For Quick Alerts
ALLOW NOTIFICATIONS  
For Daily Alerts

ಕಿಸ್ಸಿಂಗ್‌ನಿಂದಲೂ ಇಂತಹ ಖತರ್ನಾಕ್ ಕಾಯಿಲೆಗಳು ಹರಡಬಹುದಂತೆ!

|

ಪ್ರೇಮಾತುರದ ಕೇವಲ ಹತ್ತು ಸೆಕೆಂಡುಗಳ ಚುಂಬನದ ಅವಧಿಯಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್ ಸಹಿತ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ಅತಿಸೂಕ್ಷ್ಮಜೀವಿಗಳು ಇಬ್ಬರು ವ್ಯಕ್ತಿಗಳ ನಡುವೆ ವಿನಿಮಯಗೊಳ್ಳುತ್ತವೆ.

Diseases Which Are Transmitted Through Kissing

ಸಾಮಾನ್ಯವಾಗಿ ಇವುಗಳಲ್ಲಿ ಹೆಚ್ಚಿನವು ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳೇ ಆಗಿದ್ದು ಆರೋಗ್ಯಕ್ಕೇನೂ ತೊಂದರೆಯಿಲ್ಲವಾದರೂ ಉಂಡಮನೆಗೆ ದ್ರೋಹ ಬಗೆಯುವ ಕೆಲವಾದರೂ ಕ್ರಿಮಿನಲ್ ಕ್ರಿಮಿಗಳು ಓರ್ವ ವ್ಯಕ್ತಿಯಿಂದ ಇನ್ನೊಬ್ಬರಿಗೆ ದಾಟಿಕೊಳ್ಳುತ್ತವೆ. ಈ ಸೂಕ್ಷ್ಮಜೀವಿಗಳು ಹೀಗೆ ದಾಟಿಕೊಳ್ಳುವ ಮೂಲಕ ಎದುರಿನ ವ್ಯಕ್ತಿಯಲ್ಲಿ ಉಂಟುಮಾಡಬಹುದಾದ ಕಾಯಿಲೆಗಳೆಂದರೆ:

ಚುಂಬನ ಕಾಯಿಲೆ (KISSING DISEASE)

ಚುಂಬನ ಕಾಯಿಲೆ (KISSING DISEASE)

infectious mononucleosis ಎಂಬ ಹೆಸರಿನ ಈ ಸೋಂಕು ಎಪ್ಸ್ಟಿನ್ ಬಾರ್ (Epstein-bar) ಎಂಬ ವೈರಸ್ಸಿನ ಮೂಲಕ ಹರಡುತ್ತದೆ. ಈ ಸೋಂಕು ಸಾಮಾನ್ಯ ಫ್ಲೂ ಜ್ವರದ ಲಕ್ಷಣಗಳನ್ನೇ ಹೋಲುತ್ತದೆ. ಗಂಟಲಲ್ಲಿ ಕೆರೆತ, ಸುಸ್ತು, ಸ್ನಾಯುಗಳು ದುರ್ಬಲಗೊಳ್ಳುವುದು ಹಾಗೂ ಊದಿಕೊಂಡ ದುಗ್ಧಗ್ರಂಥಿಗಳು, ಇವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಹದಿನೈದರಿಂದ ಮೂವತ್ತರ ಹರೆಯದ ವ್ಯಕ್ತಿಗಳಲ್ಲಿಯೇ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳು ಕೆಲವು ದಿನಗಳವರೆಗೆ ಮುಂದುವರೆಯುತ್ತವೆ ಹಾಗೂ ದೇಹದ ರೋಗನಿರೋಧಕ ಶಕ್ತಿಯೇ ಈ ವೈರಸ್ಸುಗಳನ್ನು ನಿಗ್ರಹಿಸುವ ಕಾರಣ ಸಾಮಾನ್ಯ ಆರೈಕೆಯ ಹೊರತು ಇತರ ಚಿಕಿತ್ಸೆಯ ಅಗತ್ಯವಿಲ್ಲ.

ಒಸಡಿನ ಕಾಯಿಲೆ (GUM DISEASE)

ಒಸಡಿನ ಕಾಯಿಲೆ (GUM DISEASE)

ಜಿಂಜಿವೈಟಿಸ್ (gingivitis) ಮತ್ತು ಪೆರಿಡಾಂಟೈಟಿಸ್ (periodontitis) ಎಂಬ ಹೆಸರಿನ ಈ ಸೋಂಕು ನಿಧಾನವಾಗಿ ವ್ಯಾಪಿಸುತ್ತಾ ಹೋಗುವ ಕಾಯಿಲೆಯಾಗಿದ್ದು ಮೊದಮೊದಲಿಗೆ ಯಾವುದೇ ನೋವು ಕೊಡದೇ ಕ್ರಮೇಣ ಚಿಕ್ಕದಾಗಿ ಒಸಡುಗಳಿಂದ ರಕ್ತ ಒಸರಲು ಪ್ರಾರಂಭವಾಗುತ್ತದೆ. ಕ್ರಮೇಣ ಹಲ್ಲುಗಳು ಸಡಿಲಗೊಳ್ಳುತ್ತಾ ಹೋಗುತ್ತವೆ, ಬಾಯಿಯಲ್ಲಿ ದುರ್ವಾಸನೆ ಎದುರಾಗುತ್ತದೆ ಹಾಗೂ ಕೆಲವು ಸಂದರ್ಭಗಳಲ್ಲಿ ಹಲ್ಲು ಬಿದ್ದು ಸಹಾ ಹೋಗಬಹುದು. ಸಾಮಾನ್ಯವಾಗಿ ವ್ಯಕ್ತಿಯ ಜೊಲ್ಲಿನ ಮೂಲಕ ಈ ವೈರಸ್ ಹರಡುತ್ತದೆ ಹಾಗೂ ಬಾಧಿತ ವ್ಯಕ್ತಿಯ ಬಾಯಿಯ ಆರೋಗ್ಯವನ್ನೇ ಹಾಳುಗೆಡವಬಲ್ಲುದು. ಈ ಸೂಚನೆಗಳನ್ನು ಎಷ್ಟು ಬೇಗನೇ ಕಂಡುಕೊಳ್ಳಲು ಸಾಧ್ಯವೋ ಅಷ್ಟೂ ಬೇಗನೇ ಚಿಕಿತ್ಸೆ ಪ್ರಾರಂಭಿಸುವ ಮೂಲಕ ರೋಗವನ್ನು ನಿಗ್ರಹಿಸಿ ಗುಣಪಡಿಸಬಹುದು.

Most Read: ಅಯ್ಯೋ! ಆಕೆ ಆತ್ಯಹತ್ಯೆ ಮಾಡಿಕೊಂಡಳೇ? ತಾಳಿ, ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ

ಮೆನಿಂಜೈಟಿಸ್ (MENINGITIS)

ಮೆನಿಂಜೈಟಿಸ್ (MENINGITIS)

ನಮ್ಮ ಮೆದುಳು ಮತ್ತು ಮೆದುಳುಬಳ್ಳಿಯನ್ನು ಸುತ್ತುವರೆದಿರುವ ರಕ್ಷಾಕವಚಕ್ಕೇ ಸೋಂಕು ತಗುಲಿದರೆ? ಇದರ ಪರಿಣಾಮ ಭೀಕರವಾಗಬಹುದು. ಮೆದುಳಿನ ಸೂಚನೆಗಳೆಲ್ಲಾ ತಪ್ಪು ತಪ್ಪಾಗಿ ಹರಿದು ವ್ಯಕ್ತಿ ಹುಚ್ಚನಾಗಬಹುದು! ಹಾಗಾಗಿ ಈ ರೋಗಕ್ಕೆ ಬ್ಯಾಕ್ಟೀರಿಯಾ ಮತ್ತು ವೈರಸ್ ಎರಡೂ ಕಾರಣವಾಗಬಹುದಾದರೂ ಬ್ಯಾಕ್ಟೀರಿಯಾದ ಸೋಂಕು ಕಡಿಮೆ ಪ್ರಾಬಲ್ಯದ್ದಾಗಿರುತ್ತದೆ.

ಶೀತ ಮತ್ತು ಫ್ಲೂ

ಶೀತ ಮತ್ತು ಫ್ಲೂ

ವಿಶ್ವದ ಅತಿ ಹೆಚ್ಚು ಜನರಲ್ಲಿ ಚುಂಬನದ ಮೂಲಕ ಹರಡುವ ಸೋಂಕುಗಳೆಂದರೆ ಶೀತ ಮತ್ತು ಫ್ಲೂ. ಈ ತೊಂದರೆ ಇರುವ ವ್ಯಕ್ತಿಗಳು ನೀಡುವ ಚುಂಬನ ಅಥವಾ ಆತ್ಮೀಯ ಅಪ್ಪುಗೆಯಿಂದಲೂ ಈ ವೈರಸ್ಸುಗಳು ಗಾಳಿಯಲ್ಲಿ ತೇಲಿ ಮುಂದಿನ ವ್ಯಕ್ತಿಗೆ ದಾಟಿಕೊಳ್ಳಬಹುದು.

ಹರ್ಪಿಸ್ ಸಿಂಪ್ಲೆಕ್ಸ್ ಅಥವಾ ಚಳಿಹುಣ್ಣು ಅಥವಾ ಜ್ವರದ ಹುಣ್ಣು (HERPES SIMPLEX OR COLD SORES OR FEVER BLISTERS)

ಹರ್ಪಿಸ್ ಸಿಂಪ್ಲೆಕ್ಸ್ ಅಥವಾ ಚಳಿಹುಣ್ಣು ಅಥವಾ ಜ್ವರದ ಹುಣ್ಣು (HERPES SIMPLEX OR COLD SORES OR FEVER BLISTERS)

ಈ ಸೋಂಕು ಅತಿ ಸಾಮಾನ್ಯವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಈ ಗುಂಪಿಗೆ ಸೇರದ ಸೋಂಕು ಎಂದರೆ ಗಾಳಿಯಲ್ಲಿ ತೇಲುತ್ತಾ ಮೂಗಿನ ಮೂಲಕ ದಾಟಿಕೊಳ್ಳುವ ವೈರಸ್ಸುಗಳ ಸೋಂಕು. (viral respiratory infections). ಈ ಸೋಂಕು ತಗುಲಿದ ವ್ಯಕ್ತಿಗಳ ತುಟಿ, ಮೂಗಿನ ಕೆಳಭಾಗ, ಗದ್ದ ಮೊದಲಾದ ಕಡೆಗಳಲ್ಲಿ ಚಿಕ್ಕ ವೃತ್ತಾಕಾರದ ಗುಂಡಿಗಳಂತೆ ಹುಣ್ಣುಗಳು ಮೂಡುತ್ತವೆ ಹಾಗೂ ಇವುಗಳ ಅಂಚಿನಲ್ಲಿ ಚರ್ಮ ಹರಿದು ರಕ್ತ ಒಸರತೊಡಗುತ್ತದೆ.

ಹರ್ಪಿಸ್ ಸಿಂಪ್ಲೆಕ್ಸ್ ಅಥವಾ ಚಳಿಹುಣ್ಣು ಅಥವಾ ಜ್ವರದ ಹುಣ್ಣು

ಹರ್ಪಿಸ್ ಸಿಂಪ್ಲೆಕ್ಸ್ ಅಥವಾ ಚಳಿಹುಣ್ಣು ಅಥವಾ ಜ್ವರದ ಹುಣ್ಣು

ಈ ಸೋಂಕಿಗೆ ತುತ್ತಾದ ವ್ಯಕ್ತಿಗಳ ಜೊಲ್ಲಿನಲ್ಲಿ ಈ ವೈರಸ್ಸು ಭಾರೀ ಸಾಂದ್ರತೆಯಲ್ಲಿರುತ್ತದೆ ಹಾಗೂ ಕ್ಷಣಮಾತ್ರದ ಚುಂಬನದಿಂದಲೂ, ಚಿಕ್ಕ ಚುಕ್ಕೆಯಷ್ಟು ಜೊಲ್ಲು ಎದುರಿನ ವ್ಯಕ್ತಿಗೆ ದಾಟಿಕೊಂಡರೂ ಈ ಸೋಂಕು ತಗಲುವ ಸಾಧ್ಯತೆ ಅಪಾರವಾಗುತ್ತದೆ. ಅದರಲ್ಲೂ ಮುಖಮೈಥುನದಲ್ಲಿ ತೊಡಗುವವರಿಗೆ ಈ ಸೋಂಕು ಖಚಿತವಾಗಿದ್ದು ಈ ಹುಣ್ಣುಗಳು ತುಟಿಗಳ ಬದಲಿಗೆ ಜನನಾಂಗದ ಭಾಗದಲ್ಲಿ ಎದುರಾಗುತ್ತವೆ. ಈ ವೈರಸ್ಸನ್ನು ಕೊಲ್ಲುವುದು ಅಷ್ಟು ಸುಲಭವಲ್ಲ, ಯಾವುದೇ ಚಿಕಿತ್ಸೆ, ಔಷಧಿಗೂ ಜಗ್ಗದೇ ದೇಹದ ಯಾವುದೋ ಭಾಗದಲ್ಲಿ ಅಡಗಿ ಕುಳಿತು ಯಾವುದೋ ಸಂದರ್ಭದಲ್ಲಿ ಮತ್ತೆ ಭುಗಿಲೆದ್ದು ತನ್ನ ಪ್ರಕೋಪವನ್ನು ತೋರಿಸುವ ಮೂಲಕ ಇಂದಿಗೂ ಈ ವೈರಸ್ಸು ವೈದ್ಯವಿಜ್ಞಾನಕ್ಕೊಂದು ಸವಾಲಾಗಿಯೇ ಉಳಿದಿದೆ. ಹಾಗಾಗಿ ಈ ಸೋಂಕು ಇರುವವರು ಸಂಪೂರ್ಣ ಸೋಂಕುರಹಿತರಾಗುವವರೆಗೂ ಅತ್ಯಂತ ಹೆಚ್ಚಿನ ಕಾಳಜಿಯನ್ನು ವಹಿಸುವುದು ಅಗತ್ಯ.

ಹರ್ಪಿಸ್

ಹರ್ಪಿಸ್

ಚಳಿಹುಣ್ಣು ಅಥವಾ ಜ್ವರ ಹುಣ್ಣು (cold sores or fever blisters) ಎಂದು ಕರೆಯಲ್ಪಡುವ ಈ ಹುಣ್ಣುಗಳು ಸೋಂಕು ತಗುಲಿದ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಯ ತೇವವಿರುವ ಭಾಗ ಅಥವಾ ಗಾಯಗೊಂಡ ಭಾಗಕ್ಕೆ ವೈರಸ್ಸು ದಾಟಿಕೊಳ್ಳುವ ಮೂಲಕ ಎದುರಾಗುತ್ತದೆ. ಅಮೇರಿಕಾದ ಒಟ್ಟಾರೆ ಜನಸಂಖ್ಯೆಯ ಅರ್ಧದಷ್ಟು ಜನರ ಬಾಯಿಯಲ್ಲಿ ಈ ಹುಣ್ಣುಗಳು ಕಾಣಿಸಿಕೊಂಡಿವೆ. ಆದರೆ ಇದರ ಲಕ್ಷಣಗಳು ಎಲ್ಲಾ ವ್ಯಕ್ತಿಗಳಲ್ಲಿ ಏಕಪ್ರಕಾರವಾಗಿ ಪ್ರಕಟಗೊಳ್ಳಬೇಕಿಲ್ಲ.

ಪೋಲಿಯೋ

ಪೋಲಿಯೋ

ಇದೊಂದು ಅತ್ಯಂತ ಸೋಂಕುಕಾರಕ ವೈರಸ್ ಆಧಾರಿತ ಕಾಯಿಲೆಯಾಗಿದ್ದು ಪುಟ್ಟ ಮಕ್ಕಳನ್ನೇ ಪ್ರಮುಖವಾಗಿ ಬಾಧಿಸುತ್ತದೆ. ಸೋಂಕು ಹರಡಿದ ವ್ಯಕ್ತಿಯ ಜೊಲ್ಲು ಬಾಯಿಗೆ ತಗುಲಿದ ಅಥವಾ ಈ ವೈರಸ್ ಇರುವ ನೀರನ್ನು ಕುಡಿದ ಅಥವಾ ಆಹಾರವನ್ನು ಸೇವಿಸಿದ ವ್ಯಕ್ತಿಗಳಿಗೆ ಈ ಕಾಯಿಲೆ ಆವರಿಸುತ್ತದೆ. ಆಹಾರದ ಮೂಲಕ ಹೊಟ್ಟೆ, ಅಲ್ಲಿಂದ ಕರುಳುಗಳಿಗೆ ದಾಟಿಕೊಳ್ಳುವ ಈ ವೈರಸ್ಸುಗಳು ಅಲ್ಲಿಂದ ರಕ್ತಕ್ಕೆ ಹೀರಲ್ಪಟ್ಟ ಬಳಿಕ ತಮ್ಮ ಪ್ರಕೋಪವನ್ನು ಪ್ರಕಟಿಸತೊಡಗುತ್ತವೆ. ನರವ್ಯವಸ್ಥೆಯನ್ನೇ ಶಿಥಿಲಗೊಳಿಸಿ ಅಂಗಗಳನ್ನು ಪಾರ್ಶ್ವವಾಯು ಪಡೆಯುವಂತೆ ಮಾಡುತ್ತವೆ. ಈ ಸೋಂಕು ತಗುಲಿದ ಪ್ರಾಥಮಿಕ ಲಕ್ಷಣಗಳೆಂದರೆ ಜ್ವರ, ಕಾಲುಗಳಲ್ಲಿ ನೋವು, ಸುಸ್ತು, ತಲೆನೋವು ಹಾಗೂ ಕುತ್ತಿಗೆ ಪೆಡಸಾಗುವುದು. ಪೋಲಿಯೋ ರೋಗ ಆವರಿಸಿದ ಬಳಿಕ ಇದನ್ನು ಸರಿಪಡಿಸಲು ಯಾವುದೇ ಚಿಕಿತ್ಸೆ ಇಲ್ಲ. ಆದರೆ ಮಕ್ಕಳಿಗೆ ಪೋಲಿಯೂ ಲಸಿಕೆಯನ್ನು ನೀಡುವ ಮೂಲಕ ಈ ಸೋಂಕಿನ ವಿರುದ್ದ ರಕ್ಷಣೆಯನ್ನು ಪಡೆಯಬಹುದು. ಅಮೇರಿಕಾದಲ್ಲಿ ಪೋಲಿಯೋ ಲಸಿಕೆಯ ಕ್ರಾಂತಿಯಿಂದ ಇಂದು ಈ ರೋಗ ಇಲ್ಲವೇ ಇಲ್ಲವೆನ್ನುವಷ್ಟು ಹತೋಟಿಗೆ ಬಂದಿದೆ. ಭಾರತಲ್ಲಿಯೂ ಸರ್ಕಾರದ ಪೋಲಿಯೋ ಲಸಿಕಾ ಕಾರ್ಯಕ್ರಮ ಸಾಕಷ್ಟು ಯಶಸ್ವಿಯಾಗಿದೆ.

Most Read: ಇಂತಹ ಅಪಾಯಕಾರಿ ಸೆಕ್ಸ್ ಲಕ್ಷಣಗಳನ್ನು, ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ

ಮಂಪ್ಸ್ (Mumps)

ಮಂಪ್ಸ್ (Mumps)

ಇದೂ ಒಂದು ವೈರಸ್ ಆಧಾರಿತ ಸೋಂಕು ಆಗಿದ್ದು ನಮ್ಮ ಲಾಲಾರಸದ ಗ್ರಂಥಿಗಳ ಮೇಲೆ ಧಾಳಿಯಿಡುತ್ತದೆ. ಪರಿಣಾಮವಾಗಿ ಗ್ರಂಥಿಗಳು ಊದಿಕೊಳ್ಳುತ್ತವೆ. ಈ ವೈರಸ್ಸುಗಳು ಸೋಂಕು ತಗುಲಿದ ವಕ್ತಿ ಸೀನಿದಾಗ ಗಾಳಿಯಲ್ಲಿ ಸ್ಪೋಟಗೊಳ್ಳುವ ಅತಿಚಿಕ್ಕ ತೇವಭರಿತ ನೀರಿನ ಚುಕ್ಕೆಗಳ ಮೂಲಕ ಗಾಳಿಯಲ್ಲಿ ತೇಲುತ್ತಾ ಇರುತ್ತವೆ ಹಾಗೂ ಈ ಗಾಳಿಯನ್ನು ಉಸಿರಾಡಿದವರ ಮೂಗಿನ ತೇವಭಾಗದಲ್ಲಿ ಅಂಟಿಕೊಂಡು ತಮ್ಮ ಮನೆಹಾಳು ಕೆಲಸ ಮುಂದುವರೆಸುತ್ತವೆ. ಈ ಸೋಂಕಿನಿಂದ ರಕ್ಷಣೆ ಪಡೆಯಲು ಸೂಕ್ತ ಲಸಿಕೆ ಲಭ್ಯವಿರುವ ಕಾರಣ ಇಂದು ಹಿಂದಿನಂತೆ ಇದು ಒಬ್ಬರಿಗೆ ಬಂದರೆ ಊರಿಗೆಲ್ಲಾ ಬಂದುಬಿಡುವಷ್ಟಿಲ್ಲ. ಆದರೂ ಕೆಲವು ಗ್ರಾಮಗಳಲ್ಲಿ ಈ ಲಸಿಕೆ ಹಾಕಿಸಿಕೊಳ್ಳದೇ ಇರುವ ವ್ಯಕ್ತಿಗಳೇ ಇದ್ದರೆ ಈ ಸೋಂಕು ಸ್ಪೋಟಗೊಂಡಂತೆ ಹರಡಬಹುದು. ಈ ಸೋಂಕಿನ ಲಕ್ಷಣಗಳೆಂದರೆ ಜ್ವರ, ತಲೆನೋವು, ಮೈ ಕೈ ನೋವು, ಸುಸ್ತು ಹಾಗೂ ಹಸಿವಿಲ್ಲದಿರುವುದು. ಈ ಸೋಂಕಿನಿಂದ ಚೇತರಿಸಿಕೊಳ್ಳಲು ಸುಮಾರು ಎರಡು ವಾರಗಳೇ ಬೇಕಾಗಬಹುದು. ಈ ಸೋಂಕನ್ನು ನಮ್ಮ ರೋಗ ನಿರೋಧಕ ಶಕ್ತಿಯೇ ಕಡಿಮೆ ಮಾಡಬಲ್ಲುದು, ಹಾಗಾಗಿ ಇದರ ಲಕ್ಷಣಗಳನ್ನು ಕಡಿಮೆ ಮಾಡುವತ್ತ ವೈದ್ಯರು ಅಗತ್ಯ ಔಷಧಿಗಳನ್ನು ನೀಡುತ್ತಾರೆ.

English summary

Diseases Which Are Transmitted Through Kissing

An intimate 10 second kiss can transfer over 80 million microorganisms including bacteria and viruses . Although most of the microorganisms are harmless but some can transmit infection from one person to another causing certain diseases
X
Desktop Bottom Promotion