Just In
Don't Miss
- News
ಉಪಚುನಾವಣೆ: ಅಮಿತ್ ಶಾಗೆ ತನ್ನ ರಾಜಕೀಯ ವಿಲ್ ಪವರ್ ತೋರಿಸಿದ ಯಡಿಯೂರಪ್ಪ
- Finance
ಜಿಯೋ ಮತ್ತೊಮ್ಮೆ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ: 98, 149 ರುಪಾಯಿ ರೀಚಾರ್ಜ್
- Education
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ನೇಮಕಾತಿ 2019: 75 ಯುವ ವೃತ್ತಿಪರರಿಗೆ ಹುದ್ದೆಗಳಿವೆ
- Automobiles
ಮತ್ತಷ್ಟು ದುಬಾರಿಯಾಗಲಿದೆ ಟಿವಿಎಸ್ ಅಪಾಚೆ ಬೈಕ್
- Travel
ಉತ್ತರ ಭಾರತಕ್ಕೆ ಪ್ರವಾಸ ಹೋದ್ರೆ ಈ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿಯಲು ಮರೀಬೇಡಿ
- Movies
ಹೀರೋ ಆದ ಬಿಗ್ ಬಾಸ್-6 ವಿನ್ನರ್ 'ಮಾಡರ್ನ್ ರೈತ' ಶಶಿ ಕುಮಾರ್
- Technology
ಅನಿಯಮಿತ ಕರೆ ಮತ್ತು ಅಧಿಕ ಡಾಟಾಗೆ ಇದುವೇ ಬೆಸ್ಟ್ ಪ್ಲ್ಯಾನ್!
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
ಸಾರ್ಡಿನ್ ಮೀನಿನಿಂದ ಸಿಗುವ ಆರೋಗ್ಯ ಲಾಭಗಳು
ಸಮುದ್ರ ಜೀವಿಗಳು ಅದರಲ್ಲೂ ಪ್ರಮುಖವಾಗಿ ಮೀನು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಎಂದು ಹಲವಾರು ಸಂಶೋಧನೆಗಳಿಂದಲೂ ದೃಢಪಟ್ಟಿದೆ. ಸಮುದ್ರದಲ್ಲಿ ಸಿಗುವಂತಹ ಮೀನಿನಲ್ಲಿ ಹೆಚ್ಚಿನ ಪೋಷಕಾಂಶ ಹಾಗೂ ಖನಿಜಾಂಶಗಳು ಇರುವ ಕಾರಣದಿಂದಾಗಿ ಇದು ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳನ್ನು ಉಂಟು ಮಾಡುವುದು. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ನಮ್ಮ ದೇಹಕ್ಕೆ ಹಲವಾರು ಲಾಭಗಳನ್ನು ಉಂಟು ಮಾಡುವುದು. ಒಂದೊಂದು ಜಾತಿಯ ಮೀನಿನಲ್ಲಿ ಒಂದೊಂದು ರೀತಿಯ ಆರೋಗ್ಯ ಲಾಭಗಳು ಇವೆ. ಮೀನಿನ ಸೇವನೆ ಮಾಡಿದರೆ ಅದರಿಂದ ಮೆದುಳು ಚುರುಕಾಗುವುದು ಎಂದು ಹೇಳುತ್ತಾರೆ. ಅದರಲ್ಲೂ ಪ್ರಮುಖವಾಗಿ ಗರ್ಭಿಣಿ ಮಹಿಳೆಯರು ಮೀನಿನ ಸೇವನೆ ಮಾಡಿದರೆ ಅದರಿಂದ ಹುಟ್ಟುವ ಮಗು ತುಂಬಾ ಚುರುಕಾಗಿರುವುದು ಎಂದು ಹೇಳಲಾಗುತ್ತದೆ.
ಮೀನು ಸೇವನೆ ಮಾಡುವವರ ಮೆದುಳು ತೀಕ್ಷ್ಣವಾಗಿರುವುದು. ಸಾರ್ಡಿನ್ (ಬೂತಾಯಿ ಅಥವಾ ಮತ್ತಿ) ಎನ್ನುವ ಮೀನಿನಿಂದ ನಮ್ಮ ದೇಹಕ್ಕೆ ಹಲವಾರು ಲಾಭಗಳು ಇವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು, ಮಾನಸಿಕ ಆರೋಗ್ಯ ನಿಯಂತ್ರಿಸುವುದು, ದೇಹಕ್ಕೆ ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಒದಗಿಸುವುದು, ಉರಿಯೂತ ತಗ್ಗಿಸುವುದು, ಹೃದಯದ ಕಾಯಿಲೆ ತಡೆಯುವದು ಮತ್ತು ತೂಕ ಕಳೆದುಕೊಳ್ಳಲು ಇದು ನೆರವಾಗುವುದು. ಇತರ ಕೆಲವು ಆರೋಗ್ಯ ಲಾಭಗಳೆಂದರೆ ಇದು ಚರ್ಮದ ಕಾಂತಿ ಹೆಚ್ಚಿಸುವುದು, ಪ್ರತಿರೊಧಖ ಶಕ್ತಿ ವೃದ್ಧಿ ಮತ್ತು ಅಕ್ಷಿಪಟಲದ ಅವನತಿ ತಡೆಯುವುದು.

ಸಾರ್ಡಿನ್ ಎಂದರೇನು?
ಸಾರ್ಡಿನ್ ಎಂದರೆ ತುಂಬಾ ತೆಳ್ಳಗಿನ ಎಣ್ಣೆಯಂಶವಿರುವಂತಹ ಮೀನಾಗಿದ್ದು, ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಗಳು ಇವೆ. ಇವುಗಳು ಕ್ಯಾನ್ ಗಳಲ್ಲಿ ಲಭ್ಯವಿದೆ ಮತ್ತು ಅದರ ವಾಸನೆ ಮತ್ತು ರುಚಿಯಿಂದ ತುಂಬಾ ಖ್ಯಾತಿ ಪಡೆದಿದೆ. ಈ ಸಮುದ್ರ ಖಾದ್ಯವು ಇದರಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳಿಂದ ತುಂಬಾ ಲಾಭಕಾರಿಯಾಗಿರುವುದು. ಇದರಲ್ಲಿರುವ ವಾಸನೆ ಮತ್ತು ವಿವಿಧ ರೀತಿಯ ಅಡುಗೆ ವಿಧಾನದಿಂದ ತಗ್ಗಿಸಬಹುದು. ಯಾಕೆಂದರೆ ಈ ಸಮುದ್ರ ಖಾದ್ಯವು ಆರೋಗ್ಯಕಾರಿಯಾಗಿರುವುದು.

ಮ್ಯಾಕ್ರೋನ್ಯೂಟ್ರಿಯಂಟ್ಸ್ ಗಳು
ಅಧಿಕ ಪೋಷಕಾಂಶವು ದೇಹವು ಮುಖ್ಯವಾಗಿ ಕಾರ್ಯನಿರ್ವಹಿಸಲು ಅತೀ ಅಗತ್ಯವಾಗಿರುವುದು. ಮನುಷ್ಯರಿಗೆ ಮೂರು ರೀತಿಯಲ್ಲಿ ಮ್ಯಾಕ್ರೋನ್ಯೂಟ್ರಿಯಂಟ್ಸ್ ಗಳು ಬೇಕಾಗುವುದು. ಇದರಲ್ಲಿ ಪ್ರಮುಖವಾಗಿ ಕಾರ್ಬ್ರೋಹೈಡ್ರೇಟ್ಸ್(ಸಕ್ಕರೆ), ಲಿಪಿಡ್ಸ್(ಕೊಬ್ಬು) ಮತ್ತು ಪ್ರೋಟೀನ್ ಗಳು. ನಾಲ್ಕು ಔನ್ಸ್ ಸಾರ್ಡಿನ್ ನಲ್ಲಿ 23 ಗ್ರಾಂ ಪ್ರೋಟೀನ್, 10.5 ಗ್ರಾಂ ಕೊಬ್ಬು ಮತ್ತು 1.4 ಗ್ರಾಂನಷ್ಟು ಪೂರ್ತಿ ಆರ್ದ್ರವಾದ ಕೊಬ್ಬು ಇದೆ. ಇದರಿಂದಾಗಿ ತೂಕ ಇಳಿಸಿಕೊಳ್ಳಲು ಬಯಸುವಂತವರಿಗೆ ಇದು ತುಂಬಾ ಒಳ್ಳೆಯ ಆಹಾರವಾಗಿದೆ. ಒಮೆಗಾ-3 ಕೊಬ್ಬಿನಾಮ್ಲವು ಕೊಲೆಸ್ಟ್ರಾಲ್ ನ್ನು ಆರೋಗ್ಯಕರ ಮಟ್ಟಕ್ಕೆ ತಗ್ಗಿಸುವುದು. ಇದರಿಂದ ಹೃದಯದ ವ್ಯವಸ್ಥೆಗೆ ಇದು ತುಂಬಾ ಮುಖ್ಯವಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು
ಸಾರ್ಡಿನ್ ಮೀನಿನಲ್ಲಿ ಇರುವಂತಹ ಕೊಬ್ಬು ಮತ್ತು ಪ್ರೋಟೀನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು. ಸಾರ್ಡಿನ್ ಮೀನಿನಲ್ಲಿ ಬ್ರೆಡ್ ನಲ್ಲಿರುವಂತಹ ಕಾರ್ಬ್ರೋಹೈಡ್ರೇಟ್ಸ್ ಗಳು ಇವೆ. ಇದು ರಕ್ತನಾಳಗಳಲ್ಲಿ ಸಕ್ಕರೆ ಬಿಡುಗಡೆ ನಿಧಾನಗೊಳಿಸುವುದು. ಕೊಬ್ಬು ಮತ್ತು ಪ್ರೋಟೀನ್ ಗಳಿಂದ ಸಮೃದ್ಧವಾಗಿರುವಂತಹ ಆಹಾರವು ಮಧುಮೇಹಿಗಳಿಗೆ ಮತ್ತು ಇನ್ಸುಲಿನ್ ಸಂಬಂಧಿತ ಸಮಸ್ಯೆಗಳಿಗೆ ಅತೀ ಮುಖ್ಯವಾಗಿದೆ.

ಮಾನಸಿಕ ಆರೋಗ್ಯವನ್ನು ಕಾಪಾಡುವುದು
ವ್ಯಕ್ತಿಯೊಬ್ಬನು ಆರೋಗ್ಯವಾಗಿರಲು ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವು ಅತೀ ಮುಖ್ಯವಾಗಿರುವುದು. ಸಾರ್ಡಿನ್ ಒಮೆಗಾ-3 ಕೊಬ್ಬಿನಾಮ್ಲದಿಂದ ಸಮೃದ್ಧವಾಗಿದೆ. ಮನಸ್ಥಿತಿ ಬದಲಾಗುವಂತಹ ಸಮಸ್ಯೆಗಳಾಗಿರುವ ಖಿನ್ನತೆ, ಆತಂಕ ಮತ್ತು ಬೈಪೋಲಾರ್ ಸಮಸ್ಯೆ ನಿವಾರಣೆ ಮಾಡುವುದು. ಮೆದುಳಿನಲ್ಲಿ ಶೇ.60ರಷ್ಟು ಕೊಬ್ಬಿನಾಮ್ಲಗಳು ಇವೆ ಮತ್ತು ಒಮೆಗಾ-3 ಕೊಬ್ಬಿನಾಮ್ಲವು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸರಿಯಾದ ಪ್ರಮಾಣದಲ್ಲಿರುವಂತಹ ಕೊಬ್ಬಿನಾಮ್ಲವು ಮಾನಸಿಕ ಆರೋಗ್ಯವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಒಮೆಗಾ-3 ಕೊಬ್ಬಿನಾಮ್ಲವು ದೇಹದಲ್ಲಿ ಕಡಿಮೆಯಾದರೆ ಖಿನ್ನತೆ ಮತ್ತು ಆತಂಕವು ಉಂಟಾಗುವುದು.

ಖನಿಜಾಂಶಗಳು ಮತ್ತು ವಿಟಮಿನ್ ಗಳು
ಸಾರ್ಡಿನ್ ಮೀನಿನಲ್ಲಿ ವಿಟಮಿನ್ ಬಿ12, ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಸೆಲೆನಿಯಂ ನಮ್ಮ ದೇಹಕ್ಕೆ ಬೇಕಾಗಿರುವಂತಹ ಕೆಲವು ಪ್ರಮುಖ ಪೋಷಕಾಂಶಗಳು. ಈ ಎಲ್ಲಾ ಪೋಷಕಾಂಶಗಳು ಸಾರ್ಡಿನ್ ಮೀನಿನಲ್ಲಿ ಲಭ್ಯವಾಗುವುದು. ಈ ಪೋಷಕಾಂಶಗಳು ನಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ವಿಟಮಿನ್ ಬಿ12 ನೀರಿನಲ್ಲಿ ಹೀರಿಕೊಳ್ಳಬಲ್ಲ ವಿಟಮಿನ್ ಆಗಿದ್ದು, ಇದು ಮೆದುಳು ಮತ್ತು ನರವ್ಯವಸ್ಥೆ ಕಾರ್ಯದ ಮೇಲೆ ಪರಿಣಾಮ ಬೀರುವುದು. ಇದು ನರಗಳು ಹಾಗೂ ಕೋಶಗಳು ಆರೋಗ್ಯವಾಗಿರಲು ನೆರವಾಗುವುದು ಮತ್ತು ಕೋಶಗಳಲ್ಲಿರುವ ಡಿಎನ್ಎ ಪ್ರಕ್ರಿಯೆಗೆ ನೆರವಾಗುವುದು. ಮೆಗಾಲೊಬ್ಲಾಸ್ಟಿಕ್ ಅನಿಮಿಯಾವನ್ನು ಇದು ತಡೆಯುವುದು. ಈ ಸಮಸ್ಯೆಯಿದ್ದರೆ ವ್ಯಕ್ತಿಯು ತುಂಬಾ ಆಯಾಸ ಮತ್ತು ಬಳಲುವರು. ಸೆಲೆನಿಯಂನ್ನು ಕೂಡ ಮಾಸ್ಟರ್ ಆ್ಯಂಟಿಆಕ್ಸಿಡೆಂಟ್ ಎಂದು ಕರೆಯಲಾಗುತ್ತದೆ. ಇದು ರ್ಯಾಡಿಕಲ್ ಹಾನಿಯನ್ನು ತಡೆಯುವುದು. ವಿವಿಧ ರೀತಿಯ ಕ್ಯಾನ್ಸರ್ ಗಳಾದ ಕರುಳು ಮತ್ತು ಪ್ರೊಸ್ಟೇಟ್ ಕ್ಯಾನ್ಸರ್ ನ್ನು ಇದು ತಡೆಯುವುದು.

ಸಾರ್ಡಿನ್ ಮೂಳೆಗೂ ಒಳ್ಳೆಯದು
ಇತರ ಕೆಲವೊಂದು ಖನಿಜಾಂಶಗಳಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪೋಸ್ಪರಸ್ ಮೂಳೆಗಳ ಆರೋಗ್ಯವನ್ನು ನಿರ್ವಹಿಸುವುದು. ಸಾರ್ಡಿನ್ ನಲ್ಲಿ ಈ ಮೂರು ಖನಿಜಾಂಶಗಳು ಇವೆ. ಇದರಿಂದ ಮೂಳೆಗಳಲ್ಲಿ ಖನಿಜಾಂಶವು ಕಡಿಮೆಯಾಗುವುದನ್ನು ತಡೆಯುವುದು ಮತ್ತು ಗಾಯಾಳು ಸಮಸ್ಯೆ ಬಳಿಕ ಇದು ಗುಣಪಡಿಸುವುದು.

ಹೃದಯಾಘಾತ ತಡೆಯುವುದು
ನಿಮ್ಮ ಆಹಾರ ಕ್ರಮದಲ್ಲಿ ಸಾರ್ಡಿನ್ ನ್ನು ಸೇರಿಸಿಕೊಳ್ಳುವುದರಿಂದ ಹೃದಯದ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಸಾರ್ಡಿನ್ ನಲ್ಲಿ ಇರುವಂತಹ ಕೊಬ್ಬು ಟ್ರೈಗ್ಲಿಸರೈಡ್ ಗಳು, ಎಚ್ ಡಿಎಲ್ ರಕ್ಷಣೆ ಹೆಚ್ಚಿಸುವುದು, ಉರಿಯೂತ ತಗ್ಗಿಸುವುದು ಮತ್ತು ಪ್ರಾಣಹಾನಿಗೆ ಕಾರಣವಾಗುವಂತಹ ಹೃದಯ ಸ್ತಂಭನ ಕಡಿಮೆಗೊಳಿಸುವುದು.

ತೂಕ ಕಳೆದುಕೊಳ್ಳಲು ಸಹಕಾರಿ
ಸಾರ್ಡಿನ್ ಮೀನುಗಳಲ್ಲಿ ಉನ್ನತ ಮಟ್ಟದ ಪ್ರೋಟೀನ್ ಗಳು ಇವೆ. ಮೂರು ಜೌನ್ಸ್ ಸಾರ್ಡಿನ್ ನಿಂದ ನಮ್ಮ ದೇಹಕ್ಕೆ 23 ಗ್ರಾಂನಷ್ಟು ಪ್ರೋಟೀನ್ ಲಭ್ಯವಾಗುವುದು. ಕಡಿಮೆ ಕ್ಯಾಲರಿ ಹೊಂದಿರುವಂತಹ ಪ್ರೋಟೀನ್ ತೂಕ ಇಳಿಸಲು ಬಯಸುವಂತಹ ಜನರಿಗೆ ತುಂಬಾ ನೆರವಾಗುವುದು. ಇದರಲ್ಲಿ ಉನ್ನತ ಮಟ್ಟದ ಪೋಷಕಾಂಶಗಳಿವೆ ಮತ್ತು ಇದು ಚಯಾಪಚಯ ಕ್ರಿಯೆ ನಿಯಂತ್ರಿಸುವುದು. ಈ ಮೀನು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು.

ಆರೋಗ್ಯಕಾರಿ ಚರ್ಮ
ಸಾರ್ಡಿನ್ ಮೀನು ದೇಹದಲ್ಲಿ ಕೋಶಗಳ ಮಟ್ಟದಲ್ಲಿ ನೆರವಾಗುವುದು. ಇದು ಚರ್ಮದಲ್ಲಿನ ಕೋಶಗಳನ್ನು ಸುಧಾರಣೆ ಮಾಡುವುದು ಮತ್ತು ಇದರ ಅಂಶಗಳನ್ನು ಪಡೆದುಕೊಂಡು ಚರ್ಮವನ್ನು ಯೌವನಯುತವಾಗಿಸುವುದು. ಇದು ಚರ್ಮದಲ್ಲಿರುವಂತಹ ಉರಿಯೂತ ಶಮನ ಮಾಡುವುದು ಮಾತ್ರವಲ್ಲದೆ, ವಿನ್ಯಾಸವನ್ನು ಕೂಡ ಸುಧಾರಣೆ ಮಾಡುವುದು.

ಅಕ್ಷಿಪಟಲದ ಅವನತಿ ಅಪಾಯ ತಗ್ಗಿಸುವುದು
ವಯಸ್ಸಿಗೆ ಸಂಬಂಧಿಸಿರುವಂತಹ ಅಕ್ಷಿಪಟಲದ ಅವನತಿಯನ್ನು ಇದು ತಡೆಯುವುದು. ಅಕ್ಷಿಪಟಲದ ಅವನತಿಯು 50ರ ಹರೆಯದ ಬಳಿಕ ಆರಂಭವಾಗುವುದು. ಇದರಿಂದಾಗಿ ದೃಷ್ಟಿ ಮಂದವಾಗುವುದು ಅಥವಾ ದೃಷ್ಟಿ ಕಳೆದುಕೊಳ್ಳಬಹುದು. ಸಾರ್ಡಿನ್ ಮೀನಿನ ಸೇವನೆ ಮಾಡುವುದರಿಂದ ಈ ಸಮಸ್ಯೆಯು ನಿವಾರಣೆಯಾಗುವುದು.