For Quick Alerts
ALLOW NOTIFICATIONS  
For Daily Alerts

ಒಣ ಕಣ್ಣುಗಳ ಸಮಸ್ಯೆ ಇದೆಯೇ? ಹಾಗಾದರೆ ಇಲ್ಲಿದೆ ನೋಡಿ ಸರಳ ಟಿಪ್ಸ್

|

ಒಣಗಿರುವ ಕಣ್ಣುಗಳು ಅಥವಾ Dry eye syndrome (dry eyes) ಎಂದರೆ ನಮ್ಮ ಕಣ್ಣುಗಳಿಗೆ ಅಗತ್ಯವಿದ್ದಷ್ಟು ಪ್ರಮಾಣದ ಕಣ್ಣೀರು ಲಭಿಸದೇ ಹೋಗುವ ಸ್ಥಿತಿಯಾಗಿದೆ. ಪರಿಣಾಮವಾಗಿ ಕಣ್ಣಿನ ಹೊರಪದರದಲ್ಲಿ ಕಣ್ಣೀರಿನ ಪಸೆ ಕಡಿಮೆಯಾಗಿ ಕಣ್ಣಿನ ರೆಪ್ಪೆ ಮುಚ್ಚಿಕೊಳ್ಳಲು ಕಷ್ಟವಾಗುತ್ತದೆ ಹಾಗೂ ಈಗ ಕಣ್ಣಿನ ಪದರ ಗಾಳಿಗೆ ಸುಲಭವಾಗಿ ಒಡ್ಡಿರುವುದರಿಂದ ಉರಿಯೂ ಎದುರಾಗುತ್ತದೆ. ಪರಿಣಾಮವಾಗಿ ಕಣ್ಣಿನಲ್ಲಿ ಸತತ ತುರಿಕೆ, ಉರಿ ಮತ್ತು ಕಣ್ಣು ಮಿಟುಕಿಸುವುದು ಸತತವಾಗುವ ಮೂಲಕ ಅಸಮಾಧಾನ ಎದುರಾಗುತ್ತದೆ. ಅಲ್ಲದೇ ಕಣ್ಣುಗಳಲ್ಲಿ ಅಂಟಿಕೊಳ್ಳುವ ಕಿಸರು ಒಸರುವುದು, ಬೆಳಕಿಗೆ ಅತಿಯಾದ ಸಂವೇದನೆ ಪ್ರಕಟಿಸುವುದು, ಮಂದವಾದ ದೃಷ್ಟಿ ಹಾಗೂ ಕಣ್ಣುಗಳು ಕೆಂಪಗಾಗುವುದು ಎದುರಾಗುತ್ತವೆ. ಈ ತೊಂದರೆಯಿಂದ ಹೊರಬರಲು ಇಂದಿನ ಲೇಖನದಲ್ಲಿ ಐದು ವಿಧಾನಗಳನ್ನು ಸೂಚಿಸಲಾಗಿದೆ;

ಬೆಚ್ಚಗಿನ ಹಿತವಾದ ಒತ್ತಡ

ಬೆಚ್ಚಗಿನ ಹಿತವಾದ ಒತ್ತಡ

ಒಂದು ದಪ್ಪನೆಯ ಬಟ್ಟೆಯನ್ನು ಉಗುರುಬೆಚ್ಚನಯ ನೀರಿನಲ್ಲಿ ಕೊಂಚ ಹೊತ್ತು ಮುಳುಗಿಸಿಡಿ. ಬಳಿಕ ಇದನ್ನು ಹಿಂಡಿ ಕಣ್ಣುಗಳ ಮೇಲೆ ಸುಮಾರು ಐದು ನಿಮಿಷ ಇರಿಸಿ. ಬಳಿಕ ಹೆಚ್ಚಿನ ಒತ್ತಡವಿಲ್ಲದೇ ಈ ಬಟ್ಟೆಯನ್ನು ಹೆಚ್ಚಿನ ಒತ್ತಡವಿಲ್ಲದೇ ಕಣ್ಣುಗುಡ್ಡೆಗಳ ಮೇಲೆ ಉಜ್ಜಿಕೊಳ್ಳಿ. ಮೇಲ್ರೆಪ್ಪೆಯನ್ನು ಮೇಲಿನಿಂದ ಕೆಳಗೂ, ಕೆಳರೆಪ್ಪೆಯನ್ನು ಕೆಳಗಿನಿಂದ ಮೇಲೂ ಬರುವಂತೆ ಉಜ್ಜಿ. ಅಲ್ಲದೇ ಅಂಚುಗಳಲ್ಲಿ ಯಾವುದೇ ಕಸ ಅಥವಾ ಕಿಸರು ಕಂಡುಬಂದರೆ ನಿವಾರಿಸಿ. ಈ ವಿಧಾನವನ್ನು ಬಟ್ಟೆಯ ನೀರು ಪೂರ್ಣವಾಗಿ ತಣ್ಣಗಾಗುವವರೆಗೂ ಮುಂದುವರೆಸಿ. ಈ ವಿಧಾನದಿಂದ ಕಣ್ಣಿನಲ್ಲಿ ಇನ್ನಷ್ಟು ಕಣ್ಣೀರು ಸುರಿಯಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಕಣ್ಣುಗಳು ತಮ್ಮ ನೈಸರ್ಗಿಕ ಪೋಷಣೆಯನ್ನು ಪಡೆಯಲು ನೆರವಾಗುತ್ತದೆ ಹಾಗೂ ಕಣ್ಣುಗಳು ಕೆಂಪಗಾಗುವುದು, ಉರಿ ಮೊದಲಾದವು ಕಡಿಮೆಯಾಗುತ್ತವೆ.

Most Read: ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ನಾಲ್ಕು ಸಾಂಬಾರ ಪದಾರ್ಥಗಳು

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಈ ಎಣ್ಣೆಯಲ್ಲಿ ಕಣ್ಣುಗಳಿಗೆ ಇನ್ನಷ್ಟು ನೀರು ಒಸರಿಸುವ ಗುಣವಿದೆ ಹಾಗೂ ಕಣ್ಣೀರು ಅತಿ ಶೀಘ್ರವಾಗಿ ಆವಿಯಾಗದಂತೆ ತಡೆಯುತ್ತದೆ. ಜೊತೆಗೇ ಇದರಲ್ಲಿರುವ ಉರಿಯೂತ ನಿವಾರಕ ಗುಣ ಒಣಗಣ್ಣುಗಳಿಂದ ಎದುರಾಗುವ ಉರಿಯನ್ನು ಶಮನಗೊಳಿಸಲು ನೆರವಾಗುತ್ತದೆ. ಇದಕ್ಕಾಗಿ ಒಂದು ಹತ್ತಿಯುಂಡೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಅದ್ದಿ ಹಿಂಡಿದ ಬಳಿಕ ಕಣ್ಣುಗಳನ್ನು ಮುಚ್ಚಿಕೊಂಡು ಕಣ್ಣುಗುಡ್ಡೆಯ ಮೇಲೆ ಇರಿಸಿ ಹದಿನೈದು ನಿಮಿಷ ಕಾಲ ಹಾಗೇ ಬಿಡಿ. ನಿಮ್ಮ ಉರಿ ಕಡಿಮೆಯಾಗುವವರೆಗೂ ದಿನವಿಡೀ ಈ ವಿಧಾನವನ್ನು ಪುನರಾವರ್ತಿಸುತ್ತಾ ಹೋಗಿ.

ಪೌಷ್ಟಿಕ ಹೆಚ್ಚುವರಿ ಆಹಾರಗಳು

ಪೌಷ್ಟಿಕ ಹೆಚ್ಚುವರಿ ಆಹಾರಗಳು

ಅಧ್ಯಯನಗಳಲ್ಲಿ ಕಂಡುಕೊಂಡಂತೆ ಒಮೆಗಾ ೩ ಕೊಬ್ಬಿನಾಮ್ಲಗಳಿರುವ ಆಹಾರಗಳು ಒಣಕಣ್ಣುಗಳ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ. ಈ ಅಂಶ ಹೆಚ್ಚಿರುವ ಸಾಲ್ಮನ್ ಮೀನು, ಬೂತಾಯಿ ಮೀನು, ಅಗಸೆ ಬೀಜದ ಎಣ್ಣೆ, ಅಕ್ರೋಟು ಮೊದಲಾದವುಗಳನ್ನು ಸೇವಿಸುವ ಮೂಲಕ ಉರಿಯೂತ ಕಡಿಮೆಯಾಗಲು ಹಾಗೂ ಕಣ್ಣೀರಿನ ಪ್ರಮಾಣ ಹೆಚ್ಚಲು ಸಾಧ್ಯವಾಗುತ್ತದೆ. ತನ್ಮೂಲಕ ಕಣ್ಣಿನ ಉರಿಯೂ ಕಡಿಮೆಯಾಗುತ್ತದೆ.

Most Read:ನೋಡಿ ಇದೇ ಕಾರಣಕ್ಕೆ ಕಣ್ಣುಗಳಲ್ಲಿ ಸದಾ ನೀರು ತುಂಬಿಕೊಂಡಿರುವುದು!

ಲೋಳೆಸರದ ತಿರುಳು

ಲೋಳೆಸರದ ತಿರುಳು

ಈ ತಿರುಳು ಕ್ಷಾರೀಯ ಗುಣ ಹೊಂದಿರುವ ಕಾರಣ ಒಣಗಣ್ಣುಗಳಿಗೂ ಉತ್ತಮ ಪರಿಹಾರವಾಗಿದೆ. ಇದರ ತೇವಕಾರಕ ಮತ್ತು ಉರಿಯೂತ ನಿವಾರಕ ಗುಣಗಳು ಕಣ್ಣುಗಳು ಕೆಂಪಗಾಗಿರುವುದು ಮತ್ತು ಊದಿಕೊಂದಿರುವುದನ್ನು ಶಮನಗೊಳಿಸುತ್ತವೆ. ಇದಕ್ಕಾಗಿ ಒಂದು ಲೋಳೆಸರದ ಕೋಡಿನಿಂದ ತಿರುಳನ್ನು ಸಂಗ್ರಹಿಸಿ. ಈ ತಿರುಳಿನ ಕೊಂಚ ಭಾಗವನ್ನು ಟಿಶ್ಯೂ ಕಾಗದದ ಮೇಲೆ ಹರಡಿ ಈ ಭಾಗವನ್ನು ಕಣ್ಣು ಮುಚ್ಚಿ ಕಣ್ಣುರೆಪ್ಪೆಗಳ ಮೇಲೆ ತೆಳುವಾಗಿ ಹಚ್ಚಿಕೊಳ್ಳಿ. ಹತ್ತು ನಿಮಿಷಗಳ ಬಳಿಕ ಕೊಂಚ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ದಿನಕ್ಕೆರಡು ಬಾರಿ ಪುನರಾವರ್ತಿಸಿ.

ಗುಲಾಬಿ ನೀರು

ಗುಲಾಬಿ ನೀರು

ಇದೊಂದು ನೈಸರ್ಗಿಕ ಒತ್ತಡ ನಿವಾರಕ ದ್ರವವಾಗಿದ್ದು ಒಣ ಮತ್ತು ಆಯಾಸಗೊಂಡಿರುವ ಕಣ್ಣುಗಳಿಗೆ ಅದ್ಭುತ ಆರೈಕೆ ಒದಗಿಸುತ್ತದೆ. ಜೊತೆಗೇ, ಇದರಲ್ಲಿ ವಿಟಮಿನ್ ಎ ಸಹಾ ಸಮೃದ್ದವಾಗಿದ್ದು ಇದರ ಕೊರತೆಯಿಂದ ಕಣ್ಣುಗಳು ಒಣಗಿರುತ್ತವೆ. ಇದನ್ನು ಉಪಯೋಗಿಸಲು ಒಂದು ಹತ್ತಿಯುಂಡೆಯನ್ನು ಗುಲಾಬಿ ನೀರಿನಲ್ಲಿ ಮುಳುಗಿಸಿ ಕಣ್ಣುಮುಚ್ಚಿ ಕಣ್ಣುರೆಪ್ಪೆಗಳ ಮೇಲೆ ಆವರಿಸುವಂತೆ ಇರಿಸಿ. ಸುಮಾರು ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಪರ್ಯಾಯವಾಗಿ ಅಪ್ಪಟ ಗುಲಾಬಿ ನೀರಿನ ಕೆಲವು ತೊಟ್ಟುಗಳನ್ನು ಕಣ್ಣಿನ ಒಳಗೂ ಬಿಟ್ಟುಕೊಳ್ಳುವ ಮೂಲಕ ಉರಿಯನ್ನು ತಕ್ಷಣವೇ ಕಡಿಮೆಯಾಗಿಸಬಹುದು. ಈ ವಿಧಾನವನ್ನು ದಿನಕ್ಕೆ ಮೂರು ಬಾರಿ ಪುನರಾವರ್ತಿಸಿ.

English summary

Easy Tips to Deal with Dry eyes

Dry eye syndrome, aka dry eyes, is caused when your eyes don’t produce enough tears or your tears don’t provide enough lubrication. This may result in lot of discomfort and is accompanied by a stinging or burning sensation in the eyes, formation of stringy mucus in or around your eyes, increased sensitivity to light, redness or blurred vision. Here are five ways you can deal with this problem.
X
Desktop Bottom Promotion