For Quick Alerts
ALLOW NOTIFICATIONS  
For Daily Alerts

ಪುರುಷರಿಗೆ ಸ್ಖಲನ ವಿಳಂಬವಾಗುವುದು ಯಾಕೆ? ಇದಕ್ಕೆ ಕಾರಣವೇನು?

|

ಲೈಂಗಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಇರುವುದು. ಇದು ಪ್ರತಿಯೊಬ್ಬರನ್ನೂ ಕಾಡುವುದು ಎಂದಲ್ಲ. ಆದರೆ ಕೆಲವರಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುವುದು. ಶೀಘ್ರ ಸ್ಖಲನದಂತಹ ಸಮಸ್ಯೆಗಳು ಲೈಂಗಿಕ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುವುದು. ಅದೇ ರೀತಿಯಾಗಿ ನಿಮಿರು ದೌರ್ಬಲ್ಯ ಇತ್ಯಾದಿಗಳು ಕೂಡ ಲೈಂಗಿಕ ಸಮಸ್ಯೆಗಳೇ. ಲೈಂಗಿಕ ಜೀವನದಲ್ಲಿ ಕೆಲವು ಪುರುಷರಿಗೆ ವಿಳಂಬವಾಗಿ ಸ್ಖಲನವಾಗುವುದು. ಇದು ಸಾಮಾನ್ಯವಾಗಿ ಹೆಚ್ಚು ಗಂಭೀರ ಸಮಸ್ಯೆ ಅಲ್ಲದೆ ಇದ್ದರೂ ದೀರ್ಘ ಕಾಲ ತನಕ ಹೀಗೆ ಇದ್ದರೆ ಮತ್ತು ಕ್ಲೈಮ್ಯಾಕ್ಸ್ ತಲುಪಲು ಹೆಚ್ಚು ಸಮಯ ಬೇಕಾದರೆ ಮತ್ತು ವೀರ್ಯವು ಬರದೇ ಇದ್ದರೆ ಆಗ ದೊಡ್ಡ ಸಮಸ್ಯೆ ಎಂದು ಪರಿಗಣಿಸಬಹುದು.

ಕೆಲವು ಪುರುಷರಿಗೆ ವಿಳಂಬ ಸ್ಖಲನವಾದರೆ ಅವರಿಗೆ ವೀರ್ಯ ಸ್ಖಲನವಾಗುವುದೇ ಇಲ್ಲ. ವಿಳಂಬವಾಗಿ ಸ್ಖಲನವಾಗುವುದು ತಾತ್ಕಾಲಿಕ ಅಥವಾ ಜೀವನಪೂರ್ತಿ ಇರಬಹುದು. ಇದಕ್ಕೆ ಕೆಲವೊಂದು ಕಾರಣಗಳೆಂದರೆ ಅದು ದೀರ್ಘ ಕಾಲದ ಆರೋಗ್ಯ ಸಮಸ್ಯೆ, ಶಸ್ತ್ರಚಿಕಿತ್ಸೆ ಮತ್ತು ಔಷಧಿಗಳು. ವಿಳಂಬ ಸ್ಖಲನದ ತೀವ್ರತೆಯನ್ನು ನೋಡಿಕೊಂಡು ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಸ್ಖಲನವು ವಿಳಂಬವಾಗುವುದು ಕೆಲವೊಂದು ಸಂದರ್ಭಗಳಲ್ಲಿ ಸಾಮಾನ್ಯವಾಗಿರುವುದು. ಆದರೆ ಇದು ನಿಮ್ಮ ಹಾಗೂ ಸಂಗಾತಿ ಮೇಲೆ ಒತ್ತಡವನ್ನು ಉಂಟು ಮಾಡಿದರೆ ಅದರಿಂದ ಸಮಸ್ಯೆಗಳು ನಿರ್ಮಾಣವಾಗಬಹುದು.

ಲಕ್ಷಣಗಳು

ಲಕ್ಷಣಗಳು

ಕೆಲವು ಪುರುಷರಲ್ಲಿ ವಿಳಂಬವಾಗಿ ಸ್ಖಲನವು ಸುಮಾರು 30 ನಿಮಿಷಗಳಲ್ಲಿ ಆಗಬಹುದು ಅಥವಾ ಪರಾಕಾಷ್ಠೆ ತಲುಪಲು ಅಥವಾ ಸ್ಖಲನವಾಗಲು ಹೆಚ್ಚು ಸಮಯ ಬೇಕಾಗಬಹುದು. ಕೆಲವು ಪುರುಷರಿಗೆ ಸ್ಖಲನದ ವೇಳೆ ವೀರ್ಯ ಬರದೇ ಇರಬಹುದು. ಆದರೆ ಸ್ಖಲನವು ವಿಳಂಬವಾಗುತ್ತಿದೆ ಎಂದು ಹೇಳಲು ಯಾವುದೇ ನಿಖರವಾದ ಸಮಯವು ಇಲ್ಲ. ನೀವು ಲೈಂಗಿಕ ಕ್ರಿಯೆ ವೇಳೆ ತುಂಬಾ ಒತ್ತಡ, ಕಿರಿಕಿರಿ ಅಥವಾ ನಿಶ್ಯಕ್ತಿಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗದೆ ಇರುವುದು, ದೈಹಿಕ ಕಿರಿಕಿರಿ, ನಿಮಿರುವಿಕೆ ಅಥವಾ ನಿಮ್ಮ ಸಂಗಾತಿಯ ವಿನಂತಿ ಮೇರಿಗೆ ಕೆಲವೊಂದು ಸಂದರ್ಭದಲ್ಲಿ ಸ್ಖಲನವು ವಿಳಂಬವಾಗುವಂತಹ ಸಂದರ್ಭವು ಇದೆ. ಸಂಗಾತಿ ಜತೆಗೆ ಲೈಂಗಿಕ ಕ್ರಿಯೆ ಅಥವಾ ಲೈಂಗಿಕ ಚಟುವಟಿಕೆ ವೇಳೆ ಕೆಲವೊಂದು ಪುರುಷರು ಪರಾಕಾಷ್ಠೆ ತಲುಪಲು ತುಂಬಾ ಕಷ್ಟವಾಗಬಹುದು. ಕೆಲವೊಂದು ಪುರುಷರಿಗೆ ಹಸ್ತಮೈಥುನದಿಂದ ಮಾತ್ರ ಸ್ಖಲನವಾಗುವುದು. ಸ್ಖಲನವು ವಿಳಂಬವಾಗುವುದನ್ನು ಕೆಲವೊಂದು ಲಕ್ಷಣಗಳನ್ನು ಈ ರೀತಿಯಾಗಿ ವಿಂಗಡಿಸಲಾಗಿದೆ.

ಜೀವನಪೂರ್ತಿ Vs ಸ್ವಾಧೀನಪಡಿಸಿದ

ಜೀವನಪೂರ್ತಿ Vs ಸ್ವಾಧೀನಪಡಿಸಿದ

ಜೀವನಪೂರ್ತಿಯಾಗಿ ಕೆಲವೊಂದು ಸಲ ಕಾಡುವಂತಹ ವಿಳಂಬ ಸ್ಖಲನವು ಲೈಂಗಿಕವಾಗಿ ಪ್ರೌಢತೆಯು ಬಂದ ಸಮಯದಿಂದ ಆರಂಭವಾಗಿರುವುದು. ಸ್ವಾಧೀನಪಡಿಸಿಕೊಂಡಿರುವಂತಹ ವಿಳಂಬ ಸ್ಖಲನವು ಸಾಮಾನ್ಯ ಲೈಂಗಿಕ ಕ್ರಿಯೆ ವೇಳೆ ಮಾತ್ರ ಕಾಣಿಸಿಕೊಳ್ಳುವುದು.

Most Read: ಶೀಘ್ರಸ್ಖಲನಕ್ಕೆ ಶಾಶ್ವತ ಪರಿಹಾರ; ಇವನ್ನು ಸೇವಿಸಿ

ಸಾಮಾನ್ಯ vs ಸಾಂದರ್ಭಿಕ

ಸಾಮಾನ್ಯ vs ಸಾಂದರ್ಭಿಕ

ಸಾಮಾನ್ಯವಾಗಿ ವಿಳಂಬ ಸ್ಖಲನವು ಕೆಲವೊಂದು ಸಂಗಾತಿಗಳಿಗೆ ಮಾತ್ರ ಸೀಮಿತವಾಗಿಲ್ಲ ಅಥವಾ ಇದು ಕೆಲವೊಂದು ಉದ್ರೇಕಗಳಿಗೆ ಅವಲಂಬಿತವಾಗಿಲ್ಲ. ಸಾಂದರ್ಭಿಕ ವಿಳಂಬ ಸ್ಖಲನವು ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಆಗುವುದು.

ಈ ಗುಂಪುಗಳಿಂದ ನೀವು ನೀವು ಇದಕ್ಕೆ ಯಾವ ಕಾರಣ ಎಂದು ತಿಳಿಯಬಹುದು ಮತ್ತು ಇದಕ್ಕೆ ಸರಿಯಾದ ಚಿಕಿತ್ಸೆ ಯಾವುದು ಎಂದು ಸರಿಯಾಗಿ ಕಂಡುಕೊಳ್ಳಬಹುದು.

Most Read: ಪುರುಷರು ಎದುರಿಸುವ ಲೈಂಗಿಕ ರೋಗಗಳ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು

ವೈದ್ಯರನ್ನು ಯಾವಾಗ ಭೇಟಿಯಾಗಬೇಕು

ವೈದ್ಯರನ್ನು ಯಾವಾಗ ಭೇಟಿಯಾಗಬೇಕು

ಸ್ಖಲನವು ವಿಳಂಬವಾದರೆ ಆಗ ನೀವು ಆರಂಭಿಕವಾಗಿ ವೈದ್ಯರನ್ನು ಭೇಟಿಯಾಗಿ ಅವರೊಂದಿಗೆ ಚರ್ಚೆ ಮಾಡಿ ಕೆಲವು ಸಲಹೆಗಳನ್ನು ಪಡೆಯಬಹುದು.

ಯಾವಾಗ ನೀವು ವೈದ್ಯರನ್ನು ಭೇಟಿಯಾಗಬೇಕು...

*ಸ್ಖಲನವು ವಿಳಂಬವಾಗುವುದು ನಿಮಗೆ ಹಾಗೂ ನಿಮ್ಮ ಸಂಗಾತಿಗೆ ಸಮಸ್ಯೆಯಾದರೆ...

*ಸ್ಖಲನವು ವಿಳಂಬವಾಗುತ್ತಲಿರುವುದಕ್ಕೆ ನಿಮಗೆ ಬೇರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಇರಬಹುದು ಅಥವಾ ನೀವು ತೆಗೆದುಕೊಳ್ಳುತ್ತಿರುವ ಔಷಧಿಯಿಂದಲೂ ಇದು ಬರಬಹುದು.

*ವಿಳಂಬ ಸ್ಖಲನದೊಂದಿಗೆ ನಿಮಗೆ ಬೇರೆ ಕೆಲವೊಂದು ಲಕ್ಷಣಗಳು ಇರಬಹುದು. ಇದು ಇದಕ್ಕೆ ಸಂಬಂಧಿಸಿದ ಅಥವಾ ಸಂಬಂಧಿಸದೆ ಇರದೇ ಇರಬಹುದು.

ಕಾರಣಗಳು

ಕಾರಣಗಳು

ವಿಳಂಬ ಸ್ಖಲನವು ಕೆಲವೊಂದು ದೀರ್ಘ ಕಾಲದ ಆರೋಗ್ಯ ಸಮಸ್ಯೆ, ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಯಿಂದ ಆಗಬಹುದು. ಕೆಲವೊಂದು ಅಂಶಗಳ ದುರ್ಬಳಕೆ ಅಥವಾ ಮಾನಸಿಕ ಆರೋಗ್ಯ ಸ್ಥಿತಿಯಾಗಿರುವಂತಹ ಖಿನ್ನತೆ, ಆತಂಕ ಅಥವಾ ಒತ್ತಡದಿಂದ ಉಂಟಾಗಬಹುದು. ಕೆಲವೊಂದು ಸಂದರ್ಭಗಳಲ್ಲಿ ಇದು ದೈಹಿಕ ಹಾಗೂ ಮಾನಸಿಕ ಚಿಂತೆಯಿಂದಲೇ ಬರುವುದು.

Most Read: ಇಂತಹ ಅಪಾಯಕಾರಿ ಸೆಕ್ಸ್ ಲಕ್ಷಣಗಳನ್ನು, ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ

ಸ್ಖಲನವು ವಿಳಂಬವಾಗುವುದಕ್ಕೆ ಕೆಲವೊಂದು ಮಾನಸಿಕ ಕಾರಣಗಳು

ಸ್ಖಲನವು ವಿಳಂಬವಾಗುವುದಕ್ಕೆ ಕೆಲವೊಂದು ಮಾನಸಿಕ ಕಾರಣಗಳು

* ಖಿನ್ನತೆ, ಆತಂಕ ಅಥವಾ ಕೆಲವೊಂದು ಮಾನಸಿಕ ಆರೋಗ್ಯ ಪರಿಸ್ಥಿತಿಗಳು

* ಒತ್ತಡ, ಕೆಟ್ಟ ಸಂವಹನ ಅಥವಾ ಇತರ ಕೆಲವೊಂದು ಚಿಂತೆಯಿಂದ ಸಂಬಂಧದಲ್ಲಿನ ಸಮಸ್ಯೆ.

* ಪ್ರದರ್ಶನದ ಬಗ್ಗೆ ಇರುವ ಆತಂಕ

* ದೇಹದ ಬಗ್ಗೆ ಇರುವ ಕೆಟ್ಟ ಚಿತ್ರಣ

* ಸಂಪ್ರದಾಯಿಕ ಅಥವಾ ಧಾರ್ಮಿಕ ನಂಬಿಕೆಗಳು

* ಸಂಗಾತಿ ಜತೆಗಿನ ಲೈಂಗಿಕ ವಾಸ್ತವಿಕತೆ ಮತ್ತು ತಿಳಿದುಕೊಂಡಿರುವ ಲೈಂಗಿಕ ಚಿತ್ರಣಕ್ಕೂ ಇರುವ ವ್ಯತ್ಯಾಸ.

Most Read: ಇಂತಹ ಅಪಾಯಕಾರಿ ಸೆಕ್ಸ್ ಲಕ್ಷಣಗಳನ್ನು, ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ

ಸ್ಖಲನವು ವಿಳಂಬ ಮಾಡುವಂತಹ ಕೆಲವೊಂದು ಔಷಧಿಗಳು ಮತ್ತು ಇತರ ಅಂಶಗಳು.

ಸ್ಖಲನವು ವಿಳಂಬ ಮಾಡುವಂತಹ ಕೆಲವೊಂದು ಔಷಧಿಗಳು ಮತ್ತು ಇತರ ಅಂಶಗಳು.

•ಖಿನ್ನತೆ ವಿರೋಧಿ ಮಾತ್ರೆಗಳು

•ಅಧಿಕ ರಕ್ತದೊತ್ತಡದ ಔಷಧಿಗಳು

•ಮೂತ್ರ ವರ್ಧಕಗಳು

•ಮನೋವಿಕೃತಿ ನಿರೋಧಕ ಮಾತ್ರೆಗಳು

•ವಿರೋಧಿ ಸೆಳವು ಔಷಧಿಗಳು

•ಆಲ್ಕೋಹಾಲ್-ಅತಿಯಾಗಿ ಆಲ್ಕೋಹಾಲ್ ಸೇವನೆ(ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡುವುದು)

English summary

Delayed ejaculation: Causes for this Issues

Delayed ejaculation — sometimes called impaired ejaculation — is a condition in which it takes an extended period of sexual stimulation for men to reach sexual climax and release semen from the penis (ejaculate). Some men with delayed ejaculation are unable to ejaculate at all. Delayed ejaculation can be temporary or a lifelong problem. Possible causes of delayed ejaculation include certain chronic health conditions, surgeries and medications. Treatment for delayed ejaculation depends on the underlying cause.
Story first published: Tuesday, January 8, 2019, 17:49 [IST]
X
Desktop Bottom Promotion