ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುತ್ತಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ!

Posted By: Divya pandit Pandit
Subscribe to Boldsky

ಮನುಷ್ಯನ ಎಂದ ಮೇಲೆ ಅನೇಕ ರೋಗಗಳು ಬರುತ್ತವೆ. ಕೆಲವು ಕಾಯಿಲೆಗಳು ದೊಡ್ಡ ಪ್ರಮಾಣದ್ದಾಗಿದ್ದರೆ, ಇನ್ನೂ ಕೆಲವು ಸಣ್ಣ ಪುಟ್ಟ ಕಾಯಿಲೆಗಳಾಗಿರುತ್ತವೆ. ಸಣ್ಣಪುಟ್ಟ ಕಾಯಿಲೆಗಳಿಗೆ ಮನೆ ಔಷಧಿಯ ಮೂಲಕವೇ ಕಡಿಮೆ ಮಾಡಬಹುದು. ಇನ್ನೂ ಕೆಲವು ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲೇ ಬೇಕಾಗುವುದು. ಕೆಲವೊಮ್ಮೆ ಸಣ್ಣ ಕಾಯಿಲೆ ಎಂದು ನಿರ್ಲಕ್ಷ ಮಾಡಿದರೆ ಅದು ಗಂಭೀರ ಸಮಸ್ಯೆಗಳಾಗಿ ಪರಿವರ್ತನೆ ಹೊಂದಬಹುದು.

ನಮ್ಮ ಶರೀರವು ಆರೋಗ್ಯವಾಗಿ ಇರಬೇಕು ಎಂದಾದರೆ ಮೊದಲು ನಾವು ಸೇವಿಸುವ ಆಹಾರ ಹಾಗೂ ನಮ್ಮ ಹವ್ಯಾಸಗಳು ಆರೋಗ್ಯ ಪೂರ್ಣವಾಗಿರಬೇಕು. ಇಲ್ಲವಾದರೆ ಪದೇ ಪದೇ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುತ್ತವೆ. ಸಣ್ಣ ರೋಗ ಎಂದು ಎಂದಿಗೂ ಅಸಡ್ಡೆ ತೋರಬಾರದು. ಸಮಸ್ಯೆಯೂ ಚಿಕ್ಕದಾಗಿದ್ದರೂ ಗುಣಮುಖವಾಗುತ್ತಿಲ್ಲ ಎಂದಾದಾಗ ಮೊದಲು ವೈದ್ಯರಲ್ಲಿ ಪರೀಕ್ಷಿಸಬೇಕು. ಕೆಲವೊಮ್ಮೆ ಸಣ್ಣ ಸಮಸ್ಯೆಯು ಶಸ್ತ್ರ ಚಿಕಿತ್ಸೆ ಮಾಡುವಂತಹ ಸಮಸ್ಯೆಗಳನ್ನು ತಂದೊಡ್ಡುವುದು.

ಅಂತಹ ಆರೋಗ್ಯ ಸಮಸ್ಯೆಗಳಲ್ಲಿ ಮೂತ್ರದಲ್ಲಿ ರಕ್ತ ಸ್ರಾವವೂ ಒಂದು. ಮೂತ್ರದ ಸಮಸ್ಯೆಯು ಅನೇಕ ಬಗೆಯ ಬಳಲುವಿಕೆಗೆ ಕಾರಣವಾಗಬಹುದು. ಅಲ್ಪ ಪ್ರಮಾಣದ ರಕ್ತಸ್ರಾವವು ಮೂತ್ರದ ಮೂಲಕ ಹೋಗುತ್ತಿದೆ ಎಂದಾದರೆ ಬಹುಬೇಗ ಅರಿವಿಗೆ ಬರದು. ರೋಗವು ಬರಿ ಕಣ್ಣಿಗೆ ಗೋಚರವಾಗದೇ ಇದ್ದಾಗ ಸಮಸ್ಯೆ ಉಲ್ಭಣವಾಗುತ್ತಲೇ ಸಾಗುತ್ತದೆ. ಹಾಗೊಮ್ಮೆ ಮೂತ್ರದಲ್ಲಿ ರಕ್ತದ ಅಂಶ ಕಾಣಿಸಿಕೊಳ್ಳುತ್ತಿದೆ ಎಂದಾಗ ತಪಾಸಣೆಗೆ ಒಳಗಾಗಬೇಕು. ಮೂತ್ರದಲ್ಲಿ ರಕ್ತವು ಏಕೆ ಕಾಣಿಸಿಕೊಳ್ಳುತ್ತದೆ? ಇದರ ಪರಿಣಾಮ ಏನಾಗುವುದು? ಇದಕ್ಕೆ ಕಾರಣವೇನು ಎನ್ನುವುದನ್ನು ತಿಳಿದು ಕೊಳ್ಳಲು ಲೇಖನದ ಮುಂದಿನ ಭಾಗದಲ್ಲಿರುವ ವಿವರಣೆಯನ್ನು ಅರಿಯಿರಿ..... 

ಇದಕ್ಕೆ ಹೆಮಚ್ಯೂರಿಯಾ (hematuria) ಎಂದು ಕರೆಯುತ್ತಾರೆ

ಇದಕ್ಕೆ ಹೆಮಚ್ಯೂರಿಯಾ (hematuria) ಎಂದು ಕರೆಯುತ್ತಾರೆ

ಈ ಸ್ಥಿತಿಗೆ ಹೆಮಚ್ಯೂರಿಯಾ (hematuria) ಎಂದು ಕರೆಯುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಪ್ರಮಾಣ ತೀರಾ ಕಡಿಮೆಯಾಗಿದ್ದು ಬರಿಗಣ್ಣಿಗೆ ಗೋಚರಿಸುವುದಿಲ್ಲ. ಬರಿಗಣ್ಣಿಗೆ ಗೋಚರಿಸುವವರೆಗೂ ಈ ಸ್ಥಿತಿಯನ್ನು microscopic hematuria ಎಂದು ಕರೆಯುತ್ತಾರೆ. ಅಲ್ಲಿಯವರೆಗೆ ಈ ಕಣಗಳನ್ನು ಸೂಕ್ಷ್ಮದರ್ಶಕದಲ್ಲಿ ಮಾತ್ರ ಸ್ಪಷ್ಟವಾಗಿ ಕಾಣಲು ಸಾಧ್ಯ.

ಮೂತ್ರದ ಸೋಂಕು

ಮೂತ್ರದ ಸೋಂಕು

ಮೂತ್ರದಲ್ಲಿ ರಕ್ತ ಸ್ರಾವದ ಸಮಸ್ಯೆಯು ಮಹಿಳೆಯರಲ್ಲಿ ಅಧಿಕವಾಗಿರುತ್ತದೆ. ಮೂತ್ರದ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿದೆ ಎಂದಾದರೆ ಇತರ ರೋಗದ ಲಕ್ಷಣಗಳಾಗಿರುತ್ತವೆ. ಯುಟಿಐ ಎಂದು ಕರೆಯಲಾಗುವ ಮೂತ್ರ ಸೋಂಕಿನಿಂದ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸಮಸ್ಯೆ ಎದುರಾದಾಗ ಮೊದಲು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು.

ಮೂತ್ರಪಿಂಡದಲ್ಲಿ ಕಲ್ಲು

ಮೂತ್ರಪಿಂಡದಲ್ಲಿ ಕಲ್ಲು

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳಲು ಇನ್ನೊಂದು ಕಾರಣವೆಂದರೆ ಮೂತ್ರ ಪಿಂಡದಲ್ಲಿ ಕಲ್ಲು ಇರುವುದಾಗಿರುತ್ತದೆ. ಮೂತ್ರ ಪಿಂಡದಲ್ಲಿ ಕಲ್ಲು ಸಂಗ್ರಹವಾದಾಗ ನೈಸರ್ಗಿಕವಾಗಿ ಮೂತ್ರ ವಿಸರ್ಜನೆಗೆ ತೊಂದರೆ ಉಂಟಾಗುವುದು. ಪ್ರಾಥಮಿಕ ಹಂತದಲ್ಲಿದ್ದರೆ ಈ ಸಮಸ್ಯೆಗೆ ಔಷಧದ ಮೂಲಕ ಗುಣ ಪಡಿಸಬಹುದು. ಸಮಸ್ಯೆ ಗಂಭೀರವಾಗಿದ್ದರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ.

ಕಿಡ್ನಿ ಅಥವಾ ಗಾಲ್ ಬ್ಲೇಡರ್ ನಲ್ಲಿರುವ ಗಡ್ಡೆಗಳುದಲ್ಲಿ ಕಲ್ಲು

ಕಿಡ್ನಿ ಅಥವಾ ಗಾಲ್ ಬ್ಲೇಡರ್ ನಲ್ಲಿರುವ ಗಡ್ಡೆಗಳುದಲ್ಲಿ ಕಲ್ಲು

ಕಿಡ್ನಿ ಅಥವಾ ಗಾಲ್ ಬ್ಲೇಡರ್‌ಲ್ಲಿ ಗಡ್ಡೆಗಳಿದ್ದರೆ ಮೂತ್ರದಲ್ಲಿ ತೀವ್ರವಾದ ರಕ್ತ ಕಾಣಿಸಿಕೊಳ್ಳುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಸೈಟೊಲೊಜಿ ಎಂದು ಕರೆಯುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆಯ ಮೂಲಕವೇ ಗುಣಪಡಿಸ ಬೇಕಾಗುವುದು.

ಗ್ಲೊಮೆಯುಲೊನೆಫ್ರಿಟಿಸ್ ಅಥವಾ ಗ್ಲೊಮೆರುಲರ್ ನೆಫ್ರಿಟಿಸ್

ಗ್ಲೊಮೆಯುಲೊನೆಫ್ರಿಟಿಸ್ ಅಥವಾ ಗ್ಲೊಮೆರುಲರ್ ನೆಫ್ರಿಟಿಸ್

ಸಾಮಾನ್ಯವಾಗಿ ಇದು ಮೂತ್ರ ಮತ್ತು ಮಲದಲ್ಲಿ ಕಾಣಿಸಿಕೊಳ್ಳುವ ಮಾರಾಣಾಂತಿಕ ಕಾಯಿಲೆಯ ಚಿಹ್ನೆಯಾಗಿರುತ್ತದೆ. ಇದು ಅಬಾಲ ವೃದ್ಧರಾದಿಯಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ವಯಸ್ಕರಲ್ಲಿ ಇದುಕಾಣಿಸಿಕೊಳ್ಳುತ್ತದೆ. ನೆಫ್ರಿಟಿಸ್ ಎಂಬ ಮೂತ್ರದ ಉರಿಯೂತದ ಕಾಯಿಲೆ ಬಂದಿರುವ ಜನರಲ್ಲಿ ಇದು ಕಾಣಿಸಿಕೊಳ್ಳುತ್ತದೆ.

ಸಿಸ್ಟಿಕ್ ಬೆಳವಣಿಗೆ

ಸಿಸ್ಟಿಕ್ ಬೆಳವಣಿಗೆ

ಸಿಸ್ಟಿಕ್ ಬೆಳವಣಿಗೆಯ ಸಮಸ್ಯೆಯು ಮಹಿಳೆಯರಲ್ಲಿ ಸಾಮಾನ್ಯವಾದ ಸಮಸ್ಯೆಗಳಾಗಿರುತ್ತವೆ. ಈ ಸಮಸ್ಯೆ ಇರುವಾಗ ಮೂತ್ರದಲ್ಲಿ ರಕ್ತ ಹಾಗೂ ವಿಪರೀತವಾದ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಅಧಿಕ ನೋವುಂಟಾಗುವುದು. ಅಲ್ಲದೆ ಮೂತ್ರದಲ್ಲಿ ಅಧಿಕ ರಕ್ತಸ್ರಾವ ಉಂಟಾಗುವುದು. ಈ ಎಲ್ಲಾ ಕಾರಣಗಳು ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ರಕ್ತಸ್ರಾವನ್ನು ಉಂಟುಮಾಡುವುದು. ಈ ಸಮಸ್ಯೆಗಳು ಕೆಲವೊಮ್ಮೆ ನಮ್ಮ ದೈನಂದಿನ ಅನುಚಿತ ಆಹಾರ ಕ್ರಮಗಳಿಂದ ಹಾಗೂ ಆನುವಂಶಿಕ ಕಾರಣಗಳಿಂದಲೂ ಕಾಣಿಸಿಕೊಳ್ಳುವುದು. ಇದಲ್ಲದೆ ಸಿಕಲ್ ಸೆಲ್ ಡಿಸೀಸ್, ಹೆಮಟುರಿಯಾ ಮತ್ತು ಅಸಹಜ ಮುಟ್ಟಿನ ಸಮಸ್ಯೆಗಳಿಂದಲೂ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸಮಸ್ಯೆ ನಿಮ್ಮ ಗಮನಕ್ಕೆ ಬಂದ ತಕ್ಷಣ ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ಪಡೆದುಕೊಳ್ಳಲು ಮರೆಯದಿರಿ.

ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್‌ನ ಲಕ್ಷಣ ಕೂಡ ಆಗಿರಬಹುದು!

ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್‌ನ ಲಕ್ಷಣ ಕೂಡ ಆಗಿರಬಹುದು!

ಮೂತ್ರದ ಬಣ್ಣ ಬದಲಾದರೆ ಕಾಳಜಿಯ ವಿಷಯವೇ ಹೌದು. ಆದರೆ ಈ ಬಣ್ಣ ಕೆಂಪಗಾಗಿದ್ದರೆ ಅಥವಾ ಹೆಪ್ಪುಗಟ್ಟಿರುವ ರಕ್ತದ ತುಣುಕುಗಳು ಮೂತ್ರದಲ್ಲಿ ಕಂಡುಬಂದರೆ ಹಾಗೂ ಮೂತ್ರದ ವಾಸನೆ ಇತರ ಸಮದಂತಿಲ್ಲದೇ ಬೇರೆಯೇ ಆಗಿದ್ದರೆ ಇದು ನಿಮ್ಮ ಆರೋಗ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತಿರುವ ಸಂಕೇತವಾಗಿದೆ. ಈ ಬಗ್ಗೆ ಅಲಕ್ಷ್ಯ ಸಲ್ಲದು. ತಕ್ಷಣ ವೈದ್ಯರಲ್ಲಿ ಭೇಟಿ ನೀಡಿ ಸೂಕ್ತ ಪರೀಕ್ಷೆಗಳಿಗೆ ಒಳಗಾಗಿ ಕಾರಣವನ್ನು ಪತ್ತೆ ಹಚ್ಚಿಕೊಳ್ಳಬೇಕು. ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡಂತೆ ಮೂತ್ರದಲ್ಲಿ ರಕ್ತ ಕಂಡುಬರುವುದು ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್‌ನ ಮುಖ್ಯ ಲಕ್ಷಣವಾಗಿದೆ.

ಇಂತಹ ಲಕ್ಷಣಗಳು ಕಂಡುಬಂದರೆ ಆದಷ್ಟು ಬೇಗ ವೈದ್ಯರನ್ನು ಕಾಣಿ

ಇಂತಹ ಲಕ್ಷಣಗಳು ಕಂಡುಬಂದರೆ ಆದಷ್ಟು ಬೇಗ ವೈದ್ಯರನ್ನು ಕಾಣಿ

ಒಂದು ವೇಳೆ ಮೂತ್ರ ವಿಸರ್ಜಿಸುವ ವೇಳೆ ಉರಿ ಅಥವಾ ನೋವು ಕಂಡುಬರುವುದು, ವಾಕರಿಕೆ, ಜ್ವರ, ವಾಂತಿ, ತೂಕದಲ್ಲಿ ಇಳಿಕೆ, ಸಮಾಗಮದ ಸಮಯದಲ್ಲಿ ನೋವು, ಮೂತ್ರ ವಿಸರ್ಜಿಸಲು ಸುಲಭವಾಗಿ ಸಾಧ್ಯವಾಗದೇ ಹೆಚ್ಚಿನ ಒತ್ತಡ ಹೇರಬೇಕಾಗಿ ಬರುವುದು ಮೊದಲಾದವು ಮೂತ್ರದಲ್ಲಿ ರಕ್ತ ಹೆಪ್ಪುಗಟ್ಟಿರುವ ಸಂಕೇತಗಳನ್ನು ಸೂಚಿಸುತ್ತವೆ. ತಕ್ಷಣವೇ ವೈದ್ಯರನ್ನು ಕಂಡು ಪರೀಕ್ಷೆಗೆ ಒಳಪಡುವುದು ಅಗತ್ಯ.

English summary

What are the reason Blood in Your Urine Mean?

Getting the right treatment for urine in blood is often difficult, if you do not have the idea of the reasons for blood in urine. Since these problems are very common among both men and women, there can be no better remedy than knowing about the reasons for blood in urine or stool. Following are some of the reasons for blood in urine and stool, which you should be aware about..