಷ ಹಾಗೆ ಬಿಡಿ ಮತ್ತು ಬಳಿಕ ತೊಳೆಯಿರಿ.

•ದಿನದಲ್ಲಿ ಎರಡು ಸಲ ಹೀಗೆ ಮಾಡಿ.

ಲೈಕೊರೈಸ್

ಲೈಕೊರೈಸ್

ಲೈಕೊರೈಸ್ ಹಲ್ಲುಗಳನ್ನು ಆರೋಗ್ಯವಾಗಿ ಇಡುವುದು ಮತ್ತು ದಂತಕುಳಿ ಉಂಟು ಮಾಡುವಂತಹ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುವುದು. ಲೈಕೊರೈಸ್ ಬೇರಿನಲ್ಲಿ ನೈಸರ್ಗಿಕವಾಗಿರುವಂತಹ ರಾಸಾಯನಿಕವಿದೆ ಮತ್ತು ಇದನ್ನು ಟ್ರಾನ್ಸ್-ಚಾಲೋನ್ ಎಂದು ಕರೆಯಲಾಗುತ್ತದೆ. ಇದು ಕಿಣ್ವದ ಅನುಕ್ರಮವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಒಣಗಿರುವಂತ ಲೈಕೋರೈಸ್ ಬೇರಿನ ಹುಡಿಯನ್ನು ನೀವು ದಿನನಿತ್ಯವು ಬಳಸಿಕೊಳ್ಳಿ.

Most Read: ಭಾರತೀಯ ಹಿಂದೂ ಧರ್ಮದ ಆಚರಣೆಗಳ ಹಿಂದೆ ಇರುವ ವೈಜ್ಞಾನಿಕ ಕಾರಣಗಳು

ಅರಿಶಿನ

ಅರಿಶಿನ

ಅರಿಶಿನದನದಲ್ಲಿ ಇರುವಂತಹ ನೈಸರ್ಗಿಕದತ್ತವಾಗಿರುವ ಕರ್ಕ್ಯುಮಿನ್ ಎನ್ನುವಂತಹ ಅಂಶವು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಶಮನಕಾರಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳನ್ನು ಹೊಂದಿದೆ. ಕರ್ಕ್ಯುಮಿನ್ ನಲ್ಲಿ ಇರುವಂತಹ ಸೂಕ್ಷ್ಮಾಣು ವಿರೋಧಿ ಗುಣವು ಕಿಣ್ವ ಸೊರ್ಟಸೆಯ ಚಟುವಟಿಕೆ ತಡೆಯುವುದು. ಇದರಿಂದ ಬ್ಯಾಕ್ಟೀರಿಯಾ ಸ್ಟ್ರೆಪ್ಟೋಕೊಕಸ್ ಮ್ಯೂಟನ್ಸ್ ಕಾರ್ಯನಿರ್ವಹಿಸದಂತೆ ಆಗುವುದು.

•ಬಾಧಿತ ಹಲ್ಲಿಗೆ ಸ್ವಲ್ಪ ಅರಶಿನ ಹುಡಿಯನ್ನು ಹಚ್ಚಿಕೊಳ್ಳಿ.

•ಕೆಲವು ನಿಮಿಷಗಳ ಕಾಲ ನೀವು ಇದನ್ನು ಹಾಗೆ ಬಿಡಿ.

ಬೇವು

ಬೇವು

ದಂತಕುಳಿಯನ್ನು ಕಡಿಮೆ ಮಾಡಲು ಬೇವು ತುಂಬಾ ಪರಿಣಾಮಕಾರಿಯಾದ ಮನೆಮದ್ದು ಆಗಿದೆ. ಬೇವಿನಲ್ಲಿ ಇರುವಂತಹ ಸೂಕ್ಷ್ಮಾಣು ವಿರೋಧಿ ಗುಣಗಳು ಸ್ಟ್ರೆಪ್ಟೋಕೊಕಸ್ ಮ್ಯೂಟನ್ಸ್, ಸ್ಟ್ರೆಪ್ಟೊಕೊಕಸ್ ಮಿಟಿಸ್, ಸ್ಟ್ರೆಪ್ಟೋಕೊಕಸ್ ಸಾಂಗುಸ್ ಮತ್ತು ಸ್ಟ್ರೆಪ್ಟೋಕಾಕಸ್ ಸಲಿವರಿಯಸ್ ನಂತಹ ಸೂಕ್ಷ್ಮಾಣುಳ ವಿರುದ್ಧ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

ಬೇವಿನ ಕೆಲವು ತುಂಡುಗಳನ್ನು ಜಗಿಯಿರಿ ಮತ್ತು ಬಳಿಕ ಉಗಿಯಿರಿ.

ಇದನ್ನು ನೀವು ದಿನದಲ್ಲಿ ಎರಡು ಸಲ ಮಾಡಿ.

Most Read: ತಿರುಪತಿಯ ಶ್ರೀನಿವಾಸ/ಬಾಲಾಜಿ ದೇವರಿಗೆ ಮುಡಿಕೊಡುವುದರ ಮಹತ್ವ...

ದಂತಕುಳಿ ನಿಯಂತ್ರಿಸಲು ಕೆಲವೊಂದು ವಿಧಾನಗಳು

ದಂತಕುಳಿ ನಿಯಂತ್ರಿಸಲು ಕೆಲವೊಂದು ವಿಧಾನಗಳು

•ಫ್ಲೋರೈಡ್ ಇರುವಂತಹ ಟೂಥ್ ಪೇಸ್ಟ್ ಬಳಸಿಕೊಂಡು ದಿನಕ್ಕೆ ಎರಡು ಸಲ ಹಲ್ಲುಜ್ಜಿ.

•ಒಂದು ಸಲ ಫ್ಲೊಸ್ ಮಾಡಿ.

•ನಾರಿನಾಂಶ ಹೆಚ್ಚಿರುವ ಮತ್ತು ಕ್ಯಾಲ್ಸಿಯಂ ಅಧಿಕವಾಗಿರುವ ಆಹಾರ ಮತ್ತು ತರಕಾರಿ ತಿನ್ನಿ.

•ಊಟದ ಮಧ್ಯೆ ತಿಂಡಿ ತಿನ್ನುವುದನ್ನು ಕಡಿಮೆ ಮಾಡಿ.

•ಊಟ ಮಾಡಿದ ಬಳಿಕ ಬಾಯಿ ಶುಚಿಗೊಳಿಸಿ.

•ಕ್ಯಾಂಡಿ, ಸಿಹಿ, ಸಂಸ್ಕರಿತ ಕಾರ್ಬ್ರೋಹೈಡ್ರೇಟ್ಸ್, ಸೋಡಾ ಮತ್ತು ಜ್ಯೂಸ್ ನಂತಹ ಆಹಾರವನ್ನು ಕಡಿಮೆ ಮಾಡಿ.

English summary

Home Remedies To Get Rid Of Cavities within one week!

Dental cavities are damaged areas that eventually become holes inside the teeth caused by the bacteria Streptococcus mutans.[1] It survives on the surface of the teeth creating acid out of sugar from foods. A build-up of foods and bacteria form plaque which causes destruction to the tooth enamel, leading to tooth erosion. This erosion causes holes in between the teeth, around teeth fillings which are chipped and close to the gums. Cavities also occur due to the lack of dental hygiene, foods that stick to your teeth, frequent snacking, dry mouth, etc.
X
Desktop Bottom Promotion