Just In
- 10 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 12 hrs ago
ಭಾನುವಾರದ ದಿನ ಭವಿಷ್ಯ (08-12-2019)
- 1 day ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- News
ತಳ್ಳೋಗಾಡಿಯವನು ಈರುಳ್ಳಿ ಬೋರ್ಡ್ ಕೆಳಗೆ ಇಂಟರೆಸ್ಟಿಂಗ್ ಒಕ್ಕಣೆ ಬರೆದುಕೊಂಡಿದ್ದ
- Technology
ಏರ್ಟೆಲ್ V/S ಜಿಯೋ : ಯಾವುದು ಬೆಸ್ಟ್..? ಹೊಸ ಪ್ಲಾನ್ಗಳಲ್ಲಿ ಏನೇನಿದೆ..?
- Finance
ಏರ್ ಟೆಲ್ ನ 32 ಕೋಟಿ ಗ್ರಾಹಕರ ಮಾಹಿತಿ ಸೋರಿಕೆ ಬಯಲಿಗಿಟ್ಟ ಬೆಂಗಳೂರಿಗ
- Sports
ಎರಡನೇ ಟಿ20; ಮತ್ತೊಂದು ಟಿ20 ದಾಖಲೆಗೆ ವಿರಾಟ್ ಕೊಹ್ಲಿ ಸಜ್ಜು
- Movies
ರಕ್ಷಿತ್-ಶಾನ್ವಿ ನಡುವೆ ಏನೋ ನಡೀತಾ ಇದೆಯಂತೆ, ನಿಜಾನಾ..?
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಇಂತಹ ಆಹಾರವನ್ನು ಸೇವಿಸಿ ಎದೆಯುರಿಯಿಂದ ಮುಕ್ತಿ ಪಡೆಯಿರಿ
ಕಲುಷಿತ ಆಹಾರ, ಅನುಚಿತ ರೀತಿಯಲ್ಲಿ ಆಹಾರ ಸೇವನೆ, ಅಧಿಕ ಮಸಾಲಯುಕ್ತ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡದಿರುವುದು, ಪೌಷ್ಟಿಕಾಂಶದ ಕೊರತೆ, ಅತಿಯಾದ ಕುರುಕಲು ತಿಂಡಿಯ ಸೇವನೆ ಸೇರಿದಂತೆ ಅನೇಕ ಕಾರಣಗಳಿಂದ ಆಸಿಡಿಟಿ ಅಥವಾ ಎದೆಯುರಿಯ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಒಮ್ಮೆ ಈ ಸಮಸ್ಯೆ ಆರಂಭವಾಯಿತು ಎಂದರೆ ಅದರ ನಿವಾರಣೆಗೆ ದೀರ್ಘ ಕಾಲ ತೆಗೆದುಕೊಳ್ಳುತ್ತದೆ ಎಂದರೆ ತಪ್ಪಾಗಲಾರದು.
ಆಸಿಡಿಟಿ ಉಂಟಾದಾಗ ಸಾಮಾನ್ಯವಾಗಿ ಹೊಟ್ಟೆಯಲ್ಲಿ ಆಮ್ಲವು ಹೆಚ್ಚಾಗುತ್ತದೆ. ಗಂಟಲು ಮತ್ತು ಬಾಯಿಯಲ್ಲಿ ಉರಿ ಕಾಣಿಸಿ ಕೊಳ್ಳುವುದು. ಕೆಲವೊಮ್ಮೆ ಹೊಟ್ಟೆಯಲ್ಲಿರುವ ಆಮ್ಲವು ಬಾಯಿಗೆ ಬರುವುದು. ಆಸಿಟಿಡಿ ಹೆಚ್ಚಾದಂತೆ ಅನ್ನನಾಳದ ಹಾಗೂ ಹಲ್ಲಿನ ತೀವ್ರ ನೋವು ಕಾಣಿಸಿಕೊಳ್ಳುವುದು. ಅತಿಯಾದ ಆಸಿಟಿಡಿಯಿಂದ ಗ್ಯಾಸ್ಟ್ರೋಸೊಫಜಿಲ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಎದೆಯುರಿ ಸಮಸ್ಯೆಗೆ ಆರೋಗ್ಯಕರ ಜೀವನಶೈಲಿಯೇ ಮದ್ದು ಕಣ್ರಿ!
ಯಾವುದೇ ಆರೋಗ್ಯ ಸಮಸ್ಯೆಯಾದರೂ ಆರಂಭದಲ್ಲಿಯೇ ಆರೈಕೆ ಮಾಡಿಕೊಂಡರೆ ಬಹುಬೇಗ ನಿವಾರಣೆಯಾಗುತ್ತದೆ. ಆಸಿಡಿಟಿಯಂತಹ ಅನಾರೋಗ್ಯಕ್ಕೆ ಮನೆಯಲ್ಲಿ ಸಿಗುವ ನೈಸರ್ಗಿಕ ಆಹಾರ ಕ್ರಮದಿಂದಲೇ ನಿವಾರಿಸಬಹುದು. ಹಾಗಾದರೆ ಆ ಆಹಾರ ಪದಾರ್ಥಗಳು ಯಾವವು? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಶುಂಠಿ ಚಹಾ
ಶುಂಠಿಯು ನಂಬಲಾಗದ ಔಷಧೀಯ ಗುಣ ಲಕ್ಷಣಗಳೊಂದಿಗೆ ಒಂದು ಅಪೂರ್ವ ಮೂಲವಾಗಿದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಮತ್ತು ವಾಕರಿಕೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಎದೆಯುರಿ ಮತ್ತು ಆಸಿಡ್ ಸಮಸ್ಯೆಗೆ ಪರಿಣಾಮಕಾರಿಯಾಗಿ ಆರೈಕೆ ಮಾಡುವುದು.
ಚಹಾ ಮಾಡುವ ವಿಧಾನ:
*ಒಂದು ಇಂಚು ಶುಂಠಿಯನ್ನು ತೆಗೆದುಕೊಂಡು ಜಜ್ಜಿಕೊಳ್ಳಿ.
*ಒಂದು ಗ್ಲಾಸ್ ನೀರಿಗೆ ಸೇರಿಸಿ, ಕುದಿಸಿ.
*ಕುದಿ ಬಂದ ನೀರನ್ನು ತಣ್ಣಗಾಗಲು ಇಡಿ.
*ಊಟದ ಬಳಿಕ ನಿಯಮಿತವಾಗಿ ಸೇವಿಸಿ. ಸಮಸ್ಯೆ ಪರಿಹಾರ ಕಾಣುವುದು.

ಬಾಳೆ ಹಣ್ಣು
ಚನ್ನಾಗಿ ಹಣ್ಣಾದ ಬಾಳೆಹಣ್ಣನ್ನು ನಿತ್ಯ ಸೇವಿಸುವುದರಿಂದ ಎದೆಯುರಿ ಸಮಸ್ಯೆಯನ್ನು ನಿವಾರಿಸಬಹುದು. ಕೆಲವರಿಗೆ ಬಾಳೆ ಹಣ್ಣನ್ನು ಸೇವಿಸಿದರೆ ಸಮಸ್ಯೆ ಉಲ್ಭಣವಾಗುವ ಸಾಧ್ಯತೆ ಇರುತ್ತದೆ. ಅಂತಹವರು ಯಾವುದೇ ಕಾರಣಕ್ಕೂ ಬಾಳೆ ಹಣ್ಣನ್ನು ತಿನ್ನುವ ಪ್ರಯತ್ನಕ್ಕೆ ಮುಂದಾಗದಿರಿ.

ಓಟ್ ಮೀಲ್
ಸಾಮಾನ್ಯವಾಗಿ ಮಸಾಲೆಯುಕ್ತ ಆಹಾರಗಳು, ಕರಿದ ಅಂಶಗಳು ಮತ್ತು ಕೆಲವು ಇತರ ಪ್ರಚೋದಕ ಆಹಾರಗಳಿಂದ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಉಪಾಹಾರಕ್ಕಾಗಿ ಅಥವಾ ನಿಮ್ಮ ಊಟಕ್ಕೆ ಓಟ್ ಮೀಲ್ ಬೌಲ್ ಅನ್ನು ಸೇವಿಸಿ. ನಿಮ್ಮ ವಿನಮ್ರ ಆಹಾರವು ನಿಮ್ಮ ಹೊಟ್ಟೆ ಆಮ್ಲಗಳನ್ನು ಸರಾಗಗೊಳಿಸಲು ಸಹಾಯ ಮಾಡುವುದು.

ಬಾದಾಮಿ ಹಾಲು
ಪ್ರೋಟೀನ್ ಯುಕ್ತ ಬಾದಾಮಿ ಹಾಲು ಎದೆಯುರಿಯನ್ನು ತಟಸ್ಥಗೊಳಿಸುತ್ತದೆ. ಅಲ್ಲದೆ ಹೊಟ್ಟೆಗೆ ತಂಪಾದ ಅನುಭವವನ್ನು ನೀಡುತ್ತ, ಆಸಿಡ್ ಪ್ರಮಾಣವನ್ನು ತಗ್ಗಿಸುತ್ತದೆ. ಬಾಳೆಹಣ್ಣು ಅಲರ್ಜಿ ಇಲ್ಲದವರು ಹಾಲಿಗೆ ಬಾಳೆಹಣ್ಣನ್ನು ಸೇರಿಸಿ ಸೇವಿಸಬಹುದು.

ಹಸಿ ತರಕಾರಿ
ಹಸಿ ತರಕಾರಿಗಳು ಆರೋಗ್ಯಕ್ಕೆ ಪೂರಕವಾದ ಪ್ರೋಟೀನ್ ಮತ್ತು ವಿಟಮಿನ್ಗಳಿಂದ ಕೂಡಿರುತ್ತವೆ. ಇವುಗಳನ್ನು ಹಸಿಯಾಗಿಯೇ ತಿನ್ನುವುದರಿಂದ ಹೊಟ್ಟೆಯಲ್ಲಿ ಆಸಿಡ್ ಉತ್ಪತ್ತಿಯನ್ನು ನಿಯಂತ್ರಿಸಬಹುದು. ಹಸಿ ತರಕಾರಿಗಳ ಸಲಾಡ್ ಜೊತೆ ಸ್ವಲ್ಪ ಆಲಿವ್ ಎಣ್ಣೆಯ ಮಿಶ್ರಣ ಮಾಡಿದರೆ ಅತ್ಯುತ್ತಮವಾದ ಪರಿಹಾರವನ್ನು ಕಂಡುಕೊಳ್ಳಬಹುದು..

ಜೀರಿಗೆ
ಜೀರಿಗೆ ಅತ್ಯಂತ ಉತ್ತಮವಾದ ಜೀರ್ಣಕಾರಿ ಸಾಧನವಾಗಿದೆ. ಹಾಗಾಗಿಯೇ ಭಾರತದಲ್ಲಿ ಊಟದ ನಂತರ ಜೀರಿಗೆ ನೀರು ಕುಡಿಯುವುದು ಅಥವಾ ಸೋಂಪುಗಳ ಜೊತೆ ಜೀರಿಗೆ ತಿನ್ನುವ ಸಂಪ್ರದಾಯವಿದೆ. ಇದನ್ನು ಸವಿಯುವುದರಿಂದ ಬಾಯಿ ಫ್ರೆಶ್ನರ್ ರೀತಿಯಲ್ಲಿ ಇರುವುದಲ್ಲದೆ ಹೊಟ್ಟೆಯಲ್ಲಿ ಪರಿಣಾಮಕಾರಿ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಜೊತೆಗೆ ಹೊಟ್ಟೆಯನ್ನು ತಂಪಾಗಿ ಇರಿಸುತ್ತದೆ.

ಅಲೋವೆರಾ
ಅಲೋವೆರಾ ಅದ್ಭುತ ರೀತಿಯಲ್ಲಿ ಆಸಿಡ್ ಉತ್ಪತ್ತಿಯನ್ನು ನಿಯಂತ್ರಿಸುತ್ತದೆ. ಅಲ್ಲದೆ ಪರಿಣಾಂಕಾಋಇಯ ರೀತಿಯಲ್ಲಿ ಎದೆ ಉರಿಯನ್ನು ತಗ್ಗಿಸುತ್ತದೆ. ಮನೆಯಲ್ಲಿ ಬೆಳೆದಿರುವ ತಾಜಾ ಆಲೋವೆರಾ ಜೆಲ್ ಬಳಕೆ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಆಲೋವೆರಾ ಜ್ಯೂಸ್ ಎರಡನ್ನು ಬಳಸಬಹುದು.

ಕರ್ಬೂಜ/ಮಸ್ಕ್ ಮೆಲನ್
ಕರ್ಬೂಜ ರಸಭರಿತ ಹಣ್ಣುಗಳಲ್ಲಿ ಒಂದು. ಇದು ದೇಹಕ್ಕೆ ತಂಪನ್ನು ನೀಡುವುದರ ಜೊತೆಗೆ ಆಸಿಡ್ ಮತ್ತು ಎದೆಯುರಿಯಂತಹ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಕೆಲವರಿಗೆ ಇದರ ರಸವು ಅಲರ್ಜಿ ಅಥವಾ ದೇಹಕ್ಕೆ ಒಗ್ಗದೆ ಇರಬಹುದು. ಅಂತಹವರು ಈ ಹಣ್ಣನ್ನು ಬಳಸದೆ ಇರುವುದು ಉತ್ತಮ.

ಮೀನು
ಮೀನು ಮಾಂಸಹಾರ ಗುಂಪಿಗೆ ಸೇರಿದೆಯಾದರೂ ಅತ್ಯುತ್ತಮ ಆಹಾರ ಎನ್ನಬಹುದು. ಇದನ್ನು ಬೇಯಿಸಿ ತಿನ್ನುವುದರಿಂದ ಆಸಿಡಿಟಿಯನ್ನು ನಿಯಂತ್ರಿಸಬಹುದು. ಇದರೊಂದಿಗೆ ಇನ್ನೂ ಅನೇಕ ಆರೋಗ್ಯಕರ ಗುಣವನ್ನು ಮೀನು ಒಳಗೊಂಡಿದೆ ಎನ್ನಬಹುದು.

ರವಾ
ಗೋಧಿರವಾ, ಸೂಜಿರವಾ, ರವಾ ಎಂದು ಕರೆಯುವ ಈ ಆಹಾರ ಪದಾರ್ಥವು ಒಂದು ಸಂಕೀರ್ಣವಾದ ಕಾರ್ಬೋಹೈಡ್ರೇಟ್ ಉತ್ಪನ್ನ. ಇದರ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲೀಯ ಗುಣವನ್ನು ತಡೆಯಬಹುದು.

ಸಾಸಿವೆ
ಸಾಸಿವೆ ಒಗ್ಗರಣೆಗೆ ಉಪಯೋಗಿಸುವ ಸಾಸಿವೆ ಕಾಳು ಸಹಾ ಒಂದು ಪ್ರತ್ಯಾಮ್ಲವಾಗಿದ್ದು ಆಮ್ಲವನ್ನು ಶಮನಗೊಳಿಸುತ್ತದೆ. ಇದಕ್ಕಾಗಿ ಊಟದ ಬಳಿಕ ಕೆಲವು ಕಾಳುಗಳನ್ನು ನೇರವಾಗಿ ಜಗಿದು ತಿನ್ನುವುದು ಉತ್ತಮ. ಆದರೆ ಇದರ ರುಚಿ ಕಹಿಯಾಗಿರುವುದರಿಂದ ಹೆಚ್ಚಿನವರು ಹಾಗೇ ತಿನ್ನಲು ಇಷ್ಟಪಡುವುದಿಲ್ಲ. ಇದಕ್ಕಾಗಿ ಒಂದು ಚಿಕ್ಕ ಚಮಚದಷ್ಟು ಹಳದಿ ಸಾಸಿವೆಯನ್ನು ನೇರವಾಗಿ ಬಾಯಿಯಲ್ಲಿ ಸುರಿದು ನೀರಿನ ಮೂಲಕ ನುಂಗುವುದು ಪರಿಣಾಮಕಾರಿಯಾಗಿದೆ. ಇದೂ ಸಾಧ್ಯವಾಗದಿದ್ದರೆ ಊಟದ ಕಡೆಯ ತುತ್ತುಗಳಲ್ಲಿ ಅಥವಾ ಕಡೆಗೆ ನುಂಗುವ ಚಪಾತಿ, ಬ್ರೆಡ್ ಮೊದಲಾದವುಗಳ ನಡುವೆ ಇರಿಸಿ ತಿನ್ನುವ ಮೂಲಕ ಎದೆಯುರಿಯಾಗುವುದನ್ನು ತಡೆಗಟ್ಟಬಹುದು.

ಶುಂಠಿ ಮತ್ತು ಲಿಂಬೆ
ಸುಮಾರು ಒಂದು ಇಂಚು ಹಸಿಶುಂಠಿಯನ್ನು ಅರೆದು ರಸವನ್ನು ಹಿಂಡಿ ತೆಗೆಯಿರಿ. ಇದಕ್ಕೆ ಸಮಪ್ರಮಾಣದಲ್ಲಿ ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಊಟದ ಬಳಿಕ ಒಂದು ಚಿಕ್ಕ ಚಮಚ ರಸವನ್ನು ನೇರವಾಗಿ ಕುಡಿಯಿರಿ. ಕೊಂಚ ತೀಕ್ಷ್ಣ ವಾಗಿರುವುದರಿಂದ ನಾಲಿಗೆಗೆ ಚುರುಕು ಮುಟ್ಟಿಸುವುದು ನಿಮಗೆ ಇಷ್ಟವಿಲ್ಲದಿದ್ದರೆ ಈ ರಸವನ್ನು ಹಾಲಿಲ್ಲದ ಟೀ ಯಲ್ಲಿ ಸೇರಿಸಿ ಸೇವಿಸಿ. ಸಕ್ಕರೆ ಸೇರಿಸಬೇಡಿ, ಕೊಂಚ ಬೆಲ್ಲ ಬೇಕಿದ್ದರೆ ಸೇರಿಸಿ ಊಟಕ್ಕೂ ಮೊದಲೇ ಕುಡಿಯಿರಿ.

ಕ್ಯಾರೆಟ್ ಅಥವಾ ಎಲೆಕೋಸು
ಈ ಎರಡೂ ತರಕಾರಿಗಳ ರಸ ಎದೆಯುರಿ ಕಡಿಮೆಗೊಳಿಸಲು ಉತ್ತಮವಾಗಿವೆ. ಕ್ಯಾರೆಟ್ ಅಥವಾ ಎಲೆಕೋಸನ್ನು ತುರಿದು ಮಿಕ್ಸಿಯಲ್ಲಿ ಕಡೆದು ರಸವನ್ನು ಹಿಂಡಿ ಊಟದ ಬಳಿಕ ಒಂದು ಕಪ್ ಕುಡಿಯುವ ಮೂಲಕ ಆಮ್ಲೀಯತೆ ಕಡಿಮೆಯಾಗುತ್ತದೆ.

ಪಪ್ಪಾಯಿ ಹಣ್ಣು
ಪಪ್ಪಾಯಿಯಲ್ಲಿರುವ ಪಾಪಿನ್ ಎಂಬ ಪೋಷಕಾಂಶ ಸಹಾ ಒಂದು ಪ್ರತ್ಯಾಮ್ಲವಾಗಿದೆ ಹಾಗೂ ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ. ಇದಕ್ಕಾಗಿ ಚೆನ್ನಾಗಿ ಹಣ್ಣಾದ ಪೊಪ್ಪಾಯಿಯ ತಿರುಳನ್ನು ಊಟದ ಬಳಿಕ ಸೇವಿಸಿ. ಇಷ್ಟವಾಗದಿದ್ದರೆ ಕೊಂಚ ನೀರು ಮತ್ತು ಬೆಲ್ಲದೊಡನೆ ಜ್ಯೂಸ್ ಮಾಡಿಕೊಂಡು ಸಹಾ ಸೇವಿಸಬಹುದು.

ಏಲಕ್ಕಿ
ಎರಡು ಏಲಕ್ಕಿಗಳನ್ನು ಪುಡಿಮಾಡಿ ಒಂದು ಲೋಟ ನೀರಿನೊಂದಿಗೆ ಸುಮಾರು ಹದಿನೈದು ನಿಮಿಷಗಳವರೆಗೆ ಚಿಕ್ಕ ಉರಿಯಲ್ಲಿ ಕುದಿಸಿ. ಈ ನೀರನ್ನು ನೋಸಿ ತಣಿಯಲು ಬಿಡಿ. ಊಟವಾದ ಬಳಿಕ ಈ ನೀರನ್ನು ಕುಡಿಯುವುದರಿಂದ ಎದೆಯುರಿ ಕಡಿಮೆಯಾಗುತ್ತದೆ.

ನೆಲ್ಲಿಕಾಯಿ
ಊಟದ ಬಳಿಕ ನೆಲ್ಲಿಕಾಯಿಯನ್ನು ಚೆನ್ನಾಗಿ ಅಗಿದು ನೀರಿನೊಂದಿಗೆ ನುಂಗುವ ಮೂಲಕವೂ ಎದೆಯುರಿ ಕಡಿಮೆಯಾಗುತ್ತದೆ. ಜೊತೆಗೇ ಅನ್ನನಾಳ ಮತ್ತು ಜೀರ್ಣಾಂಗಗಳಲ್ಲಿ ಸೋಂಕು ಅಥವಾ ಸೂಕ್ಷ್ಮಗೀರುಗಳಿದ್ದರೆ ಅವುಗಳನ್ನು ಶೀಘ್ರವಾಗಿ ಗುಣಪಡಿಸಲೂ ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ಅಲ್ಲದೇ ಅನ್ನನಾಳದ ಒಳಭಾಗವನ್ನು ಆಮ್ಲದ ತೀವ್ರತೆಯಿಂದಲೂ ರಕ್ಷಿಸುತ್ತದೆ.