Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಎಚ್ ಐವಿ ಸೋಂಕು ದೇಹಕ್ಕೆ ತಗುಲಿಗಾದ ಕಂಡುಬರುವ ಏಳು ಲಕ್ಷಣಗಳು
ಎಚ್ ಐವಿ ಸೋಂಕು ತಗುಲುವುದು ಹೆಚ್ಚಾಗಿ ಹಲವು ಸಂಗಾತಿಗಳ ಜತೆಗೆ ಅಸುರಕ್ಷಿತ ಲೈಂಗಿಕ ಕ್ರಿಯೆ ಹಾಗೂ ಒಬ್ಬರು ಬಳಸಿದ ಸಿರಿಂಜ್ ನ್ನು ಮತ್ತೊಬ್ಬರು ಬಳಸುವ ಮೂಲಕ. ಮಾದಕದ್ರವ್ಯ ಸೇವನೆ ವೇಳೆ ಸಿರಿಂಜ್ ಗಳನ್ನು ಇದೇ ರೀತಿ ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ಎಚ್ ಐವಿ ಬರುವ ಸಾಧ್ಯತೆಯು ಅಧಿಕವಾಗಿರುವುದು. ಆದರೆ ಎಚ್ ಐವಿ ಸೋಂಕು ಬಂದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ನೀವು ಅಸುರಕ್ಷಿತ ಲೈಂಗಿಕ ಜೀವನ ನಡೆಸುತ್ತಿದ್ದರೆ ಆಗ ನಿಮಗೆ ಎಚ್ ಐವಿ ಬರುವ ಸಾಧ್ಯತೆಗಳು ಇವೆ. ಇದನ್ನು ನೀವು ಪರೀಕ್ಷಿಸಿಕೊಳ್ಳುವುದು ಅತೀ ಅಗತ್ಯ. ಹೆಚ್ಚಿನ ಜನರಿಗೆ ಹೆಚ್ ಐವಿ ಸೋಂಕು ಬಂದ ವೇಳೆ ಜ್ವರದ ಅನುಭವವಾಗುವುದು. ಇದು ನಮ್ಮ ದೇಹವು ವೈರಸ್ ವಿರುದ್ಧ ಹೋರಾಡುವ ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ಇದನ್ನು ಸೆರೊಕನ್ವರ್ಷನ್ ಸಮಯವೆಂದು ಕರೆಯಲಾಗುತ್ತದೆ.

ಎಚ್ ಐವಿ ಸೋಂಕಿನ ಲಕ್ಷಣಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಎಚ್ ಐವಿ ಸೋಂಕಿನ ಮೊದಲ ಲಕ್ಷಣವು ದೇಹದೊಳಗೆ ಸೋಂಕು ಒಗ್ಗಿಕೊಂಡ 1-2 ತಿಂಗಳಲ್ಲೇ ಕಾಣಿಸುವುದು. ಈ ವೈರಸ್ ವಿರುದ್ಧ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಹೋರಾಡುವ ವೇಳೆ ತೀವ್ರ ಜ್ವರ ಕಾಣಿಸಿಕೊಳ್ಳುವುದು. ಈ ಮೂಲಕ ಪರೀಕ್ಷೆ ಮಾಡಿಕೊಂಡರೆ ಎಚ್ ಐವಿ ವೈರಸ್ ನ್ನು ಪತ್ತೆ ಮಾಡಬಹುದು. ಈ ಲೇಖನದಲ್ಲಿ ಎಚ್ ಐವಿ ಸೋಂಕಿನ ಕೆಲವು ಲಕ್ಷಣಗಳ ಬಗ್ಗೆ ತಿಳಿಯುವ.

ಮೊದಲ ಲಕ್ಷಣ: ತೀವ್ರ ಜ್ವರ
ಎಚ್ ಐವಿಯ ಮೊದಲ ಲಕ್ಷಣವೆಂದರೆ ತೀವ್ರವಾಗಿ ಕಾಡುವಂತಹ ಜ್ವರ. ಇದರೊಂದಿಗೆ ಕೆಲವು ಇತರ ಲಕ್ಷಣಗಳಾಗಿರುವ ನಿಶ್ಯಕ್ತಿ, ದುಗ್ಡರಸ ಗ್ರಂಥಿ ಊತ ಮತ್ತು ಗಂಟಲಿನ ಊತ ಕಾಣಿಸುವುದು. ಈ ವೇಳೆ ವೈರಸ್ ರಕ್ತನಾಳದೊಳಗೆ ಪ್ರವೇಶ ಮಾಡಿ ದೊಡ್ಡ ಮಟ್ಟದಲ್ಲಿ ಬೆಳೆಯುವುದು. ಇದು ನಡೆದಾಗ ಪ್ರತಿರೋಧಕ ವ್ಯವಸ್ಥೆಯು ಉರಿಯೂತದ ಪ್ರತಿಕ್ರಿಯೆಗೆ ಒಳಗಾಗುವುದು.

ಎರಡನೇ ಲಕ್ಷಣ: ನಿಶ್ಯಕ್ತಿ ಮತ್ತು ತಲೆನೋವು
ಪ್ರತಿರೋಧಕ ವ್ಯವಸ್ಥೆಯಲ್ಲಿ ಉಂಟಾಗಿರುವಂತಹ ಉರಿಯೂತದಿಂದಾಗಿ ನಿಮ್ಮ ದೇಹವು ನಿಶ್ಯಕ್ತಿ ಮತ್ತು ಆಯಾಸದಿಂದ ಬಳಲಬಹುದು. ಕೆಲವೊಂದು ಸಲ ನಡೆಯುವಾಗ ಹೆಜ್ಜೆ ತಪ್ಪಿದಂತೆ ಮತ್ತು ಉಸಿರಾಡಲು ಸಮಸ್ಯೆಯಾಗಹುದು. ನಿಶ್ಯಕ್ತಿಯು ಎಚ್ ಐವಿಯ ಆರಂಭಿಕ ಅಥವಾ ಅಂತಿಮ ಹಂತದ ಲಕ್ಷಣವಾಗಿರಬಹುದು.

ಮೂರನೇ ಲಕ್ಷಣ: ದುಗ್ದಗ್ರಂಥಿಗಳಲ್ಲಿ ಊತ, ಸ್ನಾಯುಗಳಲ್ಲಿ ಸೆಳೆತ ಮತ್ತು ಗಂಟು ನೋವು
ದುಗ್ದ ಗ್ರಂಥಿಗಳು ದೇಹದ ಪ್ರತಿರೋಧಕ ವ್ಯವಸ್ಥೆಯ ಒಂದು ಭಾಗವಾಗಿದೆ ಮತ್ತು ಇದು ರಕ್ತಕ್ಕೆ ಬ್ಯಾಕ್ಟೀರಿಯಾ ಮತ್ತು ವೈರಸ್ ದಾಳಿ ಮಾಡದಂತೆ ರಕ್ಷಣೆ ನೀಡುತ್ತದೆ. ಸೋಂಕು ಕಾಣಿಸಿಕೊಂಡ ವೇಳೆ ಇದರಲ್ಲಿ ಉರಿಯೂತ ಉಂಟಾಗುವುದು. ಹೆಚ್ಚಿನ ದುಗ್ದ ಗ್ರಂಥಿಗಳು ಕಂಕುಳ, ತೊಡೆಸಂಧು ಮತ್ತು ಕುತ್ತಿಗೆಯಲ್ಲಿ ಇರುವುದು. ಇದರ ಪರಿಣಾವಾಗಿ ಈ ಭಾಗಗಳಲ್ಲಿ ನೋವು ಹಾಗೂ ಸೆಳೆತ ಕಂಡುಬರುವುದು.

ನಾಲ್ಕನೇ ಲಕ್ಷಣ: ಚರ್ಮದ ಗುಳ್ಳೆಗಳು
ಎಚ್ ಐವಿ ಸೋಂಕಿನ ಆರಂಭಿಕ ಅಥವಾ ಅಂತಿಮ ಹಂತದಲ್ಲಿ ಚರ್ಮದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಕೆಲವೊಂದು ಸಲ ಗುಳ್ಳೆಗಳು ಬಿಸಿಮುಟ್ಟಿದಾಗ ಇರುವಂತಹ ಗುಳ್ಳೆಗಳಂತೆ ಇರುವುದು. ಇದು ತುರಿಕೆ ಉಂಟು ಮಾಡಿ ಗುಲಾಬಿ ಬಣ್ಣದಲ್ಲಿರುವುದು.

ಐದನೇ ಲಕ್ಷಣ: ವಾಕರಿಕೆ, ವಾಂತಿ ಮತ್ತು ಭೇದಿ
ಎಚ್ ಐವಿ ಸೋಂಕು ದೇಹವನ್ನು ಪ್ರವೇಶಿಸಿದ ಆರಂಭದಲ್ಲಿ ಕೆಲವರಿಗೆ ಜೀರ್ಣಕ್ರಿಯೆ ವ್ಯವಸ್ಥೆಯ ಸಮಸ್ಯೆಯು ಕಾಣಿಸುವುದು. ಅದಾಗ್ಯೂ, ಎಚ್ ಐವಿ ಸೋಂಕಿನ ಅಂತಿಮ ಹಂತದಲ್ಲಿ ವಾಕರಿಕೆ, ವಾಂತಿ ಮತ್ತು ಭೇದಿ ಕಂಡುಬರುವುದು. ಇದು ಕೆಲವೊಂದು ಅವಕಾಶವಾದಿ ಸೋಂಕಿನಿಂದಾಗಿ ಕಂಡುಬರುವುದು. ಈ ವೇಳೆ ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳುವುದು ಅತೀ ಅಗತ್ಯ. ಭೇದಿಯು ನಿಲ್ಲದೆ ಇದ್ದರೆ ಮತ್ತು ಸಾಮಾನ್ಯ ಚಿಕಿತ್ಸೆಗೆ ಇದು ಸ್ಪಂದಿಸದೆ ಇದ್ದರೆ ಇದು ಎಚ್ ಐವಿ ಸೋಂಕಾಗಿರಬಹುದು.

ಆರನೇ ಲಕ್ಷಣ: ಗಂಟಲು ನೋವು ಮತ್ತು ಒಣ ಕೆಮ್ಮು
ತೀವ್ರ ರೀತಿಯಲ್ಲಿ ಕಾಡುವ ಒಣ ಕೆಮ್ಮು ವಾರಗಳು ಹಾಗೂ ತಿಂಗಳುಗಳ ಕಾಲವಿದ್ದರೆ ಆಗ ಇದನ್ನು ಎಚ್ ಐವಿ ರೋಗಿಯ ಲಕ್ಷಣವೆಂದು ಹೇಳಬಹುದಾಗಿದೆ.

ಏಳನೇ ಲಕ್ಷಣ: ರಾತ್ರಿ ಬೆವರುವುದು
ಎಚ್ ಐವಿಯ ಆರಂಭಿಕ ಹಂತದಲ್ಲಿ ಕೆಲವು ಜನರಿಗೆ ರಾತ್ರಿ ವೇಳೆ ಬೆವರಲು ಆರಂಭವಾಗಬಹುದು. ಸೋಂಕು ತೀವ್ರ ರೂಪ ಪಡೆದಾಗ ಇದು ಮತ್ತಷ್ಟು ಹೆಚ್ಚಾಗಬಹುದು. ಇದು ಸೆಕೆ ಅಥವಾ ವ್ಯಾಯಾಮಕ್ಕೆ ಸಂಬಂಧಿಸಿದ್ದಲ್ಲ.
ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸರಿಯಾದ ಕ್ರಮದಲ್ಲಿ ಎಚ್ ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅಗತ್ಯ. ನೀವು ಹಲವಾರು ಸಂಗಾತಿಗಳೊಂದಿಗೆ ಸೆಕ್ಸ್ ನಡೆಸಿದ್ದರೆ ಆಗ ಖಂಡಿತವಾಗಿಯೂ ನೀವು ಪರೀಕ್ಷೆ ಮಾಡಿಸಿಕೊಳ್ಳಿ. ಬೇಗನೆ ಪರೀಕ್ಷೆ ಮಾಡಿಸಿಕೊಂಡು ಎಚ್ ಐವಿ ಪತ್ತೆಯಾದರೆ ಇದನ್ನು ನಿಯಂತ್ರಣದಲ್ಲಿಟ್ಟುಕೊಂಡು ಜೀವನ ಸಾಗಿಸಬಹುದು.



Click it and Unblock the Notifications