March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ!

ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 20 (March 20 Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಈ ದಿನ ಮಿಶ್ರಫಲವಿದೆ. ನಿಮ್ಮ ಹಲವು ವಿಚಾರಗಳಲ್ಲಿ ಧನಾತ್ಮಕ ವಿಚಾರವಿದ್ದರೂ ದಿನದ ಅಂತ್ಯದಲ್ಲಿ ಚಿಂತೆ ತರುವ ಘಟನೆಗಳು ನಡೆಯಲಿದೆ. ಅನೇಕರಲ್ಲಿ ಈ ದಿನವು ದೊಡ್ಡ ಕೆಲಸಗಳಲ್ಲಿ ಭಾಗಿಯಾಗುವ ಸಮಯ ಆಗಿರಲಿದೆ.

ವೃಷಭ ರಾಶಿ

ವೃಷಭ ರಾಸಿಯ ಜನರಲ್ಲಿ ಇಂದು ಸಮಸ್ಯೆಗಳಿಗೆ ಪರಿಹಾರ ಪಡೆಯವ ಸಮಯ ಆಗಿರಲಿದೆ. ಅನೇಕರು ಈ ದಿನ ಪ್ರಯಾಣಗಳ ಮಾಡುವಿರಿ. ದೇವಾಲಯ ಭೇಟಿಯ ಅವಕಾಶವನ್ನು ಪಡೆಯಬಹುದು. ವಾಹನ ಸಂಬಂಧಿತ ವಿಚಾರವಾಗಿ ಎಚ್ಚರದಿಂದ ಇರುವುದು ಉತ್ತಮ.

March-20-2026-daily-horoscope-

ಮಿಥುನ ರಾಶಿ

ಮಿಥುನ ರಾಶಿಯ ಜನರಲ್ಲಿ ಸಮಸ್ಯೆಗಳಿವೆ. ಆರ್ಥಿಕ ವಿಚಾರಗಳಲ್ಲಿ ನೀವು ಹಲವು ಸಮಸ್ಯೆಗಳ ಎದುರಿಸಬೇಕಾಗಬಹುದು. ನಿಮ್ಮ ಪ್ರಾಮಾಣಿಕ ಪ್ರಯತ್ನಗಳಲ್ಲಿ ಶುಭವಿದೆ. ನಿಮ್ಮ ಹಲವು ವಿಚಾರಗಳನ್ನು ಆಪ್ತರಲ್ಲಿ ಹಂಚಿಕೊಳ್ಳಲಿದ್ದೀರಿ. ದಾಂಪತ್ಯ ವಿಚಾರಗಳಲ್ಲಿ ಶುಭವಿದೆ.

ಕರ್ಕ ರಾಶಿ

ಕರ್ಕ ರಾಶಿ ಜನರಿಗೆ ಈ ದಿನ ಪ್ರಯಾಣಗಳ ಮಾಡುವ ದಿನ. ನಿಮ್ಮ ಹಲವು ವಿಚಾರದಲ್ಲಿ ಧನಾತ್ಮಕ ಫಲಿತಾಂಶವಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಿದೆ. ಮಾರುಕಟ್ಟೆ ಸಂಬಂಧಿತ ವಿಚಾರದಲ್ಲಿ ವ್ಯವಹಾರ ನಡೆಸುವ ಮಂದಿಗೆ ಉತ್ತಮ ದಿನ.

ಸಿಂಹ ರಾಶಿ

ಸಿಂಹ ರಾಶಿ ಜನರಿಗೆ ಮಿಶ್ರಫಲ ಅನುಭವಿಸುವ ದಿನ. ಆದಾಯಗಳಿಸುವ ಬಯಕೆಯಲ್ಲಿ ಹಣ ಕಳೆದುಕೊಳ್ಳುವ ಪ್ರಯತ್ನ ಮಾಡಬೇಡಿ. ಹಿರಿಯರ ಮಾತಿನಿಂದ ನೋವು ಉಂಟಾಗಬಹುದು. ಆಪ್ತರೊಬ್ಬರ ಭೇಟಿಯು ಸಂತಸ ತರಲಿದೆ. ಮನೆಯಲ್ಲಿ ಶುಭ ವಾತಾವರಣ ಇರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಈ ದಿನ ಉತ್ತಮ. ನಿಮ್ಮ ಹಣಕಾಸಿನ ವಿಚಾರದಲ್ಲಿ ಅನೇಕ ರೀತಿಯ ಫಲಗಳ ಅನುಭವಿಸಬಹುದು. ಪ್ರೇಮಿಗಳಿಗೆ ಶುಭವಾಗಲಿದೆ. ಮನೆಯ ದೊಡ್ಡ ಆರ್ಥಿಕ ವಿಚಾರವೊಂದರಲ್ಲಿ ಶುಭವಿದೆ. ಪ್ರಯಾಣ ಮಾಡುವಾಗ ಎಚ್ಚರವಿಡಿ.

ತುಲಾ ರಾಶಿ

ತುಲಾ ರಾಶಿಯ ಜನರು ಈ ದಿನ ಉತ್ತಮ ಫಲ ನೋಡಬಹುದು. ನಿಮ್ಮ ಹಣಗಳಿಕೆಯ ಹೊಸ ಮೂಲ ಹುಡುಕಬಹುದು. ಹಿಂದಿನ ತಪ್ಪುಗಳಿಂದ ಕಲಿತ ಪಾಠವು ನಿಮ್ಮನ್ನು ನಷ್ಟದಿಂದ ಪಾರು ಮಾಡಲಿದೆ. ವಾಹನ ವಿಚಾರದಲ್ಲಿ ಎಚ್ಚರ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಲ್ಲಿ ಈ ದಿನ ಸಮಸ್ಯೆಗಳ ನೋಡಬಹುದು. ಮಕ್ಕಳ ಕುರಿತಾಗಿದ್ದ ಚಿಂತೆ ಹೆಚ್ಚಾಗಬಹುದು. ಎಲ್ಲಿಯಾದರು ನಿಮ್ಮ ಹಣ ಸಿಲುಕಿದ್ದರೆ ಅದನ್ನು ಪಡೆಯುವ ಪ್ರಯತ್ನ ಫಲ ನೀಡದೆ ಇರಬಹುದು. ಆರೋಗ್ಯದ ಕಡೆ ಗಮನವಿಡಿ.

ಧನು ರಾಶಿ

ಧನು ರಾಶಿಯ ಜನರಿಗೆ ಮಿಶ್ರಫಲ. ದಿನದ ಆರಂಭದಿಂದಲೂ ನಿಮ್ಮ ಹಣಕಾಸಿನ ಕುರಿತಾದ ಚಿಂತೆ ಇರಲಿದೆ. ನಿಮ್ಮಿಂದ ನಡೆಯಬೇಕಿದ್ದ ಕೆಲಸವೊಂದನ್ನು ಮುಂದೂಡುವಿರಿ. ಸಾಮಾಜಿಕ ಪ್ರಗತಿಗೆ ಅವಕಾಶಗಳಿವೆ.

ಮಕರ ರಾಶಿ

ಮಕರ ರಾಶಿ ಜನರಿಗೆ ಅನುಕೂಲಕರ ದಿನ. ಈ ದಿನ ನೀವು ಮಾಡಬೇಕಿದ್ದ ಕೆಲಸಗಳಲ್ಲಿ ಶುಭವಿದೆ. ಪ್ರಮಾಣಿಕ ಪ್ರಯತ್ನಗಳನ್ನು ಮಾಡುವುದು ಹೊಸ ಅವಕಾಶಗಳಿಗೆ ಕಾರಣವಾಗಲಿದೆ. ಪ್ರಭಾವಿ ವ್ಯಕ್ತಿಯ ಭೇಟಿಯಾಗಬಹುದು.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಇಂದು ಶುಭಫಲ. ನಿಮ್ಮ ಹಣದ ವಿಚಾರವಾಗಿ ದೊಡ್ಡ ಕೆಲಸಗಳ ಮಾಡುವಿರಿ. ಆಸ್ತಿ ವಿಚಾರ ಸಂಬಂಧಿಸಿದ್ದ ವಿವಾದವೊಂದು ಬಗೆಹರಿಸಿಕೊಳ್ಳಿ. ಶುಭ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಮೀನ ರಾಶಿ

ಮೀನ ರಾಶಿಯ ಜನರಿಗೆ ಈ ದಿನವು ಅನುಕೂಲಕರ. ನಿಮ್ಮ ಆಪ್ತವಲಯದಲ್ಲಿ ಸಂತಸ ನೋಡುವಿರಿ. ಪ್ರವಾಸ ಕೈಗೊಳ್ಳಬಹುದು. ದಾಂಪತ್ಯದಲ್ಲಿ ನೆಮ್ಮದಿ ನೋಡಬಹುದು. ಮನೆಯಲ್ಲಿ ಹಣಕಾಸು ವಿಚಾರ ಕುರಿತಾದ ಮಾತುಕತೆ ನಡೆಯಲಿದೆ.

X
Desktop Bottom Promotion