For Quick Alerts
ALLOW NOTIFICATIONS  
For Daily Alerts

ಒಂದು ತಿಂಗಳು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವಿಸಿದರೆ ಸಿಗುವ ಪ್ರಯೋಜನಗಳು

|

ಯಾವುದೇ ರೀತಿಯ ಚಿಕಿತ್ಸೆಯಾದರೂ ಅದು ಖಾಲಿ ಹೊಟ್ಟೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಇರುವುದು ಎಂದು ಆಯುರ್ವೇದವು ಹೇಳುತ್ತದೆ. ಯಾಕೆಂದರೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆಗ ನಮ್ಮ ದೇಹವು ಅದನ್ನು ಸರಿಯಾಗಿ ಹೀರಿಕೊಳ್ಳುವುದು. ಇಂದಿನ ದಿನಗಳಲ್ಲಿ ಆರೋಗ್ಯದ ಕಾಳಜಿಯಿಂದಾಗಿ ಪ್ರತಿಯೊಂದು ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಏನಾದರೂ ಕುಡಿಯುವರು ಅಥವಾ ತಿನ್ನುವರು. ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಹಾಕಿ ಕುಡಿಯುವುದು ಅಥವಾ ಲಿಂಬೆ ರಸ ಹಾಕಿ ಕುಡಿಯುವುದು ಇರಬಹುದು. ಇದು ನಿಮ್ಮನ್ನು ಆರೊಗ್ಯವಾಗಿ ಇಡುವುದು. ದೇಹದ ವ್ಯವಸ್ಥೆಯನ್ನು ಶುದ್ಧೀಕರಿಸಲು ಮತ್ತು ಆರೋಗ್ಯವಾಗಿರಲು ಹೆಚ್ಚಿನ ಜನರು ಮನೆಮದ್ದುಗಳನ್ನು ನೆಚ್ಚಿಕೊಂಡಿರುವರು.

ಖಾಲಿ ಹೊಟ್ಟೆಯಲ್ಲಿ ನೀವು ಏನು ತಿನ್ನುತ್ತೀರಿ ಅಥವಾ ಕುಡಿಯುತ್ತೀರಿ ಎನ್ನುವುದು ಇಲ್ಲಿ ತುಂಬಾ ಮುಖ್ಯವಾಗಿರುವುದು. ಬೇರೆ ಎಲ್ಲವೂ ತುಂಬಾ ಸಾಮಾನ್ಯವಾಗಿ ಇರುವುದು. ಆದರೆ ನೀವು ಎದ್ದ ಕೂಡಲೆ ಒಂದು ಚಮಚ ತುಪ್ಪ ತಿನ್ನುವ ಬಗ್ಗೆ ಯಾವತ್ತಾದರೂ ಆಲೋಚನೆ ಮಾಡಿದ್ದೀರಾ? ಕೊಬ್ಬು ಮತ್ತು ಪ್ರೋಟೀನ್ ಒಳಗೊಂಡಿರುವಂತಹ ತುಪ್ಪ ಸೇವನೆ ಮಾಡುವುದರಿಂದಾಗಿ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುವುದು ಎಂದು ಜನರು ಯಾವಾಗಲೂ ಹೇಳುವರು. ಈ ಎಲ್ಲಾ ನಂಬಿಕೆಗಳ ಹೊರತಾಗಿಯೂ ಆಯುರ್ವೇದವು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವಿಸಿ ಎಂದು ಹೇಳುತ್ತದೆ.

ತುಪ್ಪ

ತುಪ್ಪ

ತುಪ್ಪದಿಂದಾಗಿ ನಿಮ್ಮ ಖಾದ್ಯಗಳಿಗೆ ಹೆಚ್ಚಿನ ರುಚಿ ಹಾಗೂ ಸುವಾಸನೆಯು ಬರುವುದು. ತುಪ್ಪವನ್ನು ಹಿಂದೂ ಧರ್ಮದಲ್ಲಿ ಪೂಜೆ, ಯಜ್ಞ ಮತ್ತು ಇತರ ಕೆಲವೊಂದು ಸಾಂಪ್ರದಾಯಿಕ ವಿಧಿವಿಧಾನಗಳ ಆಚರಣೆಗೆ ಬಳಸಿಕೊಳ್ಳಲಾಗುತ್ತದೆ. ಒಂದು ಚಮಚ ತುಪ್ಪವನ್ನು ಬಿಸಿ ನೀರಿಗೆ ಹಾಕಿಕೊಂಡು ಬೆಳಗ್ಗೆ ಖಾಲಿ

ಹೊಟ್ಟೆಯಲ್ಲಿ ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದ ಬಳಿಕ ನೀವು ಬೇರೆ ಯಾವುದೇ ಆಹಾರ ಸೇವನೆ ಮಾಡಲು ಒಂದು ಅರ್ಧ ಗಂಟೆ ಕಾಲ ಕಾಯಬೇಕು.

ಕೋಶಗಳು ಕಾರ್ಯನಿರ್ವಹಣೆಗೆ ಬಲ ನೀಡುವುದು

ಕೋಶಗಳು ಕಾರ್ಯನಿರ್ವಹಣೆಗೆ ಬಲ ನೀಡುವುದು

ವೇದಗಳ ಪ್ರಕಾರ ರಸ ಎನ್ನುವುದು ಸಂಪೂರ್ಣ ಕೋಶಗಳ ಪೋಷಣೆಗೆ ಬೇಕಾಗಿರುವಂತಹ ಪ್ರಮುಖ ಭಾಗವಾಗಿದೆ. ಇದು ಎಲ್ಲಾ ಕೋಶಗಳನ್ನು ಸಂಪರ್ಕಿಸುವುದು. ತುಪ್ಪ ಸೇವಿಸು ವುದರಿಂದ ಕೋಶಗಳಿಗೆ ಪೋಷಣೆ ಸಿಗುವುದು. ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಅದರಿಂದ ಕೋಶಗಳ ಪುನರುಜ್ಜೀವನಕ್ಕೆ ನೆರವಾಗುವುದು ಮತ್ತು ಇದರಿಂದ ದೇಹದ ಶಮನ ಕ್ರಿಯೆಗೆ ಇದು ಸಹಕಾರಿಯಾಗುವುದು.

ಚರ್ಮದ ಕಾಂತಿ

ಚರ್ಮದ ಕಾಂತಿ

ವ್ಯಕ್ತಿಯ ನೈಸರ್ಗಿಕ ಸೌಂದರ್ಯವು ದೇಹದ ಒಳಗಿನಿಂದ ಬರುತ್ತದೆ ಎಂದು ಹೇಳಲಾಗುತ್ತದೆ. ನೀವು ಎಷ್ಟೇ ರೀತಿಯ ಕಾಸ್ಮೆಟಿಕ್ ಗಳನ್ನು ಬಳಸಿಕೊಂಡರೂ ಅದರಿಂದ ಯಾವುದೇ ರೀತಿಯ ಪ್ರಯೋಜನ ವಿಲ್ಲ. ಯಾಕೆಂದರೆ ನೀವು ಸರಿಯಾಗಿ ಆಹಾರ ಸೇವನೆ ಮಾಡದೆ ಇದ್ದರೆ ಆಗ ಚರ್ಮವು ಆರೋಗ್ಯವಾಗಿ ಇರುವುದಿಲ್ಲ. ನೀವು ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ತುಪ್ಪ ಹಾಕಿ ಸೇವನೆ ಮಾಡಿದರೆ ಅದರಿಂದ ಕೋಶಗಳು ಪುನರುಜ್ಜೀವನ ಗೊಳ್ಳುವುದು ಮತ್ತು ಚರ್ಮವು ಕೂಡ ಯೌವನ ಪಡೆಯುವುದು. ಚರ್ಮ ದಡಿಯಲ್ಲಿ ಕಾಲಜನ್ ಶೇಖರಣೆಯನ್ನು ಇದು ಹೆಚ್ಚು ಮಾಡುವುದು ಮತ್ತು ನೆರಿಗೆಯು ಮಾಯವಾಗುವುದು. ಚರ್ಮ ಮೊಶ್ಚಿರೈಸ್ ಆಗುವುದು ಮತ್ತು ಬಿಗಿಯಾಗಿ ಕಾಣುವುದರಿಂದ ಸೌಂದರ್ಯ ಹೆಚ್ಚಾಗುವುದು.

ಸಂಧಿವಾತ ಮತ್ತು ಗಂಟು ನೋವು ತಡೆಯುವುದು

ಸಂಧಿವಾತ ಮತ್ತು ಗಂಟು ನೋವು ತಡೆಯುವುದು

ಇದು ನೈಸರ್ಗಿಕವಾಗಿರುವಂತಹ ಲ್ಯುಬ್ರಿಕೆಂಟ್ ಆಗಿದೆ. ತುಪ್ಪ ಸೇವನೆ ಮಾಡಿದರೆ ಆಗ ಅದರಿಂದ ಗಂಟುಗಳಲ್ಲಿ ಲ್ಯುಬ್ರಿಕೆಂಟ್ ಶೇಖರಣೆ ಆಗುವುದು ಮತ್ತು ಮೂಳೆಗಳು ಸರಿಯಾದ ರೀತಿಯಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಂತೆ ಮಾಡುವುದು. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಇದೆ. ಇದು ಅಸ್ಥಿರಂಧ್ರತೆಯನ್ನು

ತಡೆಯುವುದು. ಗಂಟಿನ ಮೂಳೆಗಳ ಅಂಗಾಂಶಗಳು ಜೀವನಪೂರ್ತಿ ತುಂಬಾ ಆರೋಗ್ಯವಾಗಿ ಇರುವುದು.

ಕೊಲೆಸ್ಟ್ರಾಲ್ ತಗ್ಗಿಸುವುದು

ಕೊಲೆಸ್ಟ್ರಾಲ್ ತಗ್ಗಿಸುವುದು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡುವ ಮೂಲಕ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮೇಲೆ ಹೇಳಿರುವಂತೆ ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಅಧಿಕ ಪ್ರಮಾಣದಲ್ಲಿ ಇರುವ ಕಾರಣದಿಂದಾಗಿ ಇದು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ತೆಗೆಯುವುದು. ಇದರಿಂದಾಗಿ ನಿಮ್ಮ ಹೃದಯ ವ್ಯವಸ್ಥೆಯು ತುಂಬಾ ಆರೋಗ್ಯವಾಗಿ ಇರುವುದು. ನಿಮ್ಮ ರಕ್ತದೊತ್ತಡ ಕೂಡ ಸಮತೋಲನದಲ್ಲಿ ಇರುವುದು.

ಮೆದುಳಿನ ಕೋಶಗಳ ಚಟುವಟಿಕೆ

ಮೆದುಳಿನ ಕೋಶಗಳ ಚಟುವಟಿಕೆ

ಮೆದುಳಿನ ಕೋಶಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೊಬ್ಬು ತುಂಬಾ ಮುಖ್ಯವಾಗಿ ಬೇಕು.. ತುಪ್ಪವು ಕೊಬ್ಬನ್ನು ಹೊಂದಿರುವಂತಹ ಪ್ರಮುಖ ಆಹಾರವಾಗಿದೆ ಮತ್ತು ಇದು ಮೆದುಳಿನ ಕೋಶಗಳು ಸರಿಯಾಗಿ ಕೆಲಸ ಮಾಡಲು ಮತ್ತು ಚಟುವಟಿಕೆಯಿಂದ ಇರಲು ನೆರವಾಗುವುದು. ತುಪ್ಪದಲ್ಲಿ

ಇರುವಂತಹ ಕೊಬ್ಬು ನರಪ್ರೇಕ್ಷಕಗಳ ರಚನೆಗೆ ನೆರವಾಗುವುದು ಮತ್ತು ನರಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡುವುದು. ಇದರಿಂದ ನೆನಪಿನ ಶಕ್ತಿಯು ಸರಿಯಾಗಿ ಇರುವುದು.

Most Read:ತೂಕ ಇಳಿಸಿಕೊಳ್ಳಲು ಅಲೋವೆರಾ ಜ್ಯೂಸ್‌‌ ಕುಡಿಯುವ ವಿಧಾನಗಳು

ಲ್ಯಾಕ್ಟೋಸ್ ಅಸಹಿಷ್ಣುತೆ ಮೆರೆತುಬಿಡಿ

ಲ್ಯಾಕ್ಟೋಸ್ ಅಸಹಿಷ್ಣುತೆ ಮೆರೆತುಬಿಡಿ

ಹಾಲಿನ ಪ್ರೋಟೀನ್ ನ ಹೀರಿಕೊಳ್ಳುವ ಸಮಸ್ಯೆ ಇರುವಂತಹ ಜನರು ತುಪ್ಪವನ್ನು ಸೇವನೆ ಮಾಡಬಹುದು. ಇದರಿಂದ ಯಾವುದೇ ಚಿಂತೆ ಇಲ್ಲ ಮತ್ತು ಹಾಲಿನ ಲಾಭವನ್ನು ಇದರಿಂದ ಪಡೆಯಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡಿ ಮತ್ತು ಆರೋಗ್ಯ ಮತ್ತು ಚುರುಕಾಗಿರಿ.

English summary

Benefits of Consuming Ghee in Empty Stomach for one month

Every individual has a habit of eating or drinking something after getting up from the bed. It can be a glass of lukewarm water with honey or lemon that helps you to stay healthy. It can also be a cup of coffee to start your daily routine. People often choose a home remedy to clean up the system and stay healthy. It is the first thing you eat or consume when your stomach is empty.The list might have the things that are common but no one will think of having ghee right away in the early morning.
X
Desktop Bottom Promotion